ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ದುರ್ಬಲ ಹೃದಯಕ್ಕೆ ಸಾಂತ್ವನ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದುರ್ಬಲ ಹೃದಯಕ್ಕೆ ಸಾಂತ್ವನ

ದುರ್ಬಲ ಹೃದಯಕ್ಕೆ ಸಾಂತ್ವನ

ಈಗಂತೂ ಹೃದಯಾಘಾತ ವಯಸ್ಸಾದವರಿಗೆ ಮಾತ್ರವಲ್ಲ, ಯುವಜನರಲ್ಲೂ ಕಾಣಿಸಿಕೊಳ್ಳುತ್ತಿದೆ. ರಕ್ತ ಸಂಚಲನೆಯಲ್ಲಿ ಅಡ್ಡಿ ಉಂಟಾಗುವುದರಿಂದ ಹೃದಯದ ಸ್ನಾಯುಗಳಿಗೆ ಪೋಷಣೆ ದೊರೆಯದೆ ಹೃದಯ ದುರ್ಬಲವಾಗಿ ಆಘಾತ ಉಂಟಾಗುತ್ತದೆ. 2-3 ಬಾರಿ ಹೃದಯಾಘಾತವಾದರೆ ಅದು ಪ್ರಾಣವನ್ನೂ ಕಿತ್ತೊಯ್ಯಬಹುದು ಇಲ್ಲವೇ ಅದರಿಂದ ಸಂಪೂರ್ಣ ಚೇತರಿಸಿಕೊಳ್ಳುವುದು ಬಲು ಕಷ್ಟ.

ಇದಕ್ಕಾಗಿಯೇ ಹೃದಯದ ಮೇಲೆ ಸಂಶೋಧನೆ, ಪ್ರಯೋಗಗಳು ಈಚೆಗೆ ಹೆಚ್ಚಾಗಿವೆ. ಇಂಥದ್ದೊಂದು ಹೃದಯದ ಪ್ರಯೋಗ ಮಾಡಿರುವ ಆಸ್ಟ್ರೇಲಿಯಾದ ವಿಜ್ಞಾನಿಗಳು ದುರ್ಬಲ ಹೃದಯವನ್ನು ಮತ್ತೆ ಮೊದಲಿನಂತಾಗಿಸುವತ್ತ ಸಂಶೋಧನೆ ನಡೆಸಿದ್ದಾರೆ.

ನ್ಯೂ ಸೌತ್ ವೇಲ್ಸ್‌ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಪ್ರೊ. ರಿಚರ್ಡ್ ಹಾರ್ವೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರಯೋಗವನ್ನು ಈಗಾಗಲೇ ಇಲಿಯ ಮೇಲೆ ನಡೆಸಲಾಗಿದೆ.

‘ಜೀವನವಿಡೀ ರಕ್ತ, ಕೂದಲು ಅಥವಾ ಚರ್ಮದ ಜೀವಕೋಶಗಳು ಪುನರುತ್ಪತ್ತಿಗೊಳ್ಳುತ್ತಿರುತ್ತವೆ.ಆದರೆ ಹೃದಯದ ವಿಷಯ ಹಾಗಲ್ಲ. ಒಮ್ಮೆ ಅದರ ಸ್ವಾಸ್ಥ್ಯ ಕೆಟ್ಟರೆ ಜೀವಕೋಶಗಳನ್ನು  ಪುನರುತ್ಪತ್ತಿ ಮಾಡಿಕೊಳ್ಳುವುದು ಕಷ್ಟ. ಆದರೆ ಜೀವಕೋಶವನ್ನು ನಿಯಂತ್ರಿಸುವ ಹಾರ್ಮೋನನ್ನು ಉತ್ತೇಜಿಸಿ ಹೃದಯದ ಸ್ನಾಯು ಜೀವಕೋಶಗಳನ್ನು ಶೇ 45ರಷ್ಟು ಪುನರುತ್ಪಾದಿಸಲು ಸಾಧ್ಯವಿದೆ’ ಎನ್ನುತ್ತಾರೆ ಹಾರ್ವೆ.

ಹೃದಯದಲ್ಲಿನ ವಿಶೇಷ ವ್ಯವಸ್ಥೆಯಾದ ನಿಯೊರೆಗ್ಯುಲಿನ್ ಎಂಬ ಹಾರ್ಮೋನಿನತ್ತ ಹೆಚ್ಚು ಗಮನ ಹರಿಸಿದ ಸಂಶೋಧಕರು, ನಿಯೊರೆಗ್ಯುಲಿನ್ ಅನ್ನು ಉತ್ತೇಜಿಸಿ ಹೃದಯದ ಸ್ನಾಯು ಜೀವಕೋಶಗಳು ಹೆಚ್ಚಿರುವುದನ್ನು ಕಂಡುಕೊಂಡಿದ್ದಾರೆ.

ಹೃದಯ ಸ್ನಾಯು ಜೀವಕೋಶದ ಕಸಿಯೇ ಹೃದಯದ ರಕ್ತ ಪೂರೈಕೆಯಲ್ಲಿನ ಸಮಸ್ಯೆಗೆ ಏಕೈಕ ಚಿಕಿತ್ಸೆಯಾಗಿರುವ ಈ ಪರಿಸ್ಥಿತಿಯಲ್ಲಿ ಈ ಸಂಶೋಧನೆ ದೊಡ್ಡ ಯಶಸ್ಸು. ‘ದೇಹದ ಅಂಗಗಳನ್ನು ಮತ್ತೆ ಬೆಳೆಸಿಕೊಳ್ಳಲು ಸಾಧ್ಯವಿರುವ ಸ್ಯಾಲಮಂಡರ್‌ನಂತೆ (ಬೆಂಕಿ ಮೊಸಳೆ) ಒಂದಲ್ಲಾ ಒಂದು ದಿನ ಹೃದಯದ ಕೋಶಗಳೂ ಪುನರುತ್ಪತ್ತಿಗೊಳ್ಳಲು ಸಾಧ್ಯವಾದರೆ ಸಂಶೋಧನೆ ಸಾರ್ಥಕಗೊಂಡಂತೆ’ ಎಂದಿದ್ದಾರೆ ಹಾರ್ವೆ.
(ನೇಚರ್ ಸೆಲ್ ಬಯಾಲಜಿ ನಿಯತಕಾಲಿಕೆಯಿಂದ)

ಮೂಲ : ಕನ್ನಡಿಗ ವರ್ಲ್ಡ್

2.97959183673
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top