ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ರುಮ್ಯಾಟಿಕ್ ಹೃದಯದ ಕಾಯಿಲೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರುಮ್ಯಾಟಿಕ್ ಹೃದಯದ ಕಾಯಿಲೆ

ಹೃದಯದ ಕವಾಟಗಳು (ರಕ್ತವನ್ನು ಹಿಮ್ಮುಖವಾಗಿ ಚಲಿಸುವುದನ್ನು ತಡೆಯುವ ರಚನೆಗಳು) ಸಾಮಾನ್ಯವಾಗಿ ಸ್ಟ್ರೆಪ್ಟೋಕೋಕಲ್ ಬ್ಯಾಕ್ಟೀರಿಯಾದ ಮೂಲಕ ಕಾಣಿಸಿಕೊಳ್ಳುವ ಗಂಟಲು ಬೇನೆಯ ಪ್ರಕ್ರಿಯೆಯಿಂದ, ಹಾನಿಗೊಳ್ಳುವ ಸ್ಥಿತಿಯನ್ನೇ ರುಮ್ಯಾಟಿಕ್ ಹೃದಯದ ಕಾಯಿಲೆ ಎನ್ನುತ್ತಾರೆ. ಈ ಗಂಟಲು ಬೇನೆಗೆ ತುರ್ತಾಗಿ ಚಿಕಿತ್ಸೆ ನೀಡದಿದ್ದರೆ, ರುಮ್ಯಾಟಿಕ್ ಜ್ವರ ಪದೇ ಪದೇ ಕಾಣಿಸಿಕೊಂಡು, ರೋಗ ಉಲ್ಪಣಿಸಿ, ರುಮ್ಯಾಟಿಕ್ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.ದೇಹದ ಸಂಪರ್ಕ ಸಾಧಿಸುವ ಅಂಗಾಂಶಗಳ ಮೇಲೆ ವಿಶೇಷವಾಗಿ ಹೃದಯ, ಕೀಲುಗಳು, ಮೆದುಳು ಅಥವಾ ಚರ್ಮಗಳ ಪರಿಣಾಮ ಬೀರುವ ಉಲ್ಬಣಕಾರಿ ರೋಗವೇ ರುಮ್ಯಾಟಿಕ್ ಜ್ವರ.

ಹೃದಯದ ಕವಾಟಗಳು (ರಕ್ತವನ್ನು ಹಿಮ್ಮುಖವಾಗಿ ಚಲಿಸುವುದನ್ನು ತಡೆಯುವ ರಚನೆಗಳು) ಸಾಮಾನ್ಯವಾಗಿ ಸ್ಟ್ರೆಪ್ಟೋಕೋಕಲ್ ಬ್ಯಾಕ್ಟೀರಿಯಾದ ಮೂಲಕ ಕಾಣಿಸಿಕೊಳ್ಳುವ ಗಂಟಲು ಬೇನೆಯ ಪ್ರಕ್ರಿಯೆಯಿಂದ, ಹಾನಿಗೊಳ್ಳುವ ಸ್ಥಿತಿಯನ್ನೇ ರುಮ್ಯಾಟಿಕ್ ಹೃದಯದ ಕಾಯಿಲೆ ಎನ್ನುತ್ತಾರೆ.  ಈ ಗಂಟಲು ಬೇನೆಗೆ ತುರ್ತಾಗಿ ಚಿಕಿತ್ಸೆ ನೀಡದಿದ್ದರೆ, ರುಮ್ಯಾಟಿಕ್ ಜ್ವರ ಪದೇ ಪದೇ ಕಾಣಿಸಿಕೊಂಡು, ರೋಗ ಉಲ್ಪಣಿಸಿ, ರುಮ್ಯಾಟಿಕ್ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.ದೇಹದ ಸಂಪರ್ಕ ಸಾಧಿಸುವ ಅಂಗಾಂಶಗಳ ಮೇಲೆ ವಿಶೇಷವಾಗಿ ಹೃದಯ, ಕೀಲುಗಳು, ಮೆದುಳು ಅಥವಾ ಚರ್ಮಗಳ ಪರಿಣಾಮ ಬೀರುವ ಉಲ್ಬಣಕಾರಿ ರೋಗವೇ ರುಮ್ಯಾಟಿಕ್ ಜ್ವರ.  ಈ ಜ್ವರದಿಂದ ಹೃದಯಕ್ಕೆ ಶಾಶ್ವತ ಹಾನಿಯುಂಟಾಗುವ ಸ್ಥಿತಿಯನ್ನೇ ರುಮ್ಯಾಟಿಕ್ ಹೃದಯದ ಕಾಯಿಲೆ ಎಂದು ಹೇಳಲಾಗುತ್ತದೆ. ಎಲ್ಲ ವಯೋಮಾನದವರಿಗೂ ಈ ಬಗೆಯ ರುಮ್ಯಾಟಿಕ್ ಜ್ವರ ಬರಬಹುದು.  ಆದರೆ, ಐದರಿಂದ ಹದಿನೈದು ವಯೋಮಾನದ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ರುಮ್ಯಾಟಿಕ್ ಜ್ವರದ ರೋಗ ಲಕ್ಷಣಗಳು  ಜ್ವರ

  • ಊದಿಕೊಂಡ, ಮೃದುವಾದ, ಕೆಂಪಾದ ಕೀಲುಗಳು ವಿಶೇಷವಾಗಿ ಮೊಣಕಾಲು, ಹಿಮ್ಮಡಿ, ಮೊಳಕೈ ಅಥವಾ ಮುಂಗೈ
  • ಊದಿಕೊಂಡ ಕೀಲುಗಳ ಮೇಲೆ ಗಡ್ಡೆಗಳು
  • ತೋಳು, ಕಾಲು ಅಥವಾ ಮುಖದ ಸ್ನಾಯುಗಳ ಅನಿಯಂತ್ರಿತ ಚಲನೆ
  • ದುರ್ಬಲ ಹಾಗೂ ಕಷ್ಟದಾಯಕವಾದ ಉಸಿರಾಟ.

ಹೃದಯ ಕವಾಟಕ್ಕೆ ಹಾನಿಯಾದಾಗ ಏನಾಗುತ್ತದೆ?

ಹಾನಿಕೊಂಡ ಹೃದಯದ ಕವಾಟವು ಸಂಪೂರ್ಣ ಮುಚ್ಚಿಕೊಳ್ಳದು ಅಥವಾ ಸಂಪೂರ್ಣವಾಗಿ ತೆರೆಯದು.ಸಂಪೂರ್ಣವಾಗಿ ಮುಚ್ಚಿಕೊಳ್ಳದ ಹೃದಯದ ಕವಾಟವು ಹೃದಯದಿಂದ ರಕ್ತ ಪಂಪ್ ಮಾಡಿದಾಗ, ಹೃದಯದ ಕೋಣೆಯೊಳಕ್ಕೆ ರಕ್ತ ಒಸರುವಂತೆ ಮಾಡುತ್ತದೆ.  ಇದನ್ನು ರೆಗ್ಯೂರಿಟೇಷನ್ ಅಥವಾ ಒಸರುವಿಕೆ ಎಂದು ಕರೆಯಲಾಗುತ್ತದೆ. ನಂತರ ಹೃದಯ ಬಡಿದುಕೊಂಡಾಗ, ರಕ್ತವು ಮಾಮೂಲಿನಂತೆ ಮಿಕ್ಕ ರಕ್ತದೊಡನೆ ಸೇರಿ ಹೋಗುತ್ತದೆ. ಈ ಹೆಚ್ಚುವರಿ ರಕ್ತವು ಹೃದಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಹೃದಯದ ಕವಾಟವು ಸರಿಯಾಗಿ ತೆರೆದುಕೊಳ್ಳದಿದ್ದಾಗ, ಆ ಕಿರಿದಾದ ನಾಳದ ಮೂಲಕ ರಕ್ತವನ್ನು ತಳ್ಳಲು ಅಗತ್ಯಕ್ಕಿಂತ ಹೆಚ್ಚು ಶಕ್ತಿಯನ್ನು ಹೃದಯ ಬಳಸಬೇಕಾಗುತ್ತದೆ.  ಆ ನಾಳಗಳು ಅತ್ಯಂತ ಕಿರಿದಾಗುವವರೆಗೂ ಯಾವುದೇ ರೋಗ ಲಕ್ಷಗಳು ಕಾಣಿಸುವುದೇ ಇಲ್ಲ.

ಇದನ್ನು ಪತ್ತೆ ಹಚ್ಚುವುದು ಹೇಗೆ?

ಹೃದಯದ ನ್ಯೂನತೆಗಳನ್ನು ಪತ್ತೆ ಹಚ್ಚಲು ಎದೆಯ ಎಕ್ಸ್-ರೇ ಮತ್ತು ಎಲೆಕ್ಟ್ರೋ ಕಾರ್ಡಿಯೋಗ್ರಾಮ್ ಎಂಬ ಎರಡು ತಪಾಸಣಾ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಇದಕ್ಕೆ ಚಿಕಿತ್ಸೆ ಏನು?

ಒಟ್ಟಾರೆ ಆರೋಗ್ಯ, ವ್ಯಕ್ತಿಯ ವೈದ್ಯಕೀಯ ಇತಿಹಾಸ ಹಾಗೂ ರೋಗದ ಗಾಂಭೀರ್ಯವನ್ನು ಪರಿಗಣಿಸಿ ನಿರ್ದಿಷ್ಟ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಈ ಬಗೆಯ ಹೃದಯದ ಕಾಯಿಲೆಗೆ ರುಮ್ಯಾಟಿಕ್ ಜ್ವರವೇ ಕಾರಣವಾಗಿರುವುದರಿಂದ, ಅತ್ಯುತ್ತಮ ಚಿಕಿತ್ಸೆಯೆಂದರೆ, ರುಮ್ಯಾಟಿಕ್ ಜ್ವರವನ್ನು ತಡೆಯವುದೇ ಆಗಿದೆ.

ಇದನ್ನು ತಡೆಯುವ ಬಗೆ ಹೇಗೆ? ರುಮ್ಯಾಟಿಕ್ ಹೃದಯ ಕಾಯಿಲೆಯನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದರೆ ರುಮ್ಯಾಟಿಕ್ ಜ್ವರವನ್ನು ತಡೆಯುವುದೇ ಆಗಿದೆ.   ಗಂಟಲು ನೋವಿಗೆ ಸಕಾಲದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು.   ರುಮ್ಯಾಟಿಕ್ ಜ್ವರ ಬಂದರೆ, ರೋಗ ಉಲ್ಬಣಿಸದಿರಲು ಸತತವಾಗಿ ಆಂಟಿಬಯೋಟಿಕ್ ಚಿಕಿತ್ಸೆ ನೀಡಬೇಕಾಗಬಹುದು.

3.11340206186
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top