ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದೋಷಗಳು

ಹುಟ್ಟಿನಿಂದಲೇ ಇರುವ ಹೃದಯದ ರಚನೆಯ ನ್ಯೂನತೆಗಳನ್ನು ಕಾಂಜೆನಿಟಲ್ ಹೃದಯದ ದೋಷಗಳು ಎನ್ನುತ್ತಾರೆ.

ಕಾಂಜೆನಿಟಲ್ ಹೃದಯ ದೋಷಗಳು

  • ಹುಟ್ಟಿನಿಂದಲೇ ಇರುವ ಹೃದಯದ ರಚನೆಯ ನ್ಯೂನತೆಗಳನ್ನು ಕಾಂಜೆನಿಟಲ್ ಹೃದಯದ ದೋಷಗಳು ಎನ್ನುತ್ತಾರೆ.  ಈ ನ್ಯೂನತೆಗಳು ಹೃದಯದ ಮೂಲಕ ಸಾಗುವ ಸಾಮಾನ್ಯ ರಕ್ತ ಪ್ರವಾಹವನ್ನು ಬದಲಿಸುತ್ತವೆ.
  • ತೀರಾ ಸರಳ ರೀತಿಯ ನ್ಯೂನತೆಗಳಿಂದ ಹಿಡಿದು, ಅತ್ಯಂತ ಸಂಕೀರ್ಣ ಸ್ವರೂಪದ ನ್ಯೂನತೆಗಳೂ ಇರಬಹುದು.

ರೋಗ ಲಕ್ಷಣ ಹಾಗೂ ಮುನ್ಸೂಚನೆ

  • ಬಹುತೇಕ ಹುಟ್ಟಿನಿಂದಲೆ ಇರುವ ಹೃದಯ ದೋಷಗಳಿಗೆ ಯಾವುದೇ ಬಗೆಯ ರೋಗ ಲಕ್ಷಣಗಳು ಕಾಣಿಸುವುದಿಲ್ಲ.
  • ತೀವ್ರ ಸ್ವರೂಪದ ದೋಷಗಳಿದ್ದಲ್ಲಿ ಮಾತ್ರ ಕೆಲ ಮುನ್ಸೂಚನೆಗಳು, ಅದೂ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳಬಹುದು.  ತೀವ್ರ ತೆರನಾದ ಉಸಿರಾಟ, ಚರ್ಮ, ಉಗುರು ಹಾಗೂ ತುಟಿಗಳ ಮೇಲೆ ನೀಲಿ ಛಾಯೆ, ತೀವ್ರ ಸುಸ್ತಾಗುವಿಕೆ ಮತ್ತು ಕಡಿಮೆ ಪ್ರಮಾಣದ ರಕ್ತ ಪ್ರಸರಣ ಇವೇ ಮುಂತಾದ ಮುನ್ಸೂಚನೆಗಳು ಕಾಣಿಸಿಕೊಳ್ಳಬಹುದು.
  • ಕೊಂಚ ಬೆಳೆದ ಮಕ್ಕಳು ಬಹುಬೇಗ ಸುಸ್ತಾಗುತ್ತಾರೆ ಅಥವಾ ಸಾಮಾನ್ಯವಾದ ಚಟುವಟಿಕೆ, ಕಸರತ್ತುಗಳಲ್ಲಿ ತೊಡಗಿದರೂ ಉಸಿರಾಟಕ್ಕಾಗಿ ಪರದಾಡುತ್ತಾರೆ.
  • ಕಸರತ್ತು ಮಾಡಿದಾಗ ಜಡತ್ವ, ಉಸಿರಾಟದ ತೊಂದರೆ, ಶ್ವಾಸಕೊಶದ ಮೇಲೆ ರಕ್ತ ಹಾಗೂ ಜೀವದ್ರವಗಳ ಶೇಖರಣೆ, ಪಾದ, ಕಾಲು ಹಾಗೂ ಹಿಮ್ಮಡಿಗಳಲ್ಲಿ ಜೀವದ್ರವಗಳ ಸಂಗ್ರಹ
  • ಮಗುವು ಇನ್ನೂ ಗರ್ಭಕೋಶದಲ್ಲಿದ್ದಾಗಲೇ ಅಥವಾ ಜನಿಸುತ್ತಿದ್ದಂತೆಯೇ ಗಂಭೀರವಾದ ಹೃದಯದ ನ್ಯೂನತೆಗಳನ್ನು ಪತ್ತೆ ಹಚ್ಚಬಹುದು.  ಕೆಲ ಸಮಸ್ಯೆಗಳನ್ನು ಬಾಲ್ಯಾವಸ್ಥೆ ಕಳೆಯುವವರೆಗೂ ಅಥವಾ ಪ್ರೌಢಾವಸ್ಥೆಯಲ್ಲೂ ಪತ್ತೆ ಹಚ್ಚುವುದು ಕಷ್ಟ ಸಾಧ್ಯ.

ಮೂಲ: ಪೋರ್ಟಲ್ ತಂಡ

3.0306122449
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top