ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಅತೀ ಒತ್ತಡವೂ ತಲೆನೋವಿಗೆ ಕಾರಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅತೀ ಒತ್ತಡವೂ ತಲೆನೋವಿಗೆ ಕಾರಣ

ಅತೀ ಒತ್ತಡವೂ ತಲೆನೋವಿಗೆ ಕಾರಣ

ಇನ್ನೇನು ಬೇಸಿಗೆ ಶುರುವಾಗುತ್ತಿದೆ. ಬಿಸಿಲು ಹೆಚ್ಚಿದಂತೆ ಕೆಲವರಿಗೆ ತಲೆನೋವಿನ ಸಮಸ್ಯೆ ಆರಂಭವಾಗುತ್ತದೆ. ಮೈಗ್ರೇನ್ ಕೆಲವರಲ್ಲಿ ಬದುಕಿನ ಬಗ್ಗೆ ಜಿಗುಪ್ಸೆ ಮೂಡಿಸಿದ್ದರೆ ಇನ್ನೂ ಕೆಲವರಿಗೆ ತಲೆನೋವಿಗೆ ಕಾರಣವೇ ತಿಳಿದಿಲ್ಲ! ಅತೀ ಬಿಸಿಲೂ ತಲೆ ನೋವಿಗೆ ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವೂ ಹೌದು. ಅಲ್ಲದೆ ಕೆಲವರಲ್ಲಿ ಹೆಚ್ಚು ಕಾಲ ಹಸಿದೇ ಇರುವುದರಿಂದಲೂ ತಲೆನೋವು ಬರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಕಂಡುಬರುತ್ತಿರುವ ತಲೆನೋವಿಗೆ ಮುಖ್ಯ ಕಾರಣ ಅತೀ ಒತ್ತಡ. ಅತಿಯಾದ ಒತ್ತಡದಿಂದ ಕೆಲಸ ಮಾಡುವುದರಿಂದ ತಲೆನೋವು ಬರುತ್ತದೆಂಬುದನ್ನು ಇತ್ತೀಚಿನ ಸಂಶೋಧನೆ ದೃಢಪಡಿಸಿರುವುದಲ್ಲದೆ ಇದು ಮನುಷ್ಯನ ಆರೋಗ್ಯದ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತದೆ ಎಂದೂ ಅಭಿಪ್ರಾಯಪಟ್ಟಿದೆ. ಒಂದು ಸಮಸ್ಯೆಯ ಬಗ್ಗೆ ತಾಳ್ಮೆಯಿಂದ ವಿವೇಚಿಸಿ ನಿರ್ಧಾರಕ್ಕೆ ಬರುವ ಬದಲು ಅತಿಯಾಗಿ ತಲೆಬಿಸಿ ಮಾಡಿಕೊಳ್ಳುವುದು, ಹೆಚ್ಚಿನ ಕೆಲಸ ಮಾಡುವುದಕ್ಕೆ ಒಪ್ಪಿಕೊಳ್ಳುವುದು… ನಂತರ ಮಾಡಲಾಗದೇ ಚಿಂತೆ ಮಾಡುವುದು ಈ ಎಲ್ಲವೂ ಅತಿಯಾದ ತಲೆನೋವಿಗೆ ಕಾರಣವಾಗುತ್ತವೆಯಂತೆ. ಹಲವು ಬಾರಿ ತೀರಾ ತಲೆಬಿಸಿಯಾದಾಗ ವ್ಯಕ್ತಿ ತಲೆ ಚಚ್ಚಿಕೊಳ್ಳುವುದನ್ನು ನೋಡುತ್ತೇವೆ. ಒತ್ತಡ ಹೆಚ್ಚುತ್ತಾ ಅವನಿಗೇ ಅರಿವಿಲ್ಲದೇ ತಲೆನೋವು ಆರಂಭವಾಗುತ್ತದೆ. ರಕ್ತದೊತ್ತಡವೂ ಹೆಚ್ಚಿ ಮನುಷ್ಯನ ಮೆದುಳಿಗೆ ತೀವ್ರ ಹಾನಿಯಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡದಿಂದ ಆರಂಭವಾಗುವ ತಲೆನೋವನ್ನು ಎಂದಿಗೂ ನಿರ್ಲಕ್ಷ್ಯಿಸುವುದು ಒಳ್ಳೆಯದಲ್ಲ. ಅಲ್ಲದೆ, ಒತ್ತಡವನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ. ಹೆಚ್ಚು ಒತ್ತಡದ ಕೆಲಸವಿದ್ದರೆ ಮನರಂಜನೆಯನ್ನೂ ಮರೆಯಬೇಡಿ. ಮಾನಸಿಕ ಸ್ಥಿತಿಯಲ್ಲಿ ಒತ್ತಡ ಮತ್ತು ವಿನೋದ ಇವುಗಳ ಸಮತೋಲವಿದ್ದರೆ ಮನುಷ್ಯನಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ.

ಯೋಗ, ಧ್ಯಾನಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ಬಳಸಿಕೊಳ್ಳಿ. ಅಷ್ಟೇ ಅಲ್ಲ, ಟಿ.ವಿ.ನೋಡುವಾಗಲೂ ಹಿಂಸೆ ಮತ್ತು ಅಮಾನವೀಯತೆಯನ್ನು ಪ್ರಚೋದಿಸುವಂಥ ಕಾರ್ಯಕ್ರಮವನ್ನು ನೋಡಲೇ ಬೇಡಿ. ಸುಮಧುರ ಸಂಗೀತವನ್ನೋ, ಮನಸ್ಸಿಗೆ ಆಹ್ಲಾದ ನೀಡುವ ನೃತ್ಯವನ್ನೋ ನೋಡಿ, ಆಗ ಮನಸ್ಸೂ ಉಲ್ಲಸಿತಗೊಳ್ಳುತ್ತದೆ, ಒತ್ತಡವೂ ಕಡಿಮೆಯಾಗುತ್ತದೆ. ಪದೇ ಪದೇ ಒತ್ತಡದಿಂದ ತಲೆನೋವು ಬರುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೆ, ಮೊದಲು ವೈದ್ಯರನ್ನು ಕಾಣಿರಿ.

ಮೂಲ: ವಿಕ್ರಮ

2.87719298246
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top