ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅನೀಮಿಯ

ಪ್ರಿಯ ೧೬ ವರ್ಷದ ತಾಯಿಯಿಲ್ಲದ ಮಧ್ಯಮ ವರ್ಗದ ಹುಡುಗಿ, ಓದುವುದರಲ್ಲಿ ಚುರುಕು. ಹಾಡು, ನೃತ್ಯ, ಆಟ ಎಲ್ಲಾದರಲ್ಲೂ ಆಸಕ್ತಿ ಇರುವ ಹುಡುಗಿ. ಕಳೆದೆರಡು ವರ್ಷಗಳಿಂದ ಓದಿನಲ್ಲೂ ಸಾಧಾರಣವಾಗಿ ಮುಂದುವರೆಯತೊಡಗಿದ್ದಳು.

ಪ್ರಿಯ ೧೬ ವರ್ಷದ ತಾಯಿಯಿಲ್ಲದ ಮಧ್ಯಮ ವರ್ಗದ ಹುಡುಗಿ, ಓದುವುದರಲ್ಲಿ ಚುರುಕು.   ಹಾಡು, ನೃತ್ಯ, ಆಟ ಎಲ್ಲಾದರಲ್ಲೂ ಆಸಕ್ತಿ ಇರುವ ಹುಡುಗಿ. ಕಳೆದೆರಡು ವರ್ಷಗಳಿಂದ ಓದಿನಲ್ಲೂ ಸಾಧಾರಣವಾಗಿ ಮುಂದುವರೆಯತೊಡಗಿದ್ದಳು. ಈ ಕಾರಣದಿಂದಾಗಿ ಆಕೆ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಂಡು ಖಿನ್ನತೆಗೆ ಗುರಿಯಾದಳು.

ಸದಾ ಬೇಸರದಲ್ಲಿರುವುದು, ಅತಿಯಾಗಿ ಟಿವಿ ನೋಡುವುದು, ಹೊರಗಿನ ಪ್ರಪಂಚದಿಂದ ಒಳಸರಿದು ಒಂಟಿಯಾಗಿರುವುದು ದಿನಚರಿಯಾಯಿತು. ಅತಿ ಬೇಸರವಾದರೆ ಕೋಣೆಯೊಳಗೆ ತನ್ನನ್ನು ತಾನು ಬಂಧಿಸಿ ಗಂಟೆಗಟ್ಟಲೆ ಅಳುವುದು ಅಭ್ಯಾಸವಾಯಿತು.  ಆಪ್ತ ಸಮಾಲೋಚನೆಯಲ್ಲಿ ಗೊತ್ತಾಗಿದ್ದು ಇದು ಮುಟ್ಟಿನ ಸಮಸ್ಯೆ ಎಂದು.

ಅವಳ ದಿನಚರಿ... ಬೆಳಿಗ್ಗೆ ೬ರಿಂದ-೭ ಟ್ಯುಷನ್, ೭.೩೦ಗೆ ಮನೆಗೆ ಬಂದು ಶಾಲೆಗೆ ತಯಾರಾಗುವುದು, ನಡುವೆ ಶಾಸ್ತ್ರಕ್ಕೆ ತಿಂಡಿ ತಿಂದು ಶಾಲೆಗೆ ಓಡುವುದು, ಮಧ್ಯಾಹ್ನ ಕಟ್ಟಿಕೊಂಡು ಹೋದ ಬುತ್ತಿಯನ್ನೂ ಉಳಿಸಿಕೊಂಡು ಬರುವುದು. ಸಂಜೆ ಹಸಿವುಹಿಂಗಿಸಲು ಸ್ನೆಹಿತರೊಂದಿಗೆ ಚಾಟ್ಸ್‌ ತಿನ್ನುವುದು, ರಾತ್ರಿ ಸುಸ್ತು ಎನ್ನುತ್ತ ಬೇಗನೇ ಮಲಗುವುದು...

ಇದು ಕೇವಲ ಅವಳ ದಿನಚರಿಯಲ್ಲ, ಬಹುತೇಕ ಹುಡುಗಿಯರ ದಿನಚರಿಯೂ ಹೌದು.

ಮಕ್ಕಳ ಒತ್ತಡದ ಜೀವನ ಹಾಗು ಈ ಮೇಲ್ಕಂಡ ಆಹಾರ ಪದ್ಧತಿಯ ಪರಿಣಾಮವೇ  ರಕ್ತಹೀನತೆ. ಭಾರತದಲ್ಲಿ ೬೦% ಕಿಂತ ಹೆಚ್ಚಿನ ಮಹಿಳೆಯರಿಗೆ ಹಾಗು ೮೫% ಕಿಂತ ಹೆಚ್ಚಿನ ಮಕ್ಕಳಿಗೆ ರಕ್ತಹೀನತೆ ಒಂದು ಮೂಲ ತೊಂದರೆಯಾಗಿದೆ. ಇದರ ಪರಿಣಾಮ ಘನ ಘೋರವಾಗಿದೆ. ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಹೀನರಾಗುತ್ತಿದ್ದಾರೆ ಮುಂದಿನ ಪೀಳಿಗೆಯವರು.

ಕುಪೋಷಣೆ ಬರೀ ಹಳ್ಳಿಯಲ್ಲಿ ಮಾತ್ರವೇ? ಬಡವರಲ್ಲಿ ಮಾತ್ರವೇ? ಆಹಾರದ ಕೊರತೆಯಿಂದ ಮಾತ್ರವೇ? ಎಂಬ ಪ್ರಶ್ನಗೆ ಉತ್ತರ ಹುಡುಕಿದರೆ ನಮಗೆ ಸಿಗುವ ಉತ್ತರ ಬೇರೆಯೇ ಆಗಿರುತ್ತದೆ. ಬಡವರಲ್ಲಿ, ಆಹಾರದ ಕೊರತೆ ಇರುವವರಲ್ಲಿ ಇದು ಸಹಜ. ಆದರೂ ಪೇಟೆಯ ಜೀವನದಲ್ಲಿ, ಶ್ರೀಮಂತರು, ಮಧ್ಯಮ ವರ್ಗದವರಲ್ಲಿ ಇದೇನು ಕಡಿಮೆ ಇಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ತಪ್ಪು ಆಹಾರ ಪದ್ಧತಿ.

*ಪೌಷ್ಟಿಕಾಂಶ ಇರುವ ಹಸಿರು ತರಕಾರಿ, ಕಾಳು, ಸೊಪ್ಪು, ಹಣ್ಣು ತಿನ್ನದೇ ಇರುವುದು
*ಬ್ರೆಡ್, ಬನ್ನು, ಬಿಸ್ಕತ್ತುಗಳಂತಹ ಮೈದಾದಿಂದ ತಯಾರಿಸಿರುವ ಬೇಕರಿ ಉತ್ಪನ್ನಗಳನ್ನು ಉಪಯೋಗಿಸುವುದು
*ಫಾಸ್ಟ್‌ ಫುಡ್‌ ಸೇವನೆ
*ಸರಿಯಾದ ಹೊತ್ತಿಗೆ ಆಹಾರ ಸೇವಿಸದೇ ಇರುವುದು
*ಹೊಟ್ಟೆಹುಳದ ಮಾತ್ರೆ ಕಾಲ ಕಾಲಕ್ಕೆ ತೆಗೆದುಕೊಳ್ಳದಿರುವುದು
ಇವುಗಳ ಪರಿಣಾಮ
*ಊಟ ಸೇರುವುದಿಲ್ಲ.  ಊತ, ಸುಸ್ತು, ಮೈ  ಬಿಳಿಚಿಕೊಳ್ಳುವುದು, ಸಿಟ್ಟು, ಕಿರಿಕಿರಿ, ಖಿನ್ನತೆ
*ಕೆಲಸ/ಓದಿನಲ್ಲಿ ಆಸಕ್ತಿ ಇಲ್ಲದೇ ಇರುವುದು
*ಮುಟ್ಟಿನ ಸಮಸ್ಯೆಗಳು
*ಮಕ್ಕಳಾಗದೇ ತಾತ್ಕಾಲಿಕ ಬಂಜೆತನ ಉಂಟಾಗಬಹುದು. ಗರ್ಭಪಾತವಾಗಬಹುದು.  ಮಗುವಿನ ಬೆಳವಣಿಗೆ ಸರಿಯಾಗಿ ಆಗದೇ ಇರುವ ಸಾಧ್ಯತೆಯೂ ಇರುತ್ತದೆ, (ಬುದ್ದಿಮಾಂದ್ಯ ಮಗು ಹುಟ್ಟಬಹುದು)
ಇವತ್ತಿನ ಹೆಣ್ಣು ಮಕ್ಕಳೇ ನಾಳಿನ ತಾಯಂದಿರು ಆದ್ದರಿಂದ ನಮ್ಮ ಹೆಣ್ಣು ಮಕ್ಕಳ ಆಹಾರ ಸರಿ ಇದ್ದಲ್ಲಿ ಮಾತ್ರ ನಾವು ಮುಂದಿನ ಪೀಳಿಗೆಗೆ ಆರೋಗ್ಯ ಕೊಡಬಹುದು.

ಆ ಆರೋಗ್ಯದ ಗುಟ್ಟು ನಮ್ಮಲ್ಲಿಯೇ ಇರುವುದರಿಂದ ಕಾಪಾಡಿಕೊಳ್ಳುವುದೂ ಬಿಡುವುದೂ ನಮಗೇ ಸೇರಿರುತ್ತದೆ. ಆರೋಗ್ಯ ಎಂಬ ಸಂಪತ್ತನ್ನು ಕಾಪಿಡುವ ಕೀಲಿಕೈ ನಮ್ಮ ಆಹಾರ ಪದ್ಧತಿಯೇ ಆಗಿರುತ್ತದೆ. ಆಹಾರ ಪದ್ಧತಿ ಬದಲಿಸಿದಲ್ಲಿ ಮನೆಯ ಮಗಳು ಜೊತೆಗೆ ಮನೆಯ ಪರಿಸರವೂ ಆರೋಗ್ಯವಂತವಾಗಿರುತ್ತದೆ.

 

2.95689655172
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top