অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡೌನ್

ಇದು ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಗಣವಾಗಿದೆ. ಅದಕ್ಕೆ ಕಾರಣ ಹೆಚ್ಚುವರಿ ಕ್ರೊಮೊಸೊಮ್ 21 ನ ಪ್ರತಿ ಇರುವುದು.

ಡೌನ್ ಸಿಂಡ್ರೋಮು ಇರುವ ವ್ಯಕ್ತಿಗಳು ಕೆಲವು ಸಾಮಾನ್ಯ ದೈಹಿಕ ಮತ್ತು ಮಾನಸಿಕ ಲಕ್ಷಣಗಳನ್ನು ಹೊಂದಿದ್ದರೂ, ಡೌನ್ ಸಿಂಡ್ರೋಮು ಲಘುವಿನಿಂದ ತೀವ್ರದ ವರೆಗೆ ಇರಬಹುದು. ಸಾಧಾರಣವಾಗಿ ಡೌನ್ ಸಿಂಡ್ರೋಮು ಇರುವ ವ್ಯಕ್ತಿಗಳಲ್ಲಿ ಇಲ್ಲದವರಿಗಿಂತ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ತುಸು ಕಡಿಮೆ ಇರುವುದು.

ಡೌನ್ ಸಿಂಡ್ರೋಮು ಇರುವ ವ್ಯಕ್ತಿಗಳು ಇತರೆ ತೊಂದರೆಗಳನ್ನೂ ಹೊಂದಿರಬಹುದು.ಅವರು ಹಟ್ಟುವಾಗಲೆ ಹೃದ್ರೋಗದಿಂದ ನರಳುತ್ತಿರಬಹುದು.ಅವರಿಗೆ ಡಿಮ್ನೇಷಿಯಾ ಇರಬಹುದು.ಅವರಿಗೆ ಶ್ರವಣ ಸಮಸ್ಯೆ, ಕಣ್ಣಿನ ಸಮಸ್ಯೆ, ಕರುಳಿನ ಸಮಸ್ಯೆ, ಥೈರಾಯಿಡ್ ಮತ್ತು ಅಸ್ಥೀ ಪಂಜರದ ಸಮಸ್ಯೆಗಳು ಇರಬಹುದು.

ಮಹಿಳೆಗೆ ಹೆಚ್ಚು ವಯಸ್ಸಾದಂತೆ ಡೌನ್ ಸಿಂಡ್ರೋಮು ಇರುವ ಮಗುವು ಹುಟ್ಟುವ ಸಾಧ್ಯತೆ ಬಹಳವಾಗಿರುವುದು. ಡೌನ್ ಸಿಂಡ್ರೋಮು ಅನ್ನು ಗುಣ ಪಡಿಸಲಾಗುವುದಿಲ್ಲ. ಆದರೂ ಅನೇಕ ಡೌನ್ ಸಿಂಡ್ರೋಮು ಇರುವ ಜನರ ಯಶಸ್ವೀ ಜೀವನವನ್ನು ವಯಸ್ಕರಾದ ಮೇಲೆ ನಡೆಸುವರು.

ಡೌನ್ ಸಿಂಡ್ರೋಮು ಎಂದರೇನು ?

ಡೌನ್ ಸಿಂಡ್ರೋಮು ಕ್ರೊಮೊಸೊಮನ ಒಂದು ಸ್ಥಿತಿ . ಇದು ಕೆಲವು ಸಾಮಾನ್ಯ ಗುಣಲಕ್ಷಣಗಳು ಕೆಳಕಂಡಂತೆ ಇವೆ:

  • ಬೌದ್ಧಿಕ ವಿಕಲತೆ ಬೌದ್ಧಿಕ ವಿಕಲತೆಯ ಪ್ರಮಾಣವು ಬೇರೆಬೇರೆ ಇರುತ್ತದೆ. ಆದರೆ ಅದು ಬಹು ಲಘುವಾಗಿ ರುವುದರಿಂದ ಸಾಧಾರಣದ ವರೆಗೆ ಇರುವುದು.
  • ಮುಖ ಲಕ್ಷಣ ವಿಭಿನ್ನವಾದ ಮುಖ ಲಕ್ಷಣ ವಿರುವುದು. ಬಾಲ್ಯದಲ್ಲಿ ಸ್ನಾಯುಗಳು ಸಮತೋಲನ ವಿರುವುದಿಲ್ಲ. (ಹೈಪೊಟೋನಿಯ - hypotonia).
  • ಜನ್ಮ ದೋಷಗಳು - ಡೌನ್ ಸಿಂಡ್ರೋಮು ಇರುವವರು ಹುಟ್ಟುವಾಗಲೆ ಅನೇಕ ಸಮಸ್ಯೆಗಳನ್ನು ಹೊಂದಿರಬಹುದು.ಅವರಲ್ಲಿ ಅರ್ಧದಷ್ಟುಜನರು ಹೃದಯ ದೋಷ ಹೊಂದಿರುವರು.
  • ಜೀರ್ಣತೆಯ ಅಸಹಜತೆಗಳು- ಕರುಳಿನಲ್ಲಿನ ತಡೆಗಳಂತಹವುಗಳು ಅಷ್ಟುಸಾಮಾನ್ಯವಲ್ಲ.

ಡೌನ್ ಸಿಂಡ್ರೋಮು ಇರುವ ವ್ಯಕ್ತಿಗಳು ಅನೇಕ ಕೆಳಗೆ ಕಾಣಿಸಿದ ವೈದ್ಯಕೀಯ ಪರಿಸ್ಥಿತಿಗಳು ಬರಬಹುದಾದ ಅಪಾಯ ಹೊಂದಿರಬಹುದು.

  • ಗ್ಯಸ್ಟ್ರೊಫ್ಯಾಗಲ್ ರಿಫ್ಲಕ್ಸ- ಇದು ಜಠರದಲ್ಲಿನ ಆಮ್ಲಯುಕ್ತ ವಸ್ತುಗಳು ಎಸೊಫೇಗಸ್ಗೆ ವಾಪಸ್ಸು ಬರುವ ಸಿಲಿಯಾಕ್ ರೋಗ
  • ಸಿಲಿಯಾಕ್‌ ರೋಗ- ಗ್ಲುಟೆನ್‌ ಎನ್ನುವ ಗೋದಿಯ ಪ್ರೊಟೀನಿಗೆ ಇರುವ ಅಲರ್ಜಿ ಇರುತ್ತದೆ.
  • ಹೈಪೊಥೈರಾಯಿಡಿಸಮ್ ಡೌನ್ ಸಿಂಡ್ರೋಮು ಇರುವ ಶೇಕಡಾ 15 ಜನ ಸಕ್ರಿಯವಾಗಿಲ್ಲದ ಥೈರಾಯಿಡ್ ಗ್ರಂಥಿಯನ್ನು ಹೊಂದಿರುತ್ತಾರೆ (ಹೈಪೊ ಥೈರಾಯಿಡಿಸಮ್) ಥೈರಾಯಿಡ್ ಚಿಟ್ಟೆಯ ಆಕಾರದ ಅಂಗ. ಕತ್ತಿನ ಕೇಳ ಭಾಗದಲ್ಲರುವುದು. ಇದು ಹಾರ್ಮೋನುಗಳನ್ನು ಉತ್ಪಾದಿಸುವುದು.
  • ಶ್ರವಣ ಮತ್ತು ದೃಷ್ಟಿ ಸಮಸ್ಯೆಗಳು - ಡೌನ್ ಸಿಂಡ್ರೋಮು ಇರುವ ವ್ಯಕ್ತಿಗಳಿಗೆ ಶ್ರವಣ ಮತ್ತು ದೃಷ್ಟಿದೋಷ ಬರುವ ಅಪಾಯ ಹೆಚ್ಚಿರುವುದು.
  • ಬ್ಲಡ್ ಕ್ಯಾನ್ಸರ್ - ಜತೆಗೆ ಡೌನ್ ಸಿಂಡ್ರೋಮು ಇರುವ ಮಕ್ಕಳಲ್ಲಿ ಸುಮಾರು ಶೇಕಡಾ 1 ರಷ್ಟು ಜನ ರಕ್ತ ಕ್ಯಾನ್ಸರಿಗೆ ಗುರಿಯಾಗುವರು( ಲುಕೆಮಿಯಾ).
  • ಅಲ್ಝೆಮಿರ್ ರೋಗ- ಡೌನ್ ಸಿಂಡ್ರೋಮು ಇರುವ ವಯಸ್ಕರು ಅಲ್ಝೆಮಿರ್ ರೋಗ ಬರುವ ಅಪಾಯ ಹೊಂದಿರುವರು.ಇದು ಮೆದುಳಿನ ಅಸಹಜತೆ. ಕ್ರಮೇಣ ನೆನಪಿನ ಕೊರತೆ, ನಿರ್ಧಾರ ತೆಗೆದುಕೊಳ್ಳಲಾಗದಿರುವುದು, ಕಾರ್ಯ ನಿರ್ವಹಿಸಲಾಗದಿರುವುದು ಇದರ ಲಕ್ಷಣಗಳು. ಇದು ಸಾಮಾನ್ಯವಾಗಿ ಪೂರ್ತಿ ವಯಸ್ಸಾದವರಲ್ಲಿ ಬರುವ ರೋಗ ವಾದರೂ ಡೌನ್ ಸಿಂಡ್ರೋಮು ಇದ್ದವರಲ್ಲಿ 5ನೆ ವಯಸ್ಸಿಗೆ ಬರುವುದು.0.

ಡೌನ್ ಸಿಂಡ್ರೋಮು ಎಷ್ಟುಸಾಮಾನ್ಯವಾಗಿದೆ ?

ಡೌನ್ ಸಿಂಡ್ರೋಮು 740 ನವಜಾತ ಶಿಶುಗಳಲ್ಲಿ ಒಬ್ಬರಿಗೆ ಬರುವುದು. ಮಹೀಳೆಯರಿಗೆ ಹೆಚ್ಚು ವಯಸ್ಸಾದಂತೆ ಹುಟ್ಟುವ ಮಗುವಿಗೆ ಡೌನ್ ಸಿಂಡ್ರೋಮು ಬರುವ ಸಂಬವ ಹೆಚ್ಚು

ಡೌನ್ ಸಿಂಡ್ರೋಮು ಗೆ ಸಂಬಂಧಿಸಿದ ಜೆನೆಟಿಕ್ ಅಸಹಜತೆಗಳು ಯಾವು ?

  • ಟ್ರಿಸೊಮಿ- ಡೌನ್‌ ಸಿಂಡ್ರೋಮ್‌ನ ಬಹುತೇಕ ಪ್ರಕರಣಗಳು ಟ್ರಿಸೊಮಿ ೨೧ ಆಗುತ್ತವೆ, ಹಾಗೆಂದರೆ, ದೇಹದಲ್ಲಿರುವ ಪ್ರತಿ ಜೀವಕೋಶವೂ ಕೂಡ ಎರಡು ಸೆಟ್‌ ಕ್ರೊಮೋಸೋಮುಗಳ ಬದಲು ಮೂರು ಸೆಟ್‌ ಕ್ರೋಮೋಸೋಮು (ವರ್ಣತಂತು)ಗಳನ್ನು ಹೊಂದಿರುತ್ತದೆ. ಈ ಹೆಚ್ಚುವರಿ ಸೆಟ್‌ ಮಾನವನ ಸಹಜ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ. ಅಲ್ಲದೆ ಇದು ಡೌನ್‌ಸಿಂಡ್ರೋಮ್‌ಗೆ ಕಾರಣವಾಗುತ್ತದೆ.
  • ೨೧ ವರ್ಣತಂತುಗಳ ಹೆಚ್ಚುವರಿ ಪ್ರತಿ- ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ ಕೆಲವರಲ್ಲಿ ಕ್ರೋಮೋಸೋಮ್‌ ೨೧ರ ಹೆಚ್ಚುವರಿ ಪ್ರತಿ ಅವರ ದೇಹದ ಕೆಲವೇ ಕೆಲವು ಜೀವಕೋಶಗಳಲ್ಲಿ ಇರುತ್ತದೆ. ಇದನ್ನು ಮೊಸಾಯಿಕ್‌ ಡೌನ್‌ಸಿಂಡ್ರೋಮ್‌ ಎನ್ನುತ್ತಾರೆ.
  • ಕ್ರೊಮೋಸೋಮ್‌ ಟ್ರಾನ್ಸ್ ಲೊಕೇಶನ್‌-ಸಂತಾನೋತ್ಪತ್ತಿ ಜೀವಕೋಶಗಳ ಬೆಳವಣಿಗೆಯ ಸಮಯದಲ್ಲಿ ಈ ಕ್ರೊಮೋಸೋಮ್‌ ೨೧ ಬೇರೆ ಕ್ರೋಮೋಸೋಮುಗಳೊಂದಿಗೆ ಅಂಟಿಕೊಳ್ಳುವುದರಿಂದಲೂ ಡೌನ್‌ಸಿಂಡ್ರೋಮ್‌ ಬರಬಹುದು. ಅಥವ ಭ್ರೂಣದ ಬೆಳವಣಿಗೆಯ ಆರಂಭದ ಹಂತದಲ್ಲೂ ಇದು ಸಂಭವಿಸಬಹುದು. ಇದರಿಂದ ಬಳಲುವ ಜನರಲ್ಲಿ ಕ್ರೊಮೋಸೋಮಿನ ೨ ಪ್ರತಿಗಳು ಮತ್ತು ಕ್ರೊಮೋಸೋಮ್ ೨೧ರ ಹೆಚ್ಚುವರಿ ವಸ್ತುವೂ ಮತ್ತೊಂದು ಕ್ರೊಮೋಸೋಮಿಗೆ ಅಂಟಿಕೊಂಡಿರುತ್ತದೆ. ಈ ವಂಶವಾಹಿಗಳ ಬದಲಾವಣೆಯಿಂದ ಟ್ರಾನ್ಸ್ ಲೊಕೇಶನ್‌ ಡೌನ್‌ಸಿಂಡ್ರೋಮ್‌ ಬರುತ್ತದೆ.

ಡೌನ್ ಸಿಂಡ್ರೋಮು ವಂಶಾನುಗತವಾಗಿಬರುವುದೆ ?

ಡೌನ್‌ಸಿಂಡ್ರೋಮಿನ ಬಹುತೇಕ ಪ್ರಕರಣಗಳು ಆನುವಂಶಿಕವಾಗಿ ಬಂದವಲ್ಲ.

  • ಟ್ರೈಸೊಮಿ- ಕ್ರೊಮೊಸೋಮುಗಳ ಅಸಹಜತೆಯು ಅಕಸ್ಮಾತ್ತಾಗಿ ಸಂತಾನೋತ್ಪತ್ತಿ ಜೀವಕೋಶಗಳ ನಿರ್ಮಾಣ ಸಮಯದಲ್ಲೆ ಟ್ರೈಸೊಮಿ21 ಉಂಟಾಗುತ್ತದೆ, ಈ ಅಸಹಜತೆಯು ಅಂಡಾಣುಗಳ ಜೀವಕೋಶದಲ್ಲೆ ಆಗುವುದು. ಇದು ವೀರ್ಯ ದ ಜೀವಕೋಶದಲ್ಲಿ ಆಗುವುದು ಯಾವಗಲೋ ಒಮ್ಮೆ.. ಸಂತಾನೋತ್ಪತ್ತಿ ಜೀವಕೋಶಗಳ ಬೆಳವಣಿಗೆಯ ಸಮಯದಲ್ಲಿ ಯಾವಾಗಲಾದರೂ ಈ ವರ್ಣತಂತು ಅಸಹಜತೆ ಕಂಡು ಬರಬಹುದು. ಸಮಾನ್ಯವಾಗಿ ಈ ಅಸಹಜತೆ ಅಂಡಾಣುಗಳಲ್ಲಿ ಕಂಡು ಬರುತ್ತದೆ. ಆದರೆ ವೀರ್ಯಾಣುಗಳಲ್ಲಿಯೂ ಕೂಡ ಈ ಅಸಹಜತೆ ಕಂಡುಬರುವ ಸಾಧ್ಯತೆ ಇಲ್ಲದಿಲ್ಲ. ಜೀವಕೋಶಗಳು ಒಡೆಯುವ ಪ್ರಕ್ರಿಯಯಲ್ಲಿ ಕಂಡುಬರುವ ನಾನ್‌ಡಿಸ್ಕ್ ಜಂಕ್ಷನ್‌ ಸಮಸ್ಯೆಯಿಂದ ಕ್ರೊಮೋಜೋಮುಗಳ ಅಸಹಜತೆ ಉಂಟಾಗುತ್ತದೆ. ಉದಾ. ಒಂದು ಅಂಡಾಣು ಅಥವ ವೀರ್ಯಾಣುವು ಒಂದು ಕ್ರೊಮೋಸೋಮ್‌ ೨೧ರ ಹೆಚ್ಚುವರಿ ಪ್ರತಿಯನ್ನು ಹೊಂದಿರಬಹುದು. ಇಂತಹ ಒಂದು ಕೋಶವು ಮಗುವಿನ ವಂಶವಾಹಿಗಳಲ್ಲಿ ಒಂದಾದರೆ ಆ ಮಗುವಿನ ಪ್ರತಿ ಜೀವಕೋಶದಲ್ಲಿ ಹೆಚ್ಚುವರಿ ಕ್ರೊಮೋಜೋಮ್‌ ೨೧ ಇರುತ್ತದೆ.
  • ಮೊಸಾಯಿಕ್ ಡೌನ್ ಸಿಂಡ್ರೋಮು ಅನುವಂಶಿಕವಾಗಿರುವುದಿಲ್ಲ ಇದು ಅಕಸ್ಮಾತ್ತಾಗಿ ಜೀವ ಕೋಶವಿಭಜನೆಯ ಸಮಯದಲ್ಲಿ ಭ್ರೂಣದ ಬೆಳವಣಿಗೆಯಾಗುವಾಗ ಆಗುವ ಅತಂಕಕಾರಿ ಘಟನೆ. ಬೆಳವಣಿಗೆ. ಇದರ ಪರಿಣಾಮವಾಗಿ ಶರೀರದ ಕೆಲವು ಜೀವಕೋಶಗಳು ಕ್ರೊಮೊಸೋಮು 21 ರ ಎರಡು ಪ್ರತಿ ಹೊಂದಿರುವ ಬದಲಾಗಿ ಮೂರು ಪ್ರತಿ ಹೊಂದಿರುತ್ತವೆ.,
  • ಟ್ರಾನ್ಸಲೊಕೇಷನ್ ಡೌನ್ ಸಿಂಡ್ರೋಮು ಅನುವಂಶಿಕ ವಾಗಿರುವಸಾಧ್ಯತೆ ಇದೆ.ಇದರ ಪರಿಣಾಮವಿಲ್ಲದ ವ್ಯಕ್ತಿಯು ಕ್ರೊಮೊಸೋಮ್ ಮತ್ತು ಇನ್ನೊಂದರ ನಡುವೆ ಪುನರ್ ವ್ಯವಸ್ಥೆಯಾದ ಜೆನೆಟಿಕ್ ಸಾಮಗ್ರಿಯನ್ನು ಹೊಂದಿರುವನು. ಇದನ್ನು ಸಮತೋಲನವಾದ ಟ್ರಾನ್ಸ್ ಲೊಕೇಷನ್ ಎನ್ನುವರು. ಏಕೆಂದರೆ ಅವುಗಳಲ್ಲಿ ಹೆಚ್ಚುವರಿಯಾದ ಕ್ರೊಮೊಸೋಮು ಸಾಮಗ್ರಿ ಇರುವುದಿಲ್ಲ. ಈ ವ್ಯಕ್ತಿಗಳಿಗೆ ಡೌನ್ ಸಿಂಡ್ರೋಮು ಇಲ್ಲದಿದ್ದರೂ ಇವರ ಮಕ್ಕಳು ಡೌನ್ ಸಿಂಡ್ರೋಮು ಲಕ್ಷಣಗಳನ್ನು ಹುಟ್ಟಿನಿಂದಲೆ ಪಡೆಯುವ ಸಾಧ್ಯತೆ ಇದೆ. • ಡೌನ್ ಸಿಂಡ್ರೋಮು ದೈಹಿಕ ಮತ್ತು ಮಾನಸಿಕ ಲಕ್ಷಣಗಳು ಒಂದು ಸಮೂಹ.ಅದು ಕ್ರೊಮೊಸೋಮ 21.ರ ಹೆಚ್ಚುವರಿಯಾಗಿ ಪ್ರತಿ ಹೊಂದುವುದರಿಂದ ಬರುವುದು. ಅನೇಕ ಜನರುಲ್ಲಿನ ಡೌನ್ ಸಿಂಡ್ರೋಮಿನ ಲಕ್ಷಣಗಳು ಸಾಮಾನ್ಯಾ ವಾಗಿದ್ದರೂ ಅವು ಲಘುವಿನಿಂದ ಗಂಭೀರ ಪ್ರಮಾಣದವರೆಗೆ ಇರಬಹುದು. ಅಸಾಧಾರಣ ವಾಗಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಡೌನ್ ಸಿಂಡ್ರೋಮು ಇದ್ದವರಲ್ಲಿ ಅದು ಇಲ್ಲದವರಿಗಿಂತ ಸಾವಕಾಶವಾಗಿರುವುದು.

ಮೂಲ ರಾಷ್ಟ್ರೀಯ ಮಗುವಿನ ಆರೋಗ್ಯ ಮತ್ತು ಮಾನವನ ಬೆಳವಣಿಗೆ ಸಂಸ್ಥೆ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate