ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಸಿಡಿಟಿ

ಆಸಿಡಿಟಿ

ಆಸಿಡಿಟಿಗೆ ಮನೆಯಲ್ಲೇ ಕೆಲವು ಮದ್ದು ಹುಡುಕಿಕೊಳ್ಳಬಹುದು. ಆರಂಭದಲ್ಲೇ ಆ್ಯಸಿಡಿಟಿ ಉಪಶಮನದ ಬಗ್ಗೆ ಯೋಚಿಸದಿದ್ದಲ್ಲಿ ಇದು ಗಂಭೀರ ಸಮಸ್ಯೆಯನ್ನೇ  ತಂದೊಡ್ಡಬಹುದು. ಆಸಿಡಿಟಿ ಪರಿಹಾರಕ್ಕೆ ಕೆಲವು ಮನೆಮದ್ದುಗಳು ಇಲ್ಲಿವೆ:
ಲವಂಗ: ಆಸಿಡಿಟಿ ಸಮಸ್ಯೆ ಆರಂಭವಾದರೆ ಎರಡು ಲವಂಗದ ಚೂರನ್ನು ಚೆನ್ನಾಗಿ ಅಗಿದು ತಿನ್ನಿ.
ಜೀರಿಗೆ: ಒಂದು ಟೀ ಚಮಚ ಜೀರಿಗೆಯನ್ನು ಹುರಿದು ಅದನ್ನು ಕುಟ್ಟಿ ಪುಡಿ ಮಾಡಿ(ಸಂಪೂರ್ಣ ಪುಡಿಯಾಗಬಾರದು). ಇದನ್ನು ನೀರಿಗೆ ಹಾಕಿಕೊಂಡು ಊಟ ಮಾಡುವ ಸಮಯದಲ್ಲೆಲ್ಲ ಸೇವಿಸುತ್ತಿರಿ.
ಬೆಲ್ಲ: ಬೆಲ್ಲ ಸೇವಿಸುವುದರಿಂದ ಆ್ಯಸಿಡಿಟಿ ಹತೋಟಿಗೆ ಬರುತ್ತದೆ. ಆದರೆ ಮಧುಮೇಹ ಸಮಸ್ಯೆಯಿಂದ ಬಳಲುವವರಿಗೆ ಇದು ಕೂಡದು.
ಸೌತೆಕಾಯಿ: ಊಟದ ಮೊದಲು ಸೌತೆಕಾಯಿಯನ್ನು ತಿನ್ನುವ ಅಭ್ಯಾಸ ಇಂದಿಗೂ ಹಲವು ಮನೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸೌತೆಕಾಯಿಯಲ್ಲಿರುವ ಜೀರ್ಣಶಕ್ತಿ. ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಎಂಬ ಕಾರಣಕ್ಕಾಗಿಯೇ ಸೌತೆಕಾಯಿಯನ್ನು ಸೇವಿಸಲಾಗುತ್ತದೆ. ಅಲ್ಲದೆ ಮೊಸರಿಗೆ ಸೌತೆಕಾಯಿ ಮತ್ತು ಕೊತ್ತಂಬರಿ ಎಲೆಗಳನ್ನು ಸೇರಿಸಿ ತಯಾರಿಸಿದ ರಾಯತವೂ ಜೀರ್ಣಕ್ರಿಯೆಗೆ ಒಳ್ಳೆಯದು.
ತುಳಸಿ ಎಲೆ: ದಿನಕ್ಕೆ 5-6 ತುಳಸಿ ಎಲೆಗಳನ್ನು ಸೇವಿಸಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಅಲ್ಲದೆ ತುಳಸಿ ಎಲೆಗಳನ್ನು ಒಣಗಿಸಿಟ್ಟುಕೊಂಡು ಚಹ ತಯಾರಿಸುವಾಗ ಆ ಚಹಪುಡಿಯೊಡನೆ ಈ ಎಲೆಗಳನ್ನೂ ಸೇರಿಸಿ, ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಮಜ್ಜಿಗೆ: ಮನೆಯಲ್ಲೇ ತಯಾರಿಸಿದ ಮಜ್ಜಿಗೆಗೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಾಣಬಹುದು.
ಪುದಿನ: ಪುದಿನ ರಸವನ್ನು ಆಗಾಗ ಸೇವಿಸುವುದು ಸಹ ಆ್ಯಸಿಡಿಟಿ ಪರಿಹಾರಕ್ಕೆ ಉತ್ತಮ ಉಪಾಯ.
ಶುಂಠಿ: ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಶುಂಠಿಗಿಂತ ಉತ್ತಮವಾದ ಮದ್ದಿಲ್ಲ. ಊಟ ಅಥವಾ ತಿಂಡಿಗೂ ಅರ್ಧ ಗಂಟೆ ಮೊದಲು ಸಣ್ಣ ಶುಂಠಿ ಚೂರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಊಟವೂ ಹೆಚ್ಚು ಸೇರುತ್ತದೆ.
ಹಾಲು: ಹಾಲಿನಲ್ಲಿ ಹೆಚ್ಚು ಕ್ಯಾಲ್ಷಿಯಂ ಅಂಶವಿರುವುದರಿಂದ ಅದು ಹೊಟ್ಟೆಯಲ್ಲಿ ಆಮ್ಲ ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ. ಊಟದ ನಂತರ ಒಂದು ಗ್ಲಾಸ್ ಹಾಲನ್ನು ಸೇವಿಸುವುದು ಆಸಿಡಿಟಿಗೆ ಉತ್ತಮ ಪರಿಹಾರ.

-ಶಶಿ

ಮೂಲ: ವಿಕ್ರಮ

2.9537037037
ಅಶೋಕ Feb 20, 2019 08:18 AM

ಇನ್ನು ಹೆಚ್ಚಿನ ಮಾಹಿತಿಗಳು ಇದ್ದರೆ ನೀಡಿ

Neela Nov 09, 2015 03:18 PM

ಅಸಿಡಿಟಿಯ ಬಗ್ಗೆ ಒಳ್ಳೆಯ ಮಾಹಿತಿಗಳನ್ನೇ ಕೊಟ್ಟಿದ್ದೀರಿ. ಅಸಿಡಿಟಿಯ ಬಗ್ಗೆ ಇನ್ನು ಹತ್ತು ಹಲವು ಟಿಪ್ಸ್ ಗಳಿದ್ದರೆ ದಯವಿಟ್ಟು ನಮಗೋಸ್ಕರ ಅದರ ಹೆಚ್ಚಿನ ಮಾಹಿತಿಗಳನ್ನು ಒದಗಿಸಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top