অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೈನ ಸೈಟಿಸ್

ಕಾರಣಗಳು

ಸೈನಸಸ್ ಗಳು ಮುಖದ ಮೂಳೆಗಳಲ್ಲಿ ಮತ್ತು ಮೂಗಿನ ಸುತ್ತ ಇರುವ ತೇವ ಭರಿತವಾದ ಗಾಳಿಯ ಅವಕಾಶಗಳು. ಸೈನಸಸ್ ಗಳು ಮೂಗು ಮತ್ತು ಬಾಯಿಗೆ ಇರುವಂತೆ ಲೋಳೆಯ ಆವರಣ ಹೊಂದಿರುತ್ತವೆ. ವ್ಯಕ್ತಿಗೆ ಶೀತ ಮತ್ತು ಅಲರ್ಜಿಯಾದಾಗ ಸೈನಸ್ ಹೆಚ್ಚು ಲೋಳೆಯನ್ನು ಉತ್ಪಾದಿಸುತ್ತವೆ. ಆಗ ಸೈನ ಸೈಟಿಸ್ ನ ಹೊರಹಾಕುವ ವ್ಯವಸ್ಥೆಯು ಕಟ್ಟಿಕೊಳ್ಳುತ್ತದೆ. ಆಗ ಲೋಳೆಯು ಸೈನ ಸ್ ನಲ್ಲಿ ಸಿಕ್ಕಿ ಹಾಕಿಕಳ್ಳುವುದು. ಅದರಲ್ಲಿ ಬ್ಯಾಕ್ಟೀರಿಯಾ, ಫಂಗೈ ಮತ್ತು ವೈರಸ್ ಗಳು ಬೆಳೆಯುವವು. ಅದರಿಂದ ಸೈನ ಸೈಟಿಸ್ ಬರುವುದು .

ಲಕ್ಷಣಗಳು

ಸೈನ ಸೈಟಿಸ್ ವಯಸ್ಸಿಗೆ ಅನುಗುಣವಾಗಿ ಬೇರೆ ಬೇರೆ ಲಕ್ಷಣಗಳನ್ನು ತೋರುವುದು.

ಮಕ್ಕಳು ವಿಶಿಷ್ಟ ಶೀತದ ಲಕ್ಷಣಗಳನ್ನು ಹೊಂದಿರುವರು. ಕಟ್ಟಿಕೊಂಡ ಮೂಗು ಮತ್ತು ತುಸುವೆ ಜ್ವರ ಇರುವುದು. ಅವರಿಗೆ ಶೀತದ ಲಕ್ಷಣಗಳಾದ ಕಟ್ಟಿದ ಮೂಗು ಮತ್ತು ಸಿಂಬಳ ಸೋರುವುದು ಮೊದಲಾಗಬಹುದು. ಮಗುವಿಗೆ ಶೀತ ಶುರುವಾದ ಮೂರು ಅಥವ ನಾಲ್ಕನೆ ದಿನ ಜ್ವರಬಂದರೆ ಮಗುವಿಗೆ ಅದು ಜಸೈನಸೈಟಿಸ್ ಸಂಕೇತವಾಗಿರಬಹುದು ಅಥವ ಇತರ ಸೋಂಕುಗಳಾದ ಬ್ರಾಂಕೈಟಿಸ್, ನ್ಯುಮೊನಿಯಾ ಅಥವಇ ಕಿವಿಯ ತೊಂದರೆ ಇರಬಹುದು.ತರ ಸೋಂಕುಗಳಾ ಸಂಕೇತ ವಯಸ್ಕರಲ್ಲಿ ಸೈನ ಸೈಟಿಸ್ ನ ಲಕ್ಷಣವೆಂದರೆ ಶೀತ ಬಂದು ಏಳು ದಿನವಾದರೂ ಕಡಿಮೆಯಾಗದ, ಹಗಲಿನಲ್ಲಿರುವ ಒಣ ಕೆಮ್ಮು, ಜ್ವರ, ಹೆಚ್ಚಾದ ಮೂಗುಕಟ್ಟುವಿಕೆ, ಹಲ್ಲು ನೋವು, ಕಿವಿ ನೋವು ಅಥವ ಕೆಂಪಾಗುವ ಮುಖ. ಇತರಇತರ ಲಕ್ಷಣವೆಂದರೆ ಹೊಟ್ಟೆ ಕೆಡುವುದು, ವಾಕರಿಕೆ, ವಾಂತಿ, ತಲೆ ನೋವು ಮತ್ತು ಕಣ್ಣುಗಳ ಹಿಂಭಾಗದಲ್ಲಿ ನೋವುಹೊಟ್ಟೆ ಕೆಡುವುದು

ನಿರ್ವಣೆಗೆ ಸರಳ ಸೂಚನೆಗಳು

ಸೈನ ಸೈಟಿಸ್ ಸಾಮಾನ್ಯವಾದುದು. ಅದನ್ನು ಸುಲಭವಾಗಿ ಚಿಕತ್ಸೆ ಮಾಡಬಹುದು. ಮಗುವಿಗೆ ನೆಗಡಿಯಾಗಿ ಅದರ ಲಕ್ಷಣಗಳು 10 ದಿನಗಳಾದ ಮೇಲೂ ಮುಂದುವರೆದರೆ ಅಥವ ಮಗುವಿಗೆ ನೆಗಡಿಯಾದ 7 ದಿನಗಳ ನಂತರ ಜ್ವರ ಬಂದರೆ ಮಗುವನ್ನು ವೈದ್ಯರಲ್ಲಿಗೆ ಚಿಕಿತ್ಸೆಗಾಗಿ ಕೆರದುಕೊಂಡು ಹೋಗಿ.ನಿಮ್ಮ ಪರಿಸರವನ್ನು ಸ್ವಚ್ಛ ವಾಗಿಟ್ಟು ಸೈನಸೈಟಿಸ್ ಬರುವ ಸಂದರ್ಭಗಳಾದ ಅಲರ್ಜಿ ಮತ್ತು ಇತರ ಕಾರಣಗಳನ್ನು ನಿವಾರಿಸಿ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate