অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದಂತಕ್ಷಯ

ದಂತಕ್ಷಯ

ದಂತಕ್ಷಯ ಎಂದರೇನು? ಇದಕ್ಕೆ ವಯಸ್ಸಿನ ಮಿತಿಉಂಟೆ?
ದಂತಕ್ಷಯ ಎಂದರೆ ಹಲ್ಲಿನ ಸಾಮಾನ್ಯರೋಗ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಇದು ಮಕ್ಕಳಿಂದ  ದೊಡ್ಡವರ ತನಕ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.

ದಂತಕ್ಷಯ ಹೇಗೆ ಉಂಟಾಗುತ್ತದೆ?
ಸಾಮಾನ್ಯವಾಗಿ ಹಲ್ಲಿನಲ್ಲಿ ಅಂಟಿಕೊಳ್ಳುವ ಸಿಹಿ, ಅಂಟು ಪದಾರ್ಥಗಳು ಮತ್ತು ನಿಧಾನವಾಗಿ ಕರಗುವ ಪದಾರ್ಥಗಳು ಹಲ್ಲಿನ ಕವಚದ ಮೇಲೆ ಕುಳಿತು ಕೀಟಾಣುಗಳಿಂದ ರಚಿತವಾದ, ಸಾಧಾರಣವಾಗಿ ಗೋಚರಿಸದೆ ಇರುವ ಜಿಗುಟಾದ, ತೆಳುವಾದ ಪೊರೆಯಾಗಿದ್ದು, ಹಲ್ಲು ಮತ್ತು ವಸಡಿನ ಮೇಲೆ ಜೆವೆಯಾಗುತ್ತದೆ. ಇದಕ್ಕೆ ಡೆಂಟಲ್ ಪ್ಲಾಕ್ ಎನ್ನುತ್ತಾರೆ. ಈ ಡೆಂಟಲ್ ಪ್ಲಾಕ್‌ ಜೊತೆಗೆ ಬಾಯಿಯಲ್ಲಿರುವ ಇತರೆ ಬ್ಯಾಕ್ಟೀರಿಯಾಗಳು ಮತ್ತು ಆಹಾರ ಕಣಗಳ ಜೊತೆ ಸೇರಿ ಆಮ್ಲವನ್ನು (ಆಸಿಡ್) ಉತ್ಪತ್ತಿ ಮಾಡುತ್ತದೆ. ಇದು ಹಲ್ಲಿನ ಪದರವಾದ ಎನಾಮಲ್‌ನ್ನು ಕರಗಿಸಿ ಹಲ್ಲು (ದಂತಕುಳಿ) ಹುಳುಕಾಗುತ್ತದೆ.

ಅತಿಯಾದ ಸಿಹಿ ತಿಂಡಿ ಮತ್ತು ಅಂಟು ಪದಾರ್ಥಗಳ ಸೇವನೆಯಿಂದ ದಂತಕ್ಷಯವಾಗುತ್ತದೆಯೇ?
ಅತಿಯಾದ ಸಿಹಿ ತಿಂಡಿ ಮತ್ತು ಅಂಟು ಪದಾರ್ಥಗಳನ್ನು ಸೇವಿಸಿದ ನಂತರ ಹೇರಳವಾಗಿ ನೀರು ಕುಡಿಯಬೇಕು. ಇಲ್ಲವೇ ಹಲ್ಲು ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಸಿಹಿಯ ಪದರ ಹಲ್ಲಿನ ಮೇಲೆ ಶೇಖರಣೆಯಾಗಿ ದಂತಕ್ಷಯಕ್ಕೆ ಎಡೆ ಮಾಡುತ್ತದೆ.

ದಂತಕ್ಷಯ ಎಷ್ಟು ಹಂತದಲ್ಲಿ ಹಲ್ಲುಗಳ ಮೇಲೆ ದಾಳಿ ಮಾಡುತ್ತದೆ? ಇದಕ್ಕೆ ಚಿಕಿತ್ಸೆ ಹೇಗೆ?
ದಂತಕ್ಷಯ ೪ ಹಂತದಲ್ಲಿ ಹಲ್ಲುಗಳನ್ನು ದಾಳಿಗೊಳಿಸುತ್ತದೆ. ಪ್ಲಾಕ್ ಹಲ್ಲಿನ ಸಂದಿಗಳಲ್ಲಿ ಸಿಲುಕಿದ ಆಹಾರ ಕಣಗಳನ್ನು ಆಸಿಡ್‌ಗಳಾಗಿ ಪರಿವರ್ತಿಸುತ್ತದೆ ಮತ್ತು ಹಲ್ಲಿನ ಎನಾಮೇಲ್‌ನ ಮೇಲೆ ದಾಳಿ ಮಾಡುತ್ತದೆ. ಈ ದಂತಕ್ಷಯ ಕಪ್ಪು ಮತ್ತು ಬೂದಿ ಬಣ್ಣದಲ್ಲಿ ಗೋಚರವಾಗುತ್ತದೆ ಮತ್ತು ನೋವು ಇರುವುದಿಲ್ಲ.

ಮೊದಲ ಹಂತದಲ್ಲಿ ದಂತವೈದ್ಯರು ದಂತಕ್ಷಯ ಉಂಟಾದ ಭಾಗವನ್ನು ಸ್ವಚ್ಛಗೊಳಿಸಿ ಹಲ್ಲಿಗೆ ಸಿಮೆಂಟ್, ಬೆಳ್ಳಿ ಅಥವಾ ಹಲ್ಲಿನ ಬಣ್ಣದ ಸಿಮೆಂಟ್ ತುಂಬುತ್ತಾರೆ.

ದಂತಕ್ಷಯದ ಎರಡನೇ ಹಂತ ಹೇಗಿರುತ್ತದೆ ಮತ್ತು ಅದರ ಚಿಕಿತ್ಸೆಯೇನು?
ಒಮ್ಮೆ ದಂತ ಕುಳಿ ಉಂಟಾದರೆ ಸಾಕು ಹಲ್ಲಿನ ಎರಡನೇ ಪದರವನ್ನು ದಂತಕ್ಷಯ ಆವರಿಸಿ ಬಿಸಿ ಮತ್ತುತಂಪಾದ ಪದಾರ್ಥವನ್ನು ತೆಗೆದುಕೊಳ್ಳುವಾಗ ಹಲ್ಲುಗಳು ಜುಂನ್ನಲು ಶುರುವಾಗುತ್ತದೆ. ಈ ಹಂತದಲ್ಲಿ ದಂತಕ್ಷಯ ಆವರಿಸಿದ ಭಾಗವನ್ನು ಸ್ವಚ್ಛಗೊಳಿಸಿ ಸಿಮೆಂಟ್ ತುಂಬುತ್ತಾರೆ.

ದಂತಕ್ಷಯದ ಮೂರನೇ ಹಂತದಲ್ಲಿ ಹೇಗಿರುತ್ತದೆ ಮತ್ತು ಅದರ ಚಿಕಿತ್ಸೆ ಏನು?
ಎರಡನೇ ಪದರದ (ಡೆಂಟೈನ್) ಹಂತದಲ್ಲಿ ದಂತಕುಳಿಯ ಚಿಕಿತ್ಸೆ ಮಾಡದಿದ್ದರೆ, ಹಲ್ಲಿನ ಮೂರನೇ ಪದರವಾದ ಪಲ್ಪ್  ಹಲ್ಲಿನ ನರದವರೆಗೂ ಹರಡುತ್ತದೆ.ಈ ಹಂತದಲ್ಲಿ ಹಲ್ಲುತುಂಬಾ ನೋವಾಗುತ್ತದೆ. ಈ ಹಂತದಲ್ಲಿ ಹಲ್ಲಿನ ಬೇರಿನಚಿಕಿತ್ಸೆ  ನೀಡುತ್ತಾರೆ.

ದಂತಕ್ಷಯದ ನಾಲ್ಕನೇ ಹಂತದಲ್ಲಿ ಹೇಗಿರುತ್ತದೆ ಮತ್ತು ಅದರ ಚಿಕಿತ್ಸೆ ಏನು?
ಕೊನೆಯ ಹಂತದಲ್ಲಿ ಈ ದಂತಕ್ಷಯ ಹಲ್ಲಿನ ಬೇರನ್ನುತಲುಪಿ ಕೀವು ಉಂಟಾಗುತ್ತದೆ ಮತ್ತು ಹಲ್ಲುಗಳ ಬೇರು ಭಾಗದಲ್ಲಿಊತಉಂಟಾಗುತ್ತದೆ.ಈ ಹಂತದಲ್ಲಿ ಸಹ ಸಹಿಸಲಾಗದ ನೋವು ಇರುತ್ತದೆ. ಈ ಹಂತದಲ್ಲಿ ಹಲ್ಲುಗಳಿಗೆ ಬೇರಿನಚಿಕಿತ್ಸೆಯಿಂದ ಹಲ್ಲನ್ನು ಉಳಿಸಬಹುದು. ಕೆಲವೊಮ್ಮೆ ಹಲ್ಲನ್ನು ಕೀಳಿಸಬೇಕಾಗುತ್ತದೆ.

ದಂತಕ್ಷಯಕ್ಕೆ ಇತರ ಕಾರಣಗಳೇನು?
ವಂಶಪಾರಂಪರ್ಯ, ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಸರಿಯಾದ ಹಲ್ಲಿನ ಸ್ವಚ್ಛತೆಯ ವಿಧಾನ ಮತ್ತು ಸರಿಯಾದ ಹಲ್ಲಿನ ಸಂರಕ್ಷಕಗಳನ್ನು ಉಪಯೋಗಿಸದೇ ಹಲ್ಲಿನ ಪೇಸ್ಟ್ ಮತ್ತು ಹಲ್ಲಿನ ಬ್ರಷ್‌ ಬಳಸುವುದರಿಂದ.  ಹಲ್ಲಿನ ಆಕಾರದಲ್ಲಿ ಅತಿಯಾದ ಆಳ (ಪಿಟ್ ಮತ್ತುಗ್ರೂವ್ಸ್) ಇದ್ದರೆ ಸಹ ದಂತಕ್ಷಯವಾಗುವ ಸಾಧ್ಯತೆ ಹೆಚ್ಚು, ಇದಕ್ಕೆ ದಂತವೈದ್ಯರಿಂದ ಚಿಕಿತ್ಸೆ ಪಡೆಯಬಹುದು.

ದಂತಕ್ಷಯದತಡೆಗಟ್ಟುವಿಕೆ ಹೇಗೆ?
ಎರಡು ಊಟದ ನಡುವೆ ಸಿಹಿ ತಿಂಡಿ ಮತ್ತು ಅಂಟು ಪದಾರ್ಥಗಳನ್ನು ತಿನ್ನದಿರುವುದು ಉತ್ತಮ. ಪ್ಲಾಕ್‌ ತೊಲಗಿಸುವ ಸಲುವಾಗಿ ದಿನಕ್ಕೆ ಎರಡು ಬಾರಿ ಹಲ್ಲುಉಜ್ಜುವುದು ಮತ್ತು ಪ್ರತಿ ಊಟದ ನಂತರ ಬಾಯಿಯನ್ನು ನೀರಿನಿಂದ ಮುಕ್ಕಳಿಸಬೇಕು. ಸರಿಯಾದ ಹಲ್ಲಿನ ಸಂರಕ್ಷಕಗಳ ಆಯ್ಕೆ.

ಉದಾ: ಹಲ್ಲಿನ ಬ್ರಷ್ ಮತ್ತು ಟೂಥ್ ಪೇಸ್ಟ್(ದಂತ ಮಂಜನ). ಕ್ರಮಬದ್ಧ ಮತ್ತು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡುವುದರಿಂದ  ದಂತಕ್ಷಯವನ್ನು ತಡೆಗಟ್ಟಬಹುದು. ವಿಟಮಿನ್ ಮತ್ತು ಮಿನರಲ್‌ಗಳಿಂದ ತುಂಬಿದ ಸಮೃದ್ಧವಾದಆಹಾರ ಸೇವನೆಯಿಂದ ಹಲ್ಲುಗಳನ್ನು ಆರೋಗ್ಯಪೂರ್ಣವಾಗಿಇಡಬಹುದು. ಉದಾ: ಹಾಲು, ಹಣ್ಣು ಮತ್ತು ತರಕಾರಿಗಳು. ಫ್ಲೋರೈಡ್‌ಯುಕ್ತಟೂಥ್‌ಪೇಸ್ಟ್ (ದಂತ ಮಂಜನ) ಉಪಯೋಗಿಸುವುದರಿಂದ ಹಲ್ಲು ಹುಳುಕಾಗುವುದನ್ನು ತಡೆಗಟ್ಟಬಹುದು.

ಕೊನೆಯ ಮಾರ್ಪಾಟು : 4/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate