অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದುರ್ವಾಸನೆಯ ಊಸಿರು

ದುರ್ವಾಸನೆಯ ಉಸಿರು, ಅಥವ ಹ್ಯಾಲಿಟೊಸಿಸ ತುಂಬ ದೊಡ್ಡ ಸಮಸ್ಯೆ ಒಂದು ಒಳ್ಳೆಯ ಅಂಶವೆಂದರೆ ದುರ್ವಾಸನೆಯ ಉಸಿರನ್ನು ಕೆಲವು ಸರಳ ಕ್ರಮಗಳಿಂದ ತಡೆಯಬಹುದು.

ದುರ್ವಾಸನೆಯ ಉಸಿರು ವಾಸನೆ ಉಂಟು ಮಾಡುವ ಬಾಯಿಯಲ್ಲಿನ ಬ್ಯಾಕ್ಟೀರಿಯಾದಿಂದ ಬರುತ್ತದೆ. ಸರಯಾಗಿ ಬ್ರಷ್ ಮತ್ತು ಫ್ಲಾಸ್ ಮಾಡದಿದ್ದರೆ ಬ್ಯಾಕ್ಟೀರಿಯಾ ಗಳು ಬಾಯಿಯಲ್ಲಿ ಮತ್ತು ಹಲ್ಲುಗಳ ನಡುವಿನ ಆಹಾರದ ಕಣಗಳು ಮೇಲೆ ಸಂಗ್ರಹವಾಗುವುದು. ಈ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಗಂಧಕದ ಸಂಯುಕ್ತ ವಸ್ತುಗಳು ಬಿಡುಗಡೆಯಾಗುವುದು. ಅವು ಕೆಟ್ಟವಾಸನೆಗೆ ಕಾರಣವಾಗುತ್ತದೆ.

ಕೆಲವು ಆಹಾರಗಳು, ವಿಶೇಷವಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಘಾಟು ತೈಲಗಳನ್ನು ಹೊಂದಿರುತ್ತವೆ. ಆ ತೈಲಗಳು ಶ್ವಾಸಕೋಶಕ್ಕೆ ಹೋದಾಗ ಅಲ್ಲಿಂದ ಬಾಯಿಯ ಮೂಲಕ ದುರ್ವಾಸನೆ ಹೊರಹೊಮ್ಮುವುದು. ಧೂಮಪಾನವೂ ಕೂಡಾ ದುರ್ವಾಸನೆಯ ಒಂದು ಮುಖ್ಯ ಕಾರಣ. ದರ್ವಾಸನೆ ನಿವಾರಣೆ ಬಗ್ಗೆ ಅನೇಕ ಮಿಥ್ಯಗಳು ಇವೆ. ಆದರೆ ಅವು ಯಾವು ಸತ್ಯವಾದವುಗಳಲ್ಲ.

ಮಿಥ್ಯೆ#1

ದುರ್ವಾಸನೆ ಯು ಮೌತ್ ವಾಷ್ ನಿಂದ ನಿವಾರಣೆಯಾಗುವುದು

ಮೌತ್ ವಾಷ್ ದುರ್ವಾಸನೆಯನ್ನು ತಾತ್ಕಾಲಿಕವಾಗಿ ನಿವಾರಿಸುವುದು. ಮೌತ್ ವಾಷ್ ಬಳಸಿದರೆ ಅದರಲ್ಲಿ ಆಂಟಿಸೆಪ್ಟಿಕ್ ಇರಲಿ (ದುರ್ವಾಸನೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನುನಾಶ ಮಾಡಲು) ಮತ್ತು ಪ್ಲೇಕ್ ನಿವಾರಕವಿರಲಿ, ಭಾರತೀಯ ದಂತ ಸಮಿತಿಯ (IDA).ಮುದ್ರೆ ಇರುವುದನ್ನು ಬಳಸಿ.

ಮಿಥ್ಯೆ #2

ನೀವ ಹಲ್ಲು ಉಜ್ಜುತ್ತಿರುವ ತನಕ ದರ್ವಾಸನೆ ಇರಕೂಡದು

ಸತ್ಯ ಎಂದರೆ ಬಹಳ ಜನ ಹಲ್ಲನ್ನು 30 ರಿಂದ 45 ಸೆಕೆಂಡ್ ಮಾತ್ರ ಉಜ್ಜುತ್ತಾರೆ ಅದು ಸಾಕಾಗುವುದಿಲ್ಲ. ಹಲ್ಲಿನ ಮೆಲ್ಮೈ ಅನ್ನು ಪೂರ್ತಿಯಾಗಿ ಶೂಚಿಮಾಡಲು ಕನಿಷ್ಟ 2 ನಿಮಿಷ ದಿನಕ್ಕೆ ಎರಡುಸಾರಿ ಹಲ್ಲನ್ನು ಉಜ್ಜ ಬೇಕು. ನಿಮ್ಮ ನಾಲಿಗೆಯನ್ನು ಉಜ್ಜಲು ನೆನಪಿಡಿ- ಅಲ್ಲಿ ಬ್ಯಾಕ್ಟೀರಿಯಾಗಳು ಉಳಿದು ಕೋಂಡಿರುತ್ತವೆ. ಜೊತೆಗೆ ಫ್ಲಾಸ್ ಮಾಡುವುದು ಅಗತ್ಯ. ಬರಿ ಬ್ರರ್ಷ ಮಾಡುವುದರಿಂದ ಅಪಾಯಕಾರಿಯಾದ ಪ್ಲೇಕ್ ಮತ್ತು ಹಲ್ಲಿನ ನಡುವಿನ ಆಹಾರದ ಕಣಗಳು ನಿವಾರಣೆಯಾಗುವುದಿಲ್ಲ. ಎಲ್ಲ ಬ್ಯಾಕ್ಟೀರಿಯಾಗಳು ನಾಶವಾಗುವುದಿಲ್ಲ. ನೀವು ದುರ್ವಾಸನೆಯ ಬಗ್ಗೆ ಕಾಳಜಿ ಇದ್ದರೆ , ನಿಮ್ಮ ಹಲ್ಲಿನ ಮತ್ತು ಬಾಯಿಯ ಆರೋಗ್ಯದ ಬಗ್ಗೆ ಕಳಕಳಿ ವಹಿಸಿ. ಕೆಲವು ಸಕ್ಕರೆ ರಹಿತ ಗಮ್ ಗಳು ಮತ್ತು ಮಿಂಟ್ ಗಳು ತತ್ಕಾಲಿಕವಾಗಿ ಉಸಿರಿನ ದುರ್ವಾಸನೆ ನಿಲ್ಲಿಸುವವು.

ನೀವು ಹಲ್ಲುಗಳನ್ನು ಸೂಕ್ಷ್ಮವಾಗಿ ಉಜ್ಜಿ, ಫ್ಲಾಸ್ ಮಾಡಿ, ನಿಯಮಿತವಾಗಿ ದಂತ ವೈದ್ಯರನ್ನು ಕಂಡು ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಂಡರೆ, ಅವರು ನಿಮ್ಮ ಸಮಸ್ಯೆಯ ಕಾರಣ ಅರಿತು ಚಿಕಿತ್ಸೆ ನೀಡುವರು ಮತ್ತು ಸೂಕ್ತ ಕ್ರಮ ತೆಗೆದು ಕೊಳ್ಳುವರು.

ಉಸಿರಿನ ದುರ್ವಾಸನೆಗೆ ಕಾರಣಗಳು

ಸಾಕಷ್ಟು ದುರ್ವಾಸನೆಗೆ ಕಾರಣ ನಿಮ್ಮಬಾಯಿ. ದುರ್ವಾಸನೆಗೆ ಕಾರಣಗಳು ಹಲವು ಅವು ಯಾವುದೆಂದರೆ :

  • ಆಹಾರ ಆಹಾರದ ಕಣಗಳು ಹಲ್ಲಿನ ನಡುವೆ ಸಿಕ್ಕಿಹಾಕಿಕೊಂಡು ದುರ್ವಾಸನೆಗೆ ಕಾರಣವಾಗುವವು. ತೈಲಗಳ ಸೇವನೆಯು ದುರ್ವಾಸನೆಗೆ ಮತ್ತೊಂದು ಕಾರಣ. ಈರುಳ್ಳಿ ಮತ್ತು ಬೆಳ್ಳೂಳ್ಳಿ ಉತ್ತಮ ಉದಾಹರಣೆಗಳು ಆದರೆ ಇತರ ತರಕಾರಿಗಳು ಮತ್ತು ಮಸಾಲೆ ಸಹಾ ದುರ್ವಾಸನೆಗೆ ಕಾರಣವಗುವು. ಈ ಆಹಾರಗಳು ಜೀರ್ಣವಾದ ಮೇಲೆ ಘಾಟು ತೈಲಗಳು ರಕ್ತದೊಳಗೆ ಸೇರಿ ಶ್ವಾಸಕೋಶಕ್ಕೆ ಹೋಗುವವು.. ಆ ಆಹಾರವು ದೇಹದಿಂದ ಪೂರ್ಣ ಹೊರಹೋಗುವುವರೆಗೆ ಕೆಟ್ಟ ವಾಸನೆ ಬರುತ್ತಲೆ ಇರುವುದು.. ಈರುಳ್ಳಿ ಮತ್ತು ಬೆಳ್ಳೂಳ್ಳಿಗಳು ಸೇವಿಸಿದ 72 ಗಂಟೆಯವರೆಗೆ ವಾಸನೆ ಬೀರುವುದು.
  • ದಂತ ಸಮಸ್ಯೆಗಳು. ಹಲ್ಲುಗಳ ಶುಚಿತ್ವದ ಕೊರೆತ ಮತ್ತು ಪೆರಿಯೊಡಾಂಟಲ್ ರೋಗವು ದುರ್ವಾಸನೆಗೆ ಕಾರಣವಾಗಬಹುದು. ದಿನ ವೂ ಹಲ್ಲನ್ನು ಉಜ್ಜಿ ಫ್ಲಾಸ್ ಮಾಡಿಕೊಳ್ಳದಿದ್ದರೆ, ಬಾಯಿಯಲ್ಲಿ ಆಹಾರದ ಕಣಗಳು ಉಳಿದು ,ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಹೈಡ್ರೊಜೆನ್ ಸಲ್ಫೈಡ್ ನ್ನು ಹೊರಹಾಕಿ ವಾಸನೆ ಉಂಟು ಮಾಡುತ್ತದೆ. ಬಣ್ಣವಿಲ್ಲದ ಅಂಟಾದ ಬ್ಯಾಕ್ಟೀರಿಯಾದ ಪೊರೆ ಹಲ್ಲಿನಮೇಲೆ ಉಂಟಾಗುವುದು ಅದನ್ನೆ ಪ್ಲೇಕ್ಎನ್ನುವರು.
  • ಬಾಯಿ ಒಣಗುವುದು ಜೊಲ್ಲು ಬಾಯಿಯನ್ನು ತೇವವಾಗಿ ಮತ್ತು ಶುಚಿಯಾಗಿ ಇಡಲು ಸಹಾಯಕವಾಗಿದೆ. ಬಾಯಿ ಒಣಗಿದರೆ ನಾಲಿಗೆ , ವಸಡು, ಮತ್ತು ಕೆನ್ನೆಯೊಳಮೈ ಮೇಲೆ ಸತ್ತ ಜೀವ ಕೋಶಗಳು ಸಂಗ್ರಹವಾಗುವವು.. ಇವು ವಿಘಟನೆ ಹೊಂದಿ ದುರ್ವಾಸನೆ ಬರುವುದು. ಸಾಧಾರಣ ವಾಗಿ ನಿದ್ದೆ ಮಾಡುವಾಗ ಬಾಯಿ ಒಣಗುವುದು.
  • ರೋಗಗಳು - ದೀರ್ಘಕಾಲಿನ ಶ್ವಾಸಕೋಶದ ಸೋಂಕು ಮತ್ತು ಶ್ವಾಸಕೋಶದ ಕೀವುಗಳು ಬಹಳ ದುರ್ವಾಸನೆಯುಳ್ಳ ಉಸಿರನ್ನುಉಂಟುಮಾಡಬಹುದು. ಇತರೆ ಖಾಯಲೆಗಳು , ಕ್ಯಾನ್ಸರ್ ಮತ್ತು ಚಯಾಪಚಯ ಕ್ರಿಯೆಯಲ್ಲಿನ ಅವ್ಯವಸ್ಥೆಗಳೂ ದರ್ವಾಸನೆಗೆ ಕಾರಣ ವಾಗಬಹುದು.
  • ತಂಬಾಕು ಉತ್ಪನ್ನಗಳು ಧೂಮಪಾನವು ಬಾಯಿ ಒಣಗಿಸುವುದು ಮತ್ತು.ಅಹಿತವಾದ ವಾಸನೆ ಬರುವುದು. ತಂಬಾಕು ಬಳಸುವವರಲ್ಲಿ ಪೆರಿಯೋಡಾಂಟಲ್ ರೋಗ ವಾಗಿ ಇನ್ನೂ ಹೆಚ್ಚು ದುರ್ವಾಸನೆ ಬರಬಹುದು.
  • ತೀವ್ರ ಪಥ್ಯೆ ಹೆಚ್ಚಾಗಿ ಡಯಟ್ ಮಾಡುವವರು ಕಿಟೋ ಆಸಿಡ್ ನಿಂದಾಗಿ ಅಹಿತವಾದ ” ಹಣ್ಣಿನ” ವಾಸನೆ ಯುಸಿರು ಪಡೆಯ ಬಹುದು.. ಅದಕ್ಕೆ ಕಾರಣ ಕೆಲವು ರಸಾಯನಿಕ ಗಳ ವಿಘಟನ

ನೀವು ನಿಮಗಾಗಿ ಏನು ಮಾಡಬಹುದು?

  • ಬಾಯಿ ಮತ್ತು ಹಲ್ಲುಗಳ ಸ್ವಚ್ಛತೆ ಉನ್ನತ ಮಟ್ಟದಲ್ಲಿರಲಿ. ಬರಿ ಬ್ರಷ್ ಮಾಡಿದರೆ ಸಾಲದು ಫ್ಲಾಸ್ ಮಾಡಲೆಬೇಕು.
  • ಟಂಗ್ ಕ್ಲೀನರ್ ಬಳಸಿ ನಾಲಿಗೆಯ ಹಿಂಭಾಗದ ವರೆಗೆ ಶುಚಿಮಾಡಿ.
  • ತಜ್ಞರು ಶಿಫಾರಸ್ಸು ಮಾಡಿದ ಮೌತ್ ವಾಷ್ ಉಪಯೋಗಿಸಿ. ಮಲಗುವ ಮುನ್ನ ಉಪಯೋಗಿಸುವದು ಉತ್ತಮ
  • ಹೆಚ್ಚು ದ್ರವ ಸೇವಿಸಿ. ಅತಿಹೆಚ್ಚು ಕಾಫಿ ಬೇಡ
  • ಹೈನು ಪದಾರ್ಥ, ಮಾಂಸ ಮತ್ತು ಮೀನು ಸೇವಿದಾಗ ಬಾಯಿ ಶುಚಿ ಮಾಡಿಕೊಳ್ಳಿ.
  • ಸಕ್ಕರೆ ರಹಿತ ಗಮ್ ಅಗೆಯಿರಿ, ಮುಖ್ಯವಾಗಿ ನಿಮ್ಮ ಬಾಯಿ ಒಣಗಿದಾಗ
  • ತಾಜಾ, ನಾರುಳ್ಳ ತರಕಾರಿ ಸೇವಿಸಿ
  • ನಿಮ್ಮ ದಂತವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ಮತ್ತು ಅಗತ್ಯ ಬಿದ್ದಾ ಗ ಶುಚಿ ಮಾಡಿಸಿ ಕೊಳ್ಳಿ

ಮೂಲ : ಮಯೋಕ್ಲಿನಿಕ್

ಕೊನೆಯ ಮಾರ್ಪಾಟು : 5/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate