অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೇಸ್ಟ್‌

ಪೇಸ್ಟ್‌

ಹಲ್ಲುಜ್ಜುವ ಪೇಸ್ಟ್‌ನಿಂದ ಸೌಂದರ್ಯವನ್ನು ಮರಳಿ ಪಡೆಯಬಹುದೇ?

ಹಲ್ಲುಜ್ಜುವ ಪೇಸ್ಟ್ ಹೆಸರೇ ಹೇಳುವಂತೆ ಹಲ್ಲುಗಳ ಸ್ವಚ್ಛತೆಗಾಗಿ ಇರುವುದು. ಸ್ವಲ್ಪ ಹೆಚ್ಚು ಎಂದರೆ ಮನೆಯ ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸಬಹುದು. ಚರ್ಮದ ಆರೈಕೆಗೆ ಎಂದರೆ? ಹೌದು, ಈ ದ್ರಾವಣದಲ್ಲಿರುವ ವಿವಿಧ ರಾಸಾಯನಿಕಗಳು ಚರ್ಮದ ಹಲವು ತೊಂದರೆಗಳಿಗೆ ನೆರವು ನೀಡಬಲ್ಲುದು. ಕಪ್ಪು ಕಲೆಗಳನ್ನು ತೊಲಗಿಸಲು, ನೆರಿಗೆ ನಿವಾರಿಸಲು, ಮೊಡವೆ, ಕಪ್ಪುಚುಕ್ಕೆ ಮೊದಲಾದ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿವೆ.

ಮನೆ ವಸ್ತುಗಳ ಶುಚಿತ್ವದಲ್ಲಿ ಟೂತ್ ಪೇಸ್ಟ್ ಬಳಕೆ!

ಟೂತ್ ಪೇಸ್ಟ್ ಹಲ್ಲುಗಳ ಶುಚಿಗೆಯಷ್ಟೆ ಅಲ್ಲ ಮನೆ ಶುಚಿತ್ವಕ್ಕೆ ಕೂಡ ಬಳಸಬಹುದು! ಟೂತ್ ಪೇಸ್ಟ್ ಮನೆ ಬಳಕೆಯಲ್ಲಿ ಈ ಕೆಳಗಿನ ವಸ್ತುಗಳ ಶುಚಿತ್ವಕ್ಕೆ ತುಂಬಾ ಸಹಕಾರಿಯಾಗಿದೆ.

  1. ಬೆಳ್ಳಿ ಮತ್ತು ಚಿನ್ನ ಆಭರಣಗಳನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು. ಟೂತ್ ಪೇಸ್ಟ್ ಅನ್ನು ಬ್ರೆಷ್ ನಲ್ಲಿ ಹಾಕಿ ಆಭರಣಗಳನ್ನು ಉಜ್ಜಿದರೆ ಆಭರಣದ ಹೊಳಪು ಹೆಚ್ಚುವುದು.
  2. ಲೆದರ್ ಶೂ ನಲ್ಲಿ ಕಲೆಯಾಗಿದ್ದರೆ ಆ ಭಾಗಕ್ಕೆ ಟೂತ್ ಪೇಸ್ಟ್ ಹಾಕಿ ಉಜ್ಜಿ ಹೋಗಲಾಡಿಸಬಹುದು.
  3. ದಿನಾವೂ ಟೆನ್ನೀಸ್ ಆಡುವವರ ಶೂ ಕೊಳೆಯಾಗಿದ್ದರೆ ಈ ಟೂತ್ ಪೇಸ್ಟ್ ಬಳಸಿ ಶುಚಿಗೊಳಿಸಬಹುದು.
  4. ಟೂತ್ ಪೇಸ್ಟ್ ಹಾಕಿ ಅದರಿಂದ ವಜ್ರದ ಆಭರಣಗಳನ್ನು ತಿಕ್ಕಿದರೆ ಆಭರಣದ ಹೊಳಪು ಹೆಚ್ಚುವುದು.
  5. ಚೈನ್ ವಾಚ್ ನಲ್ಲಿ ಕೊಳೆಯಾಗಿದ್ದರೆ ಚಿಕ್ಕ ಹತ್ತಿಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಟೂತ್ ಪೇಸ್ಟ್ ಹಾಕಿ ವಾಚ್ ಅನ್ನು ಉಜ್ಜಬೇಕು. ನಂತರ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.
  6. ಹಾಲಿನ ಬಾಟಲಿಯನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು.

ಮೂಲ : ಬೋಲ್ಡ್ ಸ್ಕೈ (http://www.boldsky.com/)

ಕೊನೆಯ ಮಾರ್ಪಾಟು : 12/19/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate