অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೆರಿಒಡಂಟೈಟಿಸ್

ಪೆರಿಒಡಂಟೈಟಿಸ್ ( ಪಯೋರಿಯಾ) ಬಹು ಗಂಭೀರವಾದ ಜಿಂಜಿವೈಟಿಸ್ ನ ರೂಪ. ಅದರಲ್ಲಿ ಹಲ್ಲಿಗೆ ಆಧಾರ ನೀಡುವ ರಚನೆಯ ತನಕ ವಸಡಿನ ಬಾವು ಹರಡುವುದು.

  • ಹಲ್ಲು ಮತ್ತು ವಸಡಿನ ಮಧ್ಯದಲ್ಲಿ ಪ್ಲೇಕ್ ಮತ್ತು ಟಾರ್ಟರ್ ನಿರ್ಮಾಣವಾಗಿ, ಹಲ್ಲಿನ ಕೆಳಗಿರುವ ಮೂಳೆಗಳಿಗೆ ಹರಡುತ್ತದೆ.
  • ವಸಡಿನ ಬಾವು, ಮತ್ತು ರಕ್ತ ವಸರುವುದು, ದುರ್ವಾಸನೆಯ ಉಸಿರು ಹಲ್ಲುಗಳು ಸಡಿಲವಾಗುವವು.
  • ವೈದ್ಯರು ಕ್ಷ-ಕಿರಣ ತೆಗೆದು ಎಷ್ಡು ಆಳಕ್ಕೆ ಸೋಂಕು ಹರಡಿದೆ ಎಂಬುದನ್ನು ಅರಿತು ಪೆರಿಒಡಂಟೈಟಿಸ್ ಎಷ್ಟು ತೀವ್ರವಾಗಿದೆ ಎಂದು ತಿಳಿಯುವರು.
  • ವೃತ್ತಿಪರರಿಂದ ನಿಯಮಿತವಾಗಿ ಸ್ವಚ್ಛತೆ ಮಾಡಿಸುವುದು ಮತ್ತು ಬೆಕಾದಾಗ ದಂತ ಶಸ್ತ್ರಚಿಕಿತ್ಸೆ ಮತ್ತು ಆಂಟಿ ಬಯಟಿಕ್ಸ ನೀಡಬೇಕು

ಹಲ್ಲು ಉದರಲು ಪೆರಿಒಡಂಟೈಟಿಸ್ ವಯಸ್ಕರಲ್ಲಿ ಮತ್ತು ವೃದ್ಧರಲ್ಲಿ ಒಂದು ಮುಖ್ಯ ಕಾರಣ. ಸೋಂಕಿತ ಹಲ್ಲನ್ನು ಹಿಡಿದಿಡುವ ಮೂಳೆಯನ್ನು ಸವೆಸುವುದು. ಈ ರೀತಿ ಸವೆತವು ಕ್ರಮೇಣ ಹಲ್ಲಿನ ಬಿಗಿಯನ್ನು ಕಡಿಮೆ ಮಾಡುತ್ತದೆ. ಈ ರೀತಿ ಸೋಂಕು ತಗುಲಿದ ಹಲ್ಲು ತನಾಗಿಯೆ ಉದುರುವುದು. ಇಲ್ಲವಾದಲ್ಲಿ ಕಿತ್ತು ಹಾಕಬೇಕಾಬಹುದು.

ಕಾರಣಗಳು

ಬಹುತೇಕ ಪೆರಿಒಡಂಟೈಟಿಸ್ ಬರಲು ಬಹು ಕಾಲದ ಹಲ್ಲು ಮತ್ತು ವಸಡಿ ನ ಮೇಲಿನ ಗಾರೆ ಮತ್ತು ಪ್ಲೇಕ್ ಗಳ ಸಂಗ್ರಹವೆ ಕಾರಣ. ರೋಗವು ತೀವ್ರವಾದಾಗ ಕೊನೆಗೆ ಹಲ್ಲುಗಳು ಭರಿಸಲಾರದ ನೋವಿನಿಂದ ಕೂಡಿ ಸಡಿಲವಾಗಬಹುದು.

ಪೆರಿಒಡಂಟೈಟಿಸ್ ಹೆಚ್ಚಾಗುವ ವೇಗದಲ್ಲಿ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿರುತ್ತದೆ. ಅವರಲ್ಲಿನ ಟಾರ್ಟರಿನ ಸಂಗ್ರಹ ಅಷ್ಟೆಇದ್ದರೂ ಭಿನ್ನತೆ ಇರುವುದು.

ಲಕ್ಷ ಣಗಳು ಮತ್ತು ಪತ್ತೆ ಮಾಡುವುದು

ರಕ್ತ ಸ್ರಾವ, ಕೆಂಪಾದ ವಸಡು ಮತ್ತು ದರ್ವಾಸನೆಯ ಉಸಿರು ಪೆರಿಒಡಂಟೈಟಿಸ್ ನ ಲಕ್ಷಣಗಳು . ದಂತ ವೈದ್ಯರುಗಳು ವಸಡಿನಲ್ಲಿರುವ ಕಹರಗಳ ಆಳವನ್ನು ತೆಳುವಾದ ಕಡ್ಡಿಯ ಸಹಾಯದಿಂದ ಅರಿಯುವರು. ಕ್ಷ–ಕಿರಣವು ಹಲ್ಲನ್ನು ಹಿಡಿಯುವ ಮೂಳೆ ಯ ನಾಶದ ಪ್ರಮಾಣವನ್ನು ತೀಳಿಸುವುದು. ಹೆಚ್ಚು ಹೆಚ್ಚು ಮೂಳೆ ನಾಶವಾದಂತೆ ಹಲ್ಲು ಸಡಿಲವಾಗಿ ಜಾಗ ಬದಲಾಯಿಸ ತೊಡಗುವುದು. ಕೆಲವು ಸಲ ಮುಂದಿನ ಹಲ್ಲು ಹೊರ ಚಾಚುವುದು.. ಪೆರಿಒಡಂಟೈಟಿಸ್ ಸಾಧಾರಣವಾಗಿ ಹಲ್ಲು ಸಡಿಲವಾಗಿ ಅಗೆಯುವಾಗ ನೋವು ಮತ್ತು ಕೀವು ಆಗುವವರೆಗೆ ಗೊತ್ತಾಗುವುದೆ ಇಲ್ಲ.

ಮೂಲ : ಮೆರ್ಕ್(http://www.merck.com/mmhe/sec08/ch115/ch115c.html)

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate