অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾಸದ ನಗುವಿಗೆ ಹಲ್ಲು ಜೋಡಣೆ

ಮಾಸದ ನಗುವಿಗೆ ಹಲ್ಲು ಜೋಡಣೆ

ಇಳಿವಯಸ್ಸಿನಲ್ಲಿ ಶಾಶ್ವತ ಹಲ್ಲು  ಕಳೆದುಕೊಂಡ ನಂತರ ಕಂಡು ಬರುವ ಬೊಚ್ಚು ಬಾಯಿಯ ನಸುನಗೆಯನ್ನು ಎಷ್ಟೋ ಮಂದಿ ಒಪ್ಪಿಕೊಳ್ಳುವುದಿಲ್ಲ.  ಸಾಮಾಜಿಕ ಜೀವನದಿಂದ  ದೂರ ಉಳಿದು, ಖಿನ್ನತೆಗೂ ಒಳಗಾಗುತ್ತಾರೆ.

ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲು ಎಂಬ ಎರಡು ವಿಧವಾದ ಹಲ್ಲುಗಳನ್ನು ಪಡೆದಿರುತ್ತಾನೆ. ಹಾಲು ಹಲ್ಲು ಸಾಮಾನ್ಯವಾಗಿ 6 ತಿಂಗಳಿನಿಂದ ಮೂರು ವರ್ಷ ಕಾಲದವರೆಗೂ ಹುಟ್ಟುತ್ತವೆ. ಈ ಹಾಲು ಹಲ್ಲು ಸುಮಾರು ಆರು ವರ್ಷದಿಂದ ಹನ್ನೆರಡು ವರ್ಷದವರೆಗೂ ಉದುರುತ್ತವೆ. ನಂತರ ಅಲ್ಲಿ ಶಾಶ್ವತ ಹಲ್ಲುಗಳು ಹುಟ್ಟುತ್ತವೆ.

ಶಾಶ್ವತ ಹಲ್ಲುಗಳು ಮನುಷ್ಯನ ಜೀವಿತಾವಧಿಯವರೆಗೂ ಕಾರ್ಯನಿರ್ವಹಿಸಲು ಸಹಕಾರಿ. ಆದರೆ  ಸಾಮಾನ್ಯವಾಗಿ ೫೦ ರಿಂದ ೬೦ ವರ್ಷ ವಯಸ್ಸಾದಂತೆ ವಸಡಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಈ ಶಾಶ್ವತ ಹಲ್ಲುಗಳು ಸಡಿಲವಾಗಿ ಒಂದೊಂದೇ ಕಳಚಿ ಬೀಳುತ್ತವೆ. ಇದು ಅವರ ದೇಹ ಆರೊಗ್ಯಕ್ಕೂ ಸಂಬಂಧಿಸಿರುತ್ತದೆ. ಮಧುಮೇಹ, ಮೂಳೆ ಸಂಬಂಧಿತ ರೋಗಗಳಿಂದಾಗಿ ಹಲ್ಲು ಉದುರುವುದು ಬಲುಬೇಗ ಕಂಡು ಬರಬಹುದು.

ಕೆಲವೊಮ್ಮೆ ಇನ್ನಿತರ ಕಾರಣಗಳಿಂದಲೂ ಶಾಶ್ವತ ಹಲ್ಲುಗಳನ್ನು ಕಳೆದುಕೊಳ್ಳಬಹುದು. ಆಳವಾದ/ ಗುಣಪಡಿಸಲಾಗದ ಹುಳುಕು ಹಲ್ಲು ಹಲ್ಲು ಸುತ್ಪರೆ ರೋಗ/ವಸಡಿನ ಸಮಸ್ಯೆಗಳು  ಸೋಂಕುಗಳಿಂದ ಕೂಡಿದ ಬಾಯಿ ಸಮಸ್ಯೆಗಳು  ಹಲ್ಲಿನ ಸವೆತಗಳು  ಸರಿಯಾದ ಬಾಯಿ ಆರೋಗ್ಯ ಮತ್ತು ಸ್ವಚ್ಛತಾ ಕ್ರಮಗಳನ್ನು ಪಾಲಿಸದೇ ಇರುವುದು. ಸತ್ವರಹಿತ ಆಹಾರಸೇವನೆ/ರಸ್ತೆ ಅಪಘಾತಗಳು ಅಥವಾ ಕ್ರೀಡಾಪಟುಗಳಾಗಿದ್ದರೆ ಆಕಸ್ಮಿಕಗಳು ಹಲ್ಲು ಕಳೆದುಕೊಳ್ಳಲು ಕಾರಣವಾಗಬಹುದು.

ಕಾರಣಗಳು ಯಾವುದೇ ಇರಲಿ, ಒಮ್ಮೆ ಉದುರಿದ ಈ ಶಾಶ್ವತ ಹಲ್ಲು  ಮತ್ತೆ ಹುಟ್ಟುವುದಿಲ್ಲ. ಅಂತಹ ಸಂದರ್ಭದಲ್ಲಿ ಕೃತಕ ದಂತ ಜೋಡಣೆ ಸಹಕಾರಿಯಾಗುತ್ತದೆ. ಅವರ ಆಹಾರ ಸೇವನೆಗೂ ಸಹಾಯವಾಗುತ್ತದೆ.  ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಕಾರಣವಾಗುತ್ತದೆ.
ಶಾಶ್ವತ ಹಲ್ಲು ಒಂದೊಂದಾಗಿ ಉದುರಲು ಶುರುವಾದ ನಂತರದ ದಿನಗಳಲ್ಲಿ ಕೆಲವು ಸಮಸ್ಯೆಗಳು ವೃದ್ಧರನ್ನು ಕಾಡುತ್ತವೆ. ಇದು ವ್ಯಕ್ತಿಗಳ ಸಹಜ ನಗುವಿಗೆ ಧಕ್ಕೆ ತರುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ.

ಆ ಸಮಸ್ಯೆಗಳು ಯಾವವೆಂದರೆ
ಅಸ್ಪಷ್ಟ ಉಚ್ಛಾರಣೆ, ಆಹಾರವನ್ನು ಸರಿಯಾಗಿ ಜಗಿಯಲು ಸಾಧ್ಯವಾಗದೇ ಇರುವುದು. ಹಲ್ಲುಗಳಿಲ್ಲದೆ ನಾಚಿಕೆ, ಅವಮಾನ ಅಥವಾ ಕೀಳರಿಮೆ ಮನೋಭಾವನೆಯಿಂದ ಸಾಮಾನ್ಯ ಸಾಮಾಜಿಕ ಜೀವನದಿಂದ ದೂರ ಸರಿಯುವುದು.

ಮನಸ್ಸಿನೊಳಗೆ ಯಾವುದೇ ರೀತಿಯ ಆತಂಕ ಅಥವಾ ಕಳವಳ. ಬಾಯಿ ಮತ್ತು ಮುಖ ಆಕಾರಗಳಲ್ಲಿ ಸಹ ಕೆಲವು ವ್ಯತ್ಯಾಸಗಳು ಉಂಟಾಗುತ್ತವೆ.  ಬಾಯಿಯ ದವಡೆ ಮೂಳೆಗಳ ಸವೆತ, ಬಾಯಿಯ ಒಳಗೆ ಉಳಿದ ಹಲ್ಲುಗಳ ಸ್ಥಾನ ಪಲ್ಲಟ, ದವಡೆ ಹಲ್ಲುಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸ, ಹಲ್ಲುಗಳ ಏರುವಿಕೆ ಅಥವಾ ತಗ್ಗುವಿಕೆಮುಖದ ಉದ್ದಳತೆಯಲ್ಲಿ ಕುಗ್ಗುವಿಕೆ  ಮುಖದಲ್ಲಿ ಸುಕ್ಕುಗಳ ಹೆಚ್ಚಳ ಕೆನ್ನೆ ಮತ್ತು ತುಟಿಗಳು ಒಳಹೊಕ್ಕು ತಮ್ಮ ಸಾಮಾನ್ಯ ವಯಸ್ಸಿಗಿಂತ ಹೆಚ್ಚಿನ ವಯಸ್ಸಾದವರಂತೆ ಕಾಣುವುದು.

ಕೆಳದವಡೆಯು ಮೇಲಿನ ದವಡೆಗಿಂತ ಮುಂದೆ ಸರಿಯುವುದು. ಕೆಳದವಡೆಯ ದಿಕ್ಕಿನಲ್ಲಿ ಬದಲಾವಣೆ ಬಾಯಿಯ ಮೇಲೆ ಮತ್ತು ಕೆಳದವಡೆಗಳು ಕೂಡಿದ ಸಂಧಿಯಲ್ಲಿ ಸಮಸ್ಯೆಗಳು ಇತ್ಯಾದಿ.

ಕೃತಕ ದಂತ ಜೋಡಣೆಯ ಕ್ಷೇತ್ರದಲ್ಲೂ ಇತ್ತೀಚೆಗೆ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳು ಯಶಸ್ವಿಯಾಗಿವೆ. ವ್ಯಕ್ತಿಯ ಸಮಸ್ಯೆಗಳಿಗೆ ಅನುಗುಣವಾಗಿ ಎಲ್ಲ ಹಲ್ಲುಗಳನ್ನು ಅಥವಾ ಕೆಲವೊಂದು ಹಲ್ಲುಗಳನ್ನು ಮಾತ್ರ ಪುನಶ್ಚೇತನಗೊಳಿಸಬಹುದಾಗಿದೆ.

ವ್ಯಕ್ತಿಯ ಬಾಯಿಯ ಅವಸ್ಥೆಯ ಪ್ರಕಾರವಾಗಿ ತೆಗೆದು ಹಾಕಿಕೊಳ್ಳುವಂತಹ  ಕೃತಕ ದಂತ ಪಂಕ್ತಿಯನ್ನು ನೀಡಬಹುದು ಅಥವಾ ಅದನ್ನು ಪರಿಪಾಲಿಸಲು ಕಷ್ಟವಾದಲ್ಲಿ ಸ್ಥಿರ/ಕಾಯಂ ಆದ ಕೃತಕ ದಂತ ಪಂಕ್ತಿಯಿಂದಲೂ ಗುಣಪಡಿಸ ಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಮೂಳೆಗಳನ್ನು ಕೊರೆದು ಟೈಟಾನಿಯಂ ಸ್ಕ್ರೂಗಳನ್ನು ದವಡೆಯಲ್ಲಿ ಕೂರಿಸಿ ಅದರ ಮೇಲೆ ಜೋಡಿಸಲಾಗುವ ಕೃತಕ ದಂತ ಪಂಕ್ತಿಗಳು (ಇಂಪ್ಲಾಂಟ್ ಥೆರಪಿ ಅಥವಾ ಇಂಪ್ಲಾಂಟ್ ಡೆಂಚರ್) ಸಹ ಯಶಸ್ವಿಯಾಗಿವೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹತ್ತಿರದ ದಂತವೈದ್ಯರು/ತಜ್ಞವೈದ್ಯರನ್ನು ಸಂಪರ್ಕಿಸಿ. 

ಕೊನೆಯ ಮಾರ್ಪಾಟು : 11/1/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate