অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ಕೇಲಿಂಗ್

ಸ್ಕೇಲಿಂಗ್ ಎಂದರೇನು?

ಹಲ್ಲಿನ ಆರೋಗ್ಯವೂ ನಿಮ್ಮ ಸಾಮಾನ್ಯ ಆರೋಗ್ಯದ ಬಹು ಮುಖ್ಯ ಭಾಗ.ನಿಮ್ಮ ವಯಸ್ಸು ಎಷ್ಟೆ ಇರಲಿ ನಿಮ್ಮ ಹಲ್ಲುಗಳು ಆರೋಗ್ಯಕರವಾಗಿರಬೇಕು. ಅರೋಗ್ಯಕರವಗಿರಲು ಸಾಧ್ಯ. ಸರಿಯಾದ ಹಲ್ಲುಗಳ ಆರೈಕೆ ಯು ನಿಮ್ಮ ಹಲ್ಲುಗಳನ್ನು ಜೀವನಾವಧಿಯವರೆಗೆ ಅರೋಗ್ಯ ಪೂರ್ಣವಾಗಿರಿಸಿಕೊಳ್ಳಲು ಸಾಧ್ಯ. ಸ್ಕೇಲಿಂಗ್ ಅಂತಹ ಒಂದು ಪ್ರಕ್ರಿಯೆ. ಅದು ನಮ್ಮ ವಸಡನ್ನು ಆರೋಗ್ಯ ವಾಗಿ ಮತ್ತು ಧೃಡವಾಗಿಡುವುದು. ಇದು ಸೋಂಕಿಗೆ ಒಳಮಾಡುವ ಸಂಗ್ರಹಗಳಾದ ಪ್ಲೇಕ್, ಕ್ಯಾಲ್ಕುಲಸ್ ಮತ್ತು ತೆರಚುಗಳನ್ನು ಹಲ್ಲಿನ ಮೇಲ್ಮೈನಿಂದ ತೆಗೆಯುವರು. ಇದನ್ನು ಸ್ಕೇಲಿಂಗ್ ಮಾಡಿ ತೆಗೆಯದೆ ಇದ್ದರೆ ಸೋಂಕು ಉಂಟಾಗಿ ವಸಡುಗಳು ಸಡಿಲವಗುವವು.ಅದರಿಂದ ಪಯೋರಿಯಾ ಆಗಿ ಹಲ್ಲು ಬೀಳಬಹುದು. ಸ್ಕೇಲಿಂನಗ ಬಹಳ ಸುರಕ್ಷಿತ ಮತ್ತು ಸಾಧಾರಣ ಪ್ರಕ್ರಿಯೆ ಮತ್ತು ಹಲ್ಲಿನ ಮೇಲ್ಮೈಯನ್ನು ಯಾವುದೆ ರೀತಿಯಲ್ಲಿ ಹಾನಿ ಮಾಡುವುದಿಲ್ಲ.ಇದನ್ನು ದಂತವಯದ್ಯರು ಮಾಡಬೇಕು.

ಪ್ಲೇಕ್ ಎಂದರೇನು?

ಹಲ್ಲಿನ ಪ್ಲೇಕ್ ಮೆದುವಾದ ಬಣ್ಣವಿಲ್ಲದ ಅಂಟಾದ ಬ್ಯಾಕ್ಟೀರಿಯಾಗಳ ಗುಂಪು ಮತ್ತು ಆಹಾರದ ಕಣಗಳು ಸದಾ ಹಲ್ಲಿನ ಮೇಲೆ ಸಂಗ್ರಹವಾಗುವುದು.ಬ್ಯಾಕ್ಟೀರಿಯಾಗಳು ಅಲ್ಲಿ ತಮ್ಮದೆ ಕಾಲೊನಿ ಮಾಡಿಕೊಂಡು ತೀವ್ರವಾಗಿ ಬೆಳೆಯ ತೊಡಗುತ್ತವೆ. ಅದರಿಂದ ವಸಡಿನ ಸೋಂಕು ಮೊದಲಾಗುವುದು. ಇದರ ಪರಿಣಾಮವಾಗಿ ವಸಡುಗಳು ಮೃದುವಾಗಿ ರಕ್ತ ವಸರಬಹುದು. ಹಲ್ಲಿನ ಪ್ಲೇಕ್ ನ್ನು ಅದು ಶುರುವಾದ ೧೨ ರಿಂದ ೧೪ ತಾಸುಗಳ ಒಳಗೆ ಹಲ್ಲನ್ನು ಉಜ್ಜಿ ಕನಿಷ್ಟ ಪ್ರಮಾಣಕ್ಕೆ ತರಬಹುದು.ಅದು ಗಟ್ಟಿಯಾಗಿ ಕ್ಯಾಲ್ಕುಲಸ್ ಅಥವ ಟಾರ್ಟರ್ ಆಗುವುದು. ಆಗ ಬರಿ ಹಲ್ಲುಜಜ್ಜುವುದರಿಂದ ಅದನ್ನು ತೆಗೆಯಲಾಗುವುದಿಲ್ಲ. ದಂತ ವೈದ್ಯರೇ ಅದನ್ನು ಸ್ಕೇಲಿಂಗ್ ಮಾಡಿ ತೆಗೆಯಬೇಕಾಗುವುದು.

ಸ್ಕೇಲಿಂಗ್ ಅನ್ನು ಏಕೆ ಮಾಡುವರು ?

ದಂತ ವೈದ್ಯರಿಂದ ನಿಯಮಿತವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಎಷ್ಟೆ ಚೆನ್ನಾಗಿ ಹಲ್ಲುಜ್ಜಿದರೂ ಫ್ಲಾಸ್ ಮಾಡಿದ್ದರೂ ಉಂಟಾಗುವ ಹಲ್ಲಿನ ಗಾರೆ ಮತ್ತು ಕ್ಯಾಲ್ಕುಲಸ್ ಗಳನ್ನು ತೆಗೆಸಬೇಕು. ವೃತ್ತಿಪರ ಸ್ವಚ್ಚತೆಯಿಂದ ಸ್ಕೇಲಿಂಗ್ ಮಾಡಿ ಹೊಳಪು ನೀಡುವರು. ಸ್ಕೇಲಿಂಗ್ ಶಸ್ತ್ರ ಕ್ರಿಯೆ ಯಿಲ್ಲದೆ ಸೋಂಕು ತಗುಲಿದ ಗಾರೆ ಮತ್ತು ಕ್ಯಾಲ್ಕುಲಸ್ ಸಂಗ್ರಹ ಗಳನ್ನು ಹಲ್ಲಿನ ಮೇಲಿನಿಂದ ತೆಗೆದುಹಾಕುವ ಚಿಕಿತ್ಸೆ. ಅವುಗಳನ್ನು ತೆಗೆದುಹಾಕದಿದ್ದರೆ ಪೆರಿಡೆಂಟಲ್ ರೋಗಗಳು ಬರಬಹುದು. ಪೆರಿಡೆಂಟಲ್ ರೋಗಬಂದರೆ ಹಲ್ಲು ಮತ್ತು ವಸಡುಗಳ ನಡುವಿನ ಅವಕಾಶ ದೊಡ್ಡದಾಗುತ್ತ ಹೋಗುವುದು. ಈ ಜಾಗವು ಬ್ಯಾಕ್ಟೀರಿಯಾಗಳಿಗೆ ಬೆಳೆಯಲು ಸೂಕ್ತ ಪರಿಸರವಿರುವ ತಾಣವಾಗುವುದು. ಇಲ್ಲಿ ಬ್ಯಾಕ್ಟೀರಿಯಾಗಳು ತ್ವರಿತವಾಗಿ ವೃದ್ಧಿಯಾಗುವವು. ಅವು ವಸಡಿಗೆ ಸೋಂಕು ತಗುಲಿಸಿ ಹಲ್ಲಿಗೆ ಆಧಾರ ಕೊಡುವ ಮೂಳೆಯನ್ನು ಕರಗಿಸುವುದು.. ಇದರಿಂದ ಹಲ್ಲು ಕ್ರಮೇಣ ಸಡಿಲವಾಗುತ್ತಾ ಹೋಗುವುದು. ಆಗ ಹಲ್ಲನ್ನು ಉಳಿಸುವ ಚಿಕಿತ್ಸೆಯು ಬಹಳ ವ್ಯಾಪಕ ಮತ್ತು ಸಂಕೀರ್ಣ ವಾಗುವುದು. ವಸಡಿಗೆ ಶಸ್ತ್ರ ಚಿಕಿತ್ಸೆ ಮಾಡಿ ವಸಡಿನ ಅಂಗಾಂಶಗಳನ್ನು ಆರೋಗ್ಯವಂತವನ್ನಾಗಿಸ ಬಹುದು.

ಸ್ಕೇಲಿಂಗ್ ಅನ್ನು ಯವಾಗ ಮಾಡಿಸಬೇಕು ?

ಹಲ್ಲಿನ ಮೇಲೆ ಪ್ಲಾಕ್ ಸಂಗ್ರಹಣೆಯೂ ಒಂದು ನಿರಂತರ ಪ್ರಕ್ರಿಯೆ. ಇದನ್ನು ಬ್ರಷ್ ಮಾಡುವ ಮೂಲಕ ತೆಗೆಯದಿದ್ದರೆ, 10-14 ಘಂಟೆಯೊಳಗೆ ಅದು ಟಾರ್ಟರ್ ಆಗಿ ಪರಿವರ್ತಿಸುತ್ತದೆ. ಇಂತಹ ವ್ಯಕ್ತಿಗಳಿಗೆ ಕ್ರಮಬದ್ಧವಾಗಿ ಆರು ತಿಂಗಳಿಗೊಮ್ಮೆ ಸ್ಕೇಲಿಂಗ್ ಬೇಕಾಗುತ್ತು. ಒಂದು ಸ್ವರ್ಣ ತತ್ವವೆಂದರೆ ಪ್ರತಿ ಆರು ತಿಂಗಳಿಗೊಮ್ಮೆ ದಂತ ಪರೀಕ್ಷೆ ಮಾಡಿಸುವುದು ಉತ್ತಮ. ನಿಮ್ಮ ದಂತ ವೈದ್ಯರು ನಿಮಗೆ ಸ್ಕೇಲಿಂಗ್ ಬೇಕೆಂಬುದರ ಬಗ್ಗೆ ಉತ್ತಮ ಸಲಹೆ ನೀಡುವರು. ಅವರು ನಿಮಗೆ ಉತ್ತಮ ಹಾಗೂ ಸರಿಯಾದ ಮನೆ ಆರೈಕೆ ಕುರಿತು ಕೂಡ ಸಲಹೆ ನೀಡುವರು. ಸ್ಕೇಲಿಂಗ್ ನಿಂದ ಹಲ್ಲು ಬಲಹೀನವಾಗುವುದಿಲ್ಲವೆಂದು ಒತ್ತು ನೀಡಿ ಹೇಳಬೇಕಾಗುತ್ತದೆ ಮತ್ತು ಇದರಿಂದ ವಸಡಿನ ಖಾಯಿಗಳನ್ನು ತಡೆಗಟ್ಟಿ ವಸಡಿನಿಂದ ರಕ್ತಸ್ರಾವವನ್ನು ತಡೆಯಬಹುದಾಗಿದೆ. ಇದನ್ನು ಚಿಕಿತ್ಸೆ ನೀಡದಿದ್ದರೆ, ಹೆಚ್ಚಿನ ವಸಡಿನ ಅಪಾಯ ತರುವುದು.

ಇದರ ಪರಣಾಮ ವೇನು?

ಉತ್ತಮ ಬಾಯಿಯ ಶುಚಿತ್ವವು ದಂತ ಚಿಕಿತ್ಸೆ ಮತ್ತು ಅನೇಕ ದಂತರೋಗಗಳನ್ನು ತಡೆಗಟ್ಟುಲು ಸಹಾಯಕ ಉತ್ತಮ ಬಾಯಿಯ ಶುಚಿತ್ವವು ಬಾಯಿಯ ಆರೋಗ್ಯಕ್ಕೆ ಅಡಿಪಾಯ. ಅದಲ್ಲದೆ ಬಾಯಿಯೆ ದೇಹದ ಹೆಬ್ಬಾಗಿಲು ಆರೋಗ್ಯ ಪೂರ್ಣ ಬಾಯಿಯು ಆರೋಗ್ಯ ಪೂರ್ಣ ದೇಹಕ್ಕೆ ಬಹುಮಟ್ಟಿಗೆ ಕಾರಣವಾಗಿದೆ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 11/8/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate