অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಲ್ಲು ನೋವು

ಹಲ್ಲು ನೋವು

ನಮಗೆಲ್ಲರಿಗೂ ಹಠತ್ತನೆ ಯಾವಾಗಲಾದರೂ ಒಮ್ಮೆ ಹಲ್ಲು ನೋವು ಬರುವುದು. ಆ ನೋವನ್ನು ಸುರಕ್ಷಿತವಾಗಿ ನೈಸರ್ಗಿಕ ವಿಧಾನದಿಂದ ಶಮನ ಮಾಡುವುದು ಹೇಗೆ ಎಂಬುದನ್ನು ನಾವೆಲ್ಲ ತಿಳಿದಿರುವುದು ಮುಖ್ಯ. ನೈಸರ್ಗಿಕವಾದ ಗಿಡಮೂಲಿಕೆಗಳು ನೋವು ನಿವಾರಕಗಳಾಗಿವೆ ಉದಾ; ಸಾಸಿವೆ, ಕರಿ ಮೆಣಸು,.ಅಥವ ಬೆಳ್ಳುಳ್ಳಿ ಗಳು ಹಲ್ಲುನೋವನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತವೆ. ಈ ಕೆಳಗೆ ಹಲ್ಲು ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದಕ್ಕೆ ಕೆಲವು ಸಲಹೆಗಳಿವೆ.

  • ಲವಂಗದ ಎಣ್ಣೆಯು ಬಹಳ ಪರಿಣಾಮಕಾರಿಯಾದ ಹಲ್ಲು ನೋವನ್ನು ನಿವಾರಿಸುವ ನೈಸರ್ಗಿಕ ಗಿಡಮೂಲಿಕೆ ಯಾಗಿದೆ. ಲವಂಗದ ಎಣ್ಣೆಯನ್ನು ತುಸು ಮೆಣಸಿನ ಪುಡಿಯೊಂದಗೆ ಬೆರಸಿ ಹಲ್ಲು ನೋವಿರುವ ಭಾಗದಲ್ಲ ಇರಿಸಿಬೇಕು.
  • ಹಲ್ಲು ನೋವನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆಯು ಇನ್ನೊಂದು ಉತ್ತಮ ಸಾಧನ. ಚಿಟಿಕೆ ಉಪ್ಪನ್ನು ಸಾಸಿವೆ ಎಣ್ಣೆಗೆ ಸೇರಿಸಿ ನೋವಿರುವ ಭಾಗದಲ್ಲಿ ಹಚ್ಚಿದರೆ ಸಾಕು. ವಸಡಿನ ಭಾಗದಲ್ಲಿ ಅದನ್ನು ಮೃದುವಾಗಿ ಸವರಬೇಕು.
  • ಹಲವು ಹನಿ ನಿಂಬೆ ರಸವು ಹಲ್ಲುನೋವನ್ನು ಕಡಿಮೆ ಮಾಡಬಲ್ಲದು.
  • ನೋವಿರುವ ಭಾಗಕ್ಕೆ ಹೆಚ್ಚಿದ ಇರುಳ್ಳಿಚೂರನ್ನು ಒತ್ತಿ ಹಿಡಿದರೂ ನೋವು ಕಡಿಮೆ ಯಾಗುವುದು.
  • ನೀವು ಮನೆಯಲ್ಲಿಯೇ ಗಿಡಮೂಲಿಕೆಯ ಮೌತ್ ವಾಷ್ ತಯಾರಿಸಬಹುದು. ಕಾಲೆಂಡುಲಾ, ಮಿರ್ತ್‌ ಮತ್ತು ಸೇಜ್‌ ಮುಂತಾದ ಗಿಡಮೂಲಿಗೆಗಳ ಕಷಾಯವನ್ನು ತಯಾರಿಸಿ ಬಾಯಿ ಮುಕ್ಕಳಿಸಬೇಕು. ಇಂಗು ಬೇಸಿಲ್‌, ಮರ್ಜೋರಮ್‌ ಮುಂತಾದ ವೈದ್ಯಕೀಯ ಗಿಡಮೂಲಿಕೆಗಳು ಹಲ್ಲು ನೋವಿಗೆ ತುಸು ಆರಾಮ ನೀಡುತ್ತವೆ.
  • ಹಲ್ಲು ನೋವನ್ನು ಕಡಿಮೆ ಮಾಡಲು ಐಸ್ ಕ್ಯೂಬುಗಳನ್ನು ಹೊರಗಿನಿಂದ ಹಿಡಿಯಬೇಕು.
  • ನಿಮಗೆ ಹಠಾತ್ತನೆ ಹಲ್ಲು ನೋವು ಬಂದರೆ ಅತಿ ಬಿಸಿಯಾದ, ತಂಪಾದ ಮತ್ತು ಸಿಹಿಯನ್ನು ಕಡ್ಡಾಯವಾಗಿ ಬಿಡಬೇಕು. ಅವು ನೋಯುತ್ತಿರುವ ಹಲ್ಲನ್ನು ಇನ್ನು ಹೆಚ್ಚು ನೋಯುವಂತೆ ಮಾಡುವವು.
  • ನೀವು ನಿಮ್ಮ ಆಹಾರದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು.ಹೆಚ್ಚಾಗಿ ತರಕಾರಿ ತಿನ್ನಿ ಹಣ್ಣು ಮತ್ತು ಕಾಳುಗಳನ್ನು ತಿನ್ನಿ. ಜಂಕ್ ಆಹಾರವನ್ನು ತಿನ್ನಬೇಡಿ..
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate