অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಣ್ಣುಗಳ ಸುರಕ್ಷತೆಯ ಬಗ್ಗೆ

ಕಣ್ಣುಗಳ ಸುರಕ್ಷತೆಯ ಬಗ್ಗೆ

  • ಪ್ರತಿದಿನ ಮಲಗುವುದಕ್ಕೆ ಮುಂಚೆ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ.
  • ಕಣ್ಣುಗಳನ್ನು ಶುಭ್ರವಾದ ವಸ್ತ್ರದಿಂದ ಒರೆಸಿ; ಆದರೆ ಇತರರು ಬಳಸಿದ ವಸ್ತ್ರವನ್ನು ಬಳಸಬೇಡಿ.
  • ಅತಿಯಾದ ಧೂಳಿಗೆ, ಹೆಚ್ಚು ಪ್ರಕಾಶಮಾನವಾದ ಬೆಳಕಿಗೆ ಕಣ್ಣುಗಳನ್ನು ಒಡ್ಡಬೇಡಿ.
  • ಸೂರ್ಯನನ್ನು ದಿಟ್ಟಿಸಿ ನೋಡಬೇಡಿ.
  • ಕಣ್ಣುಗಳಿಗೆ ಅವರಿವರು ಹೇಳಿದ ಮದ್ದು ಹಚ್ಚಬೇಡಿ.
  • ಕಣ್ಣಿನಲ್ಲಿ ಅನ್ಯ ಪದಾರ್ಥ ಬಿದ್ದಾಗ ಕಣ್ಣು ಉಜ್ಜಬೇಡಿ; ಕಣ್ಣಿಗೆ ತಣ್ಣೀರನ್ನು ಎರಚಿ ಚೆನ್ನಾಗಿ ಜಾಲಿಸಿ ತೊಳೆಯಿರಿ; ಆಗ ಕಣ್ಣಿನಲ್ಲಿ ಬಿದ್ದ ಅನ್ಯವಸ್ತು ಕೊಚ್ಚಿ ಹೋಗುವುದು.
  • ಮಿನುಗು ದೀಪ  ಅಥವಾ ಮಂದಪ್ರಕಾಶದಲ್ಲಿ ಓದಬೇಡಿ.
  • ಓದುವ ಪುಸ್ತಕ ನಿಮ್ಮ ಕಣ್ಣಿನಿಂದ ಸುಮಾರು 40 ಸೆಂ.ಮೀ.ದೂರದಲ್ಲಿರಲಿ.
  • ಚಲಿಸುತತ್ತಿರುವ ರೈಲು ಅಥವಾ ಬಸ್ಸಿನಲ್ಲಿ ಓದಬೇಡಿ
  • ಬಸಳೆ, ಅಗಸೆ, ಪಾಲಕ್, ದಂಟು, ನುಗ್ಗೆ ಸೊಪ್ಪು, ನುಗ್ಗೆಕಾಯಿ, ಕೆಂಪು ಮೂಲಂಗಿ, ಪರಂಗಿ ಹಣ್ಣು, ಮಾವಿನ ಹಣ್ಣು ಹೆಚ್ಚಾಗಿ ಸೇವಿಸುವುದರ ಮೂಲಕ ಕಣ್ಣುಗಳ ಆರೋಗ್ಯವನ್ನು ರಕ್ಷಿಸಿ

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 10/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate