অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಥಮ ಚಿಕಿತ್ಸೆ

ರಸಾಯನಿಕದದಿಂದ ಸುಟ್ಟಾಗ,ಕಣ್ಣು ರಸಾಯನಿಕದ ಜತೆ ಸಂಪರ್ಕಕ್ಕೆ ಬಂದ -ಎಲ್ಲ ಪ್ರಕರಣಗಳಲ್ಲಿ

  • ತಕ್ಷಣ ಕಣ್ಣನ್ನು ನೀರಿನಿಂದ ಅಥವ ಕುಡಿಯಬಹುದಾದ ಪಾನಿಯದಿಂದ ಫ್ಲಷ್ ಮಾಡಿ.
  • ನೀರಿನ ಪ್ರವಾಹದ ಕೆಳಗೆ ಇಲ್ಲವೆ ತುಂತುರಿನ ಕೆಳಗೆ ಹಿಡಿಯಿರಿ.
  • ಕಣ್ಣನ್ನು ಆದಷ್ಟು ಅಗಲವಾಗಿಸಿ ಹಿಡಿಯಿರಿ
  • ಕನಿಷ್ಟ  1 5  ನಿಮಿಷ  ಫ್ಲಷ್   ಮಾಡಿ.
  • ಐ ಕಪ್ಪನ್ನು ಉಪಯೋಗಿಸಬೇಡಿ
  • ಕಣ್ಣಿನಲ್ಲಿ   ಕಾಂಟ್ಯಾಕ್ಟ    ಲೆನ್ಸ ಇದ್ದರೆ ತಕ್ಷಣ ಅದರ ಮೇಲೆ  ಫ್ಲಷ್ ಮಾಡಿ . ಇದರಿಂದ ಅನ್ಯ ವಸ್ತುವು ಹೊರಬರಬಹುದು.
  • ಮಸೂರದ ಮೇಲಿನ ಅನ್ಯ ವಸ್ತುವು ನೀರಿನಿಂದ ತೊಳೆದಾಗ  ಅದು ಅಲ್ಲಿಂದ ಸರಿಯಬಹುದು..
  • ಕಣ್ಣಿಗೆ ಪಟ್ಟಿ ಕಟ್ಟ ಬೇಡಿ
  • ತೊಳೆದ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ..

ಕಣ್ಣಿನಲ್ಲಿ ಕಣಗಳು

  • ಕಣ್ಣು ಉಜ್ಜ ಬೇಡಿ.
  • ಕಣ್ಣಿರಿನಿಂದಲೆ ಅನ್ಯವಸ್ತುವ ಹೊರಬರುವಂತೆ ಪ್ರಯತ್ನಿಸಿ  ಅಥವ ಐ ವಾಷ್ ಉಪಯೋಗಿಸಿ.
  • ಮೇಲ ರೆಪ್ಪೆಯನ್ನು ಮೇಲಕ್ಕೆಎತ್ತಿ  ಕೆಳ ರೆಪ್ಪೆಯನ್ನು ಕೆಳಕ್ಕೇ ಸರಿಸಿ ಅನ್ಯ ವಸ್ತುವನ್ನು ಹೊರತೆರೆಯಲಯಪ್ರಯತ್ನಿಸಿ.  .
  • ಅನ್ಯ ವಸ್ತುವು ಹೊರಬರದಿದ್ದರೆ  ಕಣ್ಣನ್ನು ಹಾಗೆಯೇ ಮುಚ್ಚಿರಿ , ಹಗುರವಾಗಿ ಬಟ್ಟೆ ಕಟ್ಟಿ , ವೈದ್ಯರಲ್ಲಿಗೆ ತಕ್ಷಣ.
  • ಕಣ್ಣಿಗೆ ಗಾಳಿ ಊದಿ.
  • ಒದ್ದೆ ಬಟ್ಟೆಯೀದ ಒತ್ತಿ. ಪುಡಿಮಾಡಿದ ಬರ್ಫವನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಹಣೆಯ ಮೇಲಿಡಿ. ಗಾಯವಾದ ಕಣ್ಣಿನ ಮೇಲೆ ಅದು ಹಗುರವಾಗಿ ಕೂರಬೇಕು,.
  • ನೋವಿದ್ದರೆ, ದೃಷ್ಟಿ ಪಾಟ ಕಡಿಮೆಯಾದರೆ,ಅಥವ ಬಣ್ಣಗೆಟ್ಟರೆ  ( ಕಣ್ಣು ಕಪ್ಪಾದರೆ) ತುರ್ತು ವೈದ್ಯಕೀಯ ಆರೈಕೆ  ಪಡೆಯಿರಿ. ಈ ಯಾವುದೆ ಲಕ್ಷಣವು ಕಣ್ಣಿನ ಒಳ ಭಾಗದಲ್ಲಿನ ಹಾನಿಯನ್ನು ಸೂಚಿಸಬಹುದು

ಕಣ್ಣು ಮತ್ತು ರೆಪ್ಪೆ ಗೆ ತೂತಾಗುವುದು.

  • ಕಣ್ಣನ್ನು ನೀರು ಅಥವ ಯಾವುದೆ ದ್ರವದಿಂದ ತೊಳೆಯ ಬೇಡಿ.
  • ಕಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಸ್ತುವನ್ನು ತೆಗೆಯಲು ಪ್ರಯತ್ನಿಸಬೇಡಿ
  • ಕಣ್ಣನ್ನು ಗಟ್ಟಿಯಾದ ಕಾಗದದಿಂದ ಒತ್ತಡ  ಬೀಳದಂತೆ ಮುಚ್ಚಿ.
  • ವೈದ್ಯರನ್ನು ತಕ್ಷಣ ನೋಡಿ.

ಸಾಮಾನ್ಯ ಎಚ್ಚರಿಕೆಗಳು

  • ಕಣ್ಣಿಗೆ ಇಜ್ಜಲ ಚೂರು, ಕಟ್ಟಿಗೆ, ಮರಳು ಇತ್ಯಾದಿಗಳು ಬಿದ್ದಾಗ ಕಣ್ಣನ್ನು ಉಜ್ಜಬೇಡಿ
  • ಕಣ್ಣನ್ನು ಅಗಲವಾಗಿ ತೆಗೆದು  ಶುದ್ಧವಾದ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.
  • ಚೂಪಾದ ವಸ್ತುಗಳೀಂದ –ಗರಿಕೆಯ ಎಸಳು. ಪೇಪರ್ ಮತ್ತು ಪೆನ್ಸಿಲ್ ನ ತುದಿಯಿಂದ, ಸುಟ್ಟ   ಗಾಯ  ಬಿಸಿ ನೀರು ಎಣ್ಣೆ ,ಉಗಿ , ಬಿಸಿಬೂದಿ ಪಟಾಕಿ, ಕಾಷ್ಟಿಕ್ ಸೋಡಾ,  ಸುಣ್ಣ , ಆಮ್ಲ ಮತ್ತು ಇತರ ರಸಾಯನಿಕಗಳಿಂದ ಆಗಿದ್ದರೆ ಕಣ್ಣನ್ನು ನೀರಿನಿಂದ ತೊಳೆಯಿರಿ.
  • ವೈದ್ಯಕೀಯ ಸಲಹೆಯನ್ನು ಅರ್ಹ ನೇತ್ರ ವೈದ್ಯರಿಂದ ತಕ್ಷಣ ಪಡೆಯಿರಿ.
  • ಕಣಿಗೆ  ಮೂಕ ಪೆಟ್ಟು ಬಿದ್ದಾಗ  , ರೋಗಿಯನ್ನು ಆರಾಮಾಗಿ ನೇರವಾಗಿ ಮಲಗಿಸಿ . ಕಣ್ಣಿಗೆ ಶುದ್ಧ ಬಟ್ಟೆಯಿಂದ ಪಟ್ಟಿಕಟ್ಟಿ
  • ಕಣ್ಣಿನ ವೈದ್ಯರ ಸಲಹೆಯನ್ನು  ಆದಷ್ಟುಬೇಗ. ಪಡೆಯಿರಿ.

ತಡೆಗಟ್ಟಲು ಕ್ರಮಗಳು

  • ಅಪಾಯಕಾರಿ ಕ್ರೀಡೆಯಲ್ಲಿ ಅಥವ ಕೆಲಸದಲ್ಲಿ ತೊಡಗಿದಾಗ ಮನೆಯಲ್ಲಿ , ಪ್ರವಾಸದಲ್ಲಿ  ಮತ್ತು ಕೆಲಸದ  ಸ್ಥಳದಲ್ಲಿ   ಕಣ್ಣಿನ ರಕ್ಷಣೆಬಗ್ಗೆ ಗಮನಿರಲಿ.
  • ಮನೆಯಲ್ಲಿ, ಕೆಲಸದ ಜಾಗದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲಿ. ನಿಮ್ಮ ಪ್ರವಾಸದ ಚೀಲದಲ್ಲಿ ಕಣ್ಣಿನ ಕವಚ ಮತ್ತು  ಗಾಯವಾದಾಗ ಅಗತ್ಯವಾದ ಐ ವಾಷ್ ಇರಲಿ.
  • ಕಣ್ಣಿನ ಗಾಯವನ್ನು ನಿರಪಾಯಕಾರಿ ಎಂದು ಭಾವಿಸಬೇಡಿ.  ಅನುಮಾನ ಬಂದರೆ ತಕ್ಷಣ ವೈದ್ಯರನ್ನು  ಸಂಪರ್ಕಿಸಿ

ಕಣ್ಣಿನ ಆರೋಗ್ಯದ ಉತ್ತಮ ಅಭ್ಯಾಸಗಳು ಮತ್ತು ಪ್ರಥಮ ಚಿಕಿತ್ಸೆ.

  • ಕಣ್ಣನ್ನು  ಮತ್ತು ಕಣ್ಣಿನ ಸುತ್ತಲಿನ ಚರ್ಮವನ್ನು  ಶುದ್ಧ ನೀರು ಮತ್ತು ಸೋಪಿನಿಂದ ತೊಳೆದು ಶುಚಿಮಾಡಿ. ಮಲಗುವ ಮುನ್ನ ಕಣ್ಣುಗಳನ್ನು  ತೊಳೆಯುವುದು ಅತಿ ಮುಖ್ಯ. ದಿನವೆಲ್ಲ ಸಂಗ್ರಹವಾದ ಧೂಳು ಮತ್ತು ಕಸವನ್ನು ಅದರಿಂದ  ತೆಗೆದುಹಾಕಬಹುದು.
  • ಬೇರೆಯವರ ಟವಲ್ , ಕರವಸ್ತ್ರವನ್ನು ಎಂದೂ ಉಪಯೋಗಿಸ ಬೇಡಿ. ಹಳೆಯ ಬಟ್ಟೆಯಿಂದ ಕಣ್ಣು ಒರೆಸಬೇಡಿ  ಇದರಿಂದ ಸೋಂಕು ಬರಬಹುದು..
  • ಕಾಡಿಗೆ ಅಥವ ಸುರ್ಮಾ ಅಥವ ಇನ್ನು ಯಾವುದೋ ವಸ್ತುವನ್ನು ಕಣ್ಣಿಗೆ ಹಚ್ಚಬೇಡಿ.  ಬಳಸಲೇ ಬೇಕಿದ್ದರೆ ಪ್ರತಿಯೊಬ್ಬರೂ  ಪ್ರತ್ಯೇಕವಾದುದನ್ನು ಬಳಸಿ.
  • ಧೂಳು, ಹೊಗೆ, ಮತ್ತು ಪ್ರಖರ ಬೆಳಕಿಗೆ  ಕಣ್ಣು  ಒಡ್ಡಬೇಡಿ
  • ಬರಿ ಕಣ್ಣಿನಿಂದ  ಸೂರ್ಯ ಗ್ರಹಣ ನೋಡಬೇಡಿ
  • ನೊಣಗಳು  ಸೋಂಕಿತ ಮನುಷ್ಯನಿಂದ  ಅರೋಗ್ಯವಂತನಿಗೆ ರೋಗಗಳನ್ನು ಹರಡುವವು.ನಿಮ್ಮ ಪರಿಸರ ಶುಚಿಯಾಗಿರಲಿ.
  • ಡಯಾಬೆಟಿಸ್ ಮತ್ತು ರಕ್ತದ ಏರು ಒತ್ತಡವು  ದೃಷ್ಟಿಗೆ ಹಾನಿ ಮಾಡಬಹುದು.ಅವು ನಿಯಂತ್ರಣದಲ್ಲಿ ಇರಲಿ.ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ.
  • ಎಲ್ಲ  ಟಾಕ್ಸಿಕ್ ಔಷಧಗಳು,ಪಾನೀಯಗಳು,  ತಂಬಾಕು  ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಕಣ್ಣಿಗೆ ಹೆಚ್ಚು ಹಾನಿಕರ. ಅವನ್ನು ದೂರಮಾಡಿ..
  • ಮಕ್ಕಳನ್ನು  ಅಪಾಯಕಾರಿ ಆಟಗಳಾದ ಬಿಲ್ಲು ಬಾಣ, ಗಿಲ್ಲಿ ದಾಂಡು ಮತ್ತು ಚೂಪಾದ ಅಂಚಿರುವ ಆಟಿಕೆಗಳಿಂದ ದೂರವಿಡಿ.  ವಯಸ್ಕರ ಮೆಲ್ವಿಚಾರಣೆ ಇಲ್ಲದೆ  ಪಟಾಕಿ  ಸುಡಲು ಮಕ್ಕಳನ್ನು ಬಿಡಬೇಡಿ
  • ವೆಲ್ಡಿಂಗ್ ಮತ್ತು ಮರಗೆಲಸ ಮಾಡುವಾಗ ರಕ್ಷಣಾ ಕನ್ನಡಕ ಹಾಕಿಕೊಳ್ಳಿ.
  • ಸ್ವಯಂ  ವೈದ್ಯ ಬೇಡ. ರಸ್ತೆ ಬದಿ ಔಷಧಿ ಮಾರವುವರಿಂದ, ನಕಲಿವೈದ್ಯರಿಂದ ಚಕಿತ್ಸೆಬೇಡ.ಕಣ್ಣಿನ ಸಮಸ್ಯೆಇದ್ದರೆ  ನೇತ್ರ ತಜ್ಞರನ್ನು ಭೇಟಿಯಾಗಿ.
  • ಕನ್ನಡಕ ಹಾಕುತ್ತಿದ್ದರೆ ಅದರ ಗಾಜನ್ನು ಶುಚಿಯಾಗಿಡಿ.ಅದರಮೇಲೆ ಗೀರುಗಳು ಇರಬಾರದು. ಬೇರೆಯವರ ಕನ್ನಡಕವನ್ನು ಯಾವಾಗಲೂ  ಉಪಯೋಗಿಸ ಬೇಡಿ. ಅದರಿಂದ ಸೋಂಕು ಬರಬಹುದು.
  • ಮಕ್ಕಳು ಕಣ್ಣು ಮುಚ್ಚಾಲೆ  ಆಟ  ಅಡುವುದನ್ನು ನಿರುತ್ತೇಜಿಸಿ. ಒಬ್ಬರ ಕಣ್ಣು ಇನ್ನೊಬ್ಬರು ಮುಟ್ಟುವುದರಿಂದ ರೋಗ ಪ್ರಸಾರ ವಾಗುವುದು.  .
  • ಅಡುಗೆ ಮಾಡುವಾಗ  ಸೋಡಾ ಉಪಯೋಗಿಸ ಬೇಡಿ ಅದು ವಿಟಮಿನ್ ಗಳನ್ನು ನಷ್ಟ ಮಾಡುವುದು.

ಓದುವ ಒಳ್ಳೆಯ ಅಭ್ಯಾಸಗಳು.

ಮುದ್ರಿತ ಪುಸ್ತಕವನ್ನು ಕಣ್ಣಿನಿಂದ ಒಂದೂವರೆ ಅಡಿ ದೂರದಲ್ಲಿ 45 ರಿಂದ  70 ಡಿಗ್ರಿ ಕೋನದಲ್ಲಿ ಇರುವಂತೆ  ಹಿಡಿದು ಓದಬೇಕು..

  • ಚಲಿಸುವ ಬಸ್ಸಿನಲ್ಲಿ, ರೈಲಿನಲ್ಲಿ ಓದಬೇಡಿ.ಮಲಗಿ ಮತ್ತು ಮಂದ ಬೆಳಕಿನಲ್ಲಿ ಓದಬಾರದು
  • ಸಾಕಷ್ಟು ಬೆಳಕಿಲ್ಲದಾಗ  ಚಿಕ್ಕ ಅಕ್ಷರಗಳನ್ನು ಓದಬೇಡಿ
  • ಓದುವಾಗ ಅಥವ ಕಣ್ಣಿಗೆ ಒತ್ತಡ ತರುವ ಕೆಲಸ ಮಾಡುವಾಗ ಆಗಾಗ ಕಣ್ಣು ಮುಚ್ಚಿ, ಇಲ್ಲವೆ ದೂರದ ವಸ್ತುಗಳನ್ನು ನೋಡಿ ಕಣ್ಣಿಗೆ  ಒಂದು ನಿಮಿಷ ವಿಶ್ರಾಂತಿ ಕೊಡಿ.

ಮೂಲ :ಕಣ್ಣಿನ ಆರೋಗ್ಯ ಸಮುದಾಯಕ್ಕೆ ಒಂದು ಕೈಪಿಡಿಅಂತರಾಷ್ಟ್ರೀಯ  ಮುಂದುವರೆದ ಗ್ರಾಮೀಣ ಕಣ್ಣಿನ ಆರೈಕೆ ಕೇಂದ್ರ ಎಲ್. ವಿ. ಪ್ರಸಾದಸಂಸ್ಥೆ, ರಾಜೇಂದರ ನಗರ ಅಂಚೆ , ಹೈದರಾಬಾದು- 500030

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate