অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಚ್ಚಿನ ಕಂಪ್ಯೂಟರ್ ಬಳಕೆ

ಹೆಚ್ಚಿನ ಕಂಪ್ಯೂಟರ್ ಬಳಕೆ

ನಮ್ಮಲ್ಲಿ ಹೆಚ್ಚಿನವರು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು. ಕಣ್ಣಿನ ಸಮಸ್ಯೆ ಕಂಪ್ಯೂಟರ್‌ನ ಅವಿರತ ಬಳಕೆಯಿಂದ ಉಂಟಾಗುವಂಥದ್ದಾಗಿದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಸುಮಾರು 50 ರಿಂದ 90 ಶೇಕಡಾ ಜನರು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಕಣ್ಣಿನ ಪರೀಕ್ಷೆ ನಿಮ್ಮ ಕಣ್ಣಿನ ಸಮಸ್ಯೆಯನ್ನು ದೂರಮಾಡಲು ಆಗಾಗ್ಗೆ ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ನಿಮ್ಮ ವೈದ್ಯರಲ್ಲಿ ನಿಮಗುಂಟಾಗುವ ಕಣ್ಣಿನ ಸಮಸ್ಯೆಗಳನ್ನು ನಿಖರವಾಗಿ ಹೇಳಿಕೊಳ್ಳಿ.

ನಿಖರವಾದ ಬೆಳಕನ್ನು ಬಳಸಿ ಕಡಿಮೆ ಬೆಳಕಿನ ವಲಯದಲ್ಲಿ ನೀವು ಕೆಲಸ ಮಾಡಿದಾಗ ಕೂಡ ಕಣ್ಣಿನ ಸಮಸ್ಯೆಯನ್ನು ಅನುಭವಿಸಬಹುದು. ಕಂಪ್ಯೂಟರ್ ಬೀರುವ ಕಡಿಮೆ ಬೆಳಕು ಕೂಡ ಕಣ್ಣಿಗೆ ಘಾಸಿಯನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಕಂಪ್ಯೂಟರ್ ಏನಾದರೂ ತೊಂದರೆಯನ್ನು ಹೊಂದಿದ್ದಲ್ಲಿ ಅದನ್ನು ಬಳಸದಿರಿ.

ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ ಕಂಪ್ಯೂಟರ್‌ನ ತೀಕ್ಷ್ಣತೆ ಕೂಡ ನಿಮ್ಮ ಕಣ್ಣಿಗೆ ಹಾನಿಯನ್ನುಂಟ ಮಾಡಬಹುದು. ಆದ್ದರಿಂದ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ.

ಡಿಸ್‌ಪ್ಲೇ ಅಪ್‌ಗ್ರೇಡ್ ಮಾಡಿಕೊಳ್ಳಿ ನಿಮ್ಮ ಕಂಪ್ಯೂಟರ್‌ನ ಡಿಸ್‌ಪ್ಲೇಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ. ನಿಮ್ಮ ಹಳೆಯ ಮಾದರಿಯ ಮಾನಿಟರ್ ಅನ್ನು ಫ್ಲಾಟ್ ಪ್ಯಾನೆಲ್ ಲಿಕ್ವಿಡ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಿ.

ಕಂಪ್ಯೂಟರ್ ಡಿಸ್‌ಪ್ಲೇ ಸೆಟ್ಟಿಂಗ್ ಸರಿಹೊಂದಿಸಿ ನಿಮ್ಮ ಕಂಪ್ಯೂಟರ್‌ನ ಬ್ರೈಟ್‌ನೆಸ್, ಪಠ್ಯ ಗಾತ್ರ ಮತ್ತು ಕಾಂಟ್ರಾಸ್ಟ್ ಅಂತೆಯೇ ಬಣ್ಣ ತಾಪಮಾನವನ್ನು ಹೊಂದಿಸಿಕೊಳ್ಳಿ.

ಆಗಾಗ್ಗೆ ಬ್ಲಿಂಕ್ ಮಾಡುವುದು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಬ್ಲಿಂಕಿಂಗ್ ಅತ್ಯಂತ ಪ್ರಯೋಜನಕಾರಿಯಾದದ್ದು. ಆಗ್ಗಾಗ್ಗೆ ಕಂಪ್ಯೂಟರ್‌ನಲ್ಲಿ ಬ್ಲಿಂಕಿಂಗ್ ಆಗುವುದು ನಿಮ್ಮ ಕಣ್ಣನ್ನು ರಕ್ಷಿಸುತ್ತದೆ ಮತ್ತು ಡ್ರೈ ಆಗುವುದರಿಂದ ಕಾಪಾಡುತ್ತದೆ

ನಿಮ್ಮ ಕಣ್ಣುಗಳಿಗೆ ವ್ಯಾಯಾಮವನ್ನು ನೀಡಿ ನಿಮ್ಮ ಕಣ್ಣುಗಳಿಗೆ ಸೂಕ್ತ ವ್ಯಾಯಾಮವನ್ನು ನೀಡುವುದು ಕಣ್ಣಿನ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ

ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ ಕಂಪ್ಯೂಟರ್‌ನಲ್ಲಿ ನಿರಂತರವಾಗಿ ಕುಳಿತು ಕೆಲಸ ಮಾಡುವುದು ಕಣ್ಣಿಗೆ ಆಯಾಸವನ್ನು ಉಂಟುಮಾಡಬಹುದು. ಆದ್ದರಿಂದ ಆಗಾಗ್ಗೆ ವಿರಾಮವನ್ನು ತೆಗೆದುಕೊಳ್ಳಿ.

ನಿಮ್ಮ ವರ್ಕ್‌ಸ್ಟೇಶನ್ ಮಾರ್ಪಡಿಸಿ ನೀವು ಕೆಲಸ ಮಾಡುತ್ತಿರುವ ವಿಧಾನವನ್ನು ಮಾರ್ಪಡಿಸಿಕೊಳ್ಳಿ. ಸೂಕ್ತವಾದ ಫರ್ನೀಚರ್ ವ್ಯವಸ್ಥೆಯನ್ನು ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಿ.

ಕನ್ನಡಕದ ಬಳಕೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕನ್ನಡಕವನ್ನು ಬಳಸುವುದು ಕಡ್ಡಾಯವಾಗಿದೆ. ಸೂಕ್ತವಾದ ಕನ್ನಡಕವನ್ನು ಬಳಸಿ ನಂತರವಷ್ಟೇ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಿ.

ಮೂಲ: ಗಿಜ್ಬೋತ್



© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate