অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ತದ ಕ್ಯಾನ್ಸರ್

ಲ್ಯುಕಿಮಿಯಾ ಇದು ರಕ್ತದ ಮತ್ತು ಮೋಳೆಯ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾ ಅಂದರೆ ರಕ್ತದ ಕ್ಯಾನ್ಸರ್‌ ಅಥವಾ ಅಸ್ತಿ ಮಜ್ಜೆಯ ಕ್ಯಾನ್ಸರ್‌ ಆಗಬಹುದು. ಇದು ರಕ್ತ ಅಥವಾ ಅಸ್ತಿಮಜ್ಜೆಯಲ್ಲಿನ ಕಣಗಳ ವಿಪರೀತ ಹೆಚ್ಚುವುದು ಅದರಲ್ಲೂ ಬಿಳಿ ರಕ್ತಕಣಗಳ ಸಂಖ್ಯೆ ವಿಪರೀತ ಹೆಚ್ಚುವುದು ಇದರ ಲಕ್ಷಣ. ಇದು ಹೆಮಟೊಲಾಜಿಕಲ್‌ ನಿಯೋಪ್ಲಾಸಮ್ಸ್‌ ಎನ್ನುವ ರೋಗದ ಒಂದು ಭಾಗ ಮಾತ್ರ.

ಲಕ್ಷಣಗಳು

ಸಾಮಾನ್ಯ ಅಸ್ತಿಮಜ್ಜೆ ಕಣಗಳ ಬದಲಿಗೆ ಹೆಚ್ಚಾಗಿ ಉತ್ಪಾದನೆಯಾಗಿರುವ ಬಿಳಿರಕ್ತ ಕಣಗಳನ್ನು ತುಂಬುವ ಮೂಲಕ ಅಸ್ತಿಮಜ್ಜೆ ನಾಶವಾಗುತ್ತದೆ. ಇದರಿಂದ ರಕ್ತದಲ್ಲಿ ಪ್ಲೇಟ್ ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ಲೇಟ್ ಲೆಟ್‌ಗಳು ರಕ್ತಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಸಹಾಯಕವಾಗಿರುತ್ತವೆ. ಹೀಗಾಗಿ ಈ ರೋಗದಿಂದ ಬಳಲುತ್ತಿರುವವರು ಹೆಚ್ಚಾಗಿ ರಕ್ತ ಸುರಿಯಬಹುದು. ಅಲ್ಲದೆ ಪಿನ್‌ಪ್ರಿಕ್‌ ರಕ್ತಸೋರಿಕೆಗಳೂ ಆಗಬಹುದು. ಪ್ಯಾಥೊಜಿನ್‌ಗಳ ವಿರುದ್ಧ ಹೋರಾಡುವ ಬಿಳಿರಕ್ತಗಳು ಬಲಹೀನಗೊಳ್ಳುತ್ತವೆ. ಹಾಗಾಗಿ ಬಿಳಿ ರಕ್ತಗಳು ಈಗ ದೇಹದ ಇತರ ಕಣಗಳ ಮೇಲೆ ದಾಳಿ ಮಾಡಲು ಶುರು ಮಾಡುತ್ತವೆ ಇದರಿಂದ ರಕ್ತಹೀನತೆಗೆ ಕಾರಣವಾಗುತ್ತದೆ. ಅದು ಡಿಸ್ಪಿನಿಯಕ್ಕೆ ಕಾರಣವಾಗುತ್ತದೆ. ಇವೆಲ್ಲ ಮತ್ಯಾವುದೋ ರೋಗಕ್ಕೆ ಕಾರಣವಾಗಬಹುದು. ಇವುಗಳ ಪತ್ತೆಗೆ ರಕ್ತ ಮತ್ತು ಅಸ್ತಿಮಜ್ಜೆ ಪರೀಕ್ಷೆ ಮಾಡಬೇಕು. ಕೆಲವು ಸಂಬಂಧಿತ ಲಕ್ಷಣಗಳು

  • ಜ್ವರ, ಚಳಿ, ರಾತ್ರಿಯಲ್ಲಿ ಬೆವರು ಮತ್ತು ಇತರ ಫ್ಲೂ ನಂತಹ ಲಕ್ಷಣಗಳು.
  • ದುರ್ಬಲತೆ ಮತ್ತು ಸುಸ್ತು
  • ತೂಕ ನಷ್ಟ / ಹಸಿವು ಇಲ್ಲದಿರುವುದು
  • ಬಾತುಕೊಂಡ ಅಥವ ರಕ್ತ ಬರುವ ವಸಡುಗಳು
  • ಹೆಚ್ಚುರಕ್ತಸ್ರಾವ (ಚಿಕ್ಕ ಗಾಯಗಳಿಂದಲೂ)
  • ನರಸಂಬಂಧಿತ ಲಕ್ಷಣಗಳು (ತಲೆನೋವು)
  • ಲೀವರ್ ಮತ್ತು ಗುಲ್ಮಗಳು ದೊಡ್ಡವಾಗುವುದು
  • ಬೇಗ ಗಾಯವಾಗುವುದು
  • ಪದೆ ಪದೇ ಸೋಂಕು .
  • ಮೂಳೆ ನೋವು
  • ಕೀಲು ನೋವು
  • ಟಾನ್ಸಿಲ್ ಗಳ ಊತ

ಲ್ಯುಕಿಮಿಯಾ ಅಂದರೆ ಬಿಳಿರಕ್ತ ಎಂದು ಅರ್ಥ. ಲ್ಯುಕಿಮಿಯ ರೋಗಿಗಳಲ್ಲಿ ಚಿಕಿತ್ಸೆಗೆ ಮುನ್ನ ಬಿಳಿ ರಕ್ತ ಕಣಗಳು ಹೆಚ್ಚಿರುತ್ತವೆ. ಸೂಕ್ಷ್ಮದರ್ಶಕದ ಮೂಲಕ ರಕ್ತದ ಮಾದರಿಯನ್ನು ನೋಡಿದಾಗ ಬಿಳಿರಕ್ತ ಕಣಗಳ ಸಂಖ್ಯೆ ವಿಪರೀತ ಹೆಚ್ಚಿರುತ್ತವೆ. ಈ ಹೆಚ್ಚು ಸಂಖ್ಯೆಯ ರಕ್ತ ಕಣಗಳು ನಿರುಪಯುಕ್ತ ಮತ್ತು ಕೆಲಸ ಮಾಡುವುದಿಲ್ಲ. ಇತರೆ ಜೀವಕೋಶಗಳ ಸಾಮಾನ್ಯ ಕೆಲಸಗಳ ನಡುವೆ ಈ ಜೀವಕೋಶಗಳು ಮೂಗು ತೊರಿಸುತ್ತವೆ. ಕೆಲವು ಲ್ಯುಕಿಮಿಯಾ ರೋಗಿಗಳು ಸಾಮಾನ್ಯ ರಕ್ತಕಣಗಳ ಏಣಿಕೆಯಲ್ಲಿ ಗಣನೀಯ ಏರಿಕೆ ಕಾಣಿಸುವುದಿಲ್ಲ. ಈ ಸಾಮಾನ್ಯವಲ್ಲದ ಪರಿಸ್ಥಿತಿಗೆ ಅಲ್ಯುಕಿಮಿಯಾ ಎನ್ನುತ್ತಾರೆ. ಅಸ್ತಿಮಜ್ಜೆಯಲ್ಲಿ ಕ್ಯಾನ್ಸರ್ಗೆ ಕಾರಣವಾದ ಬಿಳಿ ರಕ್ತಕಣಗಳು ಇರುತ್ತವೆ. ಅವು ಸಾಮಾನ್ಯ ಜೀವಕೋಶಗಳ ಉತ್ಪತ್ತಿಯನ್ನು ತಡೆಯುತ್ತವೆ. ಆದರೆ ಅವು ರಕ್ತದಲ್ಲಿರುವ ಬದಲು ಅಸ್ತಿಮಜ್ಜೆಯಲ್ಲಿರುತ್ತವೆ. ರಕ್ತ ಪರೀಕ್ಷೆಯ ಮೂಲಕ ತಿಳಿಯಬಹುದು. ಅಲ್ಯುಕಿಮಿಕ್‌ ರೋಗಿಯ ರಕ್ತದಲ್ಲಿ ರಕ್ತಕಣಗಳ ಪರೀಕ್ಷೆಯಲ್ಲಿ ಕಣಗಳು ಸಾಮಾನ್ಯ ಅಥವಾ ಕಡಿಮೆ ಇರಬಹುದು. ಅಲ್ಯುಕಿಮಿಯ ಪ್ರಮುಖ ನಾಲ್ಕು ಬಗೆಯ ಯಾವುದೇ ಕ್ಯಾನ್ಸರಿನಲ್ಲಿಯೂ ಕಂಡು ಬರಬಹುದು. ಅದರಲ್ಲೂ ಹೇರಿ ಸೆಲ್‌ ಲ್ಯುಕಿಮಿಯಾದಲ್ಲಿ ಸಾಮಾನ್ಯ.

ಪ್ರಮುಖ ನಾಲ್ಕು ಬಗೆಗಳು

ಹಲವು ಬಗೆಯ ರೋಗಗಳನ್ನು ಸೂಚಿಸುವ ಹೆಸರು ಲ್ಯುಕಿಮಿಯಾ.ಲ್ಯಕಿಮಿಯಾವನ್ನು ಕ್ಲಿನಿಕಲ್‌ ಆಗಿ ತೀವ್ರ ಸ್ವರೂಪದ ಮತ್ತು ದೀರ್ಘಕಾಲೀಣ ಎಂದು ವಿಂಗಡಿಸಬಹುದು.

  • ತೀವ್ರಸ್ವರೂಪದ ಲ್ಯುಕೇಮಿಯಾದಲ್ಲಿ ಅಪ್ರಾಪ್ತ ರಕ್ತಕಣಗಳ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದ ಅಸ್ತಿಮಜ್ಜೆಯಿಂದ ಆರೋಗ್ಯಪೂರ್ಣ ಕಣಗಳ ಬಿಡುಗಡೆ ಸಾಧ್ಯವಾಗುವುದಿಲ್ಲ. ಮಕ್ಕಳು ಮತ್ತು ಯುವಕರಲ್ಲಿ ಈ ಬಗೆಯ ಲ್ಯುಕಿಮಿಯಾ ಕಂಡು ಬರುತ್ತದೆ ಈ ಬಗೆಯ ಲ್ಯುಕಿಮಿಯಾಗೆ ತಕ್ಷಣದ ಚಿಕಿತ್ಸೆ ಅಗತ್ಯ. ಅಸಮರ್ಪಕ ಕೋಶಗಳೂ ಹೆಚ್ಚಾಗಿ ಅವು ರಕ್ತ ಪ್ರವಾಹದಲ್ಲಿಯೂ ಸೇರಿ ಬೇರೆ ಅಂಗಗಳಿಗೂ ಹರಡುತ್ತವೆ. ಆದರೆ. ಸಿಎನ್‌ಎಸ್‌ ಇರುವ ಸಾಧ್ಯತೆ ಕಡಿಮೆ. ಆದರೆ ಆಗಾಗ ಕ್ರೇನಿಯಲ್‌ ನರ್ವ್‌ ಪಾಲ್ಸಿಗೆ ಕಾರಣವಾಗುತ್ತದೆ.
  • ಕ್ರಾನಿಕ್‌ ಲ್ಯುಕಿಮಿಯಾದಲ್ಲಿ ರಕ್ತಕಣಗಳು ಹಿಂದಿನ ರಕ್ತಕಣಗಳ ಸ್ಥಿತಿಗೆ ಹೋಲಿಸಿದರೆ ಈ ಕಣಗಳು ಉತ್ತಮವಾಗಿದ್ದರೂ ಸಹ ಅವು ಕೂಡ ಅಸಹಜವಾಗಿಯೇ ಇರುತ್ತವೆ. ಈ ಬಗೆಯ ಲ್ಯುಕಿಮಿಯಾ ಕಂಡು ಬರಲು ತಿಂಗಳು ವರ್ಷಗಳೇ ಕಳೆಯುತ್ತವೆ. ಹಾಗಾಗಿ ರಕ್ತದಲ್ಲಿ ಈ ಅಸಹಜ ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ. ಇದು ಹಿರಿಯರಲ್ಲಿ ಹೆಚ್ಚು ಕಂಡು ಬರುತ್ತದೆ. ತಾತ್ವಿಕವಾಗಿ ಯಾರಲ್ಲಿ ಬೇಕಾದರೂ ಕಂಡು ಬರಬಹುದು. ತೀವ್ರ ಸ್ವರೂಪ ಲ್ಯುಕಿಮಿಯಾಗೆ ತಕ್ಷಣ ಚಿಕಿತ್ಸೆ ನೀಡಬೇಕು. ನಿಧಾನ ಗತಿಯ ಲ್ಯುಕಿಮಿಯಾದಲ್ಲಿ ಥೆರಪಿಯ ಸಂಪೂರ್ಣ ಫಲ ಪಡೆಯಲು ಚಿಕಿತ್ಸೆ ಕೊಡುವ ಮೊದಲು ನಿಗಾ ವಹಿಸಬೇಕು.

ಕಾರಣಗಳು ಮತ್ತು ಅಪಾಯದ ಅಂಶಗಳು

ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ವಿವಿಧ ಬಗೆಯ ಲ್ಯುಕಿಮಿಯಾಗಳು ಬೇರೆ ಬೇರೆ ಕಾರಣಗಳನ್ನು ತಿಳಿಸುತ್ತವೆ. ಈ ಸ್ಥಿತಿಗೆ ಕಾರಣ ಏನು ಎಂಬುದು ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಸಂಶೋಧಕರು ನಾಲ್ಕು ಸಾಧ್ಯತೆಗಳನ್ನು ಸೂಚಿಸುತ್ತಾರೆ.:

  • ನೈಸರ್ಗಿಕ ಅಥವಾ ಐಯೋನೈಸ್ಡ್‌ ರೇಡಿಯೇಷನ್‌
  • ಕೆಲವು ಬಗೆಯ ಕೆಮಿಕಲ್‌ಗಳು
  • ಕೆಲ ವೈರಸ್‌ಗಳು
  • ವಂಶವಾಹಿ ಪ್ರಿಡಿಸ್ಪೊಸಿಷನ್‌

ಲ್ಯುಕಿಮಿಯಾ, ಬೇರೆ ಬಗೆಯ ಕ್ಯಾನ್ಸರುಗಳಂತೆ ಸೊಮಾಟಿಕ್‌ ಆಂಕೋಜೀನ್‌ಗಳನ್ನು ಸಕ್ರಿಯ ಗೊಳಿಸುವ ಡಿಎನ್‌ಎಗಳ ಫಲವಾಗಿರಬಹುದು ಅಥವಾ ಗಡ್ಡೆಗೆ ಕಾರಣವಾಗುವುದನ್ನು ತಡೆಯುವ ಸಪ್ರಸರ್‌ ಜೀನ್ಸ್ ಗಳನ್ನು ನಿಷ್ಕ್ರಿಯಗೊಳಿಸುವುದು, ಜೀವಕೋಶಗಳ ಸಾವಿನ ಮೇಲಿನ ನಿಯಂತ್ರಣ ಹದತಪ್ಪುವುದು. ಈ ಬದಲಾವಣೆಗಳು ತನ್ನಿಂದ ತಾನೇ ಆಗಬಹುದು ಇಲ್ಲವೇ ಕಾರ್ಸಿನೋಜೆನಿಕ್‌ ವಸ್ತುಗಳು ಮತ್ತು ಈ ಮ್ಯುಟೇಶನ್‌ಗಳು ತಾನೇತಾನಾಗಿ ಉಂಟಾಗಬಹುದು. ಅಥವಾ ಕಾರ್ಸಿನೋಜೆನಿಕ್‌ ವಸ್ತುಗಳಿಂದ ಮತ್ತು ವಂಶವಾಹಿಗಳಿಂದ ಪ್ರಭಾವಿತವಾದ ಅಥವಾ ರೇಡಿಯೇಷನ್‌ಗೆ ಒಳಗಾಗಿರುತ್ತವೆ. ಕೊಹರ್ಟ್‌ ಮತ್ತು ಪ್ರಕರಣಗಳ ಅಧ್ಯಯನದಿಂದ ಬೆಳಕಿಗೆ ಬಂದ ಅಂಶವೆಂದರೆ ಪೆಟ್ರೋ ಕೆಮಿಕಲ್‌ಗಳಾದ ಬೆನ್ಜೀನ್‌ ಮತ್ತು ಹೇರ್‌ಡೈಗಳು ಲ್ಯುಕಿಮಿಯಾ ಬರಲು ಕಾರಣವಾಗಬಹುದು. ವೈರಸ್‌ಗಳೂ ಕೂಡ ಕೆಲ ಬಗೆಯ ಲ್ಯುಕಿಮಿಯಾ ಉಂಟಾಗಲು ಕಾರಣವಾಗುತ್ತವೆ. ಉದಾ. ಎಚ್‌ಐವಿ ಅಥವಾ ಹ್ಯೂಮನ್‌ ಟಿ-ಲಿಂಫೋಟ್ರೋಫೀಕ್‌.ಫನ್‌ಕೊನಿ ರಕ್ತಹೀನತೆ ಕೂಡ ತೀವ್ರ ಸ್ವರೂಪದ ರಕ್ತದ ಕ್ಯಾನ್ಸರ್‌ ಮೈಲೊಜೆನಸ್‌ ಲ್ಯುಕಿಮಿಯಾ ಕ್ಕೆ ಕಾರಣ. ಇದಕ್ಕೆ ರಕ್ತ ಹೀನತೆ ಕಾರಣ ಮತ್ತು ಕಾರಣಗಳು ಗೊತ್ತಾಗುವವರೆಗೆ ಅದನ್ನು ತಡೆಯುವ ಬಗೆ ತಿಳಿಯದು. ಕಾರಣಗಳು ತಿಳಿದಾಗ್ಯೂ ಅವುಗಳನ್ನು ತಕ್ಷಣ ನಿಯಂತ್ರಿಸುವುದು ಸಾಧ್ಯವಿಲ್ಲದೆ ಇರಬಹುದು. ನೈಸರ್ಗಿಕ ಬ್ಯಾಕ್‌ಗ್ರೌಂಡ್‌ ರೇಡಿಯೇಷನ್‌, ಹಾಗಾಗಿ ನಿಯಂತ್ರಿಸುವ ವಿಷಯದಲ್ಲಿ ಸಹಾಯಕವಾಗಲಾರವು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate