ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಎಕ್ಸಿಮಾ- ರುತ್ತಿ

ಶುಷ್ಕ ಮತ್ತು ಪರೆ, ಪರೆಯಾದ ಹಾಗೂ ತುರಿಕೆಯುಂಟು ಮಾಡುವ ಚರ್ಮದ ಸ್ಥಿತಿಗೆ ಎಕ್ಸಿಮಾ ಎನ್ನುತ್ತಾರೆ.

ಚರ್ಮದ ಉರಿಊತ (ಎಕ್ಸಿಮಾ) ಎಂದರೇನು?

ಶುಷ್ಕ ಮತ್ತು ಪರೆ, ಪರೆಯಾದ ಹಾಗೂ ತುರಿಕೆಯುಂಟು ಮಾಡುವ ಚರ್ಮದ ಸ್ಥಿತಿಗೆ ಎಕ್ಸಿಮಾ ಎನ್ನುತ್ತಾರೆ.

ಚರ್ಮದ ಉರಿಊತ (ಎಕ್ಸಿಮಾ) ಕ್ಕೆ ಕಾರಣಗಳೇನು?

ಅತಿಸೂಕ್ಷ್ಮ ಚರ್ಮ ಅಥವಾ ಅಲರ್ಜಿಯಿಂದಾಗಿ ಚರ್ಮ ಊತುಕೊಂಡು ಅದು ಎಕ್ಸಿಮಾಕ್ಕೆ ಕಾರಣವಾಗುತ್ತದೆ. ಊತುಕೊಂಡ ಚರ್ಮ ಕೆಂಪಾಗಿ, ಪರೆ ಪರೆಯಾಗಲು ಹಾಗೂ ಚರ್ಮದ ತುರಿಸುವಿಕೆಗೆ ಕಾರಣವಾಗುತ್ತದೆ.

ಎಕ್ಸಿಮಾದ ಲಕ್ಷಣಗಳೇನು?

ಪರೆಪರೆಯಾದ, ಶುಷ್ಕವಾದ, ಕೆಂಪು ಕಲೆಗಳುಳ್ಳ ಚರ್ಮ. ಉಷ್ಣಾಂಶ ಹೆಚ್ಚಿದಂತೆ ಒತ್ತಡಕ್ಕೆ ಒಳಗಾದಾಗ ಅಥವಾ ಪರೆಪರೆಯಾಗಿ ತೆರೆಚಿದ ಭಾಗದಲ್ಲಿ ತುರಿಕೆ ಹೆಚ್ಚುತ್ತದೆ.

ಯಾವ ವಯೋಮಾನದವರಲ್ಲಿ ಎಕ್ಸಿಮಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?

ಶಿಶುಗಳು ಹಾಗೂ ಎಳೆಯ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೊಡ್ಡ ಮಕ್ಕಳು ಹಾಗೂ ವಯಸ್ಕರಲ್ಲೂ ಇದು ಕಾಣಿಸಿಕೊಳ್ಳಬಹುದು.

ಚರ್ಮದ ಯಾವ ಭಾಗದಲ್ಲಿ ಹೆಚ್ಚಾಗಿ ಚರ್ಮದ ಕಲೆಗಳು ಕಾಣಿಸಿಕೊಳ್ಳುತ್ತದೆ?

ಮೊಣಕಾಲ ಸಂದಿ, ಮೊಣಕೈ ಮಡಿಕೆ, ತೋಳು, ಮಣಿಕಟ್ಟು, ಕುತ್ತಿಗೆ, ಪಾದಗಳಲ್ಲಿ ಚರ್ಮದ ಕಲೆಗಳು ಕಾಣಿಸಿಕೊಳ್ಳುತ್ತದೆ. ಶಿಶುಗಳಲ್ಲಿ ಇದು ಗಲ್ಲ ಹಾಗೂ ಮುಖದ ಮೇಲೆ ಸಣ್ಣ, ಸಣ್ಣ ಗುಳ್ಳೆಗಳಂತೆ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಅದು ತೋಳು ಹಾಗೂ ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಈ ಸ್ಥಿತಿ ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ?

ಪದೇಪದೇ ಜ್ವರ ಹಾಗೂ ಅಸ್ತಮಾಕ್ಕೆ ತುತ್ತಾಗುವ ವ್ಯಕ್ತಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಎಕ್ಸಿಮಾ, ಅಸ್ತಮಾ ಮತ್ತಿತರ ಶ್ವಾಸಕೋಶ ಸಂಬಂಧಿ ಕಾಯಿಲೆಯ ಕೌಟುಂಬಿಕ ಇತಿಹಾಸ ಇದ್ದ ವ್ಯಕ್ತಿಗಳೂ ಎಕ್ಸಿಮಾಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

ಎಕ್ಸಿಮಾ ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣಗಳಿವೆಯೇ?<

ಎಕ್ಸಿಮಾ ಕಾಣಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ

  • ಸಾಬೂನು, ಮಾರ್ಜಕಗಳು, ಕ್ಲೋರಿನ್‌ನಂತಹ ರಾಸಾಯನಿಕ ಅಥವಾ ಚರ್ಮಕ್ಕೆ ಕಿರಿಕಿರಿ ಮಾಡುವ ವಸ್ತುಗಳ ಸಂಪರ್ಕದಲ್ಲಿ ಬಂದಾಗ ಕಾಣಿಸಿಕೊಳ್ಳಬಹುದು.
  • ಹಾಲು, ಮೊಟ್ಟೆಯಂತಹ ಕೆಲ ಆಹಾರ ಪದಾರ್ಥಗಳು ರೋಗ ಲಕ್ಷಣ ಹೆಚ್ಚಿಸುತ್ತವೆ.
  • ಒತ್ತಡವೂ ಸಹ ಎಕ್ಸಿಮಾಕ್ಕೆ ಕಾರಣವಾಗುತ್ತದೆ.
  • ಶುಷ್ಕ ವಾತಾವರಣ ಹಾಗೂ ಶುಷ್ಕ ಚರ್ಮ ಪರಿಸ್ಥಿತಿಯನ್ನು ಬಿಗಡಾಯಿಸಬಹುದು.

ಈ ಸ್ಥಿತಿಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಸಹಾಯಕವಾಗುವ ಸಾಮಾನ್ಯ ಶಿಫಾರಸುಗಳೇನು?

ಮೇಲೆ ಹೇಳಿದ ವಸ್ತುಗಳು, ಆಹಾರ ಪದಾರ್ಥ, ಹವಾಮಾನದಿಂದ ದೂರವಿದ್ದಲ್ಲಿ ಪರಿಸ್ಥಿತಿ ನಿಭಾಯಿಸಬಹುದು.

ಈ ರೋಗದ ದೂರಗಾಮಿ ಪರಿಣಾಮಗಳೇನು?

  • ಸೋಂಕು
  • ಚರ್ಮದ ಗಾಯ
  • ಚರ್ಮ ಕಪ್ಪಾಗುವುದು

ಚಿಕಿತ್ಸೆಯ ಅಡ್ಡ ಪರಿಣಾಮಗಳೇನು?

ಸ್ಟಿರಾಯ್ಡ್ ಆಯಿಂಟ್‌ಮೆಂಟ್‌ಗಳು ಹಾಗೂ ಮೌಖಿಕ ಸ್ಟಿರಾಯ್ಡ್‌ಗಳನ್ನು ದೀರ್ಘಕಾಲ ಉಪಯೋಗಿಸುವುದರಿಂದ ಮತ್ತಷ್ಟು ಚರ್ಮದ ತುರಿಕೆಗೆ ಕಾರಣವಾಗುತ್ತವೆ. ಚರ್ಮ ತೆಳುವಾಗುತ್ತದೆ. ಬೇರೆಬೇರೆ ಸೋಂಕು ನಿವಾರಕಗಳು ಬೇರೆಬೇರೆ ಅಡ್ಡ ಪರಿಣಾಮ ಉಂಟು ಮಾಡುತ್ತವೆ. ಆಂಟಿಹಿಸ್ಟಮಿನ್‌ಗಳು ತೂಕಡಿಕೆ ಉಂಟು ಮಾಡುತ್ತವೆ.

ಮೂಲ:ಪೋರ್ಟಲ್ ತಂಡ

3.02040816327
ಸಂತೋಷ Nov 09, 2019 12:10 PM

ಎಕ್ಸಿಮಾ ಗೆ ಸೂಕ್ತ ಪರಿಹಾರ ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top