ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಧೂಮಪಾನದ ದುಷ್ಪರಿಣಾಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಧೂಮಪಾನದ ದುಷ್ಪರಿಣಾಮಗಳು

ಧೂಮಪಾನ ಮಾಡುವುದರಿಂದ ಗಂಟಲು ಕ್ಯಾನ್ಸರ್ ಸಂಭವಿಸುವುದು. ಬೀಡಿ/ಸಿಗರೇಟಿನ ಹೊಗೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಮೂಲವಾದ ವಿಷವಸ್ತುವಿರುವುದೇ ಇದಕ್ಕೆ ಕಾರಣ.

  • ಧೂಮಪಾನ ಮಾಡುವುದರಿಂದ ಗಂಟಲು ಕ್ಯಾನ್ಸರ್  ಸಂಭವಿಸುವುದು. ಬೀಡಿ/ಸಿಗರೇಟಿನ ಹೊಗೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಮೂಲವಾದ ವಿಷವಸ್ತುವಿರುವುದೇ ಇದಕ್ಕೆ ಕಾರಣ.
  • ಧೂಮಪಾನ ಮಾಡುವುದರಿಂದ ದೇಹಕ್ಕೆ ಆಮ್ಲಜನಕದ ಕೊರತೆಯುಂಟಾಗುವ ದೆಸೆಯಿಂದ ಮೆದುಳಿಗೆ ಹಾನಿ ತಟ್ಟುವುದು, ಹಸಿವು ಮುಚ್ಚಿಹೋಗುವುದು, ನಿದ್ರಾನಾಶವಾಗುವುದು.
  • ಧೂಮಪಾನ ಮಾಡಿ ಮೂ
    ಗಿನ ಮೂಲಕ ಹೊಗೆ ಬಿಡುವುದರಿಂದ ಘ್ರಾಣೇಂದ್ರಿಯದ ಸಂವೇದನಾಶಕ್ತಿ ಕುಗ್ಗುವುದು.
  • ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ ಎಂಬ ವಿಷವಸ್ತುವಿನ ಪ್ರಭಾವದಿಂದ ಜಠರದಲ್ಲಿ  ಆಮ್ಲದ ಉತ್ಪತ್ತಿ ಹೆಚ್ಚುವುದು; ಇದರ ದೆಸೆಯಿಂದ ಹೊಟ್ಟೆ ಹುಣ್ಣು ಪ್ರಾಪ್ತವಾಗುವುದು.
  • ಧೂಮಪಾನ ಮಾಡುವ ದೆಸೆಯಿಂದ ರಕ್ತನಾಳಗಳು ಗಾತ್ರದಲ್ಲಿ ಕುಗ್ಗುತ್ತವೆ. ಆದುದರಿಂದ ವ್ಯಕ್ತಿಯು ಅಧಿಕ ರಕ್ತದ ಒತ್ತಡದಿಂದ ನರಳುವ ಸಂಭವವುಂಟು.
  • ರಕ್ತದ ಒತ್ತಡ ಹೆಚ್ಚುವುದರಿಂದ ಹೃದಯದ ಕಾರ್ಯ ಕಠಿಣವಾಗುವುದು. ಆದುದರಿಂದ ಎದೆನೋವು ಕಾಣಿಸಿಕೊಳ್ಳುವುದು. ಈ ಪರಿಸ್ಥಿತಿ ಮೇರೆ ಮೀರಿದಾಗ ರಕ್ತ ಪರಿಚಲನೆಗೆ ಅಡ್ಡಿಯುಂಟಾಗಿ, ವ್ಯಕ್ತಿಯು ಮರಣ ಹೊಂದುವ ಸಾಧ್ಯತೆಯುಂಟು.
  • ಧೂಮಪಾನ ಮಾಡುವುದರಿಂದ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು; ಈ ದೆಸೆಯಿಂದ ಕಾಲಾಂತರದಲ್ಲಿ ವ್ಯಕ್ತಿಯು ನರದೌರ್ಬಲ್ಯಕ್ಕೆ ಈಡಾಗುವನು.

ಮೂಲ: ವಿಕ್ರಮ

2.9347826087
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top