ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪೈಲ್ಸ್

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು.

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು. ಈ ಕಾಯಿಲೆ ಹೆಚ್ಚಾದರೆ ರಕ್ತಸ್ರಾವ ಕಂಡು ಬರುವುದು ಹಾಗೂ ಮಲವಿಸರ್ಜನೆಗೆ ಹೋಗುವಾಗ ವಿಪರೀತ ನೋವು ಕಂಡು ಬರುವುದು, ಕೂರುವುದು, ನಡೆಯುವುದು ಕೂಡ ಕಷ್ಟವಾಗುವುದು. ಇದಕ್ಕೆ ಆರ್ಯುವೇದ ಅಥವಾ ಅಲೋಪತಿ ಔಷಧಿ ತೆಗೆದುಕೊಂಡರೆ, ಕೆಲವರು ಆಪರೇಷನ್ ಮಾಡಿಸಿದರೆ ಮೂಲವ್ಯಾಧಿಯ ನೋವಿನಿಂದ ಪಾರಾಗಬಹುದು. ಆದರೆ ಇದರ ಜೊತೆಗೆ ಆಹಾರಕ್ರಮದ ಬಗ್ಗೆ ಗಮನ ಕೊಡದಿದ್ದರೆ ಆ ನೋವು ಮರುಕಳಿಸುವುದು, ಆದ್ದರಿಂದ ಮೂಲವ್ಯಾಧಿ ಇರುವವರು ಈ ಕೆಳಗಿನ ಆಹಾರಗಳನ್ನು ಕಡ್ಡಾಯವಾಗಿ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಮಜ್ಜಿಗೆ

ಮಜ್ಜಿಗೆ ತುಂಬಾ ಒಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

ಬಾಳೆ ಹಣ್ಣು

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

ಜ್ಯೂಸ್

ಕ್ಯಾರೆಟ್ ಅಥವಾ ಬೀಟ್ ರೂಟ್ ಜ್ಯೂಸ್, ಕಿತ್ತಳೆ ಜ್ಯೂಸ್ ಇವೆಲ್ಲಾ ಉರಿಯನ್ನು ಕಡಿಮೆ ಮಾಡುತ್ತದೆ.

ಹಾಗಾಲಕಾಯಿ

ಹಾಗಾಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.

ಕಹಿ ಬೇವಿನ ಎಲೆ ಮತ್ತು ಗೋಧಿ<

ಹುಲ್ಲು ಕಹಿ ಬೇವಿನ ಎಲೆ ಮತ್ತು ಗೋಧಿ ಹುಲ್ಲನ್ನು ಹಾಕಿ ಕುದಿಸಿದ ನೀರು ಕುಡಿಯುವುದು ಮೂಲವ್ಯಾಧಿಗೆ ನೈಸರ್ಗಿಕವಾದ ಮನೆಮದ್ದು.

ಬೆರ್ರಿ

ಎಲ್ಲಾ ಬೆರ್ರಿ ಹಣ್ಣುಗಳು ಮೂಲವ್ಯಾಧಿ ಕಾಯಿಲೆ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಸ್ಟ್ರಾಬೆರಿ, ದ್ರಾಕ್ಷಿ ಈ ರೀತಿಯ ಹಣ್ಣುಗಳನ್ನು ಪ್ರತಿನಿತ್ಯ ತಿನ್ನಿ.

ಶುಂಠಿ

ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಚಮಚ ನಿಂಬೆ ರಸದ ಜೊತೆ ಕಲೆಸಿ, ಅದಕ್ಕೆ 1 ಚಮಚ ಜೇನು ಬೆರೆಸಿ ತಿಂದರೆ ಕೂಡ ಪೈಲ್ಸ್ ಕಡಿಮೆಯಾಗುವುದು.

ಮೂಲಂಗಿ

ಮೂಲಂಗಿ ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾದ ಆಹಾರವಾಗಿದೆ. ಕಾಲು ಗ್ಲಾಸ್ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಪೈಲ್ಸ್ ಹೆಚ್ಚಾಗದಂತೆ ತಡೆಯಬಹುದು.

ನೀರು

ಸಾಕಷ್ಟು ನೀರು ಕುಡಿಯಿರಿ, ತುಂಬಾ ನೀರು ಕುಡಿದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ನೀರು ಕಮ್ಮಿ ಕುಡಿದು ಮಲಬದ್ಧತೆ ಸಮಸ್ಯೆ ಕಾಣಿಸಿದರೆ ಪೈಲ್ಸ್ ಕಾಯಿಲೆ ಉಂಟಾಗುವುದು, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.

ಆಹಾರಕ್ರಮ

ಉಪ್ಪಿನಕಾಯಿ, ಅಧಿಕ ಖಾರವಿರುವ ಆಹಾರಗಳು ಇವುಗಳನ್ನು ತಿನ್ನಬೇಡಿ. ಖಾರ, ಉಪ್ಪು, ಹುಳಿ ಸ್ವಲ್ಪ ಕಮ್ಮಿಯಿದ್ದರೂ ಪರ್ವಾಗಿಲ್ಲ, ಆದರೆ ಇವು ಹೆಚ್ಚಾದರೆ ನಿಮ್ಮ ಕಾಯಿಲೆಯೂ ಹೆಚ್ಚಾಗುವುದು ನೆನಪಿರಲಿ.

ಅಡುಗೆ ಸೋಡಾ

ವಿಪರೀತ ಉರಿಯಿಂದ ನರುಳಿತ್ತಿದ್ದರೆ, ಊದಿದ ಭಾಗಕ್ಕೆ ಅಡುಗೆ ಸೋಡಾ ಹಚ್ಚಿದರೆ ಕಡಿಮೆಯಾಗುವುದು.

2.87786259542
ಮಂಜುನಾಥ.ಹಳೇಬಾತಿ May 12, 2017 09:27 PM

ನನಗಿ.ಗುದದ್ವಾರದಲಿ.ಉರಿ.ಇದ.ಇದಕ.ಪರಿಹಾರ.ದಾವಣಗರಿ.ಜಲ್ಲೆ .ಸ್ಂಬದ ಫಟ.ವಿಳಾಸ.ಇದರ.ನನಗಿ.ಮಾಹತಿ.ಕೂಡಿ

ಶಂಕರ May 01, 2017 11:33 AM

ನನಗೆ ಪೈಲ್ಸ್ ಸಮಸ್ಯೆ ಇದೆ ಆಪರೇಷನ್ ಇಲ್ಲದೆ ನನಗೆ ಚಿಕಿತ್ಸೆ ಬೇಕು
ಹಾಸನ ಜಿಲ್ಲೆಯಲ್ಲಿ ಇದಕ್ಕೆ ಸಂಬಂದಪಟ್ಟ ವಿಳಾಸವಿದ್ದರೆ ನನಗೆ ನೀಡಿ
ದಯಮಾಡಿ ಸಲಹೆ ಕೋಡಿ

ಶಂಕರ May 01, 2017 11:31 AM

ನನಗೆ ಪೈಲ್ಸ್ ಸಮಸ್ಯೆ ಇದೆ ಆಪರೇಷನ್ ಇಲ್ಲದೆ ನನಗೆ ಚಿಕಿತ್ಸೆ ಬೇಕು
ಹಾಸನ ಜಿಲ್ಲೆಯಲ್ಲಿ ಇದಕ್ಕೆ ಸಂಬಂದಪಟ್ಟ ವಿಳಾಸವಿದ್ದರೆ ನನಗೆ ನೀಡಿ
ದಯಮಾಡಿ ಸಲಹೆ ಕೋಡಿ

ambika k Apr 06, 2017 12:00 PM

ಅಂಬಿಕಾ

ಜಲಜಾ Jan 27, 2017 12:19 PM

ನನಗೆ ಗುದಧ್ವಾರದಲ್ಲಿ ಉರಿ ಆಗುತ್ತಿದೆ ಇದಕ್ಕೆ ಪರಿಹಾರ ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top