অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಷ್ಟಿಕತೆಯ ಕೊರತೆ

ಪೌಷ್ಟಿಕತೆಯ ಕೊರತೆ ವ್ಯಕ್ತಿಯ ಪೌಷ್ಟಿಕ ಆಹಾರ ಸೇವನೆಯು ಕೊರತೆಯು ಶಿಫಾರಸ್ಸು ಮಾಡಿದ ಅಗತ್ಯ ಕ್ಕಿಂತ ಸತತವಾಗಿ ಕಡಿಮೆಯಾದರೆ, 10–19 ವಯೋಮಾನದೊಳಗಿನ ಮಕ್ಕಳು ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಆರೋಗ್ಯಸಂಸ್ಥೆಯ ವರದಿ ಹೇಳುತ್ತದೆ .

B1 ಅನ್ನಾಂಗ (ವಿಟಮಿನ್)

ಥಯಾಮಿನ್ ಅಥವ B1 ಅನ್ನಾಂಗ (ವಿಟಮಿನ್) : ಇದು ಒಂದು ನೀರಿನಲ್ಲಿ ಕರಗುವ ಅನ್ನಾಂಗ (ವಿಟಮಿನ್). ಇದು ಶಕ್ತಿಯ ಉತ್ಪಾದನೆ ಯಲ್ಲಿ ಮುಖ್ಯಪಾತ್ರ ವಹಿಸುವುದು. ( ಅಡಿನೊಸೈನ್ ಟ್ರೈಸಲ್ಫೇಟ್ ATP ಸಂಸ್ಕರಣ ಮತ್ತು ನರ ವಹನದ ಮೂಲಕ). ಮಾನವದೇಹವು ಕೆಲಸ ಮಾಡಲು ಬಳಸುವ ಪ್ರಮುಖ ಶಕ್ತಿಯ ಮೂಲ ATP. ಥಯಮಿನ್ ಹಂದಿಯ ಕೊಬ್ಬುರಹಿತ ಮಾಂಸ, ದ್ವಿದಳ ಧಾನ್ಯಗಳು ಮತ್ತು ಈಸ್ಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು. ಪಾಲಿಷ್ ಮಾಡಿದ ಅಕ್ಕಿ, ಬಿಳಿ ಹಿಟ್ಟು, ಸಂಸ್ಕರಿಸಿದ ಸಕ್ಕರೆ , ಕೊಬ್ಬು, ಮತ್ತು ಎಣ್ಣೆಗಳಲ್ಲಿ ಅನ್ನಾಂಗಗಳ ಕೊರತೆ ಇರುವುದು. ಹೆಚ್ಚು ಮದ್ಯಪಾನ ಮಾಡುವವರು, ಬಡತನದ ಹೀನ ಸ್ಥಿತಿಯಲ್ಲಿ ಇರುವವರು ಇದರ ಕೊರತೆಯ ಅಪಾಯವನ್ನು ಎದುರಿಸುವರು. ಇಂತಹ ಜನರಿಗೆ ಹೆಚ್ಚಿನ ಪ್ರಮಾಣದ ಅನ್ನಾಂಗದ ಕೊರತೆ ಎದ್ದು ಕಾಣುವುದು.ಅಲ್ಲದೆ ಇವರಲ್ಲಿ ಅನ್ನಾಂಗ (ವಿಟಮಿನ್) ಗಳ ಮತ್ತು ಲವಣಗಳ ಕೊರತೆಯೂ ಇರುತ್ತದೆ . ಥಯಮಿನ್ ಕೊರತೆಯಿಂದ ಬೆರಿಬೆರಿ ರೋಗ ಬರುವುದು. ಇದರ ಪರಿಣಾಮವಾಗಿ ನರವ್ಯೂಹದ ಅಸಹಜತೆ ಉಂಟಾಗುವುದು. (ಕಾಲು ಹಿಡಿದು ಕೊಳ್ಳುವುದು, ಸ್ನಾಯು ದೌರ್ಬಲ್ಯ) ಕೈಕಾಲು ಬಾಯುವುದು, ನಾಡಿಮಿಡಿತ ಹೆಚ್ಚುವುದು ಮತ್ತು ಹೃದಯಸ್ಥಂಭನ. ವನಿರ್ಕ್-ಕೋರ್ಸ್ಕೆಫ್ ವೆಂಬ ಸಿಡ್ರೋಮ್ ಇದಕ್ಕೆ ಸಂಬಂಧಸಿದ ಸ್ಥಿತಿ. ( ಓಲಾಡುವ ನಡೆ, ಅಸಂಬದ್ದತೆ, ತಾತ್ಕಾಲಿಕ ಮರೆವು). ಇವು ಮದ್ಯ ವ್ಯಸನಿಗಳಲ್ಲೂ ಕಂಡುಬರುತ್ತವೆ

B3 ಅನ್ನಾಂಗ (ವಿಟಮಿನ್)

ಪೆಲ್ಲೆಗ್ರ ರೋಗವು ಆಹಾರದ ಕೊರತೆ ಅಥವ ನಿಯಾಸಿನ್ (ವಿಟಮಿನ್ B3) ಅನ್ನು ಹೀರಲಾಗದಿದ್ದರೆ ಅಥವ ಅಮೈನೊ ಆಮ್ಲ ಟ್ರೈಪ್ಟೊಫನ್, ನಿಯಸಿನ್ ನ ಪೂರ್ವರೂಪ, ಪಡೆಯದಿದ್ದರೆ ಬರುವುದು. ಪೆಲ್ಲೆಗ್ರ ಎಂದರೆ “ ಒರಟು ಚರ್ಮ” ಇದರ ಪ್ರಾಥಮಿಕ ಲಕ್ಷಣಗಳು "3 Dಗಳು” ಡಿಮ್ನಿಷಿಯಾ (ಮಾನಸಿಕ ಲಕ್ಷಣ) ಡರ್ಮಿಟೈಟಿಸ್( ಹುರುಪಾದ ಚರ್ಮ) ಮತ್ತು ಡಯೇರಿಯಾ( ಅತಿಸಾರ).

ಲವಣಗಳ ಕೊರತೆ, ಕ್ಯಾಲ್ಷಿಯಂ ಮತ್ತು ಡಿ ಅನ್ನಾಂಗ (ವಿಟಮಿನ್ ಡಿ)

ಒಸ್ಟಿಯೊಪೊರೊಸಿಸ್ ಬಹು ಸಾಮಾನ್ಯವಾದ ಮೆಟಾಬಲಿಕ್ ಮೂಳೆ ರೋಗ ಇದರಿಂದ ಮೂಳೆಗಳ ತೂಕ ಕಡಿಮೆ ಆಗುವುದು. ಸಾಮಾನ್ಯ ಮೂಳೆಯು ಗಟ್ಟಿಯಾದ ಹೊರ ಕವಚ (ಕಾರಟೆಕ್ಸ) ಮತ್ತು ಒಳಗೆ ಸ್ಪಿಕ್ಯುಲ್ಸ (ನಾರು)ಗಳ ಜಾಲ ಇರುವುದು. ಅದನ್ನು ಟ್ರಾಬೆಕುಲೆ ಎನ್ನುವರು. ಅವುಗಳಿಂದ ಮೂಳೆಗೆ ವಿಶಿಷ್ಟ ಶಕ್ತಿ ಬರುವುದು. ಮೂಳೆತೂಕವು (ಬೋನ್ ಮಾಸ್) ಪ್ರಗತಿಯಾಗುತ್ತಾ ನಿಗದಿತ ಮಟ್ಟದಲ್ಲಿ ಮುವತ್ತೈದು ವರ್ಷದವೆರೆಗೆ ಇರುವುದು. ಈ ನಿರ್ವಹಣೆಯು ಮೂಳೆಗಳ ಮರು ಮಾದರಿಯಿಂದ ಆಗುವುದು. ಇದು ಒಂದು ಮೂಳೆಗಳನ್ನು ಮುರಿದು ಮತ್ತೆ ಸೇರಿಸುವ ಕ್ರಿಯೆ. ಸುಮಾರು ನಲವತ್ತು ವರ್ಷದ ನಂತರ ಮೂಳೆಗಳು ಮುರಿಯುವ ದರವು ಮೂಳೆಸೇರುವ ದರಕ್ಕಿಂತ ಹೆಚ್ಚಾಗುವುದು. ಇದರಿಂದ ಮೂಳೆಗಳ ತೂಕ ಕಡಿಮೆಯಾಗುತ್ತಾ ಹೋಗುವುದು. ಜೊತೆಗ ಮೂಳೆಯಲ್ಲಿನ ಕ್ಯಾಲ್ಷಿಯಂನ ಅಂಶವೂ ಕಡಿಮೆ ಯಾಗುವುದು. ಮಹಿಳೆಯರಲ್ಲಿ ವಯಸ್ಸಾದಂತೆ ಕಡಿಮೆಯಾಗುವ ಮೂಳೆಯ ತೂಕದ ( ಬೋನ್ ಮಾಸ್) ಜೊತೆ, ಮುಟ್ಟಿ (ಮೆನೋಪಾಸ್) ನಿಂದಾಗಿ ಹಾರ್ಮೋನ್ಗಳ ಮಟ್ಟವು(ವಿಶೇಷವಾಗಿ ಎಸ್ಟ್ರೊಜಿನ್) ಕಡಿಮೆ ಆಗುವುದು. ಇದರ ಪರಿಣಾಮ ಕೊರಟಿಕಲ್ ಮತ್ತು ಟ್ರಬುಕುಲರ್ ಮೂಳೆಗಳಲ್ಲಿ ಆಗುವುದು. ಅಸ್ಟೊಪೊರೊಸಿಸ್ ಆದವರಲ್ಲಿ ಈ ನಷ್ಟ ವು ಶೇಕಡಾ 30-40 ರವರೆಗೆ ಇರುವುದು. ಇದರಿಂದ ಮೂಳೆಗಳು ಬಹು ನಾಜೂಕಾಗುವವು. ಆದ್ದರಿಂದ ಮುಳೆ ಮುರಿತದ ಸಂಭವವೂ ಹೆಚ್ಚು.

ಒಸ್ಟಿಯೊಪೊರೊಸಿಸ್ ಬರಲು ಅನೇಕ ಅಂಶಗಳು ಕಾರಣವಾಗಿವೆ. ಧೂಮಪಾನ, ಮದ್ಯಸೇವನೆ ಮತ್ತು ಜಡ ಜೀವನ ಶೈಲಿಗಳಿಂದ ರೋಗ ಬರುವ ಅಪಾಯ ಹೆಚ್ಚು. ವಯಸ್ಸು ಮತ್ತು ಲಿಂಗಗಳೂ ಕೊಡುಗೆ ನೀಡುವ ಅಂಶಗಳಾಗಿವೆ. ಎಸ್ಟ್ರೊಜೆನ್ನಿನ ಕಡಿಮೆ ಮಟ್ಟವು ( ಮುಟ್ಟು ಅಥವ ಮೆನೊಪಾಸ್ ನಂತರ ) ಕಾರಣ. ಅಲ್ಲದೆ ಗಂಡಸರಲ್ಲಿ ಮೂಳೆಯ ಸಾಂದ್ರತೆಯು ಹೆಚ್ಚಾಗಿರುವುದರಿಂದ ಅವರು ಈ ಸ್ಥಿತಿಗೆ ಒಳಗಾಗುವುದಿಲ್ಲ.

ಡಿ ಅನ್ನಾಂಗ (ವಿಟಮಿನ್)

ಡಿ ಅನ್ನಾಂಗದ (ವಿಟಮಿನ್ D)ಯ ಕೊರತೆ ಯಿಂದ ಈ ರೀತಿ ಆಗುವುದು. ಬೆಳವಣಿಗೆಯ ಹಂತದಲ್ಲಿ ಮಾನವ ಮೂಳೆಗಳು ನಿರ್ಮಾಣ ಮತ್ತು ನಿರ್ವಣೆಯನ್ನು ಕ್ಯಾಲ್ಷಿಯಂ, ಫಾಸ್ಪರಸ್ ಮತ್ತು ವಿಟಮನ್ D ಮಾಡುವವು .ಕ್ಯಾಲ್ಷಿಯಂ ಬೆಳವಣಿಗೆಯ ಹಂತದಲ್ಲಿನ ಮೂಳೆಗಳ ( ಒಸ್ಟಾಯಿಡ್) ಮೇಲೆ ಸಂಗ್ರಹ ವಾಗುವುದು. ಅದನ್ನು ಕ್ಯಾಲ್ಸಿಫಿಕೇಷನ್ ಎನ್ನುವರು. ಇದರಿಂದ ಎಳೆಯ ಮೂಳೆಗಳು ಪ್ರೌಢವಾಗಿ ನಿರ್ದಿಷ್ಟ ಆಕಾರ ಪಡೆಯುವವು. ದೇಹದಲ್ಲಿರುವ ಅಹಾರದಲ್ಲಿನ ಕ್ಯಾಲ್ಷಿಯಂಅನ್ನು ಹೀರಲು ವಿಟಮಿನ್ D ಅಗತ್ಯ. ರಿಕೆಟ್ಸ ಆದಾಗ ಮುಖ್ಯವಾದ ವಿಟಮಿನ್ ಕೊರತೆಯು ಕಡಿಮೆ ಕ್ಯಾಲ್ಷಿಯಂ, ಮಿತವಾದ ಕ್ಯಾಲ್ಷಿಫಿಕೇಷನ್ ಮತ್ತು ವಿಕೃತ ಮೂಳೆಗಳಿಗೆ ಕಾರಣವಾಗುವುದು. ಕೇವಲ ವಿಟಮಿನ್ D ಮಾತ್ರ ಆಹಾರದ ಮೂಲಕ ಮಾತ್ರವಲ್ಲದೆ ದೇಹದಲ್ಲಿಯೇ ಉತ್ಪಾದನೆ ಯಾಗುವುದು. ವಿಟಮಿನ್ D ಯನ್ನು ಪ್ರಾಣಿಗಳ ಕೊಬ್ಬು ಹೆಚ್ಚಿರುವ ಆಹಾರದಿಂದ ಅಂದರೆ ಹಾಲು, ಗಿಣ್ಣು, ಮೀನು ಮತ್ತು ಮಾಂಸಗಳಿಂದ ಪಡೆಯಬಹುದಾದರೂ ಅದೆಲ್ಲ ದೇಹಕ್ಕೆ ಒಂದು ದಿನಕ್ಕೆ ಅಗತ್ಯವಾದುದರ ಶೇಕಡಾ 10% ಭಾಗ ಮಾತ್ರ ಆಗಿರುವುದು. ಉಳಿದ ಶೇಕಡಾ 90 ಭಾಗನ್ನು ದೇಹವೆ ತಯಾರಿಸಬೆಕಾಗುವುದು. ಸೂರ್ಯನ ಅಲ್ಟ್ರಾ ವಾಯಲೆಟ್ ವಿಕಿರಣವು ಚರ್ಮದಲ್ಲಿರುವ 7- ಡಿಹೈಡ್ರೊಕೊಲೆಸ್ಟ್ರಾಲ್ ಅನ್ನು ವಿಟಮಿನ್ D 3 ಆಗಿ ಪರಿವರ್ತಿಸುವುದು. ಅದು ನಂತರ ಮೂತ್ರ ಪಿಂಡದಲ್ಲಿ ಹಾರ್ಮೊನ ಕಾಲ್ಸಿಟ್ರಿಯಾಲ್ (ವಿಟಮಿನ್ D ಯ ಪಟುವಾದ ಭಾಗ) ಆಗಿ ಪರಿವರ್ತಿತವಾಗುವುದು. ಕಾಲ್ಸಿಟ್ರಿಯಾಲ್ ಕರುಳಿನಲ್ಲಿರುವ ಕ್ಯಾಲ್ಷಿಯಂ ಮತ್ತು ಫಾಸ್ಫರಸಗಳನ್ನು ಮುಖ್ಯವಾಗಿ ಸಣ್ಣ ಕರುಳಿನಲ್ಲಿ ಹೀರುವಿಕೆಗೆ ಸಹಾಯಮಾಡುವುದು, ಮತ್ತು ದೇಹದ , ಕ್ಯಾಲ್ಷಿಯಂ ಮತ್ತು ಫಾಸ್ಫರಸಗಳ ಸಮತೋಲನವನ್ನು ಮೂತ್ರ ಪಿಂಡದ ಮತ್ತು ಮೂಳೆಗಳ ಮೂಲಕ ಕಾಪಾಡುವುದು. ಸಾಕಷ್ಟು ವಿಟಮಿನ್ D ಇಲ್ಲದೆ ದೇಹವು ಶೇಕಡಾ 10 ರಿಂದ15 ರಷ್ಟು ಆಹಾರದಲ್ಲಿನ ಕ್ಯಾಲ್ಷಿಯಂ ಅನ್ನು ಮಾತ್ರ ಹೀರಬಲ್ಲದು. ಈ ವಿಟಮಿನ್ D ಕ್ಯಾಲ್ಷಿಯಂ ಮತ್ತು ಫಾಸ್ಫೇಟುಗಳ ಸಮತೋಲನವು ದೇಹದ ಮೂಳೆಗಳ ಬೆಳವಣಿಗೆ, ಮತ್ತು ನಿರ್ವಹಣೆಗಾಗಿ ವಿಶೇಷವಾಗಿ ಮಕ್ಕಳಲ್ಲಿ ಅತಿ ಅಗತ್ಯ. ಈ ಕೊರತೆಯು ವಯಸ್ಕರಲ್ಲೂ ಇರಬಹುದು.

ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 4/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate