অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಪೌಷ್ಟಿಕತೆ

ಪ್ರೋಟೀನ್ ಕ್ಯಾಲರಿ ಅಪೌಷ್ಟಿಕತೆ  ಮರಾಸ್ಮಸ್ ಆಗಿ ಬರುವುದು. ಮರಾಸ್ಮಸ್  ( ಕುಂಠಿತ ಬೆಳವಣಿಗೆ ಮತ್ತು ವ್ಯರ್ಥವಾಗುವಿಕೆಯ ಲಕ್ಷಣ) ಮತ್ತು ಕ್ವಷಿಯೊಕೊರ್ ನಂತೆ ( ಪ್ರೊಟೀನ್ ಕೊರತೆ), ಅಂಗಾಂಶಗಳ ಬಾವು ಮತ್ತು ನಾಶ ಆಗಿ. ಪ್ರೋಟೀನ್ ಕ್ಯಾಲರಿ ಅಪೌಷ್ಟಿಕತೆ ನ್ಯುಮೊನಿಯಾ, ಸೀತಾಳೆ (ಚಿಕನ್ ಪಾಕ್ಸ) ಅಥವ ದಡಾರ (ಮೀಸಲ್ಸ) ದಿಂದ ಬರಬಹುದಾದ ಮರಣದ ಗಂಡಾಂತರವನ್ನು ಹೆಚ್ಚಿಸುವುದು

ಕಾರಣಗಳು

ಕ್ವಷಿಯೊಕೊರ್ ಮತ್ತು ಮರಾಸ್ಮಸ್ ಎರಡೂ ಶೈಶವದಲ್ಲಿ ಮತ್ತು ಬಾಲ್ಯದಲ್ಲಿ ಬರುವುದು ಸಾಮಾನ್ಯ. ಆಹಾರದ ಅಮೈನೋ ಆಮ್ಲದ ಅಂಶವು ಬೆಳವಣಿಗೆಯ ಅಗತ್ಯಕ್ಕೆ ತಕ್ಕಷ್ಟು ಇಲ್ಲದಾದಾಗ ಇವು ಬರುವವು. ಮಗುವು ಎದೆ ಹಾಲನ್ನು ಬಿಟ್ಟಾಗ ಸಾಧಾರಣವಾಗಿ ೧ ನೆ ವರ್ಷದಲ್ಲಿ ಪ್ರೊಟೀನ್ ಕೊರತೆ ಇರುವ ಆಹಾರವಾದ ಗಂಜಿ , ಸಕ್ಕರೆ ನೀರು ಮೊದಲದುವನ್ನು ಸೇವಿಸುವುದರಿಂದ ಕ್ವಷಿಯೊಕೊರ್ ಬರುವುದು. ಅದಲ್ಲದೆ ಇದು ಮಗುವಿನ ಬೆಳವಣಿಗೆಯ ಯಾವುದೆ ಹಂತದಲ್ಲಿ ಬರಬಹುದು. ಮಗುವಿಗೆ 6 ರಿಂದ 18 ತಿಂಗಳ ವಯಸ್ಸಿನಲ್ಲಿ ಎದೆ ಹಾಲಿನ ಕೊರತೆಯಿಂದ ನಿಲ್ಲದ ಅತಿಸಾರದಿಂದ ಮರಾಸ್ಮಸ್ ಬರುವುದು,.

ಲಕ್ಷಣಗಳು ಮತ್ತು ಚಿಹ್ನೆಗಳು

ಮಕ್ಕಳಿಗೆ ತೀವ್ರವಾದ ಪ್ರೋಟೀನ್ ಕ್ಯಾಲರಿ ಅಪೌಷ್ಟಿಕತೆ ಇದ್ದರೆ ಬೆಳವಣಿಗೆಯಲ್ಲಿ ಅವರು ವಯಸ್ಸಿಗಿಂತ ಚಿಕ್ಕವರಾಗಿ ಕಾಣುವರು. ದೈಹಿಕವಾಗಿ ಚುರುಕಾಗಿರುವುದಿಲ್ಲ. ಮಾನಸಿಕವಾಗಿ ಜಡವಾಗಿರುವುರು. ಪದೇ ಪದೇ ಸೋಂಕು ತಗುಲಬವಹುದು. ಹಸಿವಿಲ್ಲದಿರುವಿಕೆ (ಅನೊರೆಕ್ಸಿಯಾ) ಮತ್ತು ಅತಿಸಾರ ಸಾಮಾನ್ಯ
ತೀವ್ರ PCM ಆದ ಮಕ್ಕಳು ಆಕಾರದಲ್ಲಿ ಚಿಕ್ಕದಾಗಿ, ಸಣಕಲಾಗಿರುವುರು. ಬಿಳಚಿಕೊಂಡಿರುವರು. ಅಡಿಪೋಸ್ ಅಂಗಾಂಶವು ಇರುವುದಿಲ್ಲ. ಚರ್ಮ ಒಣಗಿ ಜೋಲುಜೋಲಾಗಿರುವುದು. ಕೂದಲು ವಿರಳವಾಗಿ ಕಂದು ಅಥವ ಕೆಂಪು- ಹಳದಿ ಯಾಗಿರುವುದು. ಕಡಿಮೆ ಉಷ್ಣತೆ, ನಾಡಿ ಮತ್ತು ಉಸಿರಾಟದ ದರ ನಿಧಾನವಾಗುವುದು. ಈ ಮಕ್ಕಳು ದುರ್ಬಲವಾಗಿದ್ದು ಸಿಡಕಾಗಿ ಮತ್ತು ಸದಾ ಹಸಿದಂತೆ ಇರುವರು. ಅವರಿಗೆ ಹಸಿವಿಲ್ಲದಿರುವಿಕೆ (ಅನೊರೆಕ್ಸಿಯಾ), ವಾಕರಿಕೆ ಮತ್ತು ವಾಂತಿಯೂ ಇರಬಹುದು ,ಮರಸ್ಮಾಸ ನಂತಲ್ಲದೆ, ತೀವ್ರ ಕ್ವಾಷ್ಯೋಕರ್ ಆದಾಗ ರೋಗಿಗಳಲ್ಲಿ ಎತ್ತರದ ಬೆಳವಣಿಗೆ ಇರುವುದು ಆದರೆ ಶಕ್ತಿಯ ಬೇಡಿಕೆಯಿಂದ ಕೊಬ್ಬು ಮೆಟಲೈಜಾಗಿ ಅಡಿಪೊಸ್ ಅಂಗಾಂಶಗಳು ಕಡಿಮೆಯಾಗುವವು.ದೇಹದ ಬಾವು ಅನೇಕ ಸಲ ಸ್ನಾಯು ನಷ್ಟವನ್ನು ಮರೆಮಾಡಬಹುದು. ಚರ್ಮ ಸುಲಿಯುವುದು, ಹೆಪಟೊಮೆಗಲಿ ಅವರಿಗೆ ಸಾಮಾನ್ಯ. ಸೆಕೆಂಡರಿ ಪ್ರೊ. ಕೆ. ಅ ಇರುವ ರೋಗಿಗಳು ಮರಸ್ಮಸ್ ನಂತಹ ಲಕ್ಷಣಗಳನ್ನು ಹೊಂದಿರುವರು ಮುಖ್ಕ್ಯವಾಗಿ ಅಡಿಪೋಸ್ ಅಂಗಾಂಶಗಳ ನಷ್ಟ ಮತ್ತು ಸೊಣಕಲ ದೇಹ, ಕಡಿಮೆ ಬಾಡಿ ಮಾಸ್, ಆಲಸ್ಯ ಮತ್ತು ಬಾವು ಕಂಡುಬರುವುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate