অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ತಹೀನತೆ (ಎನಿಮಿಯಾ)

ರಕ್ತಹೀನತೆ (ಎಅನಿಮಿಯಾ) ಅಂದರೇನು ?

  • ರಕ್ತದಲ್ಲಿ ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಕಡಿಮೆ ರಕ್ತ ಕಣಗಳು ಇರುತ್ತವೆ
  • ಕೆಂಪು ರಕ್ತಕಣಗಳ ಎಣಿಕೆಯಿಂದ ಅಳೆಯುವರು ಮತ್ತು ಹೆಮೊಗ್ಲೋಬಿನ್ -10 gm/dil ಗಿಂತ ಕಡಿಮೆ

ರಕ್ತಹೀನತೆಯ (ಎನಿಮಿಯಾ) ಮಾಪನ
1) ವಯಸ್ಕ ಪುರುಷ – 13 g/dl ಕಡಿಮೆ
2) ಗರ್ಭಿಣಿಯಲ್ಲದ ವಯಸ್ಕಮಹಿಳೆ - 12 g/dl ಕಡಿಮೆ
3) ಗರ್ಭಿಣಿ ಮಹಿಳೆ- 11 Gms/dl ಗಿಂತ ಕಡಿಮೆ
4) ಮಕ್ಕಳು 6 ತಿಂಗಳಿನಿಂದ 6 ವರ್ಷದ ವರೆಗೆ -11 g /dl
5) ಮಕ್ಕಳು 6 ವರ್ಷದಿಂದ 14 ವರ್ಷದ ವರೆಗೆ-12 g/dl

ಕಾರಣಗಳು

  • ಫೋಲಿಕ್ ಆಮ್ಲದ ಕೊರತೆ
  • B12 ಅನ್ನಾಂಗ (ವಿಟಮಿನ್ ) ದ ಕೊರತೆ
  • ಕಬ್ಬಿಣಾಂಶದ ಕೊರತೆ
  • ರಕ್ತ ಕಣಗಳು ನಿರ್ದಿಷ್ಟ ರೋಗದಿಂದ ನಾಶವಾದಾಗ ಹೆಮೊಲೆಟಿಕ್ ರಕ್ತಹೀನತೆ (ಎನಿಮಿಯಾ)
  • ಪದೆ ಪದೇ ಸೋಂಕು (ಮಲೇರಿಯಾ)
  • ಕೆಲವು ಮೂಳೆ ನೆಣದ ರೋಗಗಳು
  • ಗಾಯ ಮತ್ತು ರೋಗದಿಂದ ರಕ್ತ ನಾಶ
  • ಕಳಪೆ ಆಹಾರದಿಂದ ಅಪೌಷ್ಟಿಕತೆ
  • ಗರ್ಭಾವಸ್ಥೆಯಲ್ಲಿ ಅಸಮರ್ಪಕ ಆಹಾರ ಸೇವನೆ
  • ಮಹಿಳೆಯರಲ್ಲಿ ತೀವ್ರ ರಕ್ತಸ್ರಾವ

ಲಕ್ಷಣಗಳು ಮತ್ತು ಚಿಹ್ನೆಗಳು

  • ಸುಸ್ತು
  • ಎದೆನೋವು
  • ಏದುಸಿರು
  • ದೇಹದ ಊತ
  • ಬಿಳಿಚಿದ ಚರ್ಮ
ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate