অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಧುಮೇಹದ ಜೊತೆ ಸಹಬಾಳ್ವೆ

ಮಧುಮೇಹ ನಿಯಂತ್ರಣಕ್ಕೆ ನಾಲ್ಕು ಪ್ರಮುಖ ಸೂತ್ರಗಳನ್ನು ಪ್ರತಿಯೊಬ್ಬ ಮಧುಮೇಹಿಯು ಅನುಸರಿಸಬೇಕು.

  1. ಆಹಾರ ನಿಯಂತ್ರಣ ೨೦%
  2. ಕ್ರಮ ಬದ್ದ ವ್ಯಾಯಾಮ ಅಥವಾ ನಡಿಗೆ( ೧ ಗಂಟೆ )೨೦ %
  3. ಮಾನಸಿಕ ಒತ್ತಡ ದಿಂದ ವಿಮುಕ್ತಿ  ೨೦% ಮತ್ತು  ಜೀವನದ ಶೈಲಿಯಲ್ಲಿ  ಬದಲಾವಣೆಗಳು
  4. ಔಷದಿಗಳು ( ಮಾತ್ರೆಗಳು ಮತ್ತು ಇನ್ಸುಲಿನ್ ) ೪೦%

ಈ ನಾಲ್ಕು ಸೂತ್ರಗಳನ್ನು ಕಡ್ಡಾಯವಾಗಿ ಅನುಸರಿಸಿದಾಗ ಮಧುಮೇಹದ ಜೊತೆ ಎಲ್ಲರಂತೆ ಸುಕಮಯ ಜೀವನವನ್ನು ನಡೆಸಬಹುದು.

ಪ್ರತಿಯೊಬ್ಬ ಮಧುಮೇಹಿಯು ಈ ಕೆಳಕಂಡ ಧ್ಯೇಯ ವಾಕ್ಯಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.

  1. ಮರ್ಯಾದಿ ಕೊಟ್ಟು ಮರ್ಯಾದಿ ತೆಗೆದುಕೋ  ( ನಾವು ಮಧುಮೇಹವನ್ನು ಚೆನ್ನಾಗಿ ನಿಯಂತ್ರಿಸಿದರೆ ಅದು ಸಹ ಯಾವ ತೊಂದರೆಯನ್ನು
  2. ಮಧುಮೇಹ ಮೌನ ಕೊಲೆಗಾರ ( ಮಧುಮೇಹ ತಕ್ಷಣ ಯಾವ ತೊಂದರೆಯನ್ನು ಕೊಡದೆ ಇರುವುದರಿಂದ ಹೆಚ್ಚಿನ ಮಧುಮೇಹಿಗಳು ನಾನು ಚೆನ್ನಾಗಿದ್ದೇನೆ ಎಂದು ಉದಾಸೀನತೆಯಿಂದ ತೊಂದರೆ ಮಾಡಿಕೊಳುತ್ಹಾರೆ)
  3. ಮಧುಮೇಹ ಸೌಮ್ಯ ಆದರೆ ಉದಾಸೀನ ಮಾಡಿದರೆ ಕ್ರೌರ್ಯ ರೂಪ.
  4. ಮಧುಮೇಹ ಶಿರದಿಂದ ಪಾದದವರೆಗೂ ದುಷ್ಪರಿನಾಮ ಬೀರುತ್ತದೆ ( ಮಧುಮೇಹ ನಮ್ಮ ಶರೀರದ ಎಲ್ಲಾ ಅಂಗಾಂಗ ಗಳಿಗೂ ದುಷ್ಪರಿಣಾಮ ಬೀರುತ್ತದೆ. ಉದಾ :-ನರ,ರಕ್ತನಾಳ,ಹೃದಯ,ಮೆದುಳು )
  5. ಮಧುಮೇಹ ಮಗುವಿನಿಂದ ಹಿಡಿದು, ಇಳಿ ವಯಸ್ಸಿನ ಯಾರಿಗೆ ಬೇಕಾದರೂ ಹಾಗು ಯಾವಾಗ ಬೇಕಾದರೂ ಬರಬಹುದು.
  6. ಮಧುಮೇಹವನ್ನು ನಾವು ಬಿಟ್ಟರು ಅದು ನಮ್ಮನು ಬಿಡಲಾರದು.
  7. ಮಧುಮೇಹ ನಮ್ಮ ಜೀವನದ ಸಂಗಾತಿ. ನಮ್ಮ ಕೊನೆಯ ಉಸಿರು ಇರುವ ತನಕ ಯಾರು ಬಿಟ್ಟರು ಅದು ಮಾತ್ರ ನಮ್ಮ ಜೊತೆಯಲ್ಲೇ ಇರುತ್ತದೆ. ಅದರ ಜೊತೆ ಬದುಕುವುದನ್ನು ಕಲಿಯಿರಿ ಹಾಗು ಅದನ್ನು ಜೀವನದ ಸಂಗಾತಿ ಎಂದು ಒಪ್ಪಿಕೊಳ್ಳಿ.

ಲೇಖಕರು

ಲೇಖಕರ ಕೃತಿಗಳು

  1. ಮಧುಮೇಹ ತಡೆಯಿರಿ( ೧೬ ನೇ ಆವೃತ್ತಿ )
  2. ಸಕ್ಕರೆ ಕಾಯಿಲೆ ಮತ್ತು ಸುಕಮಯ ಜೀವನ
  3. ಸ್ಟಾಪ್ ಡಯಾಬಿಟಿಸ್( ಅಂಗ್ಲ )
  4. ಸಕ್ಕರೆ ಕಾಯಿಲೆಯವರ ನೂರೆಂಟು(೧೦೮ ) ಪ್ರಶ್ನೆಗಳು
  5. ಸಕ್ಕರೆ ಕಾಯಿಲೆ ಕೈಪಿಡಿ
  6. ಮಧುಮೇಹ ಮತ್ತು ಉಪಯುಕ್ತ ಸಲಹೆಗಳು
  7. ಮಧುಮೇಹ
  8. ಡಯಾಬಿಟಿಸ್ ಜೊತೆ ಸಹಬಾಳ್ವೆ( ಪ್ರಕಾಶಕರು : ಪುಸ್ತಕ ಪ್ರಾಧಿಕಾರ ಕರ್ನಾಟಕ ಸರ್ಕಾರ
  9. ನಾವು ಮತ್ತು ಸಕ್ಕರೆ ಕಾಯಿಲೆ
  10. ಮಧುಮೇಹಿಗಳ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು
  11. ಮಧುಮೇಹ ನಿಯಂತ್ರಣ ನಿಮ್ಮ ಕೈ ಯಲ್ಲಿ
  12. ವೀ ಅಂಡ್ ಡಯಾಬಿಟಿಸ್ ( ಅಂಗ್ಲ )
  13. ಮಧುಮೇಹಿ ಮತ್ತು ಸಮತೋಲನ ಆಹಾರ .

ಆಹಾರ ನಿಯಂತ್ರಣ ೨೦%.

ಮಧುಮೇಹಿಗಳಿಗೆ ವಿಶೇಷವಾದ ಆಹಾರ ಪದ್ದತಿ ಏನು ಇಲ್ಲ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡರೆ ಉತ್ತಮವಾಗಿ ಮಧುಮೇಹ ನಿಯಂತ್ರಿಸಬಹುದು. ಹೆಚ್ಚಿನ ಮಧುಮೇಹಿಗಳು ಮಧುಮೇಹ ಕಂಡ ತಕ್ಷಣ ಅಯ್ಯೋ ನಾನು ಇನ್ನು ಜೀವನದಲ್ಲಿ ಅನ್ನ ತಿನ್ನುವ ಹಾಗಿಲ್ಲ, ಹಣ್ಣು ತಿನ್ನುವ ಹಾಗಿಲ್ಲ, ಇದುತಿನ್ನುವಹಾಗಿಲ್ಲ ಅದುತಿನ್ನುವ ಹಾಗಿಲ್ಲ ಎಂದು ತಮಗೆ ತಾವೇ ಕಲ್ಪಿಸಿಕೊಳ್ಳುತಾರೆ.ಕೆಲವೊಮ್ಮೆ ವೈಧ್ಯರು  ಸಹ ಸರಿಯಾದ ಮಾಹಿತಿ ನೀಡದೆ ರೋಗಿಗಳು ಕಿನ್ನತ್ಹೆಗೆ ಹೋಗಿಬಿಡುತ್ತಾರೆ. ಆದುದ್ದರಿಂದ ರೋಗಿಗಳು ವೈಧ್ಯರಿಂದ ಸರಿಯಾದ ಮಾಹಿತಿಯನ್ನು ಪಡೆಯಬೇಕು.

ಪ್ರಪಂಚದಲ್ಲೇ ಭಾರತದ ಆಹಾರವನ್ನು ಅತ್ತ್ಯುತ್ತಮ ಎಂದು ಪರಿಗಣಿಸಲಾಗಿದೆ.ವಿಶೇಷವಾಗಿ ನಾವು ಸೇವಿಸುವ ಆಹಾರಧಲ್ಲಿ ಹೆಚ್ಚು ಹೊಟ್ಟಿನ ಅಂಶ, ನಾರಿನ ಅಂಶ ಹಾಗು ನಮ್ಮ ಶರೀರಕ್ಕೆ ಎಷ್ಟು  ಕ್ಯಾಲೋರಿಎಸ್ ಬೇಕೆಂಬುದು ನಿರ್ದರಿಸಿದಾಗ ಮಧುಮೇಹ ಉತ್ತಮವಾಗಿ ನಿಯಂತ್ರಣಕ್ಕೆ ಬರುತ್ತದೆ.ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ, ಪ್ರೋಟೀನ್, ಕೊಬ್ಬಿನ ಅಂಶ, ವಿಟಮಿನ್ಸ್ ( ಕನಿಜ ಲವಣಗಳು ), ನೀರು ಮತ್ತು ನಾರಿನ ಅಂಶಗಳು ಬಹಳ ಪ್ರಮುಕವಾದುದು.

ಆಹಾರ ಮತ್ತು ಆರೋಗ್ಯದಲ್ಲಿ ಪ್ರಮುಕವಾಗಿ ಕೆಳಕಂಡ ಅಂಶಗಳನ್ನು  ಗಮನಿಸಬೇಕು

  1. ಯಾವ ಆಹಾರ ಸೇವಿಸಬೇಕು?
  2. ಎಷ್ಟು ಆಹಾರ ಸೇವಿಸಬೇಕು ?
  3. ಯಾವ ಸಮಯದಲ್ಲಿ ಸೇವಿಸಬೇಕು ?
  4. ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಸಮಸ್ಯೆ ಇರುವುದಿಲ್ಲ ?

ಇಷ್ಟು ಅಂಶಗಳನ್ನ್ನು ಸಕ್ಕರೆ ಕಾಯಿಲೆ ಯವರು ಅವರ ದಿನನಿತ್ಯದ ಆಹಾರ ಕ್ರಮಗಳಲ್ಲಿ ಅಳವಡಿಸಿಕೊಂಡರೆ ಸಕ್ಕರೆ ಕಾಯಿಲೆ ಎಚ್ಚು ನಿಯಂತ್ರಣಕ್ಕೆ   ಬರುತ್ತದೆ. ಹಾಗು ಔಷದಿ ದುಷ್ಪರಿಣಾಮ ಗಳನ್ನು ತಡೆಗಟ್ಟುತದೆ.

ಸಾಮಾನ್ಯವಾಗಿ ಈ ಕೆಳಕಂಡ ಆಹಾರಗಳನ್ನು ವರ್ಜಿಸಿದರೆ  ಉತ್ತಮ

  1. ಸಕ್ಕರೆ,ಗ್ಲುಕೋಸ್,ಜಾಮ್, ಜೀನುತುಪ್ಪ .
  2. ಚಾಕಲೇಟ್, ಸಿಹಿಪದಾರ್ಥಗಳು, ಕಲ್ಲುಸಕ್ಕರೆ
  3. ಬಾರತೀಯ ಸಿಹಿ ತಿಂಡಿ ಗಳಾದ ಜಿಲೇಬಿ ,ಮೈಸೂರು ಪಾಕ್ ,ಜಾಮೂನ್ ,ಇತ್ಯಾದಿ
  4. ಬೇಕರಿ ಪದಾರ್ಥಗಳಲ್ಲಿ ಸಕ್ಕರೆ ಅಂಶವಿರುವ ಕೇಕ್,ಬಿಸ್ಕೆಟ್,ಸಿಹಿ ಬ್ರೆಡ್
  5. ಪಾನಿಯಗಳಾದ ಹಣ್ಣಿನ ರಸ , ತಮ್ಪುಪಾನಿಯಗಳಾದ ಪೆಪ್ಸಿ,ಮಿರಾಂಡಾ, ಕೋಕಾಕೋಲ, ಐಸ್ಕ್ರೀಂ ,ಮಿಲ್ಕ್ ಶೇಕ್ ಇತ್ಯಾದಿ.

ಆಹಾರ ಕ್ರಮ

ಬೆಳಿಗ್ಗೆ : ೮ ರಿಂದ ೯ ಗಂಟೆಯೊಳಗೆ

  1. ೨-೩ ಚಪಾತಿ ( ಸಾದ್ಯ ವಾದಸ್ಟೂ ಎಣ್ಣೆ ಕಡಿಮೆ ಇರಲಿ)
  2. .ಬನ್ಸಿರವೆ ಉಪ್ಪಿಟು ೨ ಕಪ್ಪು ಅಥವಾ ಕುಸಲಕ್ಕಿ  ಇಡ್ಲಿ ೨-3
  3. ೨-೩ ರಾಗಿ ರೊಟ್ಟಿ
  4. ೨-೩ ಜೋಳದ ರೊಟ್ಟಿ
  5. ೨-೩ ಬನ್ಸಿರವೆ ರೊಟ್ಟಿ.
  6. ೨ ರಾಗಿ ಮುದ್ದೆ ( ಚಿಕ್ಕದು)

ಇದರಲ್ಲಿ ಯಾವುದಾದರು ಒಂದು ಹಾಗು ಹೆಚ್ಚು ತರಕಾರಿ  ಪಲ್ಯ ಅಥವಾ ಸೊಪ್ಪು ಬೆನ್ಥಕ್ಕಿಯ ಇಡ್ಲಿ ಗಿಂತ ಕುಸುಬಲಕ್ಕಿ ಇಡ್ಲಿ ಉತ್ತಮ.

೧೧.೩೦ ಗಂಟೆಗೆ

೧ ಕಪ್ ಮಜ್ಜಿಗೆ ಅಥವಾ ಹಾಲು ,ಟೀ, ಕಾಫೀ

೨-೩ ಮಾರಿ ಬಿಸ್ಕೆಟ್

೧ ತುಂಡು ಗೋದಿ ಬ್ರೆಡ್

ಇನ್ಸುಲಿನ್ ತೆಗೆದುಕೊಳ್ಳುವವರು ವೈಧ್ಯರ ಸಲಹೆ ಮೇರೆಗೆ ಆಹಾರವನ್ನು ನಿರ್ದರಿಸಬೇಕು

೧ ರಿಂದ ೨ ಗಂಟೆಗೆ

  1. ಮುದ್ದೆ ೧ +೧-೨ ಕಪ್ ಅನ್ನ
  2. ಚಪಾತಿ ೩ + ೧ ಕಪ್ ಅನ್ನ
  3. ಜೋಳದ ರೊಟ್ಟಿ + ೧ ಕಪ್ ಅನ್ನ , ಕುಸುಬಲಕ್ಕಿ ಉತ್ತಮ
  4. ೨ ಕಪ್ ಕುಸುಬಲಕ್ಕಿ ಅನ್ನ

ಆಯ್ಕೆ ನಿಮ್ಮದು

೧ ಕಪ್ ಸಾಂಬಾರ್

೧ ಕಪ್ ರಸಂ

೧ ಕಪ್ ಮಜ್ಜಿಗೆ ಅಥವಾ ಮೊಸರು, ಎಚ್ಚು ತರಕಾರಿಗಳು ಹಾಗು ಸಾಲಡ್.

೫ ರಿಂದ ೫.30

೧ ಕಪ್, ಹಾಲು ಟೀ ,ಕಾಫಿ ( ಸಕ್ಕರೆ ಇಲ್ಲದ್ಧು )

೨-೩ ಮಾರಿ ಬಿಸ್ಕೆಟ್

ಅಥವಾ ೧ ತುಂಡು ಬ್ರೆಡ್

ಅಥವಾ ೧ ರವೆ ಇಡ್ಲಿ ( ಬೇಕೆನಿಸಿದರೆ)

೮ ರಿಂದ ೯ ಗಂಟೆಗೆ

  1. ೨-೩ ಚಪಾತಿ
  2. ಮುದ್ದೆ ೧+೧/೨-೧ ಕಪ್ ಕುಸುಬಲಕ್ಕಿ
  3. ಜೋಳದ ರೊಟ್ಟಿ ೨-3
  4. ರಾಗಿ ಹಂಬಲಿ ೨-೩ ಕಪ್
  5. ರಾಗಿ ರೊಟ್ಟಿ
  6. ಗೋದಿ ಅನ್ನ ೨ ಕಪ್

ಯಾವುದಾದರೂ ಒಂದು ನಿಮ್ಮ ಶರೀರದ ಹಾಗು ನಿಮ್ಮ ಮನೆಯ ವಾತಾವರಣಕ್ಕೆ ಅನುಗುಣವಾಗಿ ,ಪ್ರತಿ ಬಾರಿಯೂ ಎಚ್ಚು ತರಕಾರಿಗಳು ಹಾಗು ಎಲ್ಲ ರೀತಿಯ ಸೊಪ್ಪನ್ನು ಉಪಯೋಗಿಸುವುದು ಉತ್ತಮ.ರಾತ್ರಿಯ ವೇಳೆಯಲ್ಲಿ ಯಾವುದಾದರೂ ಸೊಪ್ಪನ್ನು ಉಪಯೋಗಿಸುವುದರಿಂದ ಮಧುಮೇಹಿಗಳಿಗೆ ಅನೇಕ ಅನುಕೂಲಗಳಿವೆ. ಹೊಟ್ಟೆ ತುಂಬಿದ ಅನುಭವ ವಾಗುತ್ತದೆ . ಪಚನ ಕ್ರಿಯೆ ಸುಲಬವಾಗುತ್ತದೆ.ಮಲವಿಸರ್ಜನೆ ಸುಲಬವಾದಾಗ ಮೊಳೆ ರೋಗ ಬರುವ ಸಂಭವ ಬಹಳ ಕಡಿಮೆ.ನಾರಿನಂಶ ಎಚ್ಚು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೂ ಹಾಗು ಆರೋಗ್ಯಕ್ಕೂ ಬಹಳ ಉತ್ತಮ.

೧ ಕಪ್ ಹಾಲು ( ೧೦೦ ಮಿಲಿ ಲೀಟರ್ ಸಕ್ಕರೆ ಇಲ್ಲದೆ  ಬೇಕೆನಿಸಿದರೆ )

ಸೂಚನೆ : ೨ ಅಥವಾ ೩ ಚಮಚ ಕೊಬ್ಬಿಲ್ಲದ ಎಣ್ಣೆ ಉಪಯೋಗಿಸುವುದು, ನಾರಿರುವ ಹಸಿ ತರಕಾರಿ ಉಪಯೋಗಿಸಿದಷ್ಟು ಆರೋಗ್ಯಕ್ಕೆ ಒಳ್ಳೆಯದು.ವಾರಕ್ಕೆ ೨ ಅಥವಾ ೩ ಬಾರಿ ( ೭೫ ಗ್ರಾಂ ) ೪ ತುಂಡು ಮಾಂಸ ಉಪಯೋಗಿಸಬಹುದು.ಕೆಂಪು ಮಾಂಸಗಳಾದ   ಕುರಿ, ಆಡು,ದನ  ಮತ್ತು ಹಂಧಿ ಉಪಯೋಗಿಸಬಾರದು.ಕೋಳಿ ಮಾಂಸ ಅಥವಾ ಮೀನು ಉತ್ತಮ ( ಬಿಳಿ ಮಾಂಸ ) ಈ ಸಮತೋಲನ ಆಹಾರ ಹಳ್ಳಿ ಮತ್ತು ಪಟ್ಟಣಗಳಿಗೆ ವ್ಯತ್ಹಾಸ ವಾಗುತ್ತದೆ. ಸುಲಬವಾಗಿ ಸಿಗುವ ಆಹಾರ ಮತ್ತು ಪ್ರಮಾಣವನ್ನು ವೈದ್ಯರಿಂದ ಕೇಳಿ ತಿಳಿದು ಕೊಳ್ಳುವುದು . ನಿಮ್ಮ ತೂಕಕ್ಕೆ ತಕ್ಕಂತೆ ಹಾಗು ಕ್ಯಾಲೋರಿಎಸ್ ಅಂಶವನ್ನು ಗಮನಿಸಿ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು.

ಆಹಾರಕ್ರಮ

ಸಾಮಾನ್ಯ ಸೂಚನೆಗಳು

ವಸ್ತುಗಳು

 

ಉಪಯೋಗಿಸಬಹುದು

ಉಪಯೋಗಿಸಬಾರದು
ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಮತ್ತು ಕೊಬ್ಬು ಎಲ್ಲಾ ಧಾನ್ಯಗಳು ,ಎಲ್ಲಾ ಬೇಳೆಕಾಳುಗಳು , ನೆಲಗಡಲೆ ಮತ್ತು ಸಪೋಲ ಎಣ್ಣೆ ಅಥವಾ ಸೂರ್ಯಕಾಂತಿ ಅಥವಾ ಆಲಿವ್ ಆಯಿಲ್ ಇತ್ಯಾದಿ ದಾಲ್ದ, ತುಪ್ಪ , ವನಸ್ಪತಿ ( ತೆಂಗಿನ ಎಣ್ಣೆ )
ಹಾಲು ಮತ್ತು ಹಾಲಿನಿಂದ ತಯಾರಿಸಿದ ಉತ್ಪನ್ನಗಳು  ಸಕ್ಕರೆ ಮತ್ತು ಸಿಹಿ ವಸ್ತುಗಳು ಕೆನೆ ತೆಗೆದ ಹಾಲು ಮೊಸರು ಮಜ್ಜಿಗೆ ಇತ್ಯಾದಿ . ಗಿಣ್ಣು , ಕೆನೆ, ಘನಿಕರಿಸಿದ ಹಾಲು ಕೋವ , ಸಕ್ಕರೆ ಮತ್ತು ಸಿಹಿ ವಸ್ತುಗಳು
ಮಾಂಸಾಹಾರ ಕೊಬ್ಬು ತೆಗೆದ ಮಾಂಸ , ಕೂಲಿ ಮಾಂಸ ಮೀನು ಹಂದಿ ಮಾಂಸ , ಟಗರು ಮಾಂಸ, ದನದ ಮಾಂಸ , ಕೊಬ್ಬು ಇರುವ ಮಾಂಸ .
ಗೆಡ್ಡೆ ಗೆಣಸುಗಳು ಈರುಳ್ಳಿ . (ಕ್ಯಾರಟ್), ಮೂಲಂಗಿ ಎಲ್ಲಾ ತರಕಾರಿಗಳು ಬೀಟ್ರೂಟ್, ಸುವರ್ಣ ಗೆಡ್ಡೆ ,ಆಲೂ ಗೆಡ್ಡೆ ,ಮರ ಗೆಣೆಸು
ಸೊಪ್ಪು ತರಕಾರಿ ಎಲ್ಲಾ ಸೊಪ್ಪುಗಳು
ಹಣ್ಣು ಹಂಪಲುಗಳು ಕಿತ್ತಳೆ ಹಣ್ಣು, ಮೂಸಂಬಿ ,ಪರಂಗಿಹಣ್ಣು ಒಂದು ತುಂಡು , ಕಲ್ಲಂಗಡಿ ಒಂದು ತುಂಡು,ದಾಳಿಂಬೆ , ಸೇಬು , ಪೂಜೆ ಬಾಳೆಹಣ್ಣು ಸೀತಾ ಫಲ,ಮಾವಿನ  ಹಣ್ಣು,ಹಲಸಿನ ಹಣ್ಣು,ಸಪೋಟ ಹಣ್ಣು, ಅನಾನಾಸ್ ಮುಂತಾದ ಇತರೆ ಸಿಹಿ ಅಂಶದ ಹಣ್ಣುಗಳು

ದ್ರಾಕ್ಷಿ ,

ಮೂಸಂಬಿ ಕಿತ್ತಳೆ

 

೮-೯

೧ ಚಿಕ್ಕದು ೧

, ಯಾವುದಾದರೂ ಒಂದು ಹಣ್ಣು ದಿನ ನಿತ್ಯ ಉಪಯೋಗಿಸುವುದು.

ಇನ್ನಿತರೆ ವಿಷಯಗಳು ಮಧ್ಯಸಾರ , ಸಿಹಿ ಪಾನೀಯಗಳು , ಹಣ್ಣಿನ ರಸ, ಕೇಕ್, ಬಿಸ್ಕೆಟ್ , ಪುಡ್ಡಿಂಗ್ , ಹೊರ್ಲಿಕ್ಕ್ಸ್, ಬೌರ್ನ್ವಿಟಾ , ಬೂಸ್ಟ್,ದ್ರಾಕ್ಷಿ ಗೋಡಂಬಿ , ಇವುಗಳನ್ನು ಸಾಧ್ಯವಾದಷ್ಟು ಉಪಯೋಗಿಸಬಾರದು.

 

 

 


 

 

 

 

೨.ವ್ಯಾಯಾಮ ಅಥವಾ ನಡಿಗೆ- ----------ದಿನ ನಿತ್ಯ ಕ್ರಮಬದ್ದವಾಗಿ ಒಂದರಿಂದ ಒಂದೂವರೆ ಗಂಟೆ ನಡಿಗೆ ಅಥವಾ ವ್ಯಾಯಾಮ ದಿಂದ ೨೦%  ಮದುಮೆಹವನ್ನು ಉತ್ತಮವಾಗಿ ನಿಯಂತ್ರಿಸಬಹುದು. ನಿಮ್ಮ ಶಕ್ತಿಗೆ ಅನುಸಾರವಾಗಿ ಯಾವುದನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು .ದಿನಕ್ಕೆ ೨ ಬಾರಿ ಸಹ ಮಾಡಬಹುದು.

೩. ಮಾನಸಿಕ ಒತ್ತಡ ----------ಇತ್ತೀಚಿನ ಆದುನಿಕ ಜೀವನದಲ್ಲಿ ಒತ್ತಡದ ಕಾಯಿಲೆಗಳಾದ ಮಧುಮೇಹ, ರಕ್ಥದೊತ್ಥದ ಇವುಗಳುಗೆ ಪ್ರಮುಕ ಕಾರಣವೇ ಮಾನಸಿಕ ಒತ್ತಡ. ಮನುಷ್ಯ ಹೆಚ್ಚು  ಹೆಚ್ಚು  ಆಸೆಗಳಿಗೆ ಅಂಬಲಿಸಿದಾಗ ಮಾನಸಿಕ ಒತ್ತಡವು ಹೆಚ್ಚು ಕಂಡು ಬರುತ್ತದೆ.ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬ ಗಾದೆಯೆಂತೆ ಮನುಷ್ಯ ತನ್ನ ಇತಿ ಮಿತಿಯಲ್ಲಿ ಜೀವನವನ್ನು ಅಳವಡಿಸಿಕೊಂಡಾಗ ದಿನನಿತ್ಯ ಬಧುಕನ್ನು ಉತ್ತಮಗೊಳಿಸಬಹುದು.ಹೆಚ್ಚು  ನಾಗರಿಕತೆಗೆ ಜೋತು ಬಿದ್ದಾಗ ಮಾನಸಿಕ ಒತ್ತಡವು ಎಚ್ಚಾಗುತ್ತದೆ. ಉದಾ : ಎಲ್ಲ ಶ್ರಿಮಂಥರಂತೆ ನಾನು ಮನೆಕಟ್ಟಬೇಕು,ಕಾರು ತೆಗೆದುಕೊಳ್ಳಬೇಕು, ಎಲ್ಲ ಸೌಲಭ್ಯಗಳು ಮನೆಯಲ್ಲಿರಬೇಕು ಎಂದು ದಿನನಿತ್ಯ ಯೋಚಿಸಿದಾಗ ಸ್ವಲ್ಪ ಮಟ್ಟಿಗೆ ಅಡ್ಡ ದಾರಿ ಹಿಡಿಯಬೇಕಾಗುತ್ತದೆ.ಇಂತಹ ಸಂದರ್ಬಗಳಲ್ಲಿ ದಿನನಿತ್ಯ ಮನುಷ್ಯ ಆತಂಕ ಮತ್ತು ತಳಮಳಗಲ್ಲಿ ಇರುತ್ತಾನೆ.ಇವರಿಗೆ ಮದುಮೇಹ ಮತ್ತು ರಕ್ತದ ಒತ್ತಡ ನಿಯಂತ್ರಣಕ್ಕೆ ಬರುವುದು ಕಷ್ಟವಾಗಬಹುದು.ನಾವು ದಿನನಿತ್ಯ ಜೀವನ ದಲ್ಲ್ಲಿಹೆಚ್ಚು ರಾಜಕಾರಣಿಗಳು ಹಾಗು ಅದಿಕಾರಿಗಳಲ್ಲಿ ಈ  ತೊಂದರೆ ಗಳನ್ನು ಕಾಣಬಹುದು.ಇದಕ್ಕೆ ಪ್ರಮುಕ ಕಾರಣ ಏನೆಂದು ನಮಗೆಲ್ಲ ಗೊತ್ತಿರುವ ವಿಷಯವೇ.ಭಗವಂತ  ನನ್ನನ್ನು ಇಷ್ಟು ಚೆನ್ನಾಗಿ ಇಟ್ಟಿದಾನೆ ಎಂಬ ಆತ್ಮ ತೃಪ್ತಿ ಬಂದಾಗ ಹಾಗು ನಾನು ಒಂದು ತುತ್ತು ಅನ್ನತಿಂದಾಗ ಇದು ನನ್ನ ದುಡಿಮೆಯ ಪಲ ಎಂದು ಯಾರು ಬಾವಿಸುತ್ಥರೋ ಅವರಿಗೆ ಧಿನ ನಿತ್ಯ ಸಂತೋಷ ದೊರೆಯುತ್ತದೆ ಹಾಗು ಉತ್ತಮವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಔಷದಿಗಳ ಸೇವನೆಯಿಂದಾಗಲಿ, ಬಾಬಗಳ ಮೊರೆ ಹೋಗುವುದಿಂದಾಗಲಿ, ಮಾನಸಿಕ ನೆಮ್ಮದಿಯನ್ನು ತಂದು ಕೊಳ್ಳಲು ಸಾದ್ಯವಿಲ್ಲ.ಆದುದರಿಂದ ಮನುಷ್ಯ ಇರುವುದರಲ್ಲಿ ಸಂತ್ರುಪ್ತಿ ಕಂಡು ದಿನನಿತ್ಯ ಯೋಗ, ಪ್ರಾಣಾಯಾಮ,ಧ್ಯಾನ ಹಾಗು ಮನೆಯವರ ಜೊತೆ ಎಚ್ಚು ಸಮಯವನ್ನು ಕಳೆದು ನಗುನಗುತ ಜೀವನವನ್ನು ಸಾಗಿಸಿದಾಗ ಇವು ನಮ್ಮ ಹತ್ತಿರ ಸುಳಿಯುವುದಿಲ್ಲ.

೪.ಔಷದಿಗಳು-----------ಔಷದಿಗಳಲ್ಲಿ ಎರಡು ಬಾಗವಿದೆ.೧.ಮಾತ್ರೆಗಳು ೨.ಇನ್ಸುಲಿನ್ ಚುಚ್ಚು ಮದ್ಧು.

ಔಷದಿಗಳಲ್ಲಿ ನಾನ ರೀತಿಯ ಮಾತ್ರೆಗಳು ಇದೆ.೧.ಸುಲಫನ್ಯಲ್ ಯೂರಿಯ ೨.ಬೈ ಗೋನೆಡಸ್ ೩ ಗ್ಲ್ಯಿಟೋಜೋನ್ಸ್. ಕೆಲವು ಮಾತ್ರೆಗಳು ಇನ್ಸುಲಿನ್ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಕೆಲವೊಂದು ಮಾತ್ರೆಗಳು ಉತ್ಪತ್ತಿ ಯಾದ ಇನ್ಸುಲಿನ್ ಅನ್ನು ಜೀವಕೋಶಗಳಿಗೆ ರವಾನಿಸುತ್ತದೆ.ಕೆಲವೊಂದು ಮಾತ್ರೆಗಳು ಇನ್ಸುಲಿನ್ ತಡೆಯನ್ನು ನೀಗಿಸಿ ಸುಲಭವಾಗಿ ಇನ್ಸುಲಿನ್ ಪ್ರವೇಶಕ್ಕೆ ಸಹಾಯ ಮಾಡುತ್ತದೆ. ಮಾತ್ರೆಗಳನ್ನು ವಿಂಗಡಿಸಿ ಯಾವರೀತಿ ಯಾರಿಗೆ ಕೊಡಬೇಕು ಎಂದು ನಿರ್ದರಿಸುವುದು ವೈಧ್ಯರ ಅರ್ಹತೆ ಮತ್ತು ಅನುಭವದಮೇಲೆ ನಿಲ್ಲುತ್ತದೆ. ಇಲ್ಲಿ ರೋಗಿಗಳ ಪಾತ್ರ ಏನು ಇಲ್ಲ .ವೈಧ್ಯ್ವರು ಹೇಳಿದ ರೀತಿ ಕೇಳುವುದು ಮಧುಮೆಹಿಯ ಕರ್ತ್ಯವ್ಯ.ಮಾತ್ರೆಗಳ ಕೆಲಸ ನಿಮ್ಮ ಶರೀರದ ಮೇದೋಜೀರಕ ಗ್ರಂತಿಯಲ್ಲಿರುವ ಬೀಟ ಜೀವಕೋಶಗಳು ಇನ್ಸುಲಿನ್ ಉತ್ಹ್ಪತ್ತಿಮಾಡುವ ಶಕ್ತಿ ಇದ್ದರೆ ಮಾತ್ರ ಮಾತ್ರೆಗಳು ಕೆಲಸ ಮಾಡುತ್ತದೆ.ಉತ್ಪತ್ತಿ ಯಾಗುವ ಶಕ್ತಿ ಇಲ್ಲದಿದ್ದರೆ ಮಾತ್ರೆ ಯಿಂದ ಹೆಚ್ಚು  ಪ್ರಯೋಜನ ವಾಗುವುದಿಲ್ಲ. ಇದು ವರ್ಷಕ್ಕೆ ೫ ರಿಂದ ೧೦% ಶಕ್ತಿ ಕುಂದುತ್ತ ಹೋಗಬಹುದು. ಇದನ್ನು ನಾವು ದ್ವಿತೀಯ ಹಂತದ ವಿಪಲಥೆ ಎಂದು ಕರೆಯುತ್ತೇವೆ.ಇಂಥಹ ರೋಗಿಗಳಿಗೆ ಮಾತ್ರೆಗಳ ಜೊತೆ ಸ್ವಲ್ಪ ಭಾಗ ಇನ್ಸುಲಿನ್ ಕೊಡಬೇಕಾಗುತ್ತದೆ.ಇದು ಸಹ ವೈಧ್ಯರ ನಿರ್ಧಾರ. ಕೆಲವೊಮ್ಮೆ ಹೆಚ್ಚು  ಉತ್ಸಾಹ ದಿಂದ ಕೆಲವು ವೈಧ್ಯರು ಮಾತ್ರೆಗಳನ್ನು ಸಂಪೂರ್ಣವಾಗಿ ಪ್ರಯೋಗಿಸಿ ನೋಡುತ್ತಾರೆ.ಸಾಮಾನ್ಯ ವಾಗಿ ೫೦% ವಿಪಲಥೆ ಕಂಡಾಗ ಹೆಚ್ಚು ಹೆಚ್ಚು  ಮಾತ್ರೆ ಗಳನ್ನು ಕೊಡುವುದರಿಂದ ಬೀಟ ಜೀವಕೋಶಗಳಿಗೆ ಹಾನಿಯೇ ಎಚ್ಕಾಗುತ್ತದೆ.ಅದ್ದುದರಿಂದ ಸರಿಯಾದ ವೈಧ್ಯರನ್ನು ಕಾಣುವುದು ವೊಳ್ಳೆಯದು.

೫.ಇನ್ಸುಲಿನ್ --------ಮಾತ್ರೆಗಳಲ್ಲಿ ಎಚ್ಚು ವಿಪಲಥೆ ಕಂಡಾಗ ಇನ್ಸುಲಿನ್ ಚುಚ್ಚು ಮದ್ಹು ನೀಡಬೇಕಾಗುತ್ತದೆ.ಇನ್ಸುಲಿನ್ ಗಳಲ್ಲಿ  ನಾನ ವಿದ ವಿದೆ .ಇದು ನಿರ್ದರಿಸುವುದು ವೈಧ್ಯರ ತೀರ್ಮಾನ.ಇತ್ತಿಚಿನ ಇನ್ಸುಲಿನ್ ಪೆನ್ಗಳು ರೋಗಿಗಳಿಗೆ ವರದಾನ ವಾಗಿದೆ. ನೋವು ಕಂಡು ಬರುವುದಿಲ್ಲ ಮತ್ತು ಅವರೇ ದಿನನಿತ್ಯ ಇನ್ಸುಲಿನ್ ತೆಗೆದುಕೊಳ್ಳಬಹುದು.ವಿಶೇಷ ವಾಗಿ ಇನ್ಸುಲಿನ್ ತೆಗೆದುಕೊಳ್ಳುವವರು ಇಳಿ ರಕ್ತ ಸಕ್ಕರೆಕಾಯಿಲೆ ಬಗ್ಗೆ ಎಚ್ಚೆರಿಕೆ ಇಂದಿರಿವುದು ಬಹಳ ಅಗತ್ಯವಾಗಿದೆ( ಲೋ ಬ್ಲಡ್ ಶುಗರ್ ). ನಿಮ್ಮ ವೈಧ್ಯರ ಜೊತೆ ಇದರ ಬಗ್ಗೆ ಚರ್ಚಿಸಿ.ಹೆಚ್ಚಿನ ಮಾಹಿತಿಗೆ ಪುಸ್ತಕವನ್ನು ಓದಿ.

 

 

ಡಾ . ಕೆ .ರಾಮಚಂದ್ರ

ಡಾಕ್ಟರೇಟ್ ಇನ್ ಡಯಾಬಿಟಿಸ್ ಸಕ್ಕರೆ ಕಾಯಿಲೆ ತಜ್ಞ್ಯರು

ಶ್ರೀನಿವಾಸ ಡಯಾಬಿಟಿಕ್ ಸೆಂಟರ್ ಜನತಾ ಬಜಾರ್ ಬಿಲ್ಡಿಂಗ್

ವಿ ವಿ ರಸ್ತೆ ಮಂಡ್ಯ ೫೭೧ ೪೦೧ ಧೂ:೦೮೨೩೨ ೨೩೧ ೬೭೮

ಮೂಲ : http://www.cdfkarnataka.com

ಕೊನೆಯ ಮಾರ್ಪಾಟು : 11/11/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate