অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಡೆಯುವ ಚಿಕಿತ್ಸಾ ಕ್ರಮ

ತಡೆಯುವ ಚಿಕಿತ್ಸಾ ಕ್ರಮ

ಔಷಧಿಯಿಂದ ಮಲೇರಿಯ ತಡೆಯುವ ಚಿಕಿತ್ಸಾ ಕ್ರಮ (ಕೀಮೋ ಪ್ರೊಫೈಲ್ಯಾಕ್ಸಿಸ್) :

ನಮ್ಮ ದೇಶದಲ್ಲಿ ಈ ಚಿಕಿತ್ಸಾ ಕ್ರಮವನ್ನು ಕೇವಲ ಗರ್ಭೀಣಿಯರು, ಹಸುಕೂಸುಗಳು ಹಾಗೂ ಮಲೇರಿಯ ರಹಿತ ರಾಷ್ಟ್ರಗಳಿಂದ ಬಂದ ವಿದೇಶಿಯರಿಗೆ ಮಾತ್ರ ನೀಡಲಾಗುವುದು.

ಈ ಚಿಕಿತ್ಸೆಗೆ ಅನುಗುಣವಾಗಿ ಗರ್ಭಿಣಿಯರಿಗೆ ತೀವ್ರ ಚಿಕಿತ್ಸೆ ನೀಡಲಾಗದಿರುವುದರಿಂದ, ಅವರಲ್ಲಿ ಮಲೇರಿಯ ರೋಗ ಕಂಡು ಬಂದಾಗ 600 ಮಿ.ಗ್ರಾಂ. ಕ್ಲೋರೋಕ್ವಿನ್ ನೀಡಿ ಮತ್ತೆ ಹೆರಿಗೆಯಾಗಿ 6 ವಾರಗಳು ಕಳೆಯುವವರೆಗೂ ಪ್ರತಿ ವಾರ ನಿಗಧಿತ ದಿನ 300 ಮಿ.ಗ್ರಾಂ. ಕ್ಲೋರೋಕ್ವಿನ್ ನೀಡಲಾಗುವುದು. ನಂತರ ತೀವ್ರ ಚಿಕಿತ್ಸೆ ನೀಡಲಾಗುವುದು.

ಅದೇ ರೀತಿ ಒಂದು ವರ್ಷಕ್ಕಿಂತ ಕಡಿಮೆಯ ಹಸುಕೂಸುಗಳಿಗೆ ವರ್ಷ ಮುಗಿದ ನಂತರ ತೀವ್ರ ಚಿಕಿತ್ಸೆ ಮಾಡಲಾಗುವುದು. ಅಲ್ಲಿಯವರೆಗೆ ವಾರಕ್ಕೊಮ್ಮೆ 75 ಮಿ.ಗ್ರಾಂ ಕ್ಲೋರೋಕ್ವಿನ್ ಮಾತ್ರೆಗಳನ್ನು ನೀಡಲಾಗುವುದು.

ಮಲೇರಿಯರಹಿತ ರಾಷ್ಟ್ರಗಳಿಂದ ಬಂದ ವಿದೇಶಿಯರಿಗೆ ಮಲೇರಿಯ ಪ್ರದೇಶಕ್ಕೆ ಹೋಗುವ ಮೂರು ವಾರಗಳ ಮುನ್ನ ವೈವಾಕ್ಸ್ ತೀವ್ರ ಚಿಕಿತ್ಸೆ ನೀಡಿ ನಂತರ ವಾರಕ್ಕೊಮ್ಮೆ ನಿಗದಿತ ದಿನ 300 ಮಿ.ಗ್ರಾಂ. ಕ್ಲೋರೋಕ್ವಿನ್ ಮಾತ್ರೆ ನೀಡಬೇಕು. ನಂತರ ತಮ್ಮ ದೇಶಕ್ಕೆ ಮರಳಿ ಸೇರಿದ ನಂತರ ಮತ್ತೆ ವೈವ್ಯಾಕ್ಸ್ ತೀವ್ರ ಚಿಕತ್ಸೆ ನೀಡತಕ್ಕದ್ದು.

ಅನುಸರಣೆ ರಕ್ತ ಲೇಪನ (ಫಾಲೋಆಪ್ ಬ್ಲಡ್ ಸ್ಮಿಯರ್) :

ಬಹಳಷ್ಟು ಪ್ರದೇಶಗಳಲ್ಲಿ ಫ್ಯಾಲ್ಸಿಪ್ಯಾರಂ ಜೀವಾಣುಗಳ ಮೇಲೆ ಕ್ಲೋರೋಕ್ವಿನ್ ಔಷಧಿ ರೋಗನಿರೋಧಕ ಶಕ್ತಿ ಕಳೆದುಕೊಂಡಿರುವುದರಿಂದ, ಎಲ್ಲಾ ಫ್ಯಾಲ್ಸಿಪ್ಯಾರಂ ಪ್ರಕರಣಗಳಿಂದ ತೀವ್ರ ಚಿಕಿತ್ಸೆ ಪ್ರಾರಂಭಿಸಿದ ದಿನದಿಂದ, ಆರನೇ ದಿನಕ್ಕೆ ಮತ್ತೆ ಪರೀಕ್ಷೆ ಮಾಡಬೇಕು. ಈ ರಕ್ತ ಲೇಪನಕ್ಕೆ ಅನುಸರಣೆ ರಕ್ತ ಲೇಪನ ಎಂದು ಕರೆಯಲಾಗುವುದು. ಈ ರಕ್ತ ಲೇಪನಗಳನ್ನು ಎಲ್ಲಾ ಮಲೇರಿಯ ರೋಗಿಗಳಿಂದ ಪಡೆಯುವುದು ಉತ್ತಮ. ಫ್ಯಾಲ್ಸಿಪ್ಯಾರಂ ರೋಗಗಳಿಂದ ಈ ರಕ್ತ ಲೇಪನಗಳನ್ನು ತಪ್ಪದೆ ಪಡೆಯಬೇಕು. ಈ ರಕ್ತ ಲೇಪನಗಳಲ್ಲಿ ಮಲೇರಿಯ ಜೀವಾಣುಗಳು ಕಂಡು ಬಂದಲ್ಲಿ, ಅದರಲ್ಲೂ ಫ್ಯಾಲ್ಸಿಪ್ಯಾರಂ (ರಿಂಗ್ ಹಂತಗಳು) ಕಂಡು ಬಂದಲ್ಲಿ ಈ ರೋಗಿಗಳಿಗೆ ಸ್ವಲ್ಪ ಎರಡನೇ ಹಂತದ ಪೈರೀಮೀಥಮೀನ್ ಗುಳಿಗೆಗಳಿಂದ ತೀವ್ರ ಚಿಕಿತ್ಸೆ ನೀಡಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು.


ತೀವ್ರ ಮಲೇರಿಯ ರೋಗ ಲಕ್ಷಣಗಳ ಬಗ್ಗೆ ತಿಳಿಯುವುದು ಅತಿ ಮುಖ್ಯ ಸಾಮಾನ್ಯ ರೋಗ ಲಕ್ಷಣಗಳಾದ ಜ್ವರ, ಛಳಿ, ತಲೆ ನೋವು, ಮೈ ಕೈ ನೋವು, ವಾಂತಿಯ ಜೊತೆ ಆರೋಗ್ಯ ಕಾರ್ಯಕರ್ತರು ಕೆಲವೊಮ್ಮೆ ರೋಗಿಯ ತೀವ್ರ ಲಕ್ಷಣಗಳನ್ನು ಎದುರಿಸಬೇಕಾಗಬಹುದು. ಆ ಚಿನ್ಹೆಗಳು ಅರೋಗ್ಯ ಕಾರ್ಯಕರ್ತರ ಗಮನಕ್ಕೆ ಬಂದ ಒಡನೆ ಆ ರೋಗಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯರಿಂದ ಚಿಕಿತ್ಸೆ ಮಾಡಿಸುವುದು ಕಾರ್ಯಕರ್ತರ ಕರ್ತವ್ಯ.

 

ತೀವ್ರ ಮಲೇರಿಯ ರೋಗ ಲಕ್ಷಣಗಳು (ತಕ್ಷಣ ಆ ರೋಗಿಯನ್ನು ವೈದ್ಯರಲ್ಲಿಗೆ ಕರೆತರತಕ್ಕದ್ದು) :

•             ಚಿಕಿತ್ಸೆ ನೀಡಿದಾಗ್ಯೂ ರೋಗಿಯ ಸ್ಥಿತಿ ಕೈ ಮೀರಿದಾಗ.

•             ರೋಗಿಯ ಜ್ವರ ಜಾಸ್ತಿಯಾಗಿದ್ದು, ಪ್ರಜ್ಞೆ ತಪ್ಪಿದರೆ ಅಥವಾ ಪ್ರಜ್ಞೆಯಲ್ಲಿ ಬದಲಾವಣೆ ಕಂಡರೆ.

•             ರೋಗಿಗೆ ಬೇದಿ ಅಥವಾ ಅಮಶಂಕೆಯ ಚಿನ್ಹೆ ಕಂಡುಬಂದರೆ

•             ರೋಗಿಗೆ ಕಾಮಾಲೆ ಕಂಡು ಬಂದರೆ

•             ರೋಗಿಗೆ ಸನ್ನಿ (ಫಿಟ್ಸ್) ಬಂದರೆ

•             ರೋಗಿಯಲ್ಲಿ ರಕ್ತಸ್ರಾವ ಕಂಡು ಬಂದರೆ

•             ರೋಗಿಯ ಉಸಿರಾಟದಲ್ಲಿ ಅಥವಾ ಮೂತ್ರ ವಿಸರ್ಜನೆ ಪ್ರಮಾಣ ಬಹಳಷ್ಟು ಕಡಿಮೆಯಾದರೆ

 

ಕೊನೆಯ ಮಾರ್ಪಾಟು : 12/9/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate