অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೂರ್ವಭಾವಿ,ತೀವ್ರ ,ಪೂರ್ವಭಾವಿ ತೀವ್ರ ಚಿಕಿತ್ಸೆ

ಪೂರ್ವಭಾವಿ,ತೀವ್ರ ,ಪೂರ್ವಭಾವಿ ತೀವ್ರ ಚಿಕಿತ್ಸೆ

ಪೂರ್ವಭಾವಿ ಚಿಕಿತ್ಸೆ  :

ರಕ್ತ ತಪಾಸಣೆಯಿಂದ ಮಲೇರಿಯ ಎಂದು ತಿಳಿಯುವ ಮೊದಲು ಎಲ್ಲಾ ಜ್ವರದ ಪ್ರಸಂಗಗಳಿಗೆ ವಯಸ್ಸಿಗೆ ಅನುಗುಣವಾಗಿ ಕ್ಲೋರೋಕ್ವಿನ್ ಮಾತ್ರೆಗಳನ್ನು ಕೊಡುವ ಕಾರ್ಯಾಚರಣೆಗೆ ಪೂರ್ವಭಾವಿ ಚಿಕಿತ್ಸೆ ಎಂದು ಕರೆಯಲಾಗುವುದು. ಕ್ಲೋರೋಕ್ವಿನ್ ಬಹಳ ಸಂರಕ್ಷತೆ ಹೊಂದಿರುವ ಔಷಧಿ. ಹಸುಕೂಸು, ಗರ್ಭೀಣಿ ಹೆಂಗಸು, ಯಾರೇ ಇರಲಿ ಕ್ಲೋರೋಕ್ವಿನ್ ಮಾತ್ರೆಗಳನ್ನು ನಿರ್ಭಯದಿಂದ ಉಪಯೋಗಿಸಬಹುದು. ಕ್ಲೋರೋಕ್ವಿನ್ ಮಾತ್ರೆ ರೋಗಿಯಲ್ಲಿ ಯಾವ ರೀತಿಯ ಹಾನಿಯನ್ನೂ ಉಂಟು ಮಾಡುವುದಿಲ್ಲ. ಈ ಪೂರ್ವಭಾವಿ ಚಿಕಿತ್ಸೆಯನ್ನು ಎಲ್ಲಾ ಜ್ವರದ ಪ್ರಸಂಗಗಳಿಗೂ, ಕಾರ್ಯಕ್ರಮದ ಎಲ್ಲ ರೀತಿಯ ಸಮೀಕ್ಷೆಗಳಲ್ಲೂ, ಈ ಪೂರ್ವಭಾವಿ ಚಿಕಿತ್ಸೆಯನ್ನು ಎಲ್ಲಾ ಜ್ವರದ ಪ್ರಸಂಗಗಳಿಗೂ, ಕಾರ್ಯಕ್ರಮದ ಎಲ್ಲ ರೀತಿಯ ಸಮೀಕ್ಷೆಗಳಲ್ಲೂ ಉಪಯೋಗಿಸಬೇಕು. ಈ ಕಾರ್ಯಾಚರಣೆಯಿಂದ ರೋಗಿ ಕಾಯಿಲೆಯಿಂದ ಗುಣವಾಗಲು ಅನುಕೂಲವಾಗುವುದು.

ಈ ಕಾರ್ಯಾಚರಣೆಯಲ್ಲಿ ಸಾಮಾನ್ಯವಾಗಿ ಕ್ಲೋರೋಕ್ವಿನ್ ಮಾತ್ರೆಗಳನ್ನು ಉಪಯೋಗಿಸಲಾಗುವುದು. ಕ್ಲೋರೋಕ್ವಿನ್ ರೋಗನಿರೋಧಕ ಶಕ್ತಿ ಕಳೆದುಕೊಂಡ ಪ್ರದೇಶಗಳಲ್ಲಿ ಸಲ್ಫಾ + ಪೈರಿಮೇಥಮೀನ್ ಮಾತ್ರೆಗಳನ್ನು ಸಕ್ರಿಯ ಸಮೀಕ್ಷೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಉಪಯೋಗಿಸಲಾಗುವುದು.

ಪೂರ್ವಭಾವಿ ಚಿಕಿತ್ಸೆ (ವಯಸ್ಸಿಗೆ ಅನುಗುಣವಾಗಿ)

ವಯಸ್ಸು ವರ್ಷಗಳಲ್ಲಿ              ಕ್ಲೋರೋಕ್ವಿನ್ ಮಿ.ಗ್ರಾಂ.     ಕ್ಲೋರೋಕ್ಷಿನ್ ಮಾತ್ರೆಗಳ ಸಂಖ್ಯೆ

<1           75           1/2

1-4          150         1

4-8          300         2

8-14       450         3

>14+      600         4

ತೀವ್ರ ಚಿಕಿತ್ಸೆ  :

ರೋಗಿ ಮಲೇರಿಯ ಜ್ವರದಿಂದ ನರಳುತ್ತಿರುವನೆಂದು ರಕ್ತ ತಪಾಸಣೆಯಿಂದ ಕಂಡು ಬಂದ ಮೇಲೆ ಅವನಿಗೆ ಪೂರ್ಣ ಚಿಕಿತ್ಸೆ ಮಾಡಲಾಗುವುದು. ವಯಸ್ಸಿಗೆ ಹಾಗೂ ಜೀವಾಣುವಿಗೆ ಅನುಗುಣವಾಗಿ ಕ್ಲೋರೋಕ್ವಿನ್ ಹಾಗೂ ಪ್ರೈಮಾಕ್ಟಿನ್ ಮಾತ್ರೆಗಳನ್ನು ಜೊತೆಗೂಡಿಸಿ ಚಿಕಿತ್ಸೆ ಮಾಡಲಾಗುವುದು. ಈ ಪೂರ್ಣ ಚಿಕಿತ್ಸೆಯಿಂದ ರೋಗಿಯ ದೇಹದಲ್ಲಿರುವ ಜೀವಾಣುವಿನ ಎಲ್ಲ ಹಂತಗಳ ಮೇಲೂ ಪರಿಣಾಮ ಬೀರುವುದರಿಂದ, ಈ ಚಿಕಿತ್ಸಾ ಕ್ರಮವನ್ನು ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ತೀವ್ರ ಚಿಕಿತ್ಸಾ ಕ್ರಮ ಎಂದು ಕರೆಯುತ್ತೇವೆ. ಈ ಚಿಕಿತ್ಸೆಯಲ್ಲಿ ಫ್ಯಾಲ್ಸಿಪ್ಯಾರಂ ಗ್ಯಾಮಿಟೋಸೈಟ್ ಹಾಗೂ ವೈವ್ಯಾಕ್ಸ್ ಜೀವಾಣುವಿನ ಹಿಪ್ಟೋಜಾಯ್ಟ್ ಮೇಲೆ ಪರಿಣಾಮ ಬೀರಲು ಕ್ಲೋರೋಕ್ವಿನ್ ಮಾತ್ರೆಗಳ ಜೊತೆ ಪ್ರೈಮಾಕ್ಟಿನ್ ಮಾತ್ರೆಗಳನ್ನು ಉಪಯೋಗಿಸಲಾಗುವುದು. ಯಾವ ರೀತಿಯ ಜೀವಾಣುವಿನಿಂದ ರೋಗಿಗೆ ಮಲೇರಿಯ ಬಂದಿದೆ ಎಂದು ತಿಳಿದ ನಂತರ ವಯಸ್ಸಿಗೆ ಅನುಗುಣವಾಗಿ ಔಷಧಿಯ ಪ್ರಮಾಣವನ್ನು ನಿಗಧಿಪಡಿಸಲಾಗುವುದು.

ತೀವ್ರ ಚಿಕಿತ್ಸೆ (ವಯಸ್ಸಿಗೆ ಹಾಗೂ ಜೀವಾಣುವಿನ ಅನುಗುಣವಾಗಿ)

ಪ್ಲಾಸ್ಮೋಡಿಯಂ ವೈವಾಕ್ಸ್ :

ವಯಸ್ಸು (ವರ್ಷಗಳಲ್ಲಿ)          ಕ್ಲೋರೋಕ್ವಿನ್      ಪ್ರೈಮಾಕ್ಟಿನ್ (ದಿನಕೊಮ್ಮೆ) (ಈ ಪ್ರಮಾಣದಲ್ಲಿ ಐದು ದಿನಗಳ ಕಾಲ) (2.5 ಮಿ.ಗ್ರಾಂ.)

ದಿನ 1 ಮತ್ತು ದಿನ 2                ದಿನ 3

ಮಿ.ಗ್ರಾಂ.               ಮಾತ್ರೆಗಳ ಸಂಖ್ಯೆ ಮಿ.ಗ್ರಾಂ.               ಮಾತ್ರೆಗಳ ಸಂಖ್ಯೆ ಮಿ.ಗ್ರಾಂ.               ಮಾತ್ರೆಗಳ ಸಂಖ್ಯೆ

<1           75           1/2         37.5        1/4         -              -

1-4          150         1              75           1/2         2.5          1

4-8          300         2              150         1              5.0          2

8-14       450         3              225         1ಳಿ          10.0        4

>14+      600         4              300         2              15.0        6

 

ಪ್ಲಾಸ್ಮೋಡಿಯಂ ಫ್ಯಾಲ್ಸಿಪಾರಂ :

ವಯಸ್ಸು (ವರ್ಷಗಳಲ್ಲಿ)          ಕ್ಲೋರೋಕ್ವಿನ್ (ದಿನಕ್ಕೊಮ್ಮೆ)             ಪ್ರೈಮಾಕ್ಟಿನ್ ದಿನಕ್ಕೊಮ್ಮೆ (7.5 ಮಿ.ಗ್ರಾಂ)

ಮಿ. ಗ್ರಾಂ.              ಮಾತ್ರೆಗಳ ಸಂಖ್ಯೆ ಮಿ. ಗ್ರಾಂ.              ಮಾತ್ರೆಗಳ ಸಂಖ್ಯೆ

<1           75           1/2         -              -

1-4          150         1              7.5          1

4-8          300         2              15.0        2

8-14       450         3              30.0        4

>14+      600         4              45.0        6

ಸಾಮಾನ್ಯವಾಗಿ ಎಲ್ಲಾ ಪ್ಲಾಸ್ಮೋಡಿಯಂ ಫ್ಯಾಲ್ಸಿಪ್ಯಾರಂ ಪ್ರಕರಣಗಳಿಗೆ ಒಂದು ದಿನದ ತೀವ್ರ ಚಿಕಿತ್ಸೆ ನೀಡಲಾಗುವುದು. ಆದರೆ ಅತಿ ಹೆಚ್ಚಿನ ಫ್ಯಾಲ್ಸಿಪ್ಯಾರಂ ಪ್ರಕಣಗಳು ಕಂಡುಬಂದಲ್ಲಿ ಅಥವಾ ಫ್ಯಾಲಿಪ್ಯಾರಂ ಜೀವಾಣುವಿನ ಮೇಲೆ ಕ್ಲೋರೋಕ್ವಿನ್ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕಂಡುಬಂದ ಪ್ರದೇಶಗಳಲ್ಲಿ ಕ್ಲೋರೋಕ್ವಿನ್ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕಂಡುಬಂದ ಪ್ರದೇಶಗಳಲ್ಲಿ ಕ್ಲೋರೋಕ್ವಿನ್ ಪ್ರಮಾಣವನ್ನು ಹೆಚ್ಚಿಸಿ ಒಂದು ದಿನದ ಚಿಕಿತ್ಸೆಯ ಬದಲಾಗಿ ಮೂರು ದಿನಗಳಿಗೆ ಹೆಚ್ಚಿಸಲಾಗುವುದು. ಅಂತಹ ಪ್ರದೇಶಗಳಲ್ಲಿ ಫ್ಯಾಲ್ಸಿಪ್ಯಾರಂ ತೀವ್ರ ಚಿಕಿತ್ಸೆ ವಯಸ್ಕರಲ್ಲಿ ಈ ರೀತಿ ಇದ್ದು ಮಕ್ಕಳಲ್ಲಿ ಕ್ಲೋರೋಕ್ವಿನ್ ಪ್ರಮಾಣವನ್ನು ವಯಸ್ಸಿಗೆ ಅನುಗುಣವಾಗಿ ನೀಡಬೇಕು.

ಮೊದಲನೇ ದಿನ : ಕ್ಲೋರೋಕ್ವಿನ್ 600 ಮಿ.ಗ್ರಾಂ. ಹಾಗೂ ಪ್ರೈಮಾಕ್ಟಿನ್ 45 ಮಿ.ಗ್ರಾಂ.

ಎರಡನೇ ದಿನ : ಪ್ರೈಮಾಕ್ಟಿನ್ 600 ಮಿ.ಗ್ರಾಂ.

ಮೂರನೇ ದಿನ : ಪ್ರೈಮಾಕ್ಟಿನ್ 300 ಮಿ.ಗ್ರಾಂ.

ಕ್ಲೋರೋಕ್ವಿನ್ ಬದಲಾಗಿ ಸಲ್ಫಾ + ಪೈರಿಮೇಥಮೀನ್ ಔಷಧಿಯನ್ನು ಉಪಯೋಗಿಸುವ ಪ್ರದೇಶಗಳಲ್ಲಿ ತೀವ್ರ ಚಿಕಿತ್ಸೆಯಲ್ಲಿ ಜವಾಬ್ದಾರಿವಹಿಸಿ ಪ್ರೈಮಾಕ್ಟಿನ್ ಮಾತ್ರೆಗಳನ್ನು ಮರುದಿನ ನೀಡಬೇಕು.

ಪೂರ್ವಭಾವಿ ತೀವ್ರ ಚಿಕಿತ್ಸೆ :

ಅತಿ ಸಮಸ್ಯಾತ್ಮಕ ಮಲೇರಿಯ ಪ್ರದೇಶಗಳಲ್ಲಿ ಯಾವುದೇ ಜ್ವರ ಫ್ಯಾಲ್ಸಿಪ್ಯಾರಂ ಮಲೇರಿಯ ಇರಬಹುದೆಂಬ ಸಂಶಯ ಇರುವುದರಿಂದ, ಕ್ಲೋಕೋಕ್ವಿನ್ ಮತ್ತು ಪ್ರೈಮಾಕ್ವಿನ್ ಜೊತೆಗೂಡಿಸಿ ರೋಗ ಚಿಕಿತ್ಸೆ ಮಾಡಲಾಗುವುದು. ಇದರಿಂದಾಗಿ ಮಲೇರಿಯ ರೋಗ, ಅದರಲ್ಲೂ ಫ್ಯಾಲ್ಸಿಪ್ಯಾರಂ ರೋಗವನ್ನು ತಡೆಗಟ್ಟಲು ಅನುಕೂಲವಾಗುವುದು. ಈ ಚಿಕಿತ್ಸೆಗೆ ಪೂರ್ವಭಾವಿ ತೀವ್ರ ಚಿಕಿತ್ಸೆ (ಪ್ರಿಪಂಪ್ಟಿವ್ ರ್ಯಾಡಿಕಲ್ ಟ್ರೀಟ್ಮೆಂಟ್ -   ಎಂದು ಕರೆಯಲಾಗುವುದು.

ವಯಸ್ಸಿಗೆ ಅನುಗುಣವಾಗಿ

ವಯಸ್ಸು (ವರ್ಷಗಳಲ್ಲಿ)          ಮೊದಲನೆ ದಿನ       ಎರಡನೇ ದಿನ         ಮೂರನೇ ದಿನ

ಕ್ಲೋರೋಕ್ವಿನ್ ಮಿ. ಗ್ರಾಂ.    ಕ್ಲೋರೋಕ್ವಿನ್ ಮಿ. ಗ್ರಾಂ.    ಕ್ಲೋರೋಕ್ವಿನ್ ಮಿ. ಗ್ರಾಂ.    ಕ್ಲೋರೋಕ್ವಿನ್ ಮಿ. ಗ್ರಾಂ.

<1           75           -              75           37.5

1-4          150         7.5          150         75

4-8          300         15.0        300         150

8-14       450         30.0        450         225

>14+      600         45.0        600         300

 

ಈ ಪ್ರದೇಶಗಳಲ್ಲಿ ವೈವಾಕ್ಸ್ ಮಲೇರಿಯ ಜ್ವರದ ರೋಗಗಳಿಗೆ ತೀವ್ರ ಚಿಕಿತ್ಸೆ ನೀಡಬೇಕು. ಈ ರೋಗಿಗಳಿಗೆ ಐದು ದಿನಗಳ ಪ್ರೈಮಾಕ್ವಿನ್ ಮಾತ್ರೆಗಳನ್ನು ವಯಸ್ಸಿಗೆ ಅನುಗುಣವಾಗಿ ಸಾಮಾನ್ಯವಾಗಿ ತೀವ್ರ ಚಿಕಿತ್ಸೆಯಲ್ಲಿ ತೋರಿರುವ ರೀತಿಯಲ್ಲಿ ನೀಡಬೇಕು. ಪೂರ್ವಭಾವಿ ಚಿಕಿತ್ಸೆ ಹಾಗೂ ಚಿಕಿತ್ಸೆ ಒಂದು ವಾರದ ಒಳಗೆ ಇದ್ದಲ್ಲಿ, ಎರಡು ದಿನಗಳ ಪ್ರೈಮಾಕ್ವಿನ್ ಚಿಕಿತ್ಸೆ ನೀಡತಕ್ಕದ್ದು. ಈ ರೋಗಿಗಳಿಗೆ ಕ್ಲೋರೋಕ್ವಿನ್ ಸಾಕಷ್ಟು ಪ್ರಮಾಣದಲ್ಲಿ ಪೂರ್ವಭಾವಿ ತೀವ್ರ ಚಿಕಿತ್ಸೆಯ ಮೂಲಕ ನೀಡಿರುವುದರಿಂದ, ಮರಳಿ ನೀಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಫ್ಯಾಲ್ಸಿಪ್ಯಾರಂ ತೀವ್ರ ಚಿಕಿತ್ಸೆಯ ಅವಶ್ಯಕತೆಯೂ ಇರುವುದಿಲ್ಲ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate