অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮೀಕ್ಷೆ

ಸಮೀಕ್ಷೆ

ಸಂಪರ್ಕ ಸಮೀಕ್ಷೆ :

ಮಲೇರಿಯ ಸಾವು ವರದಿಯಾದಾಗ ಅಥವಾ ಹೊಸ ಪ್ರದೇಶದಲ್ಲಿ ಮಲೇರಿಯ ರೋಗ ಪತ್ತೆಯಾದಾಗ ರೋಗ ಹರಡುವುದನ್ನು ತಡೆಗಟ್ಟಲು ಹಾಗೂ ಮಲೇರಿಯ ಹರಡಿರುವ ಪ್ರಮಾಣವನ್ನು ತಿಳಿದುಕೊಳ್ಳಲು ಈ ಕಾರ್ಯಾಚರಣೆಯಿಂದ ರಕ್ತ ಸಂಗ್ರಹಣೆಯನ್ನು ಮಾಡಲಾಗುವುದು. ಸಾವಿಗೀಡಾದ ವ್ಯಕ್ತಿ ಅಥವಾ ವರದಿಯಾದ ಮಲೇರಿಯ ವ್ಯಕ್ತಿಯ ಮನೆ ಹಾಗೂ ಸುತ್ತಮುತ್ತಲಲ್ಲಿ ವಾಸವಾಗಿರುವ ವ್ಯಕ್ತಿಗಳಿಂದ ಜ್ವರದ ಬಗ್ಗೆ ಮಾಹಿತಿ ಇಲ್ಲದಿದ್ದರೂ ರಕ್ತ ಲೇಪನ ಸಂಗ್ರಹಣೆ ಮಾಡಲಾಗುವುದು. ಈ ರಕ್ತ ಲೇಪನಗಳನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಕಂಡು ಬಂದ ಎಲ್ಲಾ ಮಲೇರಿಯ ಪ್ರಕರಣಗಳಿಗೆ ತೀವ್ರ ಚಿಕಿತ್ಸೆ ನೀಡಲಾಗುವುದು.

ಸಾಮೂಹಿಕ ಸಮೀಕ್ಷೆ :

ಮಲೇರಿಯ ರೋಗ ಉಲ್ಬಣಗೊಂಡಾಗ (ಔಟ್ ಬ್ರೇಕ್) ರೋಗವನ್ನು ತಡೆಗಟ್ಟಲು ಹಾಗೂ ಮಲೇರಿಯ ಸಾವನ್ನು ತಡೆಗಟ್ಟಲು ಈ ಸಮೀಕ್ಷೆಯನ್ನು ತೆಗೆದುಕೊಳ್ಳಲಾಗುವುದು. ಮಲೇರಿಯ ರೋಗ ಉಲ್ಬಣಗೊಂಡ ಪ್ರದೇಶದಲ್ಲಿ ವಾಸವಾಗಿರುವ ಎಲ್ಲಾ ವ್ಯಕ್ತಿಗಳಿಂದ ರಕ್ತ ಲೇಪನಗಳನ್ನು ತೆಗೆದುಕೊಳ್ಳಲಾಗುವುದು. ಈ ಸಮೀಕ್ಷೆ ಫಲಕಾರಿಯಾಗಲು ಅದಷ್ಟು ಕಡಿಮೆ ಸಮಯದಲ್ಲಿ ಕಾರ್ಯಗತಗೊಳಿಸಿ ಕನಿಷ್ಠ 80% ಜನರಿಂದ ರಕ್ತ ಲೇಪನ ಸಂಗ್ರಹಿಸಬೇಕು. ಕೀಟನಾಶಕ ಪುಡಿ ಸಿಂಪರಣಾ ಕಾರ್ಯಾಚರಣೆಯನ್ನೂ ಕೈಗೊಳ್ಳಬೇಕು. ಈ ಸಮೀಕ್ಷೆಯನ್ನು ವಲಸೆ ಬಂದ, ಅದರಲ್ಲೂ ಮಲೇರಿಯ ಹೆಚ್ಚಾಗಿರುವಂತ ಪ್ರದೇಶಗಳಿಂದ ಬಂದ ಕಾರ್ಮಿಕ ತಂಡಗಳಲ್ಲಿ ತಪ್ಪದೇ ತೆಗೆದುಕೊಳ್ಳಬೇಕು. ಹೊಸದಾಗಿ ಮಲೇರಿಯ ರೋಗ ಕಂಡು ಬಂದ ಪ್ರದೇಶಗಳಲ್ಲೂ ಈ ಸಮೀಕ್ಷೆ ಅತ್ಯಗತ್ಯ.

ತ್ವರಿತ ಜ್ವರ ಸಮೀಕ್ಷೆ  :

ಸಾಮೂಹಿಕ ಸಮೀಕ್ಷೆ ಕಾರ್ಯಗತಗೊಳಿಸಲು ಸಾಕಷ್ಟು ಕಾರ್ಯಕರ್ತರು ಇಲ್ಲದಿದ್ದಾಗ, ಸಾಮಾನ್ಯ ಮಲೇರಿಯ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಇಲ್ಲದಿರುವಾಗ, ಮಲೇರಿಯ ರೋಗ ಹೆಚ್ಚು ವರದಿಯಾಗುತ್ತಿದ್ದು, ಉಲ್ಬಣ ಹೊಂದುವ ಮೊದಲು ಮುಂಜಾಗ್ರತಾ ಕ್ರಮವಾಗಿ ಈ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಮೀಕ್ಷೆಯ ಸಮಯದಲ್ಲಾಗಲಿ ಜ್ವರ ಕಂಡು ಬಂದ ಎಲ್ಲಾ ವ್ಯಕ್ತಿಗಳಿಂದ ರಕ್ತ ಲೇಪನೆಯ ಸಂಗ್ರಹಣೆ ಮಾಡಲಾಗುವುದು. ಈ ಸಮೀಕ್ಷೆ ಹೆಚ್ಚು ಫಲಕಾರಿಯಾಗಲು ಆ ಸ್ಥಳದಲ್ಲಿಯೇ ರಕ್ತ ತಪಾಸಣೆ ಹಾಗೂ ರೋಗಿಯ ತೀವ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡತಕ್ಕದ್ದು.

ಈ ಸಮೀಕ್ಷೆಗಳಲ್ಲಿ ಪಡೆದ ರಕ್ತ ಲೇಪನಗಳ ತಪಾಸಣೆಯ ನಂತರ ಅಂಕಿಅಂಶಗಳ ಸಹಾಯದಿಂದ ಮಲೇರಿಯ ನಿಯಂತ್ರಣ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದು.

ಕೊನೆಯ ಮಾರ್ಪಾಟು : 12/5/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate