অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಿಂಪಡಣಾ ಕಾರ್ಯಾಚರಣೆ

ಸಿಂಪಡಣಾ ಕಾರ್ಯಾಚರಣೆ

ಸಿಂಪಡಣಾ ಕಾರ್ಯಾಚರಣೆಯನ್ನು ಯೋಜಿಸುವ ರೀತಿ :

ಸಿಂಪಡಣಾ ಕಾರ್ಯಾಚರಣೆಯ ಪಟ್ಟಿಯನ್ನು ಪ್ರತಿ ಸುತ್ತಿಗೂ ಹಾಕಿಕೊಳ್ಳಬೇಕು. ಈ ಪಟ್ಟಿಯಲ್ಲಿ ಸ್ಟ್ರೇ ದಿನಾಂಕ, ಹಳ್ಳಿಯ ಹೆಸರು, ಜನಸಂಖ್ಯೆ, ಮನೆಗಳು, ವಾಸದ ಕೊಠಡಿಗಳ ಸಂಖ್ಯೆ, ಬೇಕಾದ ಕೀಟನಾಶಕದ ಪ್ರಮಾಣ, ಬೇಕಾದ ಸಿಂಪಡಣಾ ತಂಡಗಳ ಸಂಖ್ಯೆ ತೋರಿಸಬೇಕು. ಪ್ರತಿ ಹಳ್ಳಿಗೂ ಈ ಮಾದರಿಯ ಕಾರ್ಯಕ್ರಮದ ಪಟ್ಟಿಯನ್ನು ತಯಾರಿಸಬೇಕು. ಅತಿ ಹೆಚ್ಚಿನ ಎ.ಪಿ.ಐ ಉಪಕೇಂದ್ರದಿಂದ ಪ್ರಾರಂಭಿಸಿ ಕಡಿಮೆ ಎ.ಪಿ.ಐ ಉಪಕೇಂದ್ರದ ಕಡೆಗೆ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು. ಉಪಕೇಂದ್ರ ಹೊರ ರಾಜ್ಯದ ಅಥವಾ ಜಿಲ್ಲೆಯ ಗಡಿ ಪ್ರದೇಶದಲ್ಲಿದ್ದಲ್ಲಿ, ಎರಡೂ ಉಪಕೇಂದ್ರಗಳಲ್ಲಿ ಸಿಂಪಡಣಾ ಕಾರ್ಯಾಚರಣೆಯನ್ನು ಒಮ್ಮೆಲೇ ಹಮ್ಮಿಕೊಳ್ಳುವುದು ಉತ್ತಮ.

ಎಲ್ಲಾ ಮಲೇರಿಯ ಪರಿವೀಕ್ಷಕರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರಣೆ ಮಾಡಬೇಕು. ಎಲ್ಲಾ ಸಿಂಪಡಣಾ ತಂಡದ ಕಾರ್ಯಕರ್ತರಿಗೆ ಎರಡು ದಿನಗಳ ತರಬೇತಿ ನೀಡಬೇಕು. ಸಿಂಪಡಣೆಯ ಕೆಲಸ ಹಳ್ಳಿಗಳಲ್ಲಿ ಸರಿಯಾಗಿ ಮಾಡುತ್ತಿರುವರೇ ಎಂದು ಹಳ್ಳಿಗಳ ಸಮೀಕ್ಷಣೆಗಳ ಮೂಲಕ ತಿಳಿಯಬೇಕು. ಕೀಟನಾಶಕದ ದಾಸ್ತಾನುಗಳನ್ನು ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ಸರಿಯಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು.

ಸ್ಟ್ರೇ ಕಾರ್ಯಾಚರಣೆ ಪ್ರಾರಂಭವಾಗುವ ಮುನ್ನ ಎಲ್ಲಾ ಉಪಕರಣಗಳು ಸರಿಯಾಗಿದೆಯೇ ಎಂದು ನೋಡಿಕೊಳ್ಳಬೇಕು. ಸ್ಟ್ರೇ ಶುರುವಾಗುವ ಮುನ್ನ ನಾಜಲ್‍ನಿಂದ ಸಿಂಪಡಣೆ ನಿಗದಿತ ಪ್ರಮಾಣದಷ್ಟು (ನಿಮಿಷಕ್ಕೆ 740 ರಿಂದ 850 ಮಿ.ಲೀ) ಇದೆಯೇ ಎಂದು ನೋಡಿ, ಹೆಚ್ಚಾಗಿದ್ದಲ್ಲಿ, ನಾಜûಲ್ ತುದಿಯನ್ನು ಬದಲಿಸಬೇಕು. ಸ್ಟ್ರೇ ಶುರುವಾದ ಮೇಲೆ ಪ್ರತಿ ದಿನ ಸಂಜೆ ನಾಜಲ್ ತುದಿಯನ್ನು ತೆಗೆದು ಚೆನ್ನಾಗಿ ನೀರಿನಲ್ಲಿ ತೊಳೆದಿಡಬೇಕು. ಸುಮಾರು 150 ಚ.ಮೀ. ಅಳತೆಯ ಒಂದು ಮನೆಯನ್ನು ಸಿಂಪಡಿಸಲು 5 ನಿಮಿಷಗಳ ಕಾಲ ಹಿಡಿಯುವುದು. ಪ್ರತಿ ತಂಡ ಒಂದು ದಿನಕ್ಕೆ 60-80 ಮನೆಗಳನ್ನು ಸಿಂಪಡಿಸಲು ಸಾಧ್ಯ (ಒಂದು ಪಂಪ್‍ಗೆ 25-30 ಮನೆಗಳು). ಆರೋಗ್ಯ ಕಾರ್ಯಕರ್ತರು ಇಲ್ಲವೇ ಮೇಲ್ವಿಚಾರಕರು ಸ್ಟ್ರೇ ಮಾಡಲು ಹೋಗುವಾಗ ತಮ್ಮಲ್ಲಿ ಒಂದೆರೆಡು ಪಂಪುಗಳು, ನಾಜಲ್ ತುದಿಗಳು, ವಾಷರ್, ಅಸ್ಬೆಸ್ಟಾಸ್ ದಾರ ಮತ್ತು ರಿಪೇರಿ ಮಾಡಲು ಬೇಕಾದ ಉಪಕರಣಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.

ಕೊನೆಯ ಮಾರ್ಪಾಟು : 6/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate