অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ

ನಿಮಗೆ ಗೊತ್ತಿದೆಯೇ ಕೆಲವೊಂದು ನಿರ್ದಿಷ್ಟ ಹವ್ಯಾಸಗಳು ನಮ್ಮ ಮೂತ್ರಪಿಂಡಗಳಿಗೆ (ಕಿಡ್ನಿ) ಹಾನಿ ಮಾಡುತ್ತವೆಯೆಂದು? ನಾವು ಆರೋಗ್ಯಕರವಾಗಿರಬೇಕು ಎಂದಾದಲ್ಲಿ ನಮ್ಮ ಮೂತ್ರ ಪಿಂಡಗಳು ಆರೋಗ್ಯವಾಗಿರಬೇಕು. ಒಂದು ವೇಳೆ ಮೂತ್ರಪಿಂಡಗಳು ಏನಾದರು ಹಾನಿಗೊಳಗಾದಲ್ಲಿ, ನಮ್ಮ ಆರೋಗ್ಯವು ನಮಗೆ ತಿಳಿಯದಂತೆ ಅಪಾಯಗಳಿಗೆ ಸಿಲುಕುವುದು ಖಂಡಿತ.

ಇದೇ ಕಾರಣಕ್ಕಾಗಿಯೇ ನಾವು ಮೂತ್ರಪಿಂಡಗಳನ್ನು ಅಪಾಯಕ್ಕೆ ಸಿಲುಕಿಸುವ ಹವ್ಯಾಸಗಳ ಕುರಿತಾಗಿ ಎಚ್ಚರವಹಿಸಬೇಕು. ಪ್ರತಿನಿತ್ಯವು ನಮ್ಮ ಕಾರ್ಯಗಳು ಸುಗಮವಾಗಿ ಸಾಗಿಸುವ ಉದ್ದೇಶದಿಂದ ಮೂತ್ರಪಿಂಡಗಳು ಸಿಕ್ಕಾಪಟ್ಟೆ ಕಾರ್ಯನಿರ್ವಹಿಸುತ್ತವೆ. ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ?

ಇವು ನಿಮಗೆ ಮೂತ್ರ ಮಾಡಲು, ರಕ್ತವನ್ನು ಶುದ್ಧಗೊಳಿಸಲು, ಕೆಲವೊಂದು ನಿರ್ದಿಷ್ಟ ಹಾರ್ಮೋನ್‍ಗಳನ್ನು ಸಹ ಉತ್ಪತ್ತಿ ಮಾಡಲು ಮತ್ತು ಕೆಲವೊಂದು ನಿರ್ದಿಷ್ಟ ಬಗೆಯ ಖನಿಜಗಳನ್ನು ಹೀರಿಕೊಳ್ಳಲು ಸಹ ಇವು ಸಹಾಯ ಮಾಡುತ್ತವೆ. ವಾಸ್ತವ ಏನೆಂದರೆ, ಇವು ನಮ್ಮನ್ನೆಲ್ಲ ಬದುಕಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಅವು ವಿಫಲಗೊಂಡರೆ, ನಾವು ಬದುಕುವುದು ದುಸ್ತರ.

ಆರೋಗ್ಯಕರವಾದ ಗಿಡಮೂಲಿಕೆಗಳು ಮತ್ತು ರಸಗಳು ನಮ್ಮ ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿ, ಅವು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಯಾವುದೇ ಏರು ಪೇರು ಸಂಭವಿಸಿದಂತೆ ನೋಡಿಕೊಳ್ಳುತ್ತವೆ. ನಿಮ್ಮ ಮೂತ್ರಪಿಂಡಗಳು ದೀರ್ಘಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಅವುಗಳ ಆರೋಗ್ಯದ ದೃಷ್ಟಿಯಿಂದ ನೀವು ಏನನ್ನು ತಿನ್ನುತ್ತೀರೋ ಮತ್ತು ಕುಡಿಯುತ್ತೀರೋ ಎಂಬುದರ ಜೊತೆಗೆ ಕೆಲವೊಂದು ನಿರ್ದಿಷ್ಟ ಹವ್ಯಾಸಗಳನ್ನು ಸಹ ಗಮನಿಸುತ್ತ ಇರಿ. ಆದರೆ ಒಂದು ಮಾತು ನೆನಪಿಡಿ, ಮೂತ್ರಪಿಂಡಗಳು ಪರಿಸ್ಥಿತಿ ಕೈಮೀರುವವರೆಗು ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ.

ಸೋಡಾ

ಒಂದು ದಿನದಲ್ಲಿ ಒಂದಕ್ಕಿಂತ ಅಧಿಕ ಸೋಡಾಗಳನ್ನು ಸೇವಿಸುವ ಅಭ್ಯಾಸ ನಿಮಗೆ ಇದ್ದಲ್ಲಿ, ಬಹುಬೇಗ ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗಬಹುದು. ಇದೊಂದು ದುರಭ್ಯಾಸವಾಗಿದ್ದು, ಯಾರು ಹೆಚ್ಚಿನ ಪ್ರಮಾಣದಲ್ಲಿ ಸೋಡಾವನ್ನು ಸೇವಿಸುತ್ತಾರೆಯೋ, ಅವರು ತಮ್ಮ ದೇಹದಲ್ಲಿರುವ ಪ್ರೋಟಿನ್‍ಗಳನ್ನು ಮೂತ್ರದ ಮೂಲಕ ವಿಸರ್ಜಿಸುತ್ತಾರೆ ಎಂದು ಇತ್ತೀಚಿನ ಅಧ್ಯಯನದಲ್ಲಿ ದೃಢಪಟ್ಟಿದೆ. ಸತ್ಯಾಂಶವೆಂದರೆ,ಮೂತ್ರದಲ್ಲಿ ಪ್ರೋಟಿನ್ ಹೊರಬರುವುದು ಎಂಬುದು ಮೂತ್ರಪಿಂಡದ ರೋಗವನ್ನು ಸೂಚಿಸುತ್ತದೆ.

ಮೂತ್ರಕೋಶದ ಮೇಲೆ ಒತ್ತಡ

ನಿಮ್ಮ ಶೌಚದ ಹವ್ಯಾಸಗಳು ಸಹ ನಿಮ್ಮ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರುತ್ತವೆ. ಒಂದು ವೇಳೆ ನಿಮಗೆ ನಿಮ್ಮ ಪ್ರಕೃತಿ ಕರೆಯನ್ನು ಮುಂದೂಡುವ ಅಭ್ಯಾಸವಿದ್ದಲ್ಲಿ, ಅದು ನಿಜಕ್ಕು ನಿಮಗೆ ಅಪಾಯವನ್ನು ತಂದೊಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ನೀವು ಕಚೇರಿಯಲ್ಲಿದ್ದಾಗಲು ಪ್ರಕೃತಿ ಕರೆ ಬಂದ ಕೂಡಲೆ ತಡ ಮಾಡದೆ ಅದನ್ನು ಮುಗಿಸಿ. ನೀವು ಇದಕ್ಕೆ ಎಷ್ಟು ನಿಧಾನ ಮಾಡುವಿರೋ, ನಿಮ್ಮ ಮೂತ್ರಕೋಶಗಳು ಸಹ ಅಷ್ಟೇ ಒತ್ತಡವನ್ನು ಅನುಭವಿಸಿ ಅನಾರೋಗ್ಯವನ್ನು ಪಡೆಯುತ್ತ ಸಾಗುತ್ತವೆ.

ನೀರಿನ ಸೇವನೆ

ನೀವು ದಿನಕ್ಕೆ ಎಷ್ಟು ನೀರು ಸೇವಿಸುತ್ತೀರಿ ಎಂಬುದು ಸಹ ಮುಖ್ಯ. ನಿಮ್ಮ ದೇಹವು ಟಾಕ್ಸಿನ್‍ಗಳನ್ನು ಹೊರಹಾಕುವಷ್ಟು ನೀರನ್ನು ನೀವು ಸೇವಿಸುತ್ತಿದ್ದೀರಾ? ಯಾವಾಗ ಟಾಕ್ಸಿನ್‍ಗಳು ನಿಮ್ಮ ದೇಹದಲ್ಲಿ ಶೇಖರಣೆಗೊಳ್ಳುತ್ತದೆಯೋ, ಆಗ ಅವು ನಿಮ್ಮ ಮೂತ್ರಪಿಂಡಗಳನ್ನು ಹಾನಿ ಮಾಡುತ್ತದೆ. ಒಂದು ವೇಳೆ ನಿಮ್ಮ ಮೂತ್ರವು ಅನಾರೋಗ್ಯಕರವಾದ ಬಣ್ಣವನ್ನು ಹೊಂದಿದ್ದಲ್ಲಿ, ಮೊದಲು ನಿಮ್ಮ ವೈದ್ಯರನ್ನು ಕಾಣಿ. ಏಕೆಂದರೆ, ನಿಮ್ಮ ಮೂತ್ರವು ಮೂತ್ರಪಿಂಡದ ಆರೋಗ್ಯದ ಸೂಚಕವಾಗಿರುತ್ತದೆ.

ಚಟುವಟಿಕೆಯ ಕೊರತೆ

ಇದು ಸಹ ನಿಮ್ಮ ಮೂತ್ರಪಿಂಡದ ಮೇಲೆ ಪ್ರಭಾವ ಬೀರುತ್ತದೆ. ವ್ಯಾಯಾಮವು ಮೂತ್ರಪಿಂಡದ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ವ್ಯಾಯಾಮದ ಕೊರತೆಯು ಸಮಸ್ಯೆಗಳಿಗೆ ಕಾರಣವಾಗಬಹುದು. ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯಕರವಾದ ತೂಕವು ಸಹ ಮೂತ್ರಪಿಂಡದ ಸಮಸ್ಯೆಗಳನ್ನು ಶೇ.30 ರಷ್ಟು ಅಧಿಕಗೊಳಿಸುತ್ತದೆ.

ನಿದ್ರೆಯ ಕೊರತೆ

ನಿದ್ರೆಯ ಕೊರತೆಯು ಸಹ ಮೂತ್ರಪಿಂಡಗಳನ್ನು ಹಾಳು ಮಾಡುತ್ತವೆ. ಮೂತ್ರಪಿಂಡವನ್ನು ಹಾಳು ಮಾಡುವ ಹವ್ಯಾಸಗಳಲ್ಲಿ ಇದು ಸಹ ಒಂದು. ಅದಕ್ಕಾಗಿ ನಿಮ್ಮ ನಿದ್ರೆಯ ಸಮಯದ ಬಗ್ಗೆ ಸ್ವಲ್ಪ ನಿಗಾವಹಿಸಿ. ನಿಮ್ಮ ದೇಹಕ್ಕೆ ಅಗತ್ಯವಾಗಿರುವಷ್ಟು ವಿಶ್ರಾಂತಿಯನ್ನು ನೀವು ನೀಡುತ್ತಿದ್ದೀರಾ, ಇಲ್ಲವೇ ಎಂಬುದನ್ನು ಒಮ್ಮೆ ಗಮನಿಸಿ. ಕನಿಷ್ಠ 8 ಗಂಟೆಗಳ ಅಡೆತಡೆಗಳಿಲ್ಲದ ನಿದ್ರೆಯನ್ನು ನೀವು ಮಾಡುತ್ತಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ಮೂತ್ರಪಿಂಡಗಳು ನಿದ್ದೆಯಲ್ಲಿ ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತವೆ.

ಕೊನೆಯ ಮಾರ್ಪಾಟು : 6/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate