অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮದ್ಯಪಾನ

ಮದ್ಯಪಾನದ ಚಟವಿರುವವರಿಗೆ  ಕಿಡ್ನಿ ಬೇಗನೆ ಹಾಳಾಗುತ್ತದೆ. ಆದ್ದರಿಂದ ಆ ಚಟಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ಸ್ವಾತಂತ್ರ ಪೂರ್ವದಲ್ಲಿ ಭಾರತೀಯರಿಗೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎಂದರೆ ಏನೆಂದೇ ತಿಳಿದಿರಲಿಲ್ಲ. ಆಗ ಭಾರತದಲ್ಲಿದ್ದ ಬ್ರಿಟಿಷರು ಸಕ್ಕರೆಯಿಲ್ಲದ ಚಹಾ ಟೀ ಸೇವಿಸುವುದನ್ನು ನೋಡಿ ಅವರಿಗೆ ಸಕ್ಕರೆ ಕಾಯಿಲೆ ಇರುವುದೆಂದು ತಿಳಿದ ಬಳಿಕ ಈ ಕಾಯಿಲೆಯನ್ನು ಪರಂಗಿಯವರ ಕಾಯಿಲೆ ಎಂದು ಕರೆಯಲು ತೊಡಗಿದರು. ಆದರೆ ಇಂದು ಭಾರತದಲ್ಲಿಯೂ ಈ ವ್ಯಾಧಿ ವ್ಯಾಪಕವಾಗಿ ಹರಡಿದೆ. ಮಧುಮೇಹ ಬರಲು ಸ್ಪಷ್ಟವಾದ ಕಾರಣಗಳಿಲ್ಲ. ಆದರೆ ಬಹುತೇಕ ಜನರು ತಿಳಿದುಕೊಂಡಂತೆ ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ. ನಾವು ಆಹಾರದಲ್ಲಿ ಸೇವಿಸಿದ ಸಕ್ಕರೆಯನ್ನು ಅರಗಿಸಿಕೊಳ್ಳಲು ನಮಗೆ ಇನ್ಸುಲಿನ್ ಎಂಬ ಪೋಶಕಾಂಶದ ಅಗತ್ಯವಿದೆ. ಈ ಪೋಷಕಾಂಶವನ್ನು ನಮ್ಮ ಮೇದೋಜೀರಕ (pancreas) ಉತ್ಪಾದಿಸುತ್ತದೆ. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆಯಾಗದೇ ಇದ್ದರೆ ಆದಕ್ಕೆ ಮೊದಲ ವಿಧದ (Type-1) ಮಧುಮೇಹ ಎಂದು ಕರೆಯುತ್ತಾರೆ. ವ್ಯತಿರಿಕ್ತವಾಗಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿಯೂ ಸಕ್ಕರೆಯನ್ನು ಕರಗಿಸಲು ಅಸಮರ್ಥವಾದರೆ ಇದಕ್ಕೆ ಎರಡನೇ ವಿಧದ (Type-2) ಮಧುಮೇಹ ಎಂದು ಕರೆಯುತ್ತಾರೆ.

ಹಾಗಲಕಾಯಿ

ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಮಧುಮೇಹಕ್ಕೆ ಅತ್ಯಂತ ಉಪಯುಕ್ತವಾದ ಆಹಾರವಾಗಿದೆ. ಆದರೆ ಇದನ್ನು ಬೇಯಿಸಿ ತಿನ್ನುವುದಲ್ಲ, ಹಸಿಯಾಗಿ, ಸಿಪ್ಪೆ ಮತ್ತು ಬೀಜಗಳ ಸಹಿತ ತಿನ್ನುವುದು! ಹೌದು, ಹಸಿಯಾಗಿಯೇ ಎಷ್ಟೇ ಕಹಿಯಾದರೂ ಕಚಕಚನೇ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬಂದಿರುವುದು ಸಾಬೀತಾಗಿರುವ ಸತ್ಯ. ಮೊದಮೊದಲಿಗೆ ಕಹಿ ಎನಿಸುವ ಇದರ ರುಚಿ ಕ್ರಮೇಣ ಒಗ್ಗಿಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಕರಾವಳಿಯ ಬ್ಯಾರಿ ಜನಾಂಗದವರಲ್ಲಿ ಹಾಗಲಕಾಯಿ ಹಸಿಯಾಗಿ ತಿನ್ನುವ ಸ್ಪರ್ಧೆಯೇ ಇದೆ! ಇಲ್ಲಿ ಸ್ಪರ್ಧಿಗಳು ಬಾಳೆಹಣ್ಣು ತಿಂದಂತೆ ಹಾಗಲಕಾಯಿಯನ್ನು ಕಚಕಚನೇ ಅಗಿದು ನುಂಗಿ ನೀರು ಕುಡಿಯುತ್ತಾರೆ. ಈ ಸ್ಪರ್ಧಿಗಳಲ್ಲಿ ಮಧುಮೇಹ ಇಲ್ಲದೇ ಇರುವುದು, ಅಥವಾ ತುಂಬಾ ತಡವಾದ ವಯಸ್ಸಿನಲ್ಲಿ ಕಂಡುಬಂದಿರುವುದು ಹಾಗಲಕಾಯಿಯ ಮಹತ್ವವನ್ನು ಸಾರುತ್ತದೆ. ಹಾಗಲಕಾಯಿ ಎರಡೂ ವಿಧದ ಮಧುಮೇಹದ ನಿಯಂತ್ರಣಕ್ಕೆ ಸೂಕ್ತವಾಗಿದೆ. ಈಗಾಗಲೇ ಮಧುಮೇಹ ನಿಯಂತ್ರಣದಲ್ಲಿದ್ದರೆ ಕಹಿ ನಿವಾರಿಸಿದ ಹಾಗಲಕಾಯಿಯ ಪಲ್ಯವನ್ನು ಸೇವಿಸುವುದರಿಂದ ನಿಯಂತ್ರಣವನ್ನು ಕಾಯ್ದಿರಿಸಿಕೊಳ್ಳಬಹುದು.

ಹೀರೇಕಾಯಿ

ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ

ಕರಿಬೇವಿನ ಎಲೆ

ಮಧುಮೇಹಕ್ಕೆ ಕಹಿಬೇವಿನ ಎಲೆಗಳೂ ಉತ್ತಮ ಫಲಿತಾಂಶ ನೀಡುತ್ತವೆ. ಮೇದೋಜೀರಕದ ಜೀವಕೋಶಗಳು ಸವೆದು ಮತ್ತೆ ಹುಟ್ಟದೇ ಇರುವುದರಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಕರಿಬೇವಿನಲ್ಲಿರುವ ಪೋಷಕಾಂಶಗಳು ಸವೆದ ಜೀವಕೋಶಗಳು ಮತ್ತೆ ಹುಟ್ಟಲು ಸಹಕರಿಸುವುದರಿಂದ ಇನ್ಸುಲಿನ್ ಉತ್ಪಾದನೆ ಯಥಾಪ್ರಕಾರ ಉಳಿದು ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಡುಗೆಗೆ ಉಪಯೋಗಿಸುವ ಕರಿಬೇವು ಮೊದಲ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ. ಈ ಎಲೆಗಳು ಅತ್ಯಂತ ಕಹಿಯಾಗಿರುವುದರಿಂದ ನೇರವಾಗಿ ತಿನ್ನಲು ಕಷ್ಟಕರವಾಗಿದೆ. ಬದಲಿಗೆ ಕಹಿಬೇವಿನ ಬೀಜಗಳನ್ನು ಮತ್ತು ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದು ಉತ್ತಮ. ಈ ಔಷಧಿಗಳು ಆಯುರ್ವೇದ ಔಷಧಿಯಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುತ್ತದೆ. ಇದರ ಸೇವನೆಯಿಂದ ರಕ್ತನಾಳಗಳು ಹಿಗ್ಗಿ ನರಗಳ ಒಳಗಣ ವಿಸ್ತಾರ ಹೆಚ್ಚುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದನ್ನು ಸಾಧಿಸಲು ರಕ್ತದಲ್ಲಿ ಕೃತಕವಾಗಿ hypo-glycemic ಔಷಧಿಗಳನ್ನು (ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಹೆಚ್ಚುವ ಸಕ್ಕರೆಯ ಪ್ರಮಾಣ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಪಡೆದುಕೊಳ್ಳುವ ಸಮಯವನ್ನು ಕಡಿಮೆಗೊಳಿಸುವ ಔಷಧಿಗಳು) ನೀಡುವುದರಿಂದ ತಪ್ಪಿಸಿದಂತಾಗುತ್ತದೆ. ಪರಿಣಾಮವಾಗಿ ಮಧುಮೇಹ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ. ಇದು ಎರಡನೇ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ.

ಲೋಳೆಸರ

ಲೋಳೆಸರದ ರಸದ ಸೇವನೆಯಿಂದಲೂ ಮಧುಮೇಹ ನಿಯಂತ್ರಣಕ್ಕೆ ಬಂದಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ನಮ್ಮ ರಕ್ತದಲ್ಲಿ ವಿವಿಧ ಪೋಷಕಾಂಶಗಳ ಆಗರವಿದೆ. ಇವನ್ನು ಒಟ್ಟಾರೆಯಾಗಿ ಲಿಪಿಡ್ ಗಳೆಂದು ಕರೆಯುತ್ತಾರೆ (ಕೊಲೆಸ್ಟ್ರಾಲ್, ಕೊಬ್ಬು, ಸ್ಟೆರಾಲ್, ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳಾದ ವಿಟಮಿನ್ ಎ, ಡಿ, ಇ ಮತ್ತು ಕೆ, ವಿವಿಧ ಗ್ಲಿಸರೈಡ್ ಗಳು, ಫಾಸ್ಪೋಲಿಪಿಡ್ಸ್ ಮೊದಲಾದವು) ಇದರಲ್ಲಿ ವಿಶೇಷವಾಗಿ ವಿಟಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಮಧುಮೇಹಿಗಳ ಶರೀರದಲ್ಲಿ ಚಿಕ್ಕ ಗಾಯವಾದರೂ ಮಾಗಲು ತುಂಬಾ ಸಮಯ ತಗಲಲು ವಿಟಮಿನ್ ಕೆ ಕೊರತೆ ಕಾರಣವಾಗಿದೆ. ಲೋಳೆಸರದ ನಿಯಮಿತ ಸೇವನೆಯಿಂದ ವಿಟಮಿನ್ ಕೆ ಅಗತ್ಯಪ್ರಮಾಣದಲ್ಲಿ ಉತ್ಪತ್ತಿಯಾಗಿ ಗಾಯಗಳು ಬೇಗನೇ ಮಾಗಲು ನೆರವಾಗುತ್ತದೆ. ಒಂದು ವೇಳೆ ಗಾಯ ಮಾಗದೇ ಇದ್ದರೆ ಆ ಭಾಗ ಕೊಳೆಯಲು ಪ್ರಾರಂಭವಾಗಿ ಗ್ಯಾಂಗ್ರೀನ್ ಗೆ ತಿರುಗುತ್ತದೆ. ಈ ಸ್ಥಿತಿ ತಲುಪಿದ ಬಳಿಕ ಬಾಧೆಗೊಳಗಾದ ಅಂಗವನ್ನು ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ. ಲೋಳೆಸರದ ಸೇವನೆಯಿಂದ ಈ ಸ್ಥಿತಿಗೆ ಬರುವುದನ್ನು ತಪ್ಪಿಸಿದಂತಾಗುತ್ತದೆ. ಇದಕ್ಕಾಗಿ ಲೋಳೆಸರದ ರಸವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಸೇರಿಸಿ ವಾರಕ್ಕೆ ಎರಡರಿಂದ ಮೂರು ಲೋಟ ಕುಡಿಯುತ್ತಿರುವುದು ಹಿತಕರವಾಗಿದೆ.

ಮೆಂತೆಕಾಳುಗಳು

ಮೆಂತೆಕಾಳುಗಳನ್ನು ಆಹಾರದ ಮೂಲಕ ಸೇವಿಸುತ್ತಾ ಬರುವುದರಿಂದ ಮೇದೋಜೀರಕ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಮರ್ಥವಾಗುತ್ತದೆ. ಇದರಲ್ಲಿರುವ ವಿವಿಧ ಆಲ್ಕಲಾಯ್ಡುಗಳು ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಕಡಿಮೆಗೊಳಿಸಿ ಜೀವಕೋಶಗಳು ಕಾರ್ಬೋಹೈಡ್ರೇಟುಗಳನ್ನು ಪಡೆಯುವ ಗತಿಯನ್ನು ನಿಧಾನವಾಗಿಸುತ್ತದೆ. ಇದು ಮೊದಲ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ.

ತುಳಸಿ ಎಲೆಗಳು ತುಳಸಿ ಎಲೆಗಳಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಅತ್ಯಾವಶ್ಯಕ ತೈಲ (essential oils) ಗಳಿವೆ. ಇವುಗಳ ಸೇವನೆಯಿಂದ ದೇಹದಲ್ಲಿ eugenol, methyl eugenol ಮತ್ತು caryophyllene ಎಂಬ ಮೂರು ಪ್ರಮುಖ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ಮೂರೂ ರಾಸಾಯನಿಕಗಳು ಕಲೆತಾಗ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳು (ಈ ಜೀವಕೋಶಗಳಿಂದ ಇನ್ಸುಲಿನ್ ಸಂಗ್ರಹವಾಗುತ್ತದೆ ಮತ್ತು ಅಗತ್ಯವಿದ್ದಷ್ಟು ಬಿಡುಗಡೆಯಾಗುತ್ತದೆ) ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಹೆಚ್ಚಿನ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಜೊತೆಗೇ oxidative stress ಎಂಬ ಒತ್ತಡವನ್ನೂ ಕಡಿಮೆಗೊಳಿಸುತ್ತದೆ.ಈ ವಿಧಾನ ಟೈಪ್-1 ಮಧುಮೇಹಕ್ಕೆ ಸೂಕ್ತವಾಗಿದೆ. (ಟೈಪ್-1 ಮಧುಮೇಹಕ್ಕೆ ನಮ್ಮ ಜೀವನ ಪ್ರತಿರೋಧ ವ್ಯವಸ್ಥೆಯೇ ಪರೋಕ್ಷವಾಗಿ ಕಾರಣವಾಗಿದೆ. ಇಲ್ಲಿ ಜೀವನ ಪ್ರತಿರೋಧ ವ್ಯವಸ್ಥೆ ಮೇದೋಜೀರಕ ಗ್ರಂಥಿಯ ಜೀವಕೋಶಗಳನ್ನು ಶತ್ರುಗಳೆಂದು ಪರಿಗಣಿಸಿ ನಿಶ್ಕ್ರಿಯಗೊಳಿಸುತ್ತದೆ. ಪರಿಣಾಮವಾಗಿ oxidative stress ಎಂಬ ಒತ್ತಡ ಉಂಟಾಗಿ ಇನ್ಸುಲಿನ್ ಉತ್ಪತ್ತಿಯಲ್ಲಿ ಕಡಿತವಾಗುತ್ತದೆ. ಇದಕ್ಕೆ ಕಾರಣಗಳು ಇನ್ನೂ ನಿಖರವಾಗಿ ಗೊತ್ತಾಗಿಲ್ಲ, ಸಂಶೋಧನೆ ಮುಂದುವರೆದಿದೆ)

ಉಪಯೋಗಿಸುವ ವಿಧಾನ ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಗಸೆ ಬೀಜಗಳು (Flax seeds (Alsi)) ಅಗಸೆಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಹಲವು ಪೋಷಕಾಂಶಗಳಿವೆ. ಈ ನಾರನ್ನು ಕರಗಿಸಲು ದೇಹಕ್ಕೆ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಅಗತ್ಯವಿದೆ. ಇದೇ ಕಾರಣದಿಂದ ದೇಹದಲ್ಲಿ ಸಂಗ್ರಹವಾಗಿದ್ದ ಸಕ್ಕರೆ ಮತ್ತು ಕೊಬ್ಬು ಕರಗಿ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಸಂಶೋಧನೆಗಳಿಂದ ಈ ಪ್ರಮಾಣ ಶೇಖಡಾ 28ರಷ್ಟು ಎಂದು ಕಂಡುಬಂದಿದೆ. ಇದು ಟೈಪ್ -೨ ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ ಒಂದು ದೊಡ್ಡಚಮಚ ಅಗಸೆಬೀಜದ ಒಣಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕದಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು, ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

ನೀಲಾಬದರಿ ಮರದ ಎಲೆಗಳು (Leaves of bilberry (neelabadari) plant) ಮಧುಮೇಹಕ್ಕೆ ಆಯುರ್ವೇದ ಪಂಡಿತರು ಈ ಮರದ ಎಲೆಗಳನ್ನು ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿದ ಸಂಸ್ಥೆ ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ anthocyanidin ಎಂಬ ಪೋಷಕಾಂಶವಿದೆ ಎಂದು the Journal of Nutrition ಪತ್ರಿಕೆಯಲ್ಲಿ ಪ್ರಕಟಿಸಿದೆ. ಈ ಆಂಥೋಸಯಾನೈಡಿನ್ ನಮ್ಮ ರಕ್ತದಲ್ಲಿ ಮಿಳಿತಗೊಂಡ ಬಳಿಕ ರಕ್ತದಲ್ಲಿನ ಗ್ಲುಕೋಸ್ ವ್ಯರ್ಥವಾಗಿ ಮೂತ್ರದಲ್ಲಿ ಹೊರಹರಿದು ಹೋಗುವ ಬದಲು ಜೀವಕೋಶಗಳು ಪಡೆಯುವಲ್ಲಿ ಸಹಕರಿಸುತ್ತದೆ. ಇದೇ ಕಾರಣದಿಂದ ಟೈಪ್-೨ ಮಧುಮೇಹ ಶೀಘ್ರವೇ ಹತೋಟಿಗೆ ಬರುತ್ತದೆ.

ಉಪಯೋಗಿಸುವ ವಿಧಾನ ಸುಮಾರು ಒಂದು ಹಿಡಿಯಷ್ಟು ಹಸಿ ಎಲೆಗಳನ್ನು ಒನಕೆ ಅಥವಾ ಒರಳಿನಲ್ಲಿ ಚೆನ್ನಾಗಿ ಅರೆದು ಮಿಶ್ರಣ ತಯಾರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೂರು ಮಿಲಿಗ್ರಾಂನಷ್ಟು ಸೇವಿಸಿ. ಪರ್ಯಾಯವಾಗಿ ಆಯುರ್ವೇದ ಅಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುವ ಒಣಪುಡಿಯನ್ನೂ ನೀರಿನಲ್ಲಿ ಬೆರೆಸಿ ಕುಡಿಯಬಹುದು

ದಾಲ್ಚಿನ್ನಿ ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತದೆ. ಜೊತೆಗೇ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತದ ಸಂಭವಗಳಿಂದ ಕಾಪಾಡುತ್ತದೆ. ಪ್ರತಿದಿನಕ್ಕೆ ಅರ್ಧ ಚಿಕ್ಕ ಚಮಚದಷ್ಟು ಪ್ರಮಾಣ ಅಧ್ಬುತಗಳನ್ನೇ ಸಾಧಿಸಬಲ್ಲುದು.

ಉಪಯೋಗಿಸುವ ವಿಧಾನ ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ. ಇದು ಟೈಪ್ ೧ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಹಸಿರು ಟೀ ಹಸಿರು ಟೀ ರುಚಿಯಲ್ಲಿ ಮತ್ತು ಪೋಷಕಾಂಶಗಳಲ್ಲಿ ಸಾಮಾನ್ಯ ಟೀ ಗಿಂತ ಭಿನ್ನವಾಗಿದೆ. ಇದರ ಮುಖ್ಯ ಅಂಶವೆಂದರೆ ಪಾಲಿಫಿನಾಲ್ (polyphenol) ಎಂಬ ಪೋಷಕಾಂಶವಾಗಿದೆ. ಇದೊಂದು ಪ್ರಬಲವಾದ ಆಂಟಿ ಆಕ್ಸಿಡೆಂಟು ಮತ್ತು hypo-glycaemic compound ಆಗಿದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ದೇಹ ಬಳಸಿಕೊಳ್ಳಲು ಸಹಕರಿಸುತ್ತದೆ. ಇದು ಟೈಪ್ -೨ ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಘಂಟೆ ಮೊದಲು ಕುಡಿಯಬೇಕು.

ನುಗ್ಗೇಕಾಯಿ ಮರದ ಎಲೆಗಳು (moringa leaf) ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ

ಉಪಯೋಗಿಸುವ ವಿಧಾನ ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಬೇವಿನ ಎಲೆಗಳು (ಕಹಿಬೇವು) ಕಹಿಬೇವಿನ ಎಲೆಗಳು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುಖ್ಯವಾಗಿ ಇನ್ಸುಲಿನ್ ಬಳಕೆಯನ್ನು ಗರಿಷ್ಟಗೊಳಿಸಲು ನೆರವಾಗುತ್ತದೆ. ಇದರಿಂದ ನಿಧಾನವಾಗಿ ಟೈಪ್ -೨ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ನರಗಳು ಸೆಳೆದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮವಾಗಲು ಸಹಕರಿಸುತ್ತದೆ. ಇನ್ನೂ ಮುಖ್ಯವಾಗಿ ದೇಹ ಮಧುಮೇಹದ ಕಾರಣದಿಂದಾಗಿ hypoglycaemic ಔಷಧಿಗಳ ಮೇಲಿನ ಅವಲಂಬನೆಯನ್ನು ಮುಕ್ತಗೊಳಿಸುತ್ತದೆ.

ಉಪಯೋಗಿಸುವ ವಿಧಾನ ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

ಮೂಲ : ಬೋಲ್ಡ್ ಸ್ಕೈ(http://kannada.boldsky.com/ )

ಕೊನೆಯ ಮಾರ್ಪಾಟು : 6/16/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate