অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೈಫಲ್ಯ

ವ್ಯಾಖ್ಯಾನ

ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ, ಮೂತ್ರದ ಸಾರವನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರೋಲೈಟುಗಳನ್ನು ಸಂರಕ್ಷಿಸುವ ಸಂಸ್ಕಾರ ಸಾಮರ್ಥ್ಯವನ್ನು ಮೂತ್ರಪಿಂಡಗಳು ಕ್ರಮೇಣವಾಗಿ ಕಳೆದುಕೊಳ್ಳುವುದನ್ನೇ ಮೂತ್ರಪಿಂಡ ವೈಫಲ್ಯ ಎಂದು ಹೇಳಲಾಗುತ್ತದೆ.

ಇತರೆ ಹೆಸರುಗಳು

ಮೂತ್ರಪಿಂಡ ವೈಫಲ್ಯ, ರೀನಲ್ ವೈಫಲ್ಯ, ಕ್ರಾನಿಕ್ ರೀನಲ್ ಇನ್ ಸಫಿಷಿಯನ್ಸಿ, ಸಿಆರ್ಎಫ್,

ಕಾರಣಗಳು

ಹಠಾತ್ತಾಗಿ ಕಾಣಿಸಿಕೊಳ್ಳುವ ಮೂತ್ರಪಿಂಡ ವೈಫಲ್ಯವನ್ನು ಸರಿಪಡಿಸಬಹುದು.  ಆದರೆ, ಸತತವಾಗಿ ಕಾಣಿಸಿಕೊಳ್ಳುವ ಮೂತ್ರಪಿಂಡಗಳ ವೈಫಲ್ಯ ನಿಧಾನವಾಗಿ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.  ಇದರಿಂದಾಗಿ, ಕ್ರಮೇಣ ಮೂತ್ರಪಿಂಡಗಳನ್ನು ಸಂಪೂರ್ಣ ವಿಫಲಗೊಳಿಸುವ ರೋಗಗಳಿಗೆ ಕಾರಣವಾಗುತ್ತದೆ.  ಸಣ್ಣ ಪ್ರಮಾಣದ ಮೂತ್ರ ಪಿಂಡದ ಸೋಂಕಿನಿಂದ ಮೂತ್ರಪಿಂಡಗಳ ವೈಫಲ್ಯದವರೆಗೂ ಈ ಸಮಸ್ಯೆಗಳು ವ್ಯಾಪಿಸಬಹುದು.  ಕಟ್ಟ ಕಡೆಯ ಸ್ಥಿತಿ ಮೂತ್ರ ಪಿಂಡಗಳ ಸಂಪೂರ್ಣ ವೈಫಲ್ಯ. ಸತತ ಮೂತ್ರಪಿಂಡ ವೈಫಲ್ಯದಿಂದಾಗಿ ಜೀವಜೀವ ದ್ರವ  ಹಾಗೂ ತ್ಯಾಜ್ಯ ಪದಾರ್ಥಗಳು ದೇಹದಲ್ಲಿಯೇ ಸಂಗ್ರಹವಾಗುತ್ತದೆ.  ಇದರಿಂದಾಗಿ ಅಜೆಮಿಯಾ ಹಾಗೂ ಯುರೇಮಿಯಾ ಉಂಟಾಗುತ್ತದೆ.  ಅಜೆಮಿಯಾ ಎಂದರೆ, ರಕ್ತದಲ್ಲಿ ನೈಟ್ರೋಜನ್ ತ್ಯಾಜ್ಯಗಳ ಪ್ರಮಾಣ ಹೆಚ್ಚುವುದು.  ಈ ಹೆಚ್ಚಳಕ್ಕೆ ಯಾವ ಲಕ್ಷಣಗಳೂ ತೋರುವುದಿಲ್ಲ.  ಮೂತ್ರಪಿಂಡಗಳ ಸಂಪೂರ್ಣ ವೈಫಲ್ಯವನ್ನು ಉಂಟು ಮಾಡುವ ರೋಗಸ್ಥಿತಿಗೆ ಕೊಂಡೊಯ್ಯುವ ಲಕ್ಷಣಕ್ಕೆ ಯುರೇಮಿಯಾ ಎನ್ನುತ್ತಾರೆ.

ಲಕ್ಷಣಗಳು

ಆರಂಭಿಕ ಲಕ್ಷಣಗಳು ಈ ಕೆಳಕಂಡಂತಿರುತ್ತವೆ:

  • ತೂಕ ನಷ್ಟ
  • ತಲೆಸುತ್ತುವಿಕೆ, ವಾಂತಿ
  • ಸಾಮಾನ್ಯವಾಗಿ ಅನಾರೋಗ್ಯದ ಭಾವನೆ
  • ಸುಸ್ತು, ಬಳಲಿಕೆ
  • ತಲೆನೋವು
  • ಪದೇ ಪದೇ ಬಿಕ್ಕಳಿಕೆ
  • ತುರಿಕೆ

ನಂತರದ ಲಕ್ಷಣಗಳು ಈ ಕೆಳಕಂಡಂತಿರುತ್ತವೆ:

  • ಮೂತ್ರ ವಿಸರ್ಜನೆ ಗಣನೀಯವಾಗಿ ಹೆಚ್ಚಾಗುವಿಕೆ ಅಥವಾ ಕಡಿಮೆಯಾಗುವಿಕೆ
  • ರಾತ್ರಿ ಹೊತ್ತಿನಲ್ಲಿ ಮೂತ್ರ ವಿಸರ್ಜನೆಯ ಅಗತ್ಯ
  • ಗಾಯಗೊಳ್ಳುವ ಅಥವಾ ರಕ್ತಸ್ರಾವದ ಸಾಧ್ಯತೆಯ ಹೆಚ್ಚಳ
  • ವಾಂತಿಯಲ್ಲಿ ಅಥವಾ ಮಲದಲ್ಲಿ ರಕ್ತ
  • ಕಡಿಮೆಯಾದ ಚುರುಕುತನ
  • ನಿದ್ರಾಸ್ಥಿತಿ,   ಆಲಸ್ಯ, ಜಡತ್ವ
  • ಗೊಂದಲ, ಜ್ವರ
  • ಕೋಮಾ
  • ಸ್ನಾಯು ಸೆಳೆತ, ನೋವು
  • ರೋಗಗ್ರಸ್ತ
  • ಯೂರೆಮಿಕ್ ಫ್ರಾಸ್ಟ್  --ಚರ್ಮದ ಮೇಲೆ ಹಾಗೂ ಒಳಗೆ ಬಿಳಿ ಹರಳುಗಳ ಸಂಗ್ರಹ
  • ಕೈ, ಕಾಲು, ಪಾದ ಮತ್ತಿತ್ತರ ಭಾಗಗಳಲ್ಲಿ ಸ್ಪರ್ಶ ಜ್ಞಾನ ಕಡಿಮೆಯಾಗುವುದು
  • ಹೆಚ್ಚುವರಿ ಲಕ್ಷಣಗಳೂ ಕಾಣಿಸಿಕೊಳ್ಳಬಹುದು:

    • ರಾತ್ರಿ ಹೊತ್ತಿನಲ್ಲಿ ಹೆಚ್ಚಿದ ಮೂತ್ರ ವಿಸರ್ಜನೆ
    • ಹೆಚ್ಚಿದ ನೀರಡಿಕೆ
    • ಅಸಹಜವಾದ ಗಾಢ ಅಥವಾ ತಿಳಿ ವರ್ಣ ತಾಳಿದ ಚರ್ಮ
    • ಬಿಳಿಚಿಕೊಳ್ಳುವಿಕೆ
    • ಅಸಹಜ ಉಗುರುಗಳು
    • ಉಸಿರಾಟದಲ್ಲಿ ವಾಸನೆ
    • ಹೆಚ್ಚಿನ ರಕ್ತದೊತ್ತಡ
    • ಹಸಿವಾಗದಿರುವಿಕೆ.
    • ಉದ್ವಿಗ್ನವಾಗುವಿಕೆ.

    ಪರೀಕ್ಷೆ ಹಾಗೂ ತಪಾಸಣೆಗಳು

    ರಕ್ತದೊತ್ತಡ ತೀವ್ರವಾಗಿರಬಹುದು.  ಪಾಲಿನ್ಯೂರೋಪತಿಯನ್ನು ಪತ್ತೆ ಹಚ್ಚಲು ನ್ಯೂರೋಲಾಜಿಕ್ ಪರೀಕ್ಷೆ ಮಾಡಬೇಕಾಗಬಹುದು.  ಸ್ಟೆತೋಸ್ಕೋಪಿನಿಂದ ಕೇಳಿದಾಗ ಅಸಹಜವಾದ ಹೃದಯ ಹಾಗೂ ಪುಪ್ಪಸಗಳ ಸದ್ದು.  ಮೂತ್ರದಲ್ಲಿ ಪ್ರೋಟೀನ್ ಮತ್ತಿತ್ತರ ಅಸಹಜ ಲವಣಗಳು.  ರೋಗ ಲಕ್ಷಣಗಳು ಕಾಣಿಸಿಕೊಳ್ಳುವ 6 ರಿಂದ 10 ತಿಂಗಳು ಮೊದಲೇ ಈ ಬಗೆಯ ಮೂತ್ರ ಪರೀಕ್ಷೆಯಲ್ಲಿ ತಿಳಿಯಬಹುದು.

    • ಕ್ರಿಯಾಟಿನೈನ್ ಪ್ರಮಾಣ ಏರುತ್ತಾ ಹೋಗುವುದು
    • ಪ್ರಮಾಣದಲ್ಲಿ ಸತತ ಏರಿಕೆ.
    • ಕ್ರಿಯಾಟಿನೈನ್ ವಿಸರ್ಜನೆಯ ಪ್ರಮಾಣ ಕ್ರಮೇಣ ತಗ್ಗುವುದು
    • ಪೊಟ್ಯಾಸಿಯಂ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣ ಕಾಣಿಸಿಕೊಳ್ಳುವುದು
    • ರಕ್ತನಾಳದ ವಾಯು ಮತ್ತು ರಕ್ತದ ರಸಾಯನಿಕ ತಪಾಸಣೆಯಲ್ಲಿ ಚಯಾಪಚಯ ಕ್ರಿಯೆಗಳ ಅಸಿಡೋಸಿಸ್ ಕಾಣಿಸುವುದು

    ಸತತ ಮೂತ್ರ ಪಿಂಡ ವೈಫಲ್ಯ ಕಾಣಿಸಿಕೊಂಡರೆ, ಎರಡೂ ಮೂತ್ರಪಿಂಡಗಳು ಸಹಜ ಗಾತ್ರಕ್ಕಿಂತ ಚಿಕ್ಕದಾಗುತ್ತವೆ.  ಅಲ್ಲದೇ, ಇವನ್ನು ಕೆಲ ಪರೀಕ್ಷೆಗಳನ್ನು ಮಾಡಿ, ಖಚಿತ ಪಡಿಸಿಕೊಳ್ಳಬಹುದು:

    • ಹೊಟ್ಟೆಯ ಅಥವಾ ಮೂತ್ರಪಿಂಡಗಳ  ಕ್ಷ-ಕಿರಣ
    • ಹೊಟ್ಟೆಯ ಸಿಟಿ ಸ್ಕ್ಯಾನ್
    • ಹೊಟ್ಟೆಯ yeM aR aI
    • ಹೊಟ್ಟೆಯ ಅಲ್ಟ್ರಾ ಸೌಂಡ್

    ಈ ರೋಗವು, ಈ ಕೆಳಕಂಡ ಪರೀಕ್ಷೆಗಳ ಫಲಿತಾಂಶವನ್ನೂ ಬದಲಿಸಬಲ್ಲದು.:

    • ಯೂರಿನರಿ ಕ್ಯಾಸ್ಟ್ಸ್
    • ಮೂತ್ರಪಿಂಡಗಳ ಸ್ಕ್ಯಾನ್
    • ಪಿಸಿಎಚ್
    • ಸೀರಂ ಮ್ಯಾಗ್ನಿಸಿಯಂ ಟೆಸ್ಟ್
    • ಎರಿತ್ರೋ ಪ್ರೋಟೀನ್
    • ಆಂಟ್ ಸ್ಕಿನ್ ಇನ್ ಫೆಕ್ಷನ್

    ವೈದ್ಯರನ್ನು ಯಾವಾಗ ಕಾಣಬೇಕು

    ಎರಡು ವಾರಕ್ಕಿಂತಲೂ ಹೆಚ್ಚು ಕಾಲ ತಲೆ ಸುತ್ತುವಿಕೆ ಅಥವಾ ವಾಂತಿ ಮುಂದುವರಿದರೆ, ತತ್ ಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾದರೆ,ಹಾಗೂ ಮೂತ್ರಪಿಂಡ ವೈಫಲ್ಯದ ಇತರೆ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯರನ್ನು ಸಂಪರ್ಕಿಸಿ.

    ತಡೆಯುವಿಕೆ

    ಈ ಎಲ್ಲ ನ್ಯೂನತೆಗಳಿಗೆ ಚಿಕಿತ್ಸೆ ನೀಡಿದರೆ, ಸಮಸ್ಯೆಯ ತೀವ್ರತೆಯನ್ನು ಕೊಂಚ ಕಡಿಮೆ ಮಾಡಿ, ಸಮಸ್ಯೆಯನ್ನು ಮುಂದೂಡಬಹುದು. ಮಧುಮೇಹ ಇರುವವರು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಬೇಕು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಬೇಕು. ಅಲ್ಲದೇ, ಧೂಮಪಾನದಿಂದ ದೂರವಿರಬೇಕು.

    ಸಚಿತ್ರ ವಿವರಣೆ

    ಮೂತ್ರಪಿಂಡದ ಅಂಗರಚನೆ

     

    ಮೂತ್ರಪಿಂಡಗಳು –ರಕ್ತ ಮತ್ತು ಮೂತ್ರದ ಹರಿವು

    ಬಿಳಿ

    ಮೂಲ:ಪೋರ್ಟಲ್ ತಂಡ

    ಕೊನೆಯ ಮಾರ್ಪಾಟು : 6/28/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate