অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಧುಮೇಹ

ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತು ಮಧು ಮೇಹ ಬಂದ ಮೇಲಿನ ಬದಲಾವಣೆಗಳನ್ನು ಈಕೆಳಗೆ ವಿವರಿಸಿದೆ.

ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು: ಜಠರವು ನಾವು ತಿಂದ ಆಹಾರವನ್ನು ಗ್ಲೂಕೋಸ್ ಎಂಬ ಇಂಧನವಾಗಿ ಬದಲಾಯಿಸುವುದು. ಗ್ಲೂಕೋಸು ರಕ್ತಪ್ರವಾಹದಲ್ಲಿ ಸೇರಿ ದೇಹದಲ್ಲಿನ ಮಿಲಿಯನ್ ಗಟ್ಟಲೆ ಜೀವ ಕೋಶಗಳಿಗೆ ತಲಪುವುದು.

ಗ್ಲುಕೋಸು ಜೀವಕೋಶದಲ್ಲಿ ಪ್ರವೇಶಿಸುವುದು. : ಮೇದೋಜೀರಕವು ಇನಸುಲಿನ್ ಎಂಬ ರಸಾಯನಿಕವನ್ನು ಉತ್ಪಾದಿಸುವುದು. ಇನಸುಲಿನ್ ಸಹಾ ರಕ್ತ ಪ್ರವಾಹದಲ್ಲಿ ಸೇರಿ ಜೀವ ಕೋಶಗಳನ್ನು ತಲುಪುವುದು. ಅಲ್ಲಿ ಗ್ಲೂಕೋಸನ್ನು ಭೇಟಿಯಾಗಿ ಅದು ಜೀವಕೋಶವನ್ನು ಸೇರಲು ಸಹಾಯ ಮಾಡುವುದು.

ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವವು : ಜೀವ ಕೋಶಗಳು ಗ್ಲುಕೋಸನ್ನು ಉರಿಸಿ ದೇಹಕ್ಕೆ ಶಕ್ತಿಯನ್ನು ಕೊಡುವವು.

ಮಧು ಮೇಹ ಬಂದಾಗ ಆಗುವ ಬದಲಾವಣೆಗಳು

ಮಧುಮೇಹದಿಂದ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯುವುದು ಕಷ್ಟವಾಗುವುದು.

ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು : ಜಠರವು ಆಹಾರವನ್ನು ಗ್ಲುಕೋಸಾಗಿ ಬದಲಾಯಿಸುವುದು. ಗ್ಲುಕೋಸು ರಕ್ತ ಪ್ರವಾಹದಲ್ಲಿ ಹೋಗುವುದು. ಆದರೆ ಹೆಚ್ಚಿನ ಪಾಲು ಜೀವ ಕೋಶವನ್ನು ಪ್ರವೇಶಿಸಲು ಸಾಧ್ಯವಾಗದೆ ಇರಬಹುದು. ಏಕೆಂದರೆ:

  1. ಸಾಕಷ್ಟು ಇನಸುಲಿನ್ ಇರಲಿಕ್ಕಿಲ್ಲ..
  2. ತುಂಬ ಇನಸುಲಿನ್ ಇದ್ದರೂ  ರಸೆಪ್ಟರುಗಳನ್ನು ತೆರೆಯುವುದು ಸಾಧ್ಯವಾಗಿರಲಿಕ್ಕಿಲ್ಲ..
  3. ಗ್ಲುಕೋಸು ಒಳ ಸೇರಲು ತುಂಬ ಕಡಿಮೆ ರಿಸೆಪ್ಟರ್ ಗಳಿರಬಹುದು.

ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವುದಿಲ್ಲ : ಹೆಚ್ಚಿನ ಗ್ಲೂಕೋಸು ರಕ್ತ ಪ್ರವಾಹದಲ್ಲೆ ಉಳಿದುಬಿಡುವವು.ಇದನ್ನೆ ಹೈಪರ್ ಗ್ಲಿಸಿಮಿಯಾಎನ್ನುವರು ( ಹೆಚ್ಚಿದ ರಕ್ತದ ಸಕ್ಕರೆ ಅಥವ ಹೆಚ್ಚಿದ ರಕ್ತದ ಗ್ಲೂಕೋಸು ಎಂದೂ ಕರೆಯುವುರು). ಜೀವ ಕೋಶದಲ್ಲಿ ಸಾಕಷ್ಟು ಗ್ಲೂಕೋಸು ಇಲ್ಲದಿದ್ದರೆ ಜೀವಕೋಶಗಳು ದೇಹದ ಸುಗಮ ಚಲನವಲನಕ್ಕೆ ಅಗತ್ಯವಾದ ಶಕ್ತಿಯನ್ನು ಉತ್ಪಾದಿಸಲಾಗುವುದಿಲ್ಲ.

ಮಧು ಮೇಹದ ಲಕ್ಷಣಗಳು.

ಮಧು ಮೇಹ ಇರುವವರು ವಿಭಿನ್ನ ಲಕ್ಷಣಗಳನ್ನು ಹೊಂದಿರುವರು. ಅವುಗಳಲ್ಲಿ ಕೆಲವು-

  1. ಪದೆ ಪದೇ ಮೂತ್ರವಿಸರ್ಜನೆ (ರಾತ್ರಿಯಲ್ಲಿ ಕೂಡಾ)
  2. ಚರ್ಮದ ಕೆರೆತ
  3. ದೃಷ್ಟಿ ಮಬ್ಬಾಗುವುದು.
  4. ಆಯಾಸ , ದುರ್ಬಲತೆ ಅನಿಸುವುದು.
  5. ಪಾದದಲ್ಲಿ ಜೋಮು ಅಥವ ಕಚಗುಳಿ
  6. ಅತಿ ನೀರಡಿಕೆ
  7. ಗಾಯಗಳು ಮಾಯುವುದು ನಿಧಾನ
  8. ಸದಾ ಅತಿ ಹಸಿವು
  9. ತೂಕ ನಷ್ಟ
  10. ಚರ್ಮದ ಸೊಂಕು.

ರಕ್ತದ ಸಕ್ಕರೆಯನ್ನು ಏಕೆ ನಿಯಂತ್ರಿಸಬೇಕು ?

ಬಹು ಕಾಲದ ವರೆಗಿ ರಕ್ತದಲ್ಲಿನ ಏರಿದ ಸಕ್ಕರೆಯ ಮಟ್ಟವು

  • ಕಾಲಾನುಕ್ರಮದಲ್ಲಿ ಹೆಚ್ಚಿದ ಗ್ಲೂಕೋಸು ರಕ್ತನಾಳಗಳ, ಮೂತ್ರ ಪಿಂಡಗಳ, ಕಣ್ಣುಗಳ ಮತ್ತು ನರಗಳ ಸಮಸ್ಯೆ ಉಂಟುಮಾಡುವುದು. ಅಲ್ಲದೆ ದೇಹದ  ಪ್ರಮುಖವಾದ ಅಂಗಗಳಿಗೆ ಹಾನಿ ಮಾಡುವುದು
  • ನರಗಳ ಸಮಸ್ಯೆಗಳು  (ನ್ಯುರೋಪತಿ)  ಪಾದಗಳಲ್ಲಿ ಅಥವ ದೇಹದ ಇತರ ಭಾಗಗಳಲ್ಲಿ ಸ್ಪರ್ಶದ ಅನುಭವ ಇಲ್ಲದಾಗಬಹುದು. ರಕ್ತನಾಳದ ರೋಗ ಬರಬಹುದು. ಇದರಿಂದ ಹೃದಯಾಘಾತ, ಪಕ್ಷಪಾತ ಮತ್ತು ಪರಿಚಲನಾ ಸಮಸ್ಯೆಗಳು ಬರುವವು.
  • ಕಣ್ಣಿನ  ಸಮಸ್ಯೆಯಲ್ಲಿ ರಕ್ತನಾಳಗಳಿಗೆ ಹಾನಿ (ರೆಟಿನೋಪತಿ), ಕಣ್ಣೀನ ಮೇಲೆ ಹೆಚ್ಚಿದ ಒತ್ತಡ( ಗ್ಲುಕೊಮಾ) ಕಣ್ಣಿಗೆ ಮಸೂರಕ್ಕೆ ಪೊರೆಬರುವುದು (ಕ್ಯಾಟರಾಕ್ಟ)
  • ಮೂತ್ರಪಿಂಡವು ತ್ಯಾಜ್ಯ ವಸ್ತುಗಳನ್ನು ರಕ್ತದಿಂದ ಹೊರ ಹಾಕುವುದನ್ನು ತಡೆಗಟ್ಟುವದು. ಹೆಚ್ಚಿದ ರಕ್ತದ ಒತ್ತಡವು ಹೃದಯವು ರಕ್ತವನ್ನು ಪಂಪು ಮಾಡಲು ಹೆಚ್ಚು ಕಷ್ಟಪಡುವಂತೆ ಮಾಡುವುದು.

ರಕ್ತದ ಒತ್ತಡದ ಬಗ್ಗೆ ಹೆಚ್ಚಿನ ಮಾಹಿತಿ

ಹೃದಯವು ಮಿಡಿದಾಗ ಅದು ರಕ್ತವನ್ನು ರಕ್ತನಾಳಗಳಿಗೆ ಪಂಪು ಮಾಡುವುದು ಮತ್ತು ಅಲ್ಲಿ ಒತ್ತಡವನ್ನು ಉಂಟುಮಾಡುವುದು. ಆರೋಗ್ಯವಂತರ ರಕ್ತನಾಳಗಳು ಸ್ಥಿತಿ ಸ್ಥಾಪಕ ಗುಣವನ್ನು ಹೊಂದಿರುತ್ತವೆ. ಹೃದಯವು ರಕ್ತವನ್ನು ಅವುಗಳಲ್ಲಿ ಪಂಪು ಮಾಡಿದಾಗ ಅವು ವಿಕಸನ ಹೊಂದುವವು. ಸಾಮಾನ್ಯ ಪರಿಸ್ಥಿತಿಯಲ್ಲಿ ಹೃದಯದ ಬಡಿತವು ನಿಮಿಷಕ್ಕೆ  60 ರಿಂದ 80 ಇರುವುದು.  ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಏರುವುದು ಮತ್ತು ವಿಶ್ರಾಂತಿ ಪಡೆದರೆ ಕಡಿಮೆಯಾಗುವುದು. ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಬದಲಾಗುವುದು. ಅದು ನಿಮಿಷ ನಿಮಿಷಕ್ಕೂ ಬದಲಾಗುವ ಸಾಧ್ಯತೆ ಇದೆ. ಬದಲಾದ ಭಂಗಿಗೆ ಅನುಗುಣವಾಗಿ, ವ್ಯಾಯಾಮ ಮಾಡಿದಾಗ, ನಿದ್ರೆಯಲ್ಲಿ ಬದಲಾವಣೆ ಆಗುವುದು. ವಯಸ್ಕನಲ್ಲಿ 130/80 ಗಿಂತ ಕಡಿಮೆ ಇರಬೇಕು. ಇದಕ್ಕಿಂತ ಹೆಚ್ಚು ಇರುವುದು ಏರಿದ ರಕ್ತದೊತ್ತಡ.  ಏರಿದ ರಕ್ತದ ಒತ್ತಡಕ್ಕೆ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಅನೇಕರಿಗೆ ಬಹಳ ವರ್ಷಗಳಿಂದ ಅವರಿಗೆ ಗೊತ್ತಿಲ್ಲದೆ ಏರಿದ ರಕ್ತದ ಒತ್ತಡವಿರುವುದು. ಅದಕ್ಕೂ ಆವೇಶ, ಗಾಬರಿ ಹೈಪರ್ ಆಕ್ಟೀವ್ ಅಗಿರುವುದಕ್ಕೆ ಸಂಬಂಧವಿಲ್ಲ.  ನೀವು ತುಂಬ ನೆಮ್ಮದಿಯವರಾಗಿದ್ದರೂ, ಆರಾಮಾಗಿದ್ದರೂ ರಕ್ತದ ಒತ್ತಡ ಹೆಚ್ಚಿರಬಹುದು. ಅನಿಯಂತ್ರಿತ ರಕ್ತದ ಒತ್ತಡದಿಂದ ಮಾರಣಾಂತಿಕವಾದ (ಪಾರ್ಶವವಾಯು)ಲಕ್ವ, ಹೃದಯಾಘಾತ, ಹೃದಯ ವೈಫಲ್ಯ, ಮೂತ್ರ ಪಿಂಡಗಳ ವೈಫಲ್ಯ  ಆಗಬಹುದು. ಇವೆಲ್ಲವುಗಳಿಂದ ಪ್ರಾಣಾಪಾಯದ ಸಾಧ್ಯತೆಯಿದೆ. ಅದಕ್ಕಾಗಿಯೇ ಏರು ರಕ್ತದ ಒತ್ತಡವನ್ನು “ಮೌನ ಕೊಲೆಗಾರ”  ಎನ್ನುವರು.

ಕೊಲೆಸ್ಟರಲ್ ಹೆಚ್ಚಿ ಮಾಹಿತಿ

ದೇಹದಲ್ಲಿನ ಏರಿದ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತದ ಅವಕಾಶವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ರಕ್ತದ ಪ್ರವಾಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಆಟ್ರಿಯಾಗಳ ಗೋಡೆಗಳ ಮೇಲೆ ದಪ್ಪನಾದ ಪೆಡುಸಾದ ಮೇಲ್ ಮೈ ಉಂಟಾಗುವಂತೆ ಮಾಡುವುದು. ಇದರಿಂದ ಅವು ಪೆಡುಸಾಗಿ ತಮ್ಮ ಸ್ಥಿತಿಸ್ಥಾಪಕತೆಯನ್ನು ಕಳೆದುಕೊಳ್ಳುವವು. ಹೃದಯಕ್ಕೆ ಹರಿಯುವ ರಕ್ತವು ನಿಧಾನವಾಗುವುದು. ಹಲವು ಸಲ ನಿಂತು ಬಿಡುವುದು. ರಕ್ತದ ಪ್ರವಾಹವು ಕಡಿಮೆಯಾದಾಗ ಎದೆ ನೋವು, ಅಂಜಿನಾ ಉಂಟಾಗಬಹುದು. ರಕ್ತ ಪ್ರವಾಹವು ಪೂರ್ಣವಾಗಿ ನಿಂತರೆ ಹೃದಯಘಾತ ಆಗುವುದು. ರಕ್ತದ ಏರು ಒತ್ತಡದ ಜೊತೆ ಹೆಚ್ಚಿದ ಕೊಲೆಸ್ಟ್ರಾಲ್, ಮಧುಮೇಹವೂ ಇದ್ದರೆ ಹೃದಯಾಘಾತದ ಮತ್ತು ಲಕ್ವದ ಸಂಭವನೀಯತೆಯ ಗಂಡಾಂತರ ಹದಿನಾರು ಪಟ್ಟು ಹೆಚ್ಚಾಗುವುದು.

ಮಧು ಮೇಹದ ನಿರ್ವಹಣೆ

ಪಥ್ಯ, ವ್ಯಾಯಾಮ, ವೈಯುಕ್ತಿಕ ಆರೋಗ್ಯ ಮತ್ತು ಇನ್‌ಸುಲಿನ್ ಇಂಜೆಕಷನ್ ಅಥವಾ ಮಾತ್ರೆಗಳು (ವೈದ್ಯರ ಸಲಹೆಯ ಮೇರೆಗೆ) ಇವುಗಳು ಮಧುಮೇಹದಿಂದ ಬರಬಹುದಾದ ಸಮಸ್ಯೆಗಳನ್ನು ತಡೆಯಬಹುದು.

ವ್ಯಾಯಾಮ : ವ್ಯಾಯಾಮವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ದೇಹವು ಸಕ್ಕರೆಯನ್ನು ಬಳಸುವ ಶಕ್ತಿಯನ್ನು ಹೆಚ್ಚಿಸುವುದು. ಗಂಟೆಗೆ 6 ಕಿ. ಮೀ ನಂತೆ ನೆಡೆಯುವುದರಿಂದ 135 ಕ್ಯಾಲೋರಿ ಶಕ್ತಿಯನ್ನು 30 ನಿಮಿಷದಲ್ಲಿ ಉರಿಸಬಹುದು. ಅದೇ ಸೈಕಲ್ಲು ಹೊಡೆದರೆ 200 ಕ್ಯಾಲೋರಿ ಬಳಕೆಯಾಗುವುದು.

ಮಧು ಮೇಹಿಗಳಲ್ಲಿ ಚರ್ಮದ ಅರೈಕೆ : ಚರ್ಮದ ಆರೈಕೆಯು ಮಧು ಮೇಹವಿರುವವರಲ್ಲಿ ಅತಿ ಅಗತ್ಯ. ಹೆಚ್ಚಿನ ಪ್ರಮಾಣದ ಗ್ಲೂಕೋಸು ಬ್ಯಾಕ್ಟಿರಿಯ ಮತ್ತು ಫಂಗೈಗಳಿಗೆ ಮಧುಮೇಹಿಗಳು ಫಲವತ್ತಾದ ಭೂಮಿ. ಪರಿಚಲನೆಯು ಕಡಿಮೆ ಇರುವುದರಿಂದ ದೇಹವು ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಪಡೆಯಲು ಆಗುವುದಿಲ್ಲ. ದೇಹದ ರಕ್ಷಕ ಕೋಶಗಳು ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ನಾಶಮಾಡಲು ಆಗುವುದಿಲ್ಲ. ಹೆಚ್ಚಿದ ಗ್ಲೂಕೋಸು ಚರ್ಮವನ್ನು ಒಣಗಿಸುವುದು ಆಗ ತುರಿಕೆಯನ್ನು ಹೆಚ್ಚಿಸುವುದು.

ದೇಹವನ್ನು ನಿಯಮಿತವಾಗಿ ಪರಿಶೀಲಿಸಿ,ಕೆಳಗಿನವುಗಳು ಕಂಡುಬಂದರೆ ವೈದ್ಯರಿಗೆ ವರದಿ ಮಾಡಿ

  • ಚರ್ಮದ ಬಣ್ಣ  , ದಪ್ಪ ಮತ್ತು ಹೊಳಪು ಬದಲಾದರೆ
  • ಬ್ಯಾಕ್ಟೀರಿಯಾ ಸೋಂಕಿನ ಮೊದಲ ಲಕ್ಷಣ, ಕೆಂಪಾಗುವುದು ಊದಿಕೊಳ್ಳುವುದು, ಗುಳ್ಳೆ ಅತವ ಗಾಯ, ಮುಟ್ಟಿದಾಗ ಬಿಸಿ ಎನಿಸುವ  ಚರ್ಮ.
  • ತೊಡೆ, ಯೋನಿ, ಆಸನ ಸ್ಥಳದಲ್ಲಿ ತುರಿಕೆ , ಕೊಂಕುಳ, ಸ್ಥನ ಮತ್ತು ಬೆರಳುಗಳ ಮಧ್ಯ ತುರಿಕೆ ಆದರೆ ಅದು ಫಂಗಲ್ ಸೊಂಕಿನ ಸಂಕೇತ..
  • ಬೇಗ ಮಾಯದ ಗಾಯ.

ಚರ್ಮದ ರಕ್ಷಣೆಗೆ ಸೂಕ್ತ ಸಲಹೆಗಳು

  • ದಿನವೂ  ಮೃದುವಾದ ಸಾಬುನು ಮತ್ತು  ಬೆಚ್ಚಗಿನ ನೀರು ಉಪಯೋಗಿಸಿ ಸ್ನಾನ ಮಾಡಿ.
  • ಅತಿ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ಬಿಡಿ.
  • ಸ್ನಾನದ ನಂತರ  ಚರ್ಮದ ನೆರಿಗೆ ಇರುವ ಭಾಗಗಳ ಬಗೆಗೆ ಎಚ್ಚರ ವಹಿಸಿ.  ಒಣಗಿಸಿ. ಹಸಿ ಇಲ್ಲದಿರಲಿ. , ಕೊಂಕುಳ, ತೊಡೆ ಸಂದು, ಬೆರಳ ಸಂದುಗಳಲ್ಲಿ ತೇವ ಇಲ್ಲದಿರಲಿ. ಅಲ್ಲಿ ಫಂಗಲ್ ಸೊಂಕು ತಗಲುವ ಸಾಧ್ಯತೆ  ಇದೆ.
  • ಚರ್ಮ ಒಣದಾಗಿರಬಾರದು. ನೀವು ಅದನ್ನು ಕೆರೆದಾಗ ಅದು ಸೀಳಿ ಬ್ಯಾಕ್ಟೀರಿಯಾ ಒಳ ಸೇರಲು ತೆರೆದ ಬಾಗಿಲು ಆಗಬಹುದು..
  • ದ್ರವಗಳನ್ನು ಹೆಚ್ಚು ಸೇವಿಸಿ. ಚರ್ಮ ನಿರ್ಜಲವಾಗದಿರಲಿ.

ಗಾಯಕ್ಕೆ ಆರೈಕೆ :

ಆಗೀಗ ಕತ್ತರಿಸಿಕೊಳ್ಳುವುದು, ತೆರಚುಗಾಯ ಮಾಡಿಕೊಳ್ಳದೆ ಇರುವುದು ಆಗದ ಮಾತು. ಮಧುಮೇಹ ಇರುವವರು ಚಕ್ಕ ಪುಟ್ಟ ಗಾಯಗಳಾದರೂ ಹೆಚ್ಚಿನ ಕಾಳಜಿ ವಹಿಸಬೇಕು. ಸೋಂಕು ತಗುಲದಂತೆ ಎಚ್ಚರವಹಿಸಬೇಕು. ಅವುಗಳಿಗೆ ತಕ್ಷಣ ಚಿಕಿತ್ಸೆ ಮಾಡಬೇಕು:

  • ಸಾಧ್ಯವಾದಷ್ಟು ಬೇಗ ಬೆಚ್ಚಗಿನ  ನೀರು ಮತ್ತು ಸೋಪು ಉಪಯೋಗಿಸಿ ಗಾಯವನ್ನು ತೊಳೆಯಿರಿ
  • ಆಲ್ಕೊಹಾಲ್ ಮತ್ತು  ಪೂತಿನಾಶಕಗಳನ್ನು ಬಳಸಬೇಡಿ. ಅವುಗಳಲ್ಲಿ ಅಯೋಡಿನ್ ಇರುವುದರಿಂದ ಚರ್ಮಕ್ಕೆ ಕಿರಕಿರಿಯಾಗಬಹುದು.
  • ವೈದ್ಯರ ಸಲಹೆಯ ಮೆರೆಗೆ ಅಂಟಿಬಯಾಟಿಕ್ ಕ್ರೀಮು ಬಳಸಿ.
  • ಅ ಜಾಗವನ್ನು ಸೂಕ್ತ ಬ್ಯಾಂಡೇಜಿನಿಂದ  ಸುತ್ತಿ.   ಬ್ಯಾಂಡ್ ಏಡ್ ಬಳಸಬಹುದು.

ನಿಮಗೇನಾದರೂ ಹೀಗೆ ಆದರೆ ವೈದ್ಯರನ್ನು ಕೂಡಲೆ ಸಮಪರ್ಕಿಸಿ,

  1. ಗಂಭೀರ ಕತ್ತರಿಸಿದ ಅಥವ ಸುಟ್ಟ ಗಾಯ.
  2. ಚರ್ಮದ ಮೇಲೆ ಎಲ್ಲಿಯಾದರೂ ಕೆಂಪಾದರೆ, ಬಾವು ಬಂದರೆ, ಕೀವು, ಇಲ್ಲವೆ ನೋವು ಇದ್ದರೆ ಅದು ಸೋಂಕಿನ ಲಕ್ಷಣ  .
  3. ರಿಂಗ್ ವರ್ಮ್, ಯೋನಿಯಲ್ಲಿ ತುರಿಕೆ, ಅಥವ ಫಂಗಲ್ ಸೋಂಕು

ಮಧು ಮೇಹದಲ್ಲಿ ಪಾದಗಳ ಅರೈಕೆ : ಮಧು ಮೇಹವಿದ್ದಾಗ ರಕ್ತದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಇದ್ದರೆ ನರಗಳಿಗೆ ಹಾನಿಯಾಗಿರುವುದು. ಅದರಿಂದ ಪಾದದಲ್ಲಿ ಸ್ಪರ್ಶ ಜ್ಞಾನವೆ ಇರುವುದಿಲ್ಲ. ಪಾದಗಳ ಆರೈಕೆಗೆ ಇಲ್ಲಿ ಕೆಲವು ಸರಳ ಕ್ರಮಗಳನ್ನು ತೀಳಿಸಿದೆ:

ಪಾದಗಳನ್ನು ನಿಯಮಿತವಾಗಿ ಪರೀಕ್ಷಿಸಿ: ಸಾಕಷ್ಟು ಬೆಳಕಿನಲ್ಲಿ ಪ್ರತಿ ದಿನ ನಿಮ್ಮ ಪಾದಗಳನ್ನು ಗಮನಿಸಿ. ಅಲ್ಲಿ ಏನಾದರು ತೆರದ, ಕತ್ತರಿಸಿದ ಗಾಯಗಳಿವೆಯಾ ಎಂದು ನೋಡಿ, ಚರ್ಮದ ಸೀಳು, ಗುಳ್ಳೆಗಳು, ಕೆಂಪು ಮಚ್ಚೆಗಳು,ಬಾವು ಇತ್ಯಾದಿ.. ಹೆಬ್ಬಿರಳಿನ ಸಂದಿ ಮತ್ತು ಉಂಗುಷ್ಟಗಳ ಕೆಳಗೆ ಮತ್ತು ಮಧ್ಯ ನೋಡಲು ಮರೆಯ ಬೇಡಿ..

ಪಾದಗಳನ್ನು ನಿತ್ಯ ತೊಳೆದುಕೊಳ್ಳಿ : ಪಾದಗಳನ್ನು ಮೃದು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆದು ಕೊಳ್ಳಿ.

ಹೆಬ್ಬೆರಳಿನ ಉಗುರು ನಿಯಮಿತವಾಗಿ ಕತ್ತರಿಸಿಕೊಳ್ಳಿ.

ಸೂಕ್ತವಾದ ಪಾದರಕ್ಷೆ ಧರಿಸಿ ಪಾದವನ್ನು ರಕ್ಷಿಸಿ ಕೊಳ್ಳಿ.

ಬಾಯಿಯ ಆರೋಗ್ಯ

ದೈನಂದಿನ, ವ್ಯವಸ್ಥಿತವಾದ ಮನೆಯಲ್ಲಿನ ಆರೈಕೆಯಿಂದ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.ಹಲ್ಲುಜ್ಜುವುದು: ನಿಮ್ಮ ಬ್ರಷ್ಷು ಹೇಗಿದೆ ? ಗಟ್ಟಿ ಹಾಗೂ ಒರಟಾಗಿದೆಯಾ ?  ಅವು ದವಡೆಗಳಿಗೆ  ಹಾನಿ ಮಾಡಬಹುದು. ತಕ್ಷಣ ಮೃದುವಾದುದಕ್ಕೆ ಬದಲಾಯಿಸಿ..

ಉಜ್ಜುವ ತಂತ್ರಗಳು :

  • ದಿನಕ್ಕೆ ಎರಡುಬಾರಿ ಹಲ್ಲು ಉಜ್ಜಿಕೊಳ್ಳಿ.
  • ಹಲ್ಲು ಉಜ್ಜುವಾಗ ಬ್ರಷ್‌ನ ಬ್ರಿಸಲ್‌ಗಳು ಒಸಡು ಮತ್ತು ಹಲ್ಲಿನ ನಡುವಿರುವ ಜಾಗಕ್ಕೆ ತಾಗಿಸಿ ಕಂಪನ ಉಂಟು ಮಾಡುವ ಸಣ್ಣ ಸಣ್ಣ ಕದಲಿಕೆಗಳ ಮೂಲಕ ಉಜ್ಜಿ. ಇದರಿಂದ ಅಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
  • ನಂತರ ಸಣ್ಣ ಸಣ್ಣ ಬೀಸು ಚಲನೆ (ಸ್ಟ್ರೋಕ್‌) ಮೂಲಕ ಗಲ್ಲದ ಒಳಭಾಗ, ನಾಲಿಗೆ ಮತ್ತು ಹಲ್ಲಿನ ಆಹಾರವನ್ನು ಅರೆಯುವ ಭಾಗವನ್ನು ಸ್ವಚ್ಛಗೊಳಿಸಿದ. ಕೆರೆಯುವಂತಹ ಸ್ಟ್ರೋಕ್‌ಗಳನ್ನು ಕೊಡಬೇಡಿ. ಇದರಿಂದ ಒಸಡಿನ ಅಂಗಾಂಶ ಮತ್ತು ಹಲ್ಲಿಗೆ ಹಾನಿಯಾಗುವ ಸಾಧ್ಯತೆಯಿದೆ.
  • ಟೂತ್‌ಬ್ರಷ್‌ನ ಬ್ರಿಸಲ್ಸಗಳ ಮೇಲೂ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಂಡಾಗ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಟೂತ್‌ ಬ್ರಷ್‌ ಬದಲಿಸಿ.
  • ಊಟ ಮಾಡಿದ ಪ್ರತಿಬಾರಿ ನವಿರಾದ ನೂಲಿನ ಮೂಲಕ (ಫ್ಲಾಸಿಂಗ್‌) ಮಾಡುವುದು ಹಲ್ಲನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಉತ್ತಮ ವಿಧಾನ

ಈ ಕೆಳಗಿನ ಅಂಶಗಳೇನಾದರೂ ನಿಮಗಿದ್ದರೆ ದಂತವೈದ್ಯರನ್ನು ಭೇಟಿ ಮಾಡಿ

  • ತಿನ್ನುವಾಗ ಅಥವಾ ಹಲ್ಲುಜ್ಜುವಾಗ ರಕ್ತ ಬಂದರೆ
  • ವಸಡು ಕೆಂಪಾಗಿದ್ದರೆ, ಊತವಿದ್ದರೆ ಅಥವಾ ಮೃದುವಾಗಿದ್ದರೆ
  • ವಸಡು ಹಲ್ಲಿನಿಂದ ಮೇಲೆ ಸರಿದಿದ್ದರೆ
  • ವಸಡನ್ನು ಮುಟ್ಟಿದಾಗ ನಿಮ್ಮ ಹಲ್ಲು ಮತ್ತು ವಸಡಿನ ನಡುವಿನಿಂದ ಕೀವು ಬಂದರೆ
  • ಹಲ್ಲುಗಳ ಒಟ್ಟಾರೆ ಹೊಂದಾಣಿಕೆಯಲ್ಲಿ ಬದಲಾವಣೆ ಕಂಡುಬಂದರೆ
  • ಅಗಿಯುವಾಗ ಹಲ್ಲುಗಳು ಕೂರುವ ವಿಧಾನದಲ್ಲಿ ಬದಲಾವಣೆ ಕಂಡುಬಂದರೆ
  • ಸತತ ಉಸಿರಿನ ದುರ್ವಾಸನೆ ಅಥವಾ ನಾಲಿಗೆಯ ಮೇಲೆ ಕೆಟ್ಟ ರುಚಿ

ಕಣ್ಣಿನ ಆರೋಗ್ಯ

ಕಣ್ಣಿನ ಪೊರೆ (ಕ್ಯಾಟರಾಕ್ಟ) ಅಥವಾ ಗ್ಲೂಕೋಮಾ ಬರುವ ಸಾಧ್ಯತೆ ಆರೊಗ್ಯವಂತರಿಗೆ ಹೋಲಿಸಿದಾಗ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಎರಡು ಪಟ್ಟು ಹೆಚ್ಚು. ತುಂಬ ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ ಹೆಚ್ಚಿದ್ದರೆ ಕಣ್ಣಿನಲ್ಲಿರುವ ಸೂಕ್ಷ್ಮ ರಕ್ತನಾಳಗಳಿಗೆ ಧಕ್ಕೆಯಾಗುತ್ತದೆ. ಇದು ಡಯಾಬೆಟಿಕ್‌ ರೆಟಿನೋಪತಿಗೆ ಕಾರಣವಾಗಬಹುದು. ಮಧುಮೇಹದಿಂದ ಬಳಲುತ್ತಿರುವರು ದೃಷ್ಟಿಹೀನರಾಗುವುದಕ್ಕೆ ಡಯಾಬಿಟಿಕ್‌ ರೆಟಿನೋಪತಿಯೇ ಪ್ರಮುಖ ಕಾರಣ. ಮಧುಮೇಹ ಇರುವುದು ತಿಳಿದ ಕೂಡಲೇ ಪ್ರತಿವರ್ಷ ಸಂಪೂರ್ಣ ಕಣ್ಣಿನ ಆರೋಗ್ಯದ ತಪಾಸಣೆ ಮಾಡಿಸುವುದು ಅತ್ಯಗತ್ಯ. ಕೆಳಗಿನ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ

  • ನೋಟದಲ್ಲಿ ತೇಲುತ್ತಿರುವ ಕಣಗಳು, ಚುಕ್ಕೆಗಳು ಮತ್ತು ಜೇಡರ ಬಲೆಯಂತೆ ಕಂಡರೆ, ಕಣ್ಣು ಮಂಜಾಗುವುದು, ಮಸುಕಾಗುವುದು, ಕಪ್ಪುಚುಕ್ಕೆಗಳು, ಕಣ್ಣುನೋವು ಅಥವಾ ಸತತ ಕೆಂಪಾಗಿರುವಿಕೆ
  • ಪುಸ್ತಕಗಳನ್ನು ಅಥವಾ ಟ್ರಾಫಿಕ್‌ ಚಿಹ್ನೆಗಳನ್ನು ಅಥವಾ ಓದಲು ಕಷ್ಟವಾಗುವುದು ಪರಿಚಿತವಾಗಿರುವ ವಸ್ತುಗಳ ನಡುವಿನ ಬೇಧವನ್ನು ಗುರುತಿಸಲು ಸಾಧ್ಯವಾಗದೇ ಇರುವುದು.
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate