অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಮಿಬಿಕ್ ರೋಗ

ವ್ಯಾಖ್ಯೆ

ಕರುಳಿನಲ್ಲಿರುವ ಎನ್ಟಮಿಬಾ ಹಿಸ್ಟೋಲಿಟಿಕಾ ಎಂಬ ಪರಾವಲಂಬಿಯಿಂದ ಯಕೃತ್ತಿನಲ್ಲಿ ಕೀವು ಸಂಗ್ರಹವಾಗುವುದನ್ನು ಅಮಿಬಿಕ್ ಯಕೃತ್ತಿನ ಗುಳ್ಳೆಗಳು ಎಂದು ಕರೆಯಲಾಗುತ್ತದೆ.

ಇತರೆ ಹೆಸರುಗಳು

ಹೆಪೆಟಿಕ್ ಅಮಿಬಿಯಾಸಿಸ್, ಎಕ್ಸ್ಟ್ರಾ ಇನ್ಟಸ್ಟೈನಲ್ ಅಮಿಬಿಯಾಸಿಸ್, ಅಬೆಸೆಸ್ –ಅಮಿಬಿಕ್ ಲಿವರ್

ಕಾರಣಗಳು

ಅಮೀಬಿಕ್ ಲಿವರ್ ಅಬಸೆಸ್ಸಿಗೆ ಕಾರಣ ಎನ್ಟಮಿಬಾ ಹಿಸ್ಟೋಲಿಟಿಕಾ.  ಇದೇ ಜೀವಿಯೇ ಕರುಳಿನ ಉರಿಯೂತವಾದ ಅಮಿಬಿಯಾಸಿಸ್ಸಿಗೂ ಕಾರಣ.  ಈ ಜೀವಿಯು ರಕ್ತದ ಮೂಲಕ ಯಕೃತ್ತಿಗೆ ಸೇರುತ್ತದೆ. ಮನುಷ್ಯನ ಮಲದಿಂದ ಕಲುಷಿತ ಆಹಾರ ಅಥವಾ ನೀರಿನ ಮೂಲಕ ಸಿಸ್ಟುಗಳು ಹರಡುವುದರಿಂದಲೇ ಈ ರೋಗವುಂಟಾಗುತ್ತದೆ.  ಅಲ್ಲದೇ, ಮನುಷ್ಯನ ಮಲವನ್ನು ಗೊಬ್ಬರವಾಗಿ ಬಳಸುವುದರಿಂದಲೂ ಮತ್ತು ವ್ಯಕ್ತಿಗಳಿಬ್ಬರ ಪರಸ್ಪರ ಸಂಪರ್ಕದಿಂದಲೂ ಇದು ಹರಡಬಹುದು. ಅಮಿಬಿಕ್ ಯಕೃತ್ತಿನ ಅಬಸೆಸ್ಸಿಗೆ ಇತರ ಕಾರಣಗಳು:

  • ಅಪೌಷ್ಟಿಕತೆ
  • ವೃದ್ಧಾಪ್ಯ
  • ಗರ್ಭಧಾರಣೆ
  • ಸ್ಟಿರಾಯ್ಡುಗಳ ಬಳಕೆ
  • ಕ್ಯಾನ್ಸರ್
  • ಇಮ್ಯುನೋಸಪ್ರೆಷನ್ (ರೋಗ ನಿರೋಧಕ ಗುಣದ ಕುಸಿತ)
  • ಕುಡಿತ
  • ಉಷ್ಣಪ್ರದೇಶಗಳಿಗೆ ಈಚಿನ ಪ್ರವಾಸ
  • ಪುರುಷರಲ್ಲಿ ಸಲಿಂಗ ಕಾಮ

ರೋಗ ಲಕ್ಷಣಗಳು

ರೋಗಿಗಳಿಗೆ ಉರಿಯೂತ ಇರಬಹುದು ಅಥವಾ ಇಲ್ಲದೇ ಇರಬಹುದು.  ಈ ಕೆಳಕಂಡ ರೋಗ ಲಕ್ಷಣಗಳು ಕಾಣಿಸುತ್ತವೆ:

  • ಜ್ವರ
  • ಹೊಟ್ಟೆನೋವು, ವಿಶೇಷವಾಗಿ ಹೊಟ್ಟೆಯ ಬಲ, ಮೇಲ್ಭಾಗದಲ್ಲಿ.  ನೋವು ತೀವ್ರವಾಗಿಯೂ, ಸತತವಾಗಿಯೂ, ತಿವಿತದಂತೆಯೂ ಇರುತ್ತದೆ.
  • ಅಸೌಖ್ಯ, ಮುಜುಗರ, ನೋವಿನ ಭಾವನೆ, ಖಿನ್ನತೆ
  • ಬೆವರುವಿಕೆ
  • ನಡುಕ
  • ಹಸಿವಾಗದಿರುವಿಕೆ
  • ತೂಕ ನಷ್ಟ
  • ಬೇಧಿ
  • ಕಾಮಾಲೆ
  • ಕೀಲು ನೋವು

ಪರೀಕ್ಷೆಗಳು ಮತ್ತು ತಪಾಸಣೆಗಳು

ಈ ಕೆಳಕಂಡ ಪರೀಕ್ಷೆಗಳ ಮೂಲಕ ಯಕೃತ್ತಿನ ಅಬಸೆಸ್ ಪತ್ತೆ ಮಾಡಬಹುದು:

  • ಜಠರದ ಅಲ್ಟ್ರಾ ಸೌಂಡ್
  • ಜಠರದ ಸಿಟಿ ಸ್ಕ್ಯಾನ್ ಅಥವಾ ಎಂಆರ್ ಐ
  • ಯಕೃತ್ತಿನ ಬಯಾಪ್ಸಿ –ಇದರಿಂದ ಉಂಟಾಗ ಬಹುದಾದ ಸಂಕೀರ್ಣ ಸಮಸ್ಯೆಗಳನ್ನು ಮನಗಂಡು, ಇದನ್ನು ತುಂಬ ವಿರಳವಾಗಿ ಮಾಡಲಾಗುತ್ತದೆ.
  • ಯಕೃತ್ತಿನ ಸ್ಕ್ಯಾನ್
  • ಯಕೃತ್ತಿ ಕಾರ್ಯಕ್ಷಮತೆಯ ಪರೀಕ್ಷೆ
  • CBC ಪರೀಕ್ಷೆಯು ರಕ್ತದಲ್ಲಿ ಬಿಳಿ ರಕ್ತ ಕಣಗಳ ಹೆಚ್ಚಳವನ್ನು ತೋರಿಸುವ ಮೂಲಕ, ಸೋಂಕು ತಗುಲಿರುವುದನ್ನು ತಿಳಿಸುತ್ತದೆ.
  • ಅಮಿಬೋಸಿಸ್ ಸೀರಿಯಾಲಜಿ ಪರೀಕ್ಷೆಯು ಧನಾತ್ಮಕವಾಗಿರುತ್ತದೆ.

ತಡೆ

ಶುದ್ದೀಕರಿಸಿದ ನೀರನ್ನೇ ಕುಡಿಯಿರಿ ಹಾಗೂ ಬೇಯಿಸದ ತರಕಾರಿ ಮತ್ತು ಸುಲಿಯದ ಹಣ್ಣುಗಳನ್ನು ತಿನ್ನಬೇಡಿ.  ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನ ಶುದ್ಧೀಕರಣ ಮತ್ತು ಅಭಿವೃದ್ಧಿ ಹೊಂದ ಪ್ರದೇಶಗಳಲ್ಲಿ ಕಸ ನಿರ್ವಹಣೆ ಮಾಡುವುದು ಒಳಿತು.ವೈಯಕ್ತಿಕ ಸ್ವಚ್ಛತೆ ಊಟಕ್ಕೆ ಮುನ್ನ ಹಾಗೂ ವಿಸರ್ಜನೆಯ ನಂತರ ಕೈ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಚಿತ್ರಗಳು

ಯುಕೃತ್ತಿನ ಜೀವಕೋಶಗಳ ಸಾವು

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate