ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಿರೋಸಿಸ್

ಯಕೃತ್ತಿನಲ್ಲಿ ಉಂಟಾಗುವ ಮಚ್ಚೆ ಹಾಗೂ ಯಕೃತ್ತಿನ ಕಾರ್ಯ ವೈಫಲ್ಯದಿಂದ ಉಂಟಾಗುವ ಕಾಯಿಲೆಗೆ ಸಿರೋಸಿಸ್ ಎಂದು ಹೆಸರು.

ವ್ಯಾಖ್ಯೆ

ಯಕೃತ್ತಿನಲ್ಲಿ ಉಂಟಾಗುವ ಮಚ್ಚೆ ಹಾಗೂ ಯಕೃತ್ತಿನ ಕಾರ್ಯ ವೈಫಲ್ಯದಿಂದ ಉಂಟಾಗುವ ಕಾಯಿಲೆಗೆ ಸಿರೋಸಿಸ್ ಎಂದು ಹೆಸರು. ಇದು ಅನೇಕ ಸಮಸ್ಯೆಗಳಿಗೆ ಮೂಲ. ಇದರಿಂದ ಜಠರದಲ್ಲಿ ಜೀವದ್ರವದ ಸಂಗ್ರಹ (ಎಸೈಟ್ಸ) ರಕ್ತಸ್ರಾವದ ಸಮಸ್ಯೆಗಳು (ಕಾಗುಲೋಪತಿ), ಯಕೃತ್ತಿನಲ್ಲಿರುವ ರಕ್ತದ ನಾಳಗಳಲ್ಲಿ ಹೆಚ್ಚಿದ ಒತ್ತಡ (ಪೋರ್ಟಲ್ ಹೈಪರ್ ಟೆನ್ಷನ್) ಮತ್ತು ಗೊಂದಲ ಅಥವಾ ಪ್ರಜ್ಞಾಸ್ಥಿತಿಯ ಮಟ್ಟದಲ್ಲಿ ಬದಲಾವಣೆ (ಹೆಪಟಿಕ್ ಎನ್ಸೆಫಾಲೋಪತಿ) ಮುಂತಾದ ಸಮಸ್ಯೆಗಳು ಕಾಣಿಸುತ್ತವೆ.

ಪರ್ಯಾಯ ಹೆಸರುಗಳು

ಲಿವರ್ ಸಿರೋಸಿಸ್

ಕಾರಣಗಳು

ದೀರ್ಘ ಕಾಲದ ಯಕೃತ್ತಿನ ಸಮಸ್ಯೆಯಿಂದ ನರಳುವವರು, ಉರಿಯೂತ ಹಾಗೂ ದೀರ್ಘ ಕಾಲ ಮದ್ಯಪಾನ ಮಾಡುವರಲ್ಲಿ ಯಕೃತ್ತಿನ ಸಿರೋಸಿಸ್ ಕಾಣಿಸಿಕೊಳ್ಳುತ್ತದೆ. ಹೆಪಟೈಟಿಸ್ ಬಿ, ಔಷಧಗಳು, ಯಕೃತ್ತಿನ ಉರಿಯೂತ, ಯಕೃತ್ತಿನ ವಿಸರ್ಜನೆಯಲ್ಲಿ ಸಮಸ್ಯೆ (ಬಿಲಿಯರಿ ವ್ಯವಸ್ಥೆಯಲ್ಲಿ) ಗಳೂ ಸಿರೋಸಿಸಿಗೆ ಇತರ ಕಾರಣಗಳು.

ರೋಗ ಲಕ್ಷಣಗಳು

 • ಮಹೋದರ
 • ಕಾಲುಗಳಲ್ಲಿ ಊತ
 • ರಕ್ತಯುಕ್ತ ವಾಂತಿ
 • ಗೊಂದಲ
 • ಕಾಮಾಲೆ
 • ಚರ್ಮದ ಮೇಲೆ ಚಿಕ್ಕ, ಕೆಂಪುಜೇಡದಂಥ ರಕ್ತ ನಾಳಗಳು
 • ಸುಸ್ತು
 • ತೂಕನಷ್ಟ
 • ತಲೆಸುತ್ತು ಮತ್ತು ವಾಂತಿ
 • ನಪುಂಸಕತ್ವ ಮತ್ತು ಲೈಂಗಿಕತೆಯಲ್ಲಿ ನಿರಾಸಕ್ತಿ
 • ಹೆಮೊರೋಯ್ಡ್ ಸ್ರಾವ

ಈ ರೋಗದೊಂದಿಗೆ ಕಾಣಿಸಿಕೊಳ್ಳುವ ಹೆಚ್ಚುವರಿ ರೋಗ ಲಕ್ಷಣಗಳು:

 • ಕಡಿಮೆಯಾದ ಮೂತ್ರ ವಿಸರ್ಜನೆಯ ಪ್ರಮಾಣ
 • ದೇಹಾದ್ಯಂತ ಊತ
 • ಬಿಳಿಚಿಕೊಂಡ ಅಥವಾ ಜೇಡಿಮಣ್ಣು ಬಣ್ಣದ ಮಲ
 • ಮೂಗಿನಲ್ಲಿ ಅಥವಾ ವಸಡಿನಲ್ಲಿ ರಕ್ತಸ್ರಾವ
 • ಗೈನೆಕೋಮಾಸ್ಟಿಯಾ (ಗಂಡಸರಲ್ಲಿ ಸ್ತನ ಬೆಳವಣಿಗೆ)
 • ಹೊಟ್ಟೆ ನೋವು
 • ಅಜೀರ್ಣ
 • ಜ್ವರ

ಕ್ರಮೇಣವಾಗಿ ಈ ಕೆಳಕಂಡ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು ಅಥವಾ ಯಾವುದೇ ರೋಗ ಲಕ್ಷಣಗಳೂ ಕಾಣಿಸದೇ ಇರಬಹುದು.

ತಪಾಸಣೆಗಳು ಮತ್ತು ಪರೀಕ್ಷೆಗಳು

ದೈಹಿಕ ಪರೀಕ್ಷೆಯಿಂದಲೇ ರೋಗದ ಸಾಧ್ಯತೆಯನ್ನು ಪತ್ತೆ ಹಚ್ಚಬಹುದು. ಊದಿಕೊಂಡ ಯಕೃತ್ತು ಮತ್ತು ಜಠರ, ಹಳದಿ ಕಣ್ಣು ಮತ್ತು ಚರ್ಮ, ಕೆಂಪು ಜೇಡರ ಬಲೆಯಂತೆ ಕಾಣುವ ಚರ್ಮದ ಮೇಲೆಯೇ ಕಾಣುವ ರಕ್ತನಾಳಗಳು, ಸ್ಥನದ ಮಾಂಸಲಗಳು, ಪುರುಷರಲ್ಲಿ ಸಣ್ಣದಾದ ವೃಷಣಗಳು, ಕೆಂಪಾದ ಕೈಗಳು, ಕಡ್ಡಿಯಂತಾದ ಬೆರಳುಗಳು ರೋಗದ ಇರುವನ್ನು ಸಾರುತ್ತದೆ. ಇದಲ್ಲದೇ, ಈ ಕೆಳಕಂಡ ಪರೀಕ್ಷೆಗಳನ್ನು ಮಾಡಬೇಕಾಗಬಹುದು:

 • ಅನಿಮಿಯಾ
 • ಕಾಗುಲೇಷನ್ ಅಬ್ ನಾರ್ಮಲಿಟಿಸ್
 • ಯಕೃತ್ತಿನ ಕಿಣ್ವಗಳ ಏರಿಕೆ
 • ಬಿಲಿರುಬಿನ್ ಪ್ರಮಾಣದಲ್ಲಿ ಏರಿಕೆ
 • ಸೀರಂ ಅಲ್ಬುಮಿನ್ ಇಳಿಕೆ,
 • ಊದಿಕೊಂಡ ಯಕೃತ್ತು (ಜಠರದ ಕ್ಷ ಕಿರಣಗಳ ಮೂಲಕ)

ಯಕೃತ್ತಿನ ಬಯಾಪ್ಸಿಯು ಸಿರೋಸಿಸಿನ ಇರುವಿಕೆಯನ್ನು ಖಾತರಿಗೊಳಿಸುತ್ತದೆ

ತಡೆ

ಹೆಚ್ಚು ಮದ್ಯಪಾನ ಮಾಡುವುದು ಬೇಡ. ಅದನ್ನು ನಿಮ್ಮಿಂದಲೇ ನಿಯಂತ್ರಿಸಲು ಸಾಧ್ಯವಾಗದು ಎನಿಸಿದರೆ, ವೃತ್ತಿಪರ ಸಲಹೆಯನ್ನು ಪಡೆಯಿರಿ. ನೇರವಾಗಿ ನರಗಳಿಗೆ ಚುಚ್ಚಿಕೊಳ್ಳುವ (ಇನ್ಟ್ರಾವೀನಸ್) ಮಾದಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಿದಷ್ಟೂ ಹೆಪಟೈಟಿಸ್ ಬಿ ಹಾಗೂ ಸಿ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಕೊಕೈನ್ ಮತ್ತಿತ್ತರ ಮಾದಕ ಪದಾರ್ಥಗಳನ್ನು ಒಬ್ಬರಿಗಿಂತಲೂ ಹೆಚ್ಚು ಜನ ಒಂದೇ (ಕೊಕೈನ್) ಚುಟ್ಟ ಅಥವಾ ಹೀರು ಕೊಳವೆ, ಹೀರು ಕಾಗದವನ್ನು ಬಳಸುವುದರಿಂದಲೂ ಈ ಹೆಪಟೈಟಿಸ್ ಸಿ ಬರಬಹುದು ಎಂದು ಕೆಲಸ ಸಂಶೋಧನೆಗಳು ಹೇಳುತ್ತವೆ.

ಚಿತ್ರಗಳು

ಜೀಣಾಂಗವ್ಯೂಹದ ಅಮಗಗಳು

ಯಕೃತ್ತಿನ ಸಿರೋಸಿಸ್, ಸಿಟಿ ಸ್ಕ್ಯಾನ್

ಮೂಲ : ಪೋರ್ಟಲ್ ತಂಡ
3.05825242718
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top