ಹೆಪಟೈಟಿಸ್ ಎ ವೈರಾಣುವಿನಿಂದಾಗಿ ಯಕೃತ್ತಿನಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನೇ ಹೆಪಟೈಟಿಸ್ ಎ ಎಂದು ಗುರುತಿಸಲಾಗುತ್ತದೆ.
ವೈರಲ್ ಹೆಪಟೈಟಿಸ್
ಕಲುಷಿತ ಆಹಾರ, ನೀರು ಅಥವಾ ಹೆಪಟೈಟಿಸ್ ಎ ರೋಗಿಯ ಸಂಪರ್ಕದಿಂದ ಈ ಸೋಂಕು ಹರಡಬಲ್ಲದು. ಈ ರೋಗ ಕಾಣಿಸಿಕೊಳ್ಳುವುದಕ್ಕು 15ರಿಂದ 45ದಿನಗಳಿಗೂ ಮುನ್ನ, ಹಾಗೂ ರೋಗದ ಮೊದಲ ವಾರದಲ್ಲಿ, ಸೋಂಕು ಪೀಡಿತನ ಮಲದಲ್ಲಿ ಹೆಪಟೈಟಿಸ್ ಎ ವೈರಾಣು ಕಂಡು ಬರುತ್ತದೆ. ಜ್ವರದಲ್ಲಿ ಒಂದು ಬಗೆಯಾದ ಫ್ಲೂ ಲಕ್ಷಣಗಳೇ ಹೆಪಟೈಟಿಸ್ ಎ ರೋಗಿಯಲ್ಲೂ ಕಂಡು ಬರುತ್ತದೆ. ಇದರ ಜೊತೆಗೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಇದಕ್ಕೆ ಕಾರಣ ಎಂದರೆ, ಯಕೃತ್ತು ಬಿಲಿರುಬಿನ್ ಎಂಬ ಅಂಶವನ್ನು ಶೋಧಿಸಿ, ಅದು ರಕ್ತಕ್ಕೆ ಸೇರುವುದನ್ನು ತಡೆಯಲು ಸಾಧ್ಯವಾಗಿದಿರುವುದು. ಹೆಪಟೈಟಿಸ್ ವೈರಸಿನಿಂದ ಹೆಪಟೈಟಿಸ್ ಬಿ ಹಾಗೂ ಹೆಪಟೈಟಿಸ್ ಸಿ ರೋಗಗಳು ಬರಬಹುದು. ಇವೆರಡಕ್ಕಿಂತಲೂ ಕಡಿಮೆ ಅಪಾಯಕಾರಿ. ಆ ಎರಡು ಕಾಯಿಲೆಗಳು ತೀವ್ರ ತೆರನಾದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಹೆಪಟೈಟಿಸ್ ಎ ಆ ಪ್ರಮಾಣದ ಸಮಸ್ಯೆಯನ್ನು ತಂದೊಡ್ಡುವುದಿಲ್ಲ.
ಕಲುಷಿತ ಆಹಾರ ಹಾಗೂ ನೀರು ಸೇವನೆಯನ್ನು ತಡೆಯುವುದರಿಂದ ಈ ರೋಗದ ಹರಡುವಿಕೆಯನ್ನು ನಿಲ್ಲಿಸಬಹುದು. ಯಾವುದಾದರೂ, ಸೋಂಕು ಹರಡುವ ಸಾಧ್ಯತೆಯಿರುವ ವಸ್ತುಗಳು ಅಥವಾ ವಾತಾರಣದ ಸಂಪರ್ಕ ಬಂದಾಗ, ತತ್ ಕ್ಷಣ ಕೈಗಳನ್ನು ತೊಳೆದುಕೊಳ್ಳಬೇಕು. ರೋಗಿಯ ಆಪ್ತ ಆರೈಕೆಯಲ್ಲಿ ತೊಡಗುವ ಸಂಸ್ಥೆಗಳು ಹೆಪಟೈಟಿಸ್ ಎ ಹರಡುವಿಕೆಯ ಕೇಂದ್ರಗಳಾಗುವ ಸಾಧ್ಯತೆ ಹೆಚ್ಚು. ಡಯಫರ್ ಬದಲಿಸುವ ಮುನ್ನ ಹಾಗೂ ಆನಂತರ, ಆಹಾರ ನೀಡಿಕೆಗೆ ಮುನ್ನ ಮತ್ತು ಆನಂತರ, ಮೂತ್ರ ಹಾಗೂ ಮಲ ವಿಸರ್ಜನೆಯ ಮೊದಲು ಮತ್ತು ಆನಂತರ ಸಂಪೂರ್ಣವಾಗಿ ಕೈ ತೊಳ್ಳುವುದರಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು.ಹೆಪಟೈಟಿಸ್ ಎ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಇಮ್ಯೂನ್ ಗ್ಲೋಬುಲಿನ್ ನೀಡಬೇಕು. ಹೆಪಟೈಟಿಸ್ ಸೋಂಕು ನಿರೋಧಕ ಔಷಧ (ವ್ಯಾಕ್ಸಿನ್) ಗಳೂ ಲಭ್ಯ. ವ್ಯಾಕ್ಸಿನಿನ ಮೊದಲ ಡೋಸ್ ನೀಡಿದ ನಾಲ್ಕು ವಾರಗಳ ನಂತರ ರಕ್ಷಣೆ ಲಭ್ಯ. ದೀರ್ಘ ಕಾಲದ ರಕ್ಷಣೆ ಪ್ರತಿ 6-12 ತಿಂಗಳಿಗೊಮ್ಮೆ ಬೂಸ್ಟರ್ ಡೋಸ್ ನೀಡಬೇಕು.
ಜೀರ್ಣಾಂಗ ವ್ಯವಸ್ಥೆ
ನೊಣ
ಹೆಪಟೈಟಿಸ್ ಎ
ಎರಿಥೆಮ ಮಲ್ಟಿಫೋಮ
ಜೀರ್ಣಾಂಗ ವ್ಯವಸ್ಥೆಯ ಅಂಗಗಳು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/17/2020
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ಆಹಾರವಿಜ್ಞಾನ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರ...
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...