ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ರಕ್ತದೊತ್ತಡ ತಂದ ಅವಾಂತರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಕ್ತದೊತ್ತಡ ತಂದ ಅವಾಂತರ

ರಕ್ತದೊತ್ತಡ ತಂದ ಅವಾಂತರ

ರಕ್ತದೊತ್ತಡ ಹೆಚ್ಚಾಗುವುದು ಅಥವಾ ಕಡಿಮೆಯಗು ವುದು ಮನುಷ್ಯನ ದೇಹಾರೋಗ್ಯದ ಮೇಲೆ ಅತ್ಯಂತ ದೊಡ್ಡ ಪರಿಣಾಮ ಬೀರುವುದು ನಮಗೆಲ್ಲ ಗೊತ್ತಿದೆ. ಗರ್ಭಿಣಿಯರ ಮೇಲೆ ಇದರ ಪರಿಣಾಮ ಮತ್ತಷ್ಟು ಅಧಿಕ. ಗರ್ಭಿಣಿಯಾಗಿದ್ದಾಗ ರಕ್ತದೊತ್ತಡದಲ್ಲೇನಾದರೂ ಏರುಪೇರಾ ದರೆ ಅದು ತಾಯಿ ಮತ್ತು ಮಗು ಇಬ್ಬರ ಮೇಲೂ ಪರಿಣಾಮ ಬೀರುತ್ತದೆಯಂತೆ. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ರಕ್ತದೊತ್ತಡ ಅಧಿಕವಾದರೆ ಮಗು ಹೃದಯ ಸಂಬಂಧಿ ಕಾಯಿಲೆಗಳಿಂದ ಬಾಳಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ಆದ್ದರಿಂದ ಗರ್ಭಿಣಿಯರು ತಮ್ಮ ಮನಸ್ಸನ್ನು ಸದಾ ಒತ್ತಡ ರಹಿತವಾಗಿಟ್ಟುಕೊಳ್ಳುವುದಲ್ಲದೆ, ಸೇವಿಸುವ ಆಹಾರದಲ್ಲೂ ಒಂದಷ್ಟು ನಿಯಮಗಳನ್ನು ಹಾಕಿಕೊಳ್ಳಬೇಕು. ಹಸಿ ತರಕಾರಿ, ಹಣ್ಣುಗಳಿಗೇ ಹೆಚ್ಚು ಒತ್ತುಕೊಡಬೇಕು. ಕರಿದ, ಬೇಕರಿ ತಿನಿಸುಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತವೆ. ಅಲ್ಲದೆ ಹೆಚ್ಚು ಖಾರವಿರುವ, ಉಪ್ಪಿರುವ ಆಹಾರವನ್ನು ಸೇವಿಸಬೇಡಿ.
ಸಾಸ್, ಕೆಚಪ್‌ಗಳ ಸೇವನೆಯನ್ನೂ ತ್ಯಜಿಸಿ. ಕೊಬ್ಬಿನಂಶ, ಸೋಡಿಯಂ ಹೆಚ್ಚಿರುವ, ಪೊಟ್ಯಾಷಿಯಂ ಮತ್ತು ಕ್ಯಾಲ್ಶಿಯಂ ಅಂಶ ಕಡಿಮೆಯಿರುವ ಆಹಾರಪದಾರ್ಥಗಳು ರಕ್ತದೊತ್ತಡ ವನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತವೆ. ಆದ್ದರಿಂದ ಅಂಥ ಆಹಾರ ಸೇವನೆಯ ಬಗ್ಗೆ ಎಚ್ಚರಿಕೆಯಿರಲಿ.
ಗರ್ಭಿಣಿಯಾದಾಗ ಆರಂಭವಾಗುವ ರಕ್ತದೊತ್ತಡದ ಸಮಸ್ಯೆ ಜೀವನದ ಕೊನೆಯವರೆಗೂ ಕಡಿಮೆಯಾಗದಿರ ಬಹುದು. ಆ ಸಮಯದಲ್ಲಿ ಇಂಥ ಯಾವುದೇ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುವುದರಿಂದ ಕೇವಲ ತಾಯಿಯ ಆರೋಗ್ಯ ಮಾತ್ರವಲ್ಲದೆ ಹುಟ್ಟುವ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ.
ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ಮಹಿಳೆಯರು ಹೆರಿಗೆಗೂ ಮೊದಲು ಮತ್ತು ನಂತರವೂ ಒಮ್ಮೆ ಹೃದಯ ಸಂಬಂಧೀ ಕಾಯಿಲೆಗಳ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಒಳ್ಳೆಯದು ಎನ್ನುತ್ತದೆ ವೈದ್ಯಲೋಕ.

ಮೂಲ: ವಿಕ್ರಮ

3.00900900901
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top