অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರ್ಟಿಐಗಳು ಲಕ್ಷಣಗಳು

ಆರ್ಟಿಐಗಳು ಲಕ್ಷಣಗಳು

ಮಹಿಳೆಯರಲ್ಲಿ

ಅಸಹಜವಾದ ಯೋನಿಸ್ರಾವ. ಅದು ಸುರ್ವಾಸನೆಯಿಂದ ಕೂಡಿರುತ್ತದೆ ಮತ್ತು ಸಹಜವಾದುದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಜನನೇಂದ್ರಿಯದ ಹೊರಭಾಗದಲ್ಲಿ ಹುಣ್ಣುಗಳು ಅಥವಾ ವ್ರಣಗಳು.

ಶ್ರೋಣಿಯ (ಪೆಲ್ವಿಕ್) ಸೋಂಕಿನ ಕಾರಣದಿಂದ ಕೆಳಕಿಬ್ಬೊಟ್ಟೆಯಲ್ಲಿ ನೋವು

ಪುರುಷರಲ್ಲಿ

ಶಿಶ್ನದಿಂದ ಸ್ರಾವ

ಹುಣ್ಣುಗಳು

ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಆರ್‍ಟಿಐಗಳು/ಎಸ್‍ಟಿಐಗಳು ಇವೆ ಎನ್ನುವುದನ್ನು ಕೆಳಕಂಡ ಅಂಶಗಳು ಸೂಚಿಸುತ್ತವೆ.

ಸಂಭೋಗದ ಸಮಯದಲ್ಲಿ ನೋವು ಅಥವಾ ರಕ್ತಸ್ರಾವ

ತೊಡೆ ಸಂದಿಯಲ್ಲಿ ನೋವಿನಿಂದ ಕೂಡಿದ ಊತ

ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಮತ್ತು ನೋವು

ಜನನೇಂದ್ರಿಯದ ಸುತ್ತ ನವೆ

ಸಕಾಲದಲ್ಲಿ  ಚಿಕಿತ್ಸೆ ಮಾಡಿಸದಿದ್ದರೆ ಆರ್‍ಟಿಐಗಳು/ಎಸ್‍ಟಿಐಗಳು ಅನೇಕ ತೊಡಕುಗಳಿವೆ ಕಾರಣವಾಗಬಹುದು ಶ್ರೋಣಿಯ ಉರಿಯಾದ ಕಾಯಿಲೆ (ಪಿಐಡಿ-ಪೆಲ್ವಿಕ್ ಇನ್ ಫ್ಲಮೇಟರಿ ಡಿಸೀಸ್) ಮತ್ತು ಬಂಜೆತನದಿಂದ ಹಿಡಿದು ಎಚ್‍ಐವಿ ಸೋಂಕುಗಳು, ಸ್ಥಾನಾಂತರದಲ್ಲಿ ಗರ್ಭಧಾರಣೆ, ಗರ್ಭಧಾರಣೆ, ಗರ್ಭಕೋಶದ ಕಂಠದ ಕ್ಯಾನ್ಸರ್ ಮತ್ತು  ಸಾವಿನಂತಹ ಅಪಾಯದ ಹೆಚ್ಚಳವಿದೆ. ಗರ್ಭಧಾರಣೆಗೆ ಸಂಬಂಧಿಸಿದಂತಹ ತೊಡಕುಗಳು ಆಗಬಹುದು. ಅವಧಿಗೆ ಮುಂಚೆಯೇ ಹೆರಿಗೆ, ಜನನ ಸಮಯದಲ್ಲಿ ತೂಕ ಕಡಿಚೆ ಇರುವ ಶಿಶುಗಳು, ಸತ್ತ ಕೂಸಿನ ಹೆರಿಗೆ, ಗರ್ಭಪಾತ, ಅಥವಾ ನ್ಯೂನತೆಯಿಂದ ಕೂಡಿದ ಜನನ ಅಂತಹ ತೊಡಕುಗಳು ಆಗಬಹುದು. ನವಜಾತ ಶಿಶುಗಳಿಗೆ ಗರ್ಭದ್ವಾರದ ಮೂಲಕ ಬರುವಾಗ ಕಣ್ಣುಗಳಿಗೆ ಸೋಂಕು ತಗುಲಬಹುದು. ಕೊನೆಗೆ ಅದು ಅಂಧತ್ವ ಮತ್ತು ಶ್ವಾಸಕೋಶದ ಉರಿಯೂತದ ವ್ಯಾಧಿಗೆ ಕಾರಣವಾಗಬಹುದು.

ಅಸಾಧಾರಣವಾದ ಯೋನಿಯ ಸ್ರಾವ

ಕಡಮೆ ಅವಧಿಯದಾಗಿದ್ದು, ನವೆ ಅಥವಾ ನೋವಿನಂಥಹ ಇತರ ಲಕ್ಷಣಗಳು ಇಲ್ಲವೆ ಸಾಮಾನ್ಯವಾಗಿ ಸ್ರಾವವು ಸಾಧಾರಣವಾಗಿರಬಹುದು ಬಹುಪಾಲು ಮಹಿಳೆಯರು ಅಂತರ-ಮುಟ್ಟಿನ ಅವಧಿಯಲ್ಲಿ ಮತ್ತು ಗರ್ಭಿಣಿಯರಾಗಿರುವಾಗ ಸಾಧಾರಣ ಸ್ರಾವವನ್ನು ಹೊಂದಿರುತ್ತಾರೆ. ಯೋನಿಯಿಂದ ಸ್ವಲ್ಪ ಪ್ರಮಾಣದ ಸ್ರಾವ ಅಥವಾ ತೇವಾಂಶವು ಹೊರಬರುವುದು ಸಜಹವಾದದ್ದು ಪ್ರಮಾಣದ ಸ್ರಾವ ಅಥವಾ ತೇವಾಂಶವು ಹೊರಬರುವುದು ಸಹಜವಾದದ್ದು ಪ್ರಮಾಣ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ ಗೋಚರಿಸಿದರೆ ಸೋಂಕು ಆಗಿದೆ ಎಂದು ಭಾವಿಸಬಹುದು. ಮಹಿಳೆಯರಲ್ಲಿ ಜನನೇಂದ್ರಿಯ ದ್ವಾರದ ಅನೇಕ ಸೋಂಕುಗಳಲ್ಲಿ ದುರ್ವಾಸನೆ ಅಥವಾ ರಕ್ತಮಿಶ್ರಿತ ಹಳದಿ, ಹಸಿರು ಅಥವಾ ಕರಣೆಕರಣೆಯಾದ ಸ್ರಾವವು ಕಂಡುಬರುತ್ತದೆ.

ಅಸಾಧಾರಣವಾದ ಯೋನಿಯ ಸ್ರಾವದ ಕಾರಣಗಳು

ಜನನೇಂದ್ರಿಯದ ನೈರ್ಮಲ್ಯದ ಕೊರತೆ, ವಿಶೇಷವಾಗಿ ಮುಟ್ಟಾಗಿರುವ ಸಂದರ್ಭದಲ್ಲಿ, ಸೋಂಕನ್ನು ಉಂಟು ಮಾಡಬಹುದು.

ಅನಧಿಕೃತ ವ್ಯಕ್ತಿಗಳು ಪ್ರಸವ ಮತ್ತು ಗರ್ಭಪಾತದ ಸಮಯದಲ್ಲಿ ಅಶುಚಿಯಾದ ಉಪಕರಣಗಳನ್ನು ಬಳಸುವುದು.

ಕಂಡೋಮ್ ಬಳಸದೆ ಸಂಭೋಗಿಸುವುದು, ಅದರಲ್ಲೂ ವಿಶೇಷವಾಗಿ ಸಂಗಾತಿಯು ಯಾವುದೋ ಸೋಂಕಿನಿಂದ ನರಳುತ್ತಿರುವಾಗ ಹೀಗೆ ಮಾಡುವುದು.

ಈ ಸೋಂಕುಗಳನ್ನು ಸುಲಭವಾಗಿ ತಡೆಯಬಹುದು ಮತ್ತು ಗುಣಪಡಿಸಬಹುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾದದ್ದು.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate