অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯವಂತ ಭಾರತ

ಮಾದಕ ವ್ಯಸನಿಯಗಳು

ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಲ್ಕೋಹಾಲಿನ ಮತ್ತು ಅಫೀಮು, ಗಾಂಜಾ, ಹೇರಾಯಿನ್, ಕೊಕೇನ್, ಚರಸ್, ಇಂಚೆಕ್ಷನ್, ಟ್ಯಾಬ್ಲೇಟ್ ರೂಪದಲ್ಲಿ ಮಾದಕ ದ್ರವ್ಯಗಳನ್ನು ತೆಗೆದು ಕೊಳ್ಳುತ್ತಿರುವುದರಿಂದ ಅತಿ ಬೇಗ ಹೆಚ್.ಐ.ವಿ ರೋಗಕ್ಕೆ ತುತ್ತಾಗಿರುವುದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಇವರಿಗೆ ಮಾರ್ಗದರ್ಶನ ನೀಡುವುದು. ಇವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವುದು ನಮ್ಮ ಧ್ಯೇಯೋದ್ದೇಶಗಳಲ್ಲಿ ಒಂದು.

ಹೆಚ್.ಐ.ವಿ ಸೋಕಿತರನ್ನು ಕಳಂಕರಹಿತರನ್ನಾಗಿ ಮಾಡುವುದು.

ಸಮಾಜದಲ್ಲಿ ಹೆಚ್.ಐ.ವಿ ಪೀಡಿತರನ್ನು ಅಸ್ಪೃಶ್ಯರಂತೆ ನೋಡುತ್ತಿದ್ದು, ಇಅವರ ಮೂಡನಂಬಿಕೆಗಳನ್ನು ಹೋಗಲಾಡಿಸಿ ಇದು ಅಂಟು ಜಾಡ್ಯವಲ್ಲವೆಂದು ತಿಳಿಸುವ ಉದ್ದೇಶ.

ಮಾನಸಿಕ ಸಲಹೆಗಾರರು.

ಇದರಲ್ಲಿ ನುರಿತ ಸಲಹೆಗಾರರ ತಂಡಗಳನ್ನು ರಚಿಸಿ ಅವರುಗಳ ಮೂಲಕ ಯುವಕರನ್ನು ಸಲಹೆಗಾರರಾಗಲು ಪ್ರೇರೇಪಿಸುವುದು, ಈ ತಂಡಗಳ ಮೂಲಕ ಕೌಷಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಮಕ್ಕಳು ತಂದೆ ತಾಯಿ, ಶಾಲಾ ಕಾಲೇಜು ಅಧ್ಯಾಪಕರಿಗೆ ಮಕ್ಕಳ ಮಾನಸಿಕತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು, ವೈದ್ಯರು, ಶುಶ್ರೂಷಕರು ಇವರುಗಳಿಗೆ HIV/AIDS ಸೋಂಕಿತರ ಬಗ್ಗೆ ಅರಿವು ಮೂಡಿಸುವುದು. ಮಾದಕ ವ್ಯಸನಿಗಳು ಮತ್ತು HIV/AIDS ಸೋಂಕಿತರಿಗೆ ಆತ್ಮವಿಶ್ವಾಸವನ್ನು ಹಾಗೂ ಅವರ ಮನದಾಳದಲ್ಲಿ ಹುದುಗಿರುವ ಗೊಂದಲಗಳನ್ನು ಪರಿಹರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಎ.ಆರ್.ಟಿ ಕೇಂದ್ರಗಳನ್ನು ಬಲವರ್ಧನೆಗೊಳಿಸಲು ಹಾಗೂ ಸ್ವಾವಲಂಬಿಗಳಾಗಿಸಲು ಶ್ರಮಿಸುವುದು.

ಮಹಿಳಾ ಲೈಂಗಿಕ ಕಾರ್ಯಕರ್ತರು, ಸಲಿಂಗ ಲೈಂಗಿಕ ಕಾರ್ಯಕರ್ತರು ಹಾಗೂ ಟಿ.ಜಿ ಹಿಜಿಡಾಗಳು ಮತ್ತು ದೇವದಾಸಿಗಳು :-

ಇಂತಹ ಲೈಂಗಿಕ ಕಾರ್ಯಕರ್ತರಲ್ಲಿ ಹೆಚ್.ಐ.ವಿ ಖಾಯಿಲೆ ಸರ್ವೇಸಾಮಾನ್ಯವಾಗಿದ್ದು, ಇವರ ಸಮಸ್ಯೆಗಳಿಗೆ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುವುದು. ಭಾರತದಲ್ಲಿ ಮಾನವ ಕಳ್ಳಸಾಗಾಣಿಕೆ ದೊಡ್ಡಜಾಲವೇ ಇದ್ದು, ಹೆಣ್ಣು ಮಕ್ಕಳನ್ನು ಲೈಂಗಿಕ ಕಾರ್ಯಕರ್ತರಾಗಿ ಪರಿವರ್ತಿಸುತ್ತಿರುವ ಜಾಲವನ್ನು ತಡೆಗಟ್ಟುವ ಪ್ರಯತ್ನ ಮಾಡುವುದು.

“ಲಕ್ಷಾಂತರ ಜನ HIVI/AIDS ಪೀಡಿತರು ಸಮಾಜಿಕ ಪಿಡುಗು, ಆಸ್ತಿವಿವಾದ, ಕುಟುಂಬ ರಕ್ಷಣಾ ಕೊರತೆ ಇವುಗಳಿಂದ ಬಳಲುತ್ತಿರುವವರಿಗೆ ಎ.ಆರ್.ಟಿ ಕೇಂದ್ರಗಳಲ್ಲಿ ಉಚಿತ ಕಾನೂನು ನೆರವು ನೀಡುವುದು.”

ಮೂಲ :ಪೋರ್ಟಲ್   ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate