অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಏಡ್ಸ್ ಎಂಬ ರೋಗ

ಎಚ್‍ಐವಿ ಪಾಸಿಟೀವ್ ಬಂದ ಮೇಲೆ ಎಷ್ಟೋ ವರ್ಷಗಳ ಅನಂತರ ಏಡ್ಸ್ ಕಾಣಿಸಿಕೊಳ್ಳಬಹುದು. ಆದರೆ ವ್ಯಕ್ತಿಯು ಈ ಅವಧಿಯಲಿ ಸೋಂಕಿಗೆ ಗುರಿಯಾಗಿರುತ್ತಾನೆ. ಏಡ್ಸ್ ಒಂದು ಗಂಭೀರವಾದ ಕಾಯಿಲೆ. ಅದಕ್ಕೆ ಶಾಶ್ವತವಾದ ಮತ್ತು ಇಲ್ಲ. ಅದರ ತೀವ್ರತೆಯನ್ನು ಕಡಮೆ ಮಾಡಲು ಕೆಲವು ಔಷಧಗು ಇವೆ ಅಷ್ಟೆ. ಏಡ್ಸ್‍ನ ಲಕ್ಷಣಗಳು ಕೆಳಕಂಡಂತಿರಬಹುದು.

ನಿರಂತರವಾಗಿ ತೂಕದಲ್ಲಿ ಕುಸಿತ.

ಎಡೆಬಿಡದ ಅತಿಸಾರ

ಮತ್ತೆ ಮತ್ತೆ ಜ್ವರ ಅಥವಾ ಒಂದು ತಿಂಗಳಿಗೂ ಹೆಚ್ಚು ಕಾಳ ಬಿಡದ ಕಾಯಿಲೆ

ಅಪ್ರಮುಖ ಲಕ್ಷಣಗಳೆಂದರೆ ದೀರ್ಘಕಾಲದ ಕೆಮ್ಮು, ನವೆ, ದೇಹದ ಮೇಲೆ ಮತ್ತು ಜನನೇಂದ್ರಿಯದ ಮೇಲೆ ದದ್ದುಗಳು, ಯಾಯಲ್ಲಿ ಬಿಳಿಯ ಗಂದೆಗಳು (ಶಿಲೀಂಧ್ರ ಸೋಂಕು), ಸಂದಿಗಳಲ್ಲಿ ಗೆಡ್ಡೆಗಳು, ಮತ್ತು ಪದೇ ಪದೇ ಕಾಣಿಸಿಕೊಳ್ಳುವ ಕಾಯಿಲೆ

ಆಶಾದ ಪಾತ್ರ ಮತ್ತು ಜವಾಬ್ದಾರಿಗಳು

ಎಚ್‍ಐವಿ/ಏಡ್ಸ್ನ ಪರಿಣಾಮ, ಹರಡುವಿಕೆ ಮತ್ತು ತಡೆಗಟ್ಟುವಿಕೆಯನ್ನು ಕುರಿತು ಅರಿವನ್ನು ಮೂಡಿಸುವುದು.

ಎರಡು ವಿಧದ ರಕ್ಷಣೆಯ ಸಾಧನವಾಗಿ ಕಾಂಡೋಮ್ ಬಳಕೆಯನ್ನು  ಪ್ರಚಾರ ಚಾಡುವುದು.

ಅಪಾಯಕಾರಿ ಲೈಂಗಿಕ ನಡವಳಿಕೆಯ ವ್ಯಕ್ತಿಗಳಿಗೆ ಸಮೀಪದ ವಿಸಿಟಿವಿಗೆ/ಐಸಿಟಿಸಿ ಹೋಗಿ ಎಚ್‍ಐವಿ/ಏಡ್ಸ್ ಪರೀಕ್ಷೆಗೆ ಒಳಪಡುವಂತೆ ಸಲಹೆ ಮಾಸುವುದು.

ಎಚ್‍ಐವಿ ಪಾಸಿಟೀವ್ / ಏಡ್ಸ್ ರೋಗಿಗಳಿಗೆ ಎಆರ್‍ಟಿ ದೊರಕಿಸಿಕೊಡಲು ಸಹಾಯ ಮಾಡುವುದು.

ಎಚ್‍ಐವಿ ಪರೀಕ್ಷೆಗೆ ಒಳಪಡಲು ಸಲಹೆ ನೀಡುವುದು.

ಮಹಿಳೆಯರು ಕುಟುಂಬದ ಪಾಲನೆ ಮಾಡುವವರು. ಅವರೇ ಎಚ್‍ಐವಿ ಪಾಸಿಟೀವ್ ಆದಾಗ ಅವರಿಗೆ ಅಗತ್ಯವಾದ ಕುಟುಂಬದ ಬೆಂಬಲ ಮತ್ತು ರಕ್ಷಣೆ ದೊರೆಯದಿರಬಹುದು. ಕುಟುಂಬಕ್ಕೆ ಸಲಹೆ ಕೊಡುವುದು ಬಹಳ ಮುಖ್ಯವಾದದ್ದು. ಕಾಂಡೋಮ್‍ಗಳ ಉಪಯೋಗ, ಸಂಗಾತಿಯ ನಿರ್ವಹಣೆ, ಎಸ್‍ಟಿಐಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಒತ್ತು ನೀಡಿ. ಕೆಲವು ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆಂದೇ ವಿಶೇಷ ಸೇವೆಗಳು ಇರುತ್ತವೆ. ಇದು ಎಚ್‍ಐವಿ ಪಾಸಿಟೀವ್ ತಾಯಂದಿರಿಗೆ ಸಲಹೆಯನ್ನು ಕೊಡುವುದು, ರಕ್ತ ಪರೀಕ್ಷೆ ಮತ್ತು ಔಷಧಗಳನ್ನು ಒದಗಿಸುವುದು ಇವುಗಳನ್ನು ಒಳಗೊಂಡಿದೆ. ಇದು ಶಿಶುವಿಗೆ ಸೋಂಕು ತಗಲುವ ಅಪಾಯವನ್ನು ಕಡಮೆ ಮಾಡುತ್ತದೆ. ಹದಿಹರೆಯದ ತರುಣ ತರುಣಿಯರಿಗೆ ಲೈಂಗಿಕ ಶಿಕ್ಷಣವೂ ಸೇರಿದಂತೆ ಆರೋಗ್ಯಪೂರ್ಣ ದಾಂಪತ್ಯ ಜೀವನವನ್ನು ಕುರಿತು ಅರಿವನ್ನು ಮೂಡಿಸುವುದು ಮುಖ್ಯವಾದದ್ದು.

ಬಹುತೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಪರೀಕ್ಷೆಯ ಸೌಲಭ್ಯಗಳು ಲಭ್ಯ. ಇಲ್ಲಿ ಎಚ್‍ಐಬಿ/ಏಡ್ಸ್ ರಕ್ತಪರೀಕ್ಷೆಯ ಜೊತೆಗೆ ಸಲಹಾ ಸೇವೆಗಳನ್ನೂ ನೀಡಲಾಗುತ್ತದೆ.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate