অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಿಫಿಲಿಸ್

ಸಿಫಿಲಿಸ್ ಎಂದರೇನು?

ಸಿಫಿಲಿಸ್ ಲೈಂಗಿಕವಾಗಿ ಹರಡುವ ಒಂದು ರೋಗವಾಗಿದ್ದು, ಬ್ಯಾಕ್ಟಿರಿಯಂ ಟ್ರೆಪೊನೆಮ ಪಲ್ಲಿಡಂ ವೆಂಬುದರಿಂದ ಹರಡುತ್ತದೆ.

ಜನರಿಗೆ ಸಿಫಿಲಿಸ್ ಹೇಗೆ ಬರುವುದು ?

ಸಿಫಿಲಿಸ್ ಗಾಯಗಳ ನೇರಸಂಪರ್ಕದಿಂದ ಸಿಫಿಲಿಸ್ ಒಬ್ಬರಿಂದ ಒಬ್ಬರಿಗೆ ಬರುವುದು. ಜನನಾಂಗ , ಯೋನಿ, ಗುಧ ದ್ವಾರದ ಹೊರಭಾಗದಲ್ಲಿ ಮತ್ತು ಬಾಯಿ ತುಟಿಗಳ ಮೇಲೂ ವ್ರಣಗಳು ಉಂಟಾಗುವವು. ರೋಗಾಣುಗಳು ಯೋನಿ, ಗುಧ ಮತ್ತು ಮೌಖಿಕ ಲೈಂಗಿಕ ಕ್ರಿಯೆಯಿಂದ ಹರಡುವುದು ಗಭೀಣಿಯು ತನ್ನ ಮಗುವಿಗೆ ಅದನ್ನು ಹರಡುವಳು. ಸಿಫಿಲಿಸ್ ಕಕ್ಕಸಿನ ಸೀಟು, ಬಾಗಿಲ ಹಿಡಿ, ಈಜುಗೊಳ, ಬಿಸಿನೀರಿನ ತೊಟ್ಟಿ, ಉಡುಪುಗಳು ಅಥವಾ ಊಟಮಾಡುವ ತಟ್ಟೆ , ಲೋಟ ಮತ್ತು ಅಡಿಗೆ ಪಾತ್ರೆಗಳ ಮೂಲಕ ಸೋಂಕು ಹರಡುವುದಿಲ್ಲ.

ವಯಸ್ಕರಲ್ಲಿ ಸಿಫಿಲಿಸ್ ನ ಲಕ್ಷಣಗಳೇನು ?

ಸಿಫಿಲಿಸ್ ಸೋಂಕು ತಗುಲಿದ ಅನೇಕರು ವರ್ಷಗಳವರೆಗೆ ಯಾವುದೆ ರೋಗ ಲಕ್ಷಣ ತೋರುವುದಿಲ್ಲ.

ಪ್ರಾಥಮಿಕ ಹಂತ ಪ್ರಾಥಮಿಕ ಹಂತದ ಸಿಫಿಲಿಸ್ನಲ್ಲಿ ಒಂದೋ ಎರಡೋ ವ್ರಣಗಳು ಕಾಣುತ್ತವೆ. ಸೋಂಕು ತಗುಲಿದ ಮತ್ತು ಲಕ್ಷಣ ಹೊರಬೀಳುವ ನಡುವೆ 10 ರಿಂದ 90 ದಿನಗಳಾಗಬಹುದು. (ಸರಾಸರಿ 21 ದಿನಗಳು). ವ್ರಣವು ಗಟ್ಟಿಯಾಗಿ ಚಿಕ್ಕದಾಗಿ ನೋವಿಲ್ಲದ ಗುಳ್ಳೆಯಾಗಿರುವುದು. ಅದು ಸಿಫಲಿಸ್ ರೋಗಾಣು ದೇಹದಲ್ಲಿ ಪ್ರವೇಶಿಸಿದ ಜಾಗದಲ್ಲಿ ಕಾಣಿಸಿಕೊಳ್ಳುವುದು. ಅದು 3ರಿಂದ 6 ವಾರದವರೆಗೆ ಇರುವುದು ಮತ್ತು ಯವುದೆ ಚಿಕಿತ್ಸೆ ಇಲ್ಲದೆ ಗುಣವಾಗುವುದು. ಹಾಗಿದ್ದರೂ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸೋಂಕು ಮುಂದುವರೆದು ಎರಡನೆ ಹಂತ ತಲುಪುವುದು.ಎರಡನೆ ಹಂತ ಚರ್ಮದ ಮೇಲೆ ಗುಳ್ಳೆಗಳು , ಕೀವು ಮತ್ತು ಗಾಯ ಎರಡನೆ ಹಂತದ ಲಕ್ಷಣಗಳು . ಗೂಳ್ಳೆಗಳು ಸಾಧಾರಣವಾಗಿ ತುರಿಕೆಯನ್ನು ಉಂಟುಮಾಡುವುದಿಲ್ಲ. ಅವು ಕೆಂಪಾದ. ಇಲ್ಲವೆ ಕಂದುಬಣ್ಣದ ದೊರಗಾದ ಚುಕ್ಕೆಗಳಂತೆ ಕೈ ಕಾಲುಗಳ ಮೇಲೆ ಕಾಣಿಸಿಕೊಳ್ಳುವವು. ದೇಹದ ಇತರ ಭಾಗಗಳಲ್ಲಿ ಅವುಗಳ ಸ್ವರೂಪ ಬೇರೆಯಾಗಿರಬಹುದು. ಕೆಲವು ಸಲ ಇತರ ರೋಗಗಳಿಂದ ಉಂಟಾದ ಗುಳ್ಳೆಗಳಂತೆ ಕಾಣುವವು. ಇದರ ಜತೆ ಎರಡನೆ ಹಂತದಲ್ಲಿ ಜ್ವರ,ಲಿಂಫ್ ಗ್ರಂಥೀಗಳ ಊತ, ಗಂಟಲು ನೋವು, ಅಲ್ಲಲ್ಲಿ ಕೂದಲು ಉದುರುವುದು, ತಲೆನೋವು, ತೂಕ ನಷ್ಟ, ಸ್ನಾಯು ನೋವು ಮತ್ತು ಸುಸ್ತಾಗುವುದು.

ಅಂತಿಮ ಹಂತ

ಎರಡನೆ ಹಂತದ ಲಕ್ಷಣಗಳು ಕಾಣದಾದಾಗ ಸಿಫಿಲಿಸ್ನ ಗುಪ್ತ ಹಂತ ಮೊದಲಾಗುವುದು. ಈ ಹಂತದಲ್ಲಿ ಸಿಫಿಲಿಸ್ ದೇಹದ ಒಳಗಿನ ಅಂಗಗಳಾದ ಮೆದುಳು, ನರಗಳು, ಕಣ್ಣು, ಹೃದಯ,ರಕ್ತನಾಳಗಳು, ಲಿವರ್, ಮೂಳೆಗಳು ಮತ್ತು ಕೀಲುಗಳನ್ನು ಹಾಳು ಮಾಡಬಹುದು. ಈ ಆಂತರಿಕ ಹಾನಿಯು ಅನೇಕ ವರ್ಷಗಳ ನಂತರ ಗೋಚರವಾಗುವುದು. ಅಂತಿಮ ಹಂತದ ಸಿಫಿಲಿಸ್ ನ ಗುಣಲಕ್ಷಣಗಳೆಂದರೆ ಸ್ನಾಯುಗಳ ಚಲನೆಯ ಸಮನ್ವಯ ಇಲ್ಲದಾಗುವುದು, ಪಾರ್ಶ್ವವಾಯು, ಜೋಮು ಹಿಡಿಯುವುದು,ಕ್ರಮೇಣ ಕುರುಡಾಗುವುದು, ಮತ್ತು ಮರೆವು. ಈ ಹಾನಿಯು ಸಾವನ್ನು ತರುವಷ್ಟು ಗಂಭೀರವಾಗಿರುವುದು.

ಸಿಫಿಲಿಸ್ ಗರ್ಭಿಣಿ ಮತ್ತು ಮಗುವಿನ ಮೇಲೆ ಏನು ಪರಿಣಾಮ ಬೀರುವುದು?

ಗರ್ಭಿಣಿಗೆ ಸೋಂಕು ಎಷ್ಟು ದಿನದಿಂದ ಇದೆ ಎನ್ನುವುದರ ಮೇಲೆ ಅಪಾಯದ ಪ್ರಮಾಣ ವಿರುವುದು.. ಅವಳಿಗೆ ಮೃತ ಮಗು ಜನಿನಸುವ ಅವಕಾಶವಿದೆ ಅಥವ ಮಗುವು ಹುಟ್ಟಿದ ನಂತರ ಸಾಯಬಹುದು. ಸೋಂಕು ಸಮೇತ ಜನಿಸಿದ ಮಗುವಿಗೆ ಯಾವುದೆ ರೋಗ ಲಕ್ಷಣ ಇರಲಿಕ್ಕಿಲ್ಲ. ಆದರೂ ತಕ್ಷಣ ಚಿಕಿತ್ಸೆ ಕೊಡದಿದ್ದರೆ ಕೆಲವೆ ವಾರಗಳಲ್ಲಿ ಗಂಭೀರ ಸಮಸ್ಯೆಗಳು ತಲೆದೋರಬಹುದು. ಚಿಕಿತ್ಸೆ ಪಡೆಯದ ಮಗುವಿನ ಬೆಳವಣಿಗೆ ಕುಂಠಿತವಾಗುವುದು. ಅದಕ್ಕೆ ಸೆಳೆತ ಬರಬಹುದು. ಅಥವ ಸಾಯ ಬಹುದು

ಸಿಫಿಲಿಸ್ ಮತ್ತು ಹೆಚ್ ಐವಿ ಯ ನಡುವಣ ಸಂಬಂಧವೇನು?

ಸಿಫಿಲಿಸ್ ನಿಂದ ಆದ ಜನನಾಂಗದ ವ್ರಣಗಳು ಹೆಚ್ ಐ ವಿ ವೈರಾಣು ಲೈಂಗಿಕವಾಗಿ ಹರಡಲು ಸುಲಭವಾಗಿ ಅವಕಾಶ ಕೊಡುವವು . ಸಿಫಲಿಸ್ ಬಂದವರಿಗೆ ಹೆಚ್ ಐ ವಿ ಸೋಂಕಿನ ಬರುವ ಅಪಾಯವು ಅಂದಾಜು 2- ರಿಂದ 5 ಪಟ್ಟು ಹೆಚ್ಚಾಗಿರುವುದು..

ಸಿಫಿಲಿಸ್ ಪುನಃ ಬರುವುದೆ?

ಸಿಫಿಲಿಸ್ ಒಂದು ಸಾರಿ ಬಂದರೆ ಮತ್ತೆ ಅದು ಬರುವುದಿಲ್ಲ ಎನ್ನುವಹಾಗಿಲ್ಲ. ಯಶಸ್ವಿ ಚಿಕೆತ್ಸೆಯನಂತವೂ ಪುನಃ ಸೋಂಕು ತಗುಲಬಹುದು.

ಸಿಫಿಲಿಸ್ ತಡೆಯುವುದು ಹೇಗೆ?

ಖಚಿತ ವಾಗಿ ಹರಡುವುದನ್ನು ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು. ಕುಡಿತ ಮತ್ತು ಮಾದಕ ಔಷಧಿ ಬಳಸುವುದನ್ನು ಬಿಟ್ಟರೆ ಅಪಾಯಕಾರಿ ಲೈಂಗಿಕ ಚಟುವಟಿಕೆಗಳಿಂದ ದೂರವಿರಬಹುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate