অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹರ್ಪಿಸ್

ಜನನಾಂಗದ ಹರ್ಪಿಸ್ ಎಂದರೇನು?

ಜನನಾಂಗದ ಹರ್ಪಿಸ್ ಲೈಂಗಿಕವಾಗಿ ಹರಡುವ ರೋಗ. (STD) ಹರ್ಪಿಸ್ ಸಿಂಪ್ಲೆಕ್ಸ ವೈರಸ್ಸಿನಿಂದ ಉಂಟಾಗುತ್ತದೆ.ವೈರಸ್ ಟೈಪ್ 1 (HSV-1) ಮತ್ತು ವೈರಸ್ ಟೈಪ 2 (HSV-2).

ಜನನಾಂಗದ ಹರ್ಪಿಸ್ ಸುತ್ತು ಹೇಗೆ ಬರುವುದು ? ಸಾಧಾರಣವಾಗಿ ವ್ಯಕ್ತಿಗೆ HSV-2 ಸೋಂಕು ಬರುವುದದು ಇನ್ನೊಬ್ಬ ಜನನಾಂಗದ HSV-2 ಸೋಂಕಿರುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದಾಗ ಮಾತ್ರ.. ಅವನಿಗೆ ಮೇಲೆ ಕಾಣುವ ವ್ರಣಗಳು ಇಲ್ಲದೆ ಇರುವುದರಿಂದ ಸದರಿ ವ್ಯಕ್ತಿಗೆ ಸೋಂಕು ಇರುವುದು ಗೊತ್ತಾಗುವುದೆ ಇಲ್ಲ.

ಜನನಾಂಗದ ಹರ್ಪಿಸ್ ನ ಲಕ್ಷಣಗಳೇನು?

ಅನೇಕ ಜನ HSV-2 ಸೋಂಕಿತರಿಗೆ ಅದರ ಅರಿವೆ ಇರುವುದಿಲ್ಲ.ವೈರಸ್ಸು ಒಳಸೇರಿದ ಎರಡುವಾರದಲ್ಲಿ ಲಕ್ಷಣಗಳು ಮೈದೋರುವವು. ಗಾಯಗಳು ಎರಡುವಾರದಲ್ಲಿ ಗುಣವಾಗುವವು.ಲಕ್ಷಣಗಳು ಬಂದಾಗ ಗುಪ್ತಾಂಗದ ಮೇಲೆ ಒಂದೋ ಎರಡೋ ಗುಳ್ಳೆಗಳು ಬರುವವು. ಅವು ಒಡೆದು ಮೃದುವಾದ ಹುಣ್ಣುಗಳು ಕಾಣುವವು. ಮೊದಲಬಾರಿ ಯಾದಾಗ ಅವು ಎರಡರಿಂದ ನಾಲಕ್ಕು ವಾರದಲ್ಲಿ ಗುಣವಾಗುವವು.ಇನ್ನೊಂದು ಸಲ ಕೆಲವು ವಾರಗಳು ಅಥವಾ ತಿಂಗಳುಗಳ ತರುವಾಯ ಬರಬಹುದು. ಆದರೆ ಈ ಸಲ ಅದು ಮೊದಲಿನಷ್ಟು ತೀವ್ರವಾಗಿರುವದಿಲ್ಲ. ಮತ್ತು ದೀರ್ಘ ಕಾಲ ಇರುವುದಿಲ್ಲ.ಸೋಂಕು ದೇಹದಲ್ಲೆ ಅನಿರ್ದಿಷ್ಟ ಅವಧಿಯವರೆಗೆ ಇದ್ದರೂ ಅದು ಕಾಣಿಸಿಕೊಳ್ಳುವ ಅವಧಿ ಕಾಲಾನುಕ್ರಮದಲ್ಲಿ ಕಡಿಮೆಯಾಗುವುದು. ಇತರೆ ಲಕ್ಷಣಗಳಾದ ಫ್ಲೂ ನಂತಹ ಜ್ವರ, ಮತ್ತು ಗ್ರಂಥಿಗಳ ಬಾವು ಕಂಡುಬರುವುದು.

ಹರ್ಪಿಸ್ ಗುಣಪಡಿಸಲು ಚಿಕಿತ್ಸೆ ಇದೆಯೇ? ಹರ್ಪಿಸ್ ಅನ್ನು ಗುಣ ಪಡಿಸುವ ಚಿಕತ್ಸೆಇಲ್ಲ. ಆದರೆ ಆಂಟಿವೈರಲ್ ಔಷಧಿಗಳು ಅದು ಹೊರಹೊಮ್ಮುವ ಅವಧಿಗಳನ್ನು ಕಡಿಮೆ ಮಾಡುವುದು. ಔಷಧಿ ತೆಗೆದು ಕೊಳ್ಳುವವರೆಗೆ ಅವು ಬರುವುದನ್ನು ತಡೆಯಬಹುದು. ಅವು ಬಂದಾಗ ನಿಯಂತ್ರಣ ಕ್ಕಾಗಿ ತೆಗೆದುಕೊಳ್ಳುವ ಔಷಧಿಗಳು ಜೊತೆ ಗಾರರಿಗೆ ಹರಡುವುದನ್ನು ತಡೆಗಟ್ಟುವುದು.

ಹರ್ಪಿಸ್ ಅನ್ನು ಹೇಗೆ ತಡೆಗಟ್ಟಬಹುದು ? ಖಚಿತವಾಗಿಲೈಂಗಿಕವಾಗಿ ಹರಡುವ ರೋಗವನ್ನು ಸರ್ಪ ಸುತ್ತುಸೇರಿದಂತೆ ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು .ಅಥವ ಬಹು ಕಾಲ ಸೋಂಕಿತರಲ್ಲದ ಮತ್ತು ರಕ್ತ ಪರೀಕ್ಷೆಗೊಳಗಾಗಿರುವ ಏಕ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಳ್ಳುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate