অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಹಕದಿಂದ ಬರುವ ರೋಗಗಳು

ಮಲೇರಿಯಾ

ಪೀಠಿಕೆ

  • ಮಲೇರಿಯಾವು ಪರೋಪಜೀವಿಗಳಿಂದ ಬರುವ ಪ್ರಾಣಾಪಾಯ ಮಾಡಬಹುದಾದ ರೋಗ.  ಅದು ಪ್ಲಾಸ್ಮೋಡಿಯಂ ವಿವಕ್ಸ , ಪ್ಲಾಸ್ಮೋಡಿಯಂ ಫಲ್ಸಿಪರಮ್ಪ್ಲಾಸ್ಮೋಡಿಯಂ ಮಲೇರಿಯಾ , ಪ್ಲಾಸ್ಮೋಡಿಯಂ ಒವುಲ   ಎಂಬ  ಪರೋಪ ಜೀವಿಗಳಿಂದ ಬರುವುದು.
  • ಇದು ಸೋಂಕಿತ ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ.
  • ಸೊಂಕಿತ ಅನಾಫಿಲಿಸ್ ಸೊಳ್ಳೆ ಕಡಿದ ನಂತರ 10 ರಿಂದ 14 ದಿನಗಳಲ್ಲಿ ರೋಗ ಬರುತ್ತದೆ.
  • ಭಾರತದಲ್ಲಿ ಮಾನವರಿಗೆ ಬರುವ ಮಲೇರಿಯಾವು ಎರಡು ವಿಧದ ಪರೋಪ ಜೀವಿಗಳಿಂದ ಬರುವುದು. ಅವೆ ಪ್ಲಾಸ್ಮೋಡಿಯಂ  ವಿವಕ್ಸ ,  ಪ್ಲಾಸ್ಮೋಡಿಯಂ ಫಲ್ಸಿಪರಮ್
  • ಪರೋಪಜೀವಿಯ ಆಶ್ರಿತ ಮಾನವ ದೇಹದಲ್ಲಿ ತನ್ನ ಸಂಕೀರ್ಣ ಜೀವನ ಚಕ್ರದ ಭಾಗವಾದ ಸರಣಿ ಬದಲಾವಣೆ ಹೊಂದುವುದು (ಪ್ಲಾಸ್ಮೋಡಿಯಂ ಪ್ರೊಟೊಜೊವ  ಉಪಜೀವಿ)
  • ಉಪಜೀವಿಯು ತನ್ನ ಜೀವನಚಕ್ರವನ್ನು ಯಕೃತ್ತಿನ ಜೀವಕೋಶಗಳಲ್ಲಿ ಮತ್ತು ಕೆಂಪು ರಕ್ತಕಣದ ಜೀವಕೋಶ ಗಳಲ್ಲಿ ಪೂರೈಸುವುದು.
  • ಪ್ಲಾಸ್ಮೋಡಿಯಂ ಫಲ್ಸಿಪರಮ್ನಿಂದ ಆಗುವ  ಸೋಂಕು ಬಹು ಅಪಾಯಕಾರಿ.

ಮಲೇರಿಯಾ ಲಕ್ಷಣಗಳು

  • ಮಲೇರಿಯಾವು ಸಾಧಾರಣವಾಗಿ ಜ್ವರ, ತಲೆನೋವು, ವಾಂತಿ ಮತ್ತು ಫ್ಲೂ ಬಂದಾಗಿನ ಲಕ್ಷಣಗಳನ್ನೆ ತೋರುವುದು.
  • ಪರೋಪಜೀವಿಯು ಕೆಂಪು  ರಕ್ತ ಕಣಗಳಿಗೆ ಸೋಂಕು ಉಂಟುಮಾಡಿ ಅವನ್ನು ನಾಶ ಮಾಡುವುದು. ಅದರಿಂದ ಸುಸ್ತು ,ರಕ್ತ ಹೀನತೆ, ಮಲರೋಗ, ಎಚ್ಚರತಪ್ಪವುದು ಆಗಬಹುದು.
  • ಪರೋಪಜೀವಿಗಳು ರಕ್ತದ ಮೂಲಕ ಮೆದುಳಿಗೆ ಹೋಗಬಹುದು ( ಸೆರಬ್ರರಲ್ ಮಲೆರಿಯಾ )  ಮತ್ತು ಇತರ ಪ್ರಮುಖ ಅಂಗಗಳಿಗೂ ಹರಡುಬಹುದು.
  • ಗರ್ಭಿಣಿ ಮಹಿಳೆಗೆ ಮಲೇರಿಯಾ ಬಂದರೆ, ತಾಯಿಗೆ, ಭ್ರೂಣಕ್ಕೆ ಮತ್ತು ನವಜಾತ ಶಿಶುವಿಗೆ ತುಂಬ ಗಂಡಾಂತರಕಾರಿ. ಗರ್ಭಿಣಿ ಮಹಿಳೆಗೆ ಮಲೇರಿಯಾ ಸೋಂಕು ನಿವಾರಿಸುವುದು ಕಷ್ಟವಾಗುವುದು. ಇನ್ನೂ ಜನಿಸದ ಭ್ರೂಣದ ಮೇಲೆ ದುಷ್ಪರಿಣಾಮ ಬೀರುವುದು.

ತೀವ್ರ ಮತ್ತು ಸಂಕೀರ್ಣ ಮಲೇರಿಯಾದ ಲಕ್ಷಣಗಳು

ತೀವ್ರ ಮಲೇರಿಯಾದ ಲಕ್ಷಣಗಳನ್ನು ಅತಿ ಬೇಗ ಅರಿಯುವುದೆ ರೋಗಿಗೆ ತುರ್ತುಚಿಕಿತ್ಸೆ ಮತ್ತು ಆರೈಕೆಯ ಪ್ರಥಮ ಆದ್ಯತೆ. ಅದನ್ನು ಗುರುತಿಸುವ ಗುಣ ಲಕ್ಷಣಗಳು ಅನಿರ್ಧಿಷ್ಟವಾಗಿರುವವು.  ಅವು ಇತರ ತೀವ್ರ ಫೆಬರೈಲ ರೋಗ, ಮಲೇರಿಯಾದ ಸಹವರ್ತಿ,ಮತ್ತು ತೀವ್ರ ಬ್ಯಾಕ್ಟಿರಿಯಗಳ ಸೋಂಕು ಆಗಿರಬಹುದು. ಮಲೇರಿಯಾ ಸೋಂಕು ಉಂಟಾಗಿದ್ದರೆ ತೀವ್ರ ಜ್ವರದ ಜೊತೆ ಈ ಕೆಳಗಿನ ಲಕ್ಷಣಗಳು ಕಂಡುಬರಬಹುದು:

  • ಕುಳಿತುಕೊಳ್ಳಲು ಆಗದು, ಅತಿ ಆಲಸ್ಯ, ಕೋಮ
  • ಉಸಿರಾಟದ ತೊಂದರೆ
  • ತೀವ್ರ ರಕ್ತಹೀನತೆ
  • ಸೆಳೆತ/ ಫಿಟ್ಸ
  • ಕುಡಿಯಲು ಆಗದಿರುವುದು/ ವಾಂತಿ
  • ಕಪ್ಪಾದ  ಸ್ವಲ್ಪವೇ ಮೂತ್ರ ವಿಸರ್ಜನೆ

ಕುಳಿತು ಕೊಳ್ಳಲಾಗದ  ಮತ್ತು ಉಸಿರಾಟದ ತೊಂದರೆ ಇರುವ ರೋಗಿಗಳಿಗೆ  ಸಾಧ್ಯವಾದರೆ ಪೆರೆಂಟೆರಲ್ ಆಂಟಿಮಲೇರಿಯಲ್  ಮತ್ತು  ಆಂಟಿಬಯೋಟಿಕ್ಸ ಅನ್ನು( ಇಂಜೆಕ್ ಷನ್ ಅಥವ ಇನ್ ಫ್ಯೂಜನ್ ಮೂಲಕ) ನೀಡಬೇಕು. ಸಾಧ್ಯವಾದಷ್ಟು ಬೇಗ ಬಾಯಿಯ ಮೂಲಕ ಔಷಧಿ ಕೊಡಲು ಪ್ರಾರಂಭಿಸಬೇಕು. ಆಗಾಗ ಪ್ರಯೋಗಶಾಲಾ ವರದಿಗಳನ್ನು  ಪರಿಶೀಲಿಸಿ –ರಕ್ತದ ಸಕ್ಕರೆ, ಮೂತ್ರ, ಫ್ಲೂಯಿಡ್ ಬ್ಯಾಲೆನ್ಸ, ಇತರ ಸೊಂಕುಗಳ ಬಗ್ಗೆ ನಿಗಾವಹಿಸಬೇಕು. ಗ್ಯಾಸ್ಟ್ರೋ ಇಂಟೆಸ್ಟೈನಲ್ ರಕ್ತ ಸ್ರಾವ ಉಂಟು ಮಾಡುವ ಔಷಧಿಗಳನ್ನು ಕೊಡಬಾರದು.

ತೀವ್ರ ಸಮಸ್ಯೆಗಳ ಗಂಡಾಂತರ

  • ಕಡಿಮೆ ಹರಡುವ ಪ್ರದೇಶಗಳಲ್ಲಿ- ಎಲ್ಲ ವಯೋಮಾನದವರೂ ಭಾದೆಗೆ ಒಳಗಾಗಬಹುದು. ಆದರೆ ವಯಸ್ಕರು ತೀವ್ರವಾದ ಅನೇಕ ಸಮಸ್ಯೆಗಳನ್ನು ಎದುರಿಸುವರು. ದೇಶದ ಅನೇಕ ಭಾಗಗಳಲ್ಲಿ ರೋಗ  ಹರಡುವ ಪ್ರಮಾಣವು ಸಾಧಾರಣವಾಗಿ ಕಡಿಮೆ ಇದೆ.ಆದರೆ  ಈಶಾನ್ಯ ರಾಜ್ಯಗಳಲ್ಲಿ , ಒರಿಸ್ಸಾ, ಛತ್ತೀಸ್ ಘಡ, ಮಧ್ಯಪ್ರದೇಶದ ಅನೇಕ ಭಾಗಗಳಲ್ಲಿ ರೋಗದ ಸೋಂಕು ಹೆಚ್ಚಾಗಿದೆ.
  • ಹೆಚ್ಚು ಹರಡುವ ಪ್ರದೇಶಗಳಲ್ಲಿ –ಐದು ವರ್ಷದ ಕೆಳಗಿನ ಮಕ್ಕಳು, ಸಂದರ್ಶಕರು, ವಲಸೆ ಕಾರ್ಮಿಕರು  ಬಹಳ ಬೇಗ ಇದರ ಸೋಂಕಿಗೆ ತುತ್ತಾಗುತ್ತಾರೆ.
  • ಗರ್ಭಿಣಿಯರ ಸಹಯೋಗ-  ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಲೇರಿಯಾ ಸೋಂಕಿಗೆ  ಗರ್ಭಿಣಿಯ ಬಹಳ ಬೇಗ ತುತ್ತಾಗುತ್ತಾರೆ. ಇದು ಗರ್ಭಸ್ಥ ಮಗುವಿನ ಮೇಲೆ ದುಷ್ಪರಿಣಾಮ ಬೀರುವುದು.

ಮಲೇರಿಯಾ ವಾಹಕಗಳು

  • ಅನೇಕ ಮಲೆರಿಯಾ ವಾಹಕಗಳಿವೆ.
  • ಅನಾಫೆಲಿಸ್ ಕುಲ್ಸಿಫೆಸಿಸ್ ಒಂದು ಮುಖ್ಯವಾದ ಮಲೆರಿಯಾ ವಾಹಕ
  • ಅದು ಚಿಕ್ಕ ಮತ್ತು ಮಧ್ಯಮ ಗಾತ್ರದ ಸೊಳ್ಳೆ .. ಕ್ಯುಲೆಕ್ಸನಂತೆ ಕುಳಿತುಕೊಳ್ಳುತ್ತದೆ
  1. ಆಹಾರಾಭ್ಯಾಸ
    • ಅದ ಝೂಫೆಲಿಕ್ ಪ್ರಭೇದಕ್ಕೆ ಸೇರಿದೆ.
    • ಹೆಚ್ಚು ಸಾಂದ್ರವಾಗಿದ್ದಾಗ   ಹೆಚ್ಚಾಗಿ ಪುರಷರನ್ನೆ ಆಹಾರಕ್ಕೆ ಆಶ್ರಯಿಸುವವು.
  2. ವಿಶ್ರಾಂತಿಯ ಅಭ್ಯಾಸಗಳು
    • ಹಗಲು ಹೊತ್ತಿನಲ್ಲಿ ಮನೆಗಳಲ್ಲಿ, ದನದ ಕೊಟ್ಟಿಗೆಯಲ್ಲಿ ವಿಶ್ರಮಿಸುತ್ತವೆ.
  3. ಸಂತಾನೋತ್ಪತ್ತಿ ಸ್ಥಳಗಳು
    • ನಿಂತ ನೀರಿನಲ್ಲಿ, ಮಳೆಯನೀರು, ಹೊಂಡ, ನದಿದಡದ ಜೌಗು, ಕಾಲುವೆ, ಭತ್ತದ ಗದ್ದೆ, ಭಾವಿ, ತೊರೆ, ಹಳ್ಳ, ಕೊಳಚೆ ಪ್ರದೇಶದಲ್ಲಿ  ಅದು ಮೊಟ್ಟೆ ಇಡುವುದು.  ಅಲ್ಲೆ ಸೊಳ್ಳೆ ಮರಿಗಳು ಬೆಳೆಯುವವು.
    • ಮುಂಗಾರಿನಲ್ಲಿ ಅತಿ ಹೆಚ್ಚು ಸೊಳ್ಳೆಗಳು ಇರುತ್ತವೆ.
  4. ಕಚ್ಚುವ ಸಮಯ
    • ಪ್ರತಿ ಸೊಳ್ಳೆಯು ಕಚ್ಚುವ ಸಮಯವು ಅದರ ವಂಶವಾಹಿನಿ ಗುಣವನ್ನು ಅವಲಂಬಿಸಿದೆ. ಆದರೆ ಪರಿಸರದ ಪರಿಸ್ಥಿತಿಯು ಅದರ ಮೇಲೆ ಪ್ರಭಾವ ಬೀರಬಲ್ಲದು.
    • ಬಹುತೇಕ ಸೊಳ್ಳೆಗಳು  ಅನಾಫಲಿಸ್ ಸೇರಿದಂತೆ ಕತ್ತಲಾಗಿದ್ದಂತೆ ಕಚ್ಚಲು ಶುರು ಮಾಡುತ್ತವೆ. ಚಳಿಗಾಲದಲ್ಲಿ ಬೇಸಿಗೆಗಿಂತ ಮೊದಲೆ ಕಚ್ಚಲುಪ್ರಾರಂಭಿಸುವವು.  ಆದರೆ ಅವುಗಳ ಕಡಿತದ ತೀವ್ರತೆಯು ಒಂದೊಂದು ಪ್ರಭೇದ ಗಳಿಗೆ ಬೇರೆ ಬೇರೆ ಸಮಯದ ಅವಧಿ  ಆಗಿರಬಹುದು..

ರಾಜ್ಯಗಳಲ್ಲಿ ಮಲೇರಿಯಾ ಘಟನೆಗಳು

2004 ವರ್ಷದ ತಾತ್ಕಾಲಿಕ ವರದಿಯ ಪ್ರಕಾರ ಅತಿ ಹೆಚ್ಚಿನ ಪ್ರಕರಣಗಳು ಒರಿಸ್ಸಾದಲ್ಲಿ ವರದಿಯಾಗಿವೆ, ನಂತರದ ಸ್ಥಾನದಲ್ಲಿ ಕ್ರಮವಾಗಿ ಗುಜರಾತ್, ಛತ್ತೀಸಗಡ, ಪಶ್ಚಿಮ ಬಂಗಾಲ, ಜಾರ್ಖಂಡ, ಕರ್ನಾಟಕ, ಉತ್ತರಪ್ರದೇಶ ಮತ್ತು ರಾಜಾಸ್ಥಾನ ಇವೆ. ಮಲೇರಿಯಾದಿಂದ ಅತಿ ಹೆಚ್ಚಿನ ಸಾವು ಒರಿಸ್ಸಾದಲ್ಲಿ ವರದಿಯಾಗಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಲ, ಮಿಜೋರಾಂ, ಜಾರ್ಖಂಡ, ಮೇಘಾಲಯ, ಕರ್ನಾಟಕ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳಿವೆ.

ಡೆಂಗ್ಯು

ಡೆಂಗ್ಯು ಎಂದರೇನು?

  • ಡೆಂಗ್ಯು ಒಂದು ವೈರಲ್ ರೋಗ.
  • ಇದು ಸೊಂಕಿತ ಏಡೆಸ್ ಏಯಜಿಪ್ಟಿ ಸೊಳ್ಳೆ ಕಡಿದಾಗ ಹರಡುವುದು.
  • ಸೊಂಕಿತ ಸೊಳ್ಳೆಯು ಕಚ್ಚಿದ ನಂತರದ  5-6 ದಿನಗಳಲ್ಲಿ ರೋಗ ಬರುವುದು.
  • ಇದರಲ್ಲಿ ಎರಡು ರೀತಿಯಲ್ಲಿರುವುದು. ಡೆಂಗ್ಯು ಜ್ವರ ಮತ್ತು ಡೆಂಗ್ಯು ಹೆಮೊರಿಜಿಕ್ ಜ್ವರ(DHF)
  • ಡೆಂಗ್ಯು ಜ್ವರವು  ಗಂಭೀರವಾದುದು, ಪ್ಲೂ ಜ್ವರದಂತೆ ಇರುವುದು.
  • ಡೆಂಗ್ಯುಹೆಮೊಜಿರೆಕ್ ಜ್ವರವು  ಇನ್ನೂ ಹೆಚ್ಚು ತೀವ್ರವಾಗಿರುವುದು. ಅದರಿಂದ ಸಾವು ಕೂಡಾ ಬರಬಹುದು
  • ಡೆಂಗ್ಯುಜ್ವರ ಅಥವ DHF  ಬಂದಿದೆ ಎಂಬ ಶಂಕೆ ಇರುವವರು ತಕ್ಷಣ ವೈದ್ಯರನ್ನು ಕಾಣಬೇಕು.

ಡೆಂಗ್ಯು ಜ್ವರದ ಲಕ್ಷಣ ಮತ್ತು ಚಿಹ್ನೆಗಳು.

  • ಹಠಾತ್ತಾಗಿ ಬರುವ ಅತಿ ಹೆಚ್ಚು ಜ್ವರ.
  • ತೀವ್ರವಾದ ಮುಂತಲೆ ನೋವು.
  • ಕಣ್ಣ ಹಿಂದೆ ನೋವು,  ಅದು ಕಣ್ಣಿನ ಚಲನೆಯಿಂದ ಹೆಚ್ಚಾಗುವುದು.
  • ಸ್ನಾಯು ಮತ್ತು  ಕೀಲು ನೋವು
  • ರುಚಿ ಮತ್ತು ಹಸಿವೆ ಇಲ್ಲದಿರುವುದು.
  • ಎದೆ ಮತ್ತು ದೇಹದ ಮೇಲ್ ಭಾಗದಲ್ಲಿ ಮೀಸಲ್ಸನಂತಹ ಗುಳ್ಳೆಗಳು
  • ವಾಕರಿಕೆ ಮತ್ತು ವಾಂತಿ

ಡೆಂಗ್ಯು ಹೆಮೊರಫಿಕ್‌ ಮತ್ತು ಷಾಕ್‌ ಸಿಂಡ್ರೋಮ್‌ನ ಲಕ್ಷಣ ಮತ್ತು ಚಿಹ್ನೆಗಳು.

ಹೆಮರೇಜಿಕ್‌ ಜ್ವರ ಮತ್ತು ಶಾಕ್‌ ಸಿಂಡ್ರೋಮ್‌

  • ಡೆಂಗ್ಯೂ  ಜ್ವರದ ತರಹದ ಲಕ್ಷಣಗಳು
  • ತೀವ್ರವಾದ ನಿರಂತರ  ಹೊಟ್ಟೆನೋವು
  • ಚರ್ಮವು ಬಿಳಿಚಿಕೊಳ್ಳುವುದು, ತಣ್ಣಗಾಗುವುದು.
  • ಮೂಗು, ವಸಡು ಚರ್ಮದ ಮೇಲಿನ ಗುಳ್ಳೆಗಳಿಂದ ರಕ್ತಸ್ರಾವ
  • ಆಗಾಗ ರಕ್ತ ಸಹಿತ ಅಥವ ಇಲ್ಲದ ವಾಂತಿ
  • ನಿದ್ರಾಹೀನತೆ  ಮತ್ತು ಅಸೌಖ್ಯ
  • ರೋಗಿಗೆ ಬಾಯಾರಿಕೆ ಮತ್ತು ಬಾಯಿ ಒಣಗುವುದು
  • ತ್ವರಿತವಾದ, ದುರ್ಬಲ ನಾಡಿ
  • ಉಸಿರಾಟದ ತೊಂದರೆ

ಡೆಂಗ್ಯು ಹರಡುವಿಕೆಯ ಚಕ್ರ.

ಡೆಂಗ್ಯು ಹರಡುವಿಕೆ/ ಭಾರತದಲ್ಲಿ ಡಿಎಚ್‌ಎಫ್‌/

  • ರೋಗವು ಭಾರತಾದ್ಯಂತ ಇದೆ.  ಬಹುತೇಕ ಎಲ್ಲ  ಬೃಹತ್ ನಗರಗಳಲ್ಲಿ ಮತ್ತು  ಪಟ್ಟಣಗಳಲ್ಲಿ ಇದೆ,
  • ಹರಿಯಾಣ, ಮಹರಾಷ್ಟ್ರ ಮತ್ತು ಕರ್ನಾಟಕ  ರಾಜ್ಯಗಳ ಗ್ರಾಮೀಣ ಪ್ರದೇಶಗಳಿಂದಲೂ ರೋಗ ಪತ್ತೆಯಾದ ವರದಿ ಬಂದಿವೆ.

ಹರಡುವ ಅವಧಿ

ಡೆಂಗ್ಯು ಸೋಂಕನ್ನು ಹೊಂದಿದ ವ್ಯಕ್ತಿಯು ರೋಗಕಾಣಿಸಿ ಕೊಳ್ಳುವ 6 ರಿಂದ 12 ತಾಸು ಮೊದಲೆ ಸೊಳ್ಳೆಗಳಿಗೂ ಸೊಂಕು ತಗಲಿಸಬಲ್ಲ. ಹಾಗೆ 3 ರಿಂದ 5 ದಿನ ಇರುತ್ತಾನೆ.

ಸೋಂಕಿತ ಗುಂಪಿನ ವಯಸ್ಸು ಮತ್ತು ಲಿಂಗ

  • ಎಲ್ಲ  ವಯೋಮಾನದವರಿಗೆ ಮತ್ತು ಲಿಂಗ ಬೇಧವಿಲ್ಲದೆ ಸೋಂಕು ತಗಲುತ್ತದೆ.
  • DHF ನಿಂದ ಸಾಯವವರಲ್ಲಿ ಮಕ್ಕಳ ಸಂಖ್ಯೆಯೆ ಹೆಚ್ಚು

ಡೆಂಗ್ಯು ವಾಹಕ/ ಡೆಂಗ್ಯು ಹೆಮರೇಜಿಕ್‌ ಜ್ವರ

  • ಏಯಿಡೆಸ ಎಯೆಜಿಪ್ಟಿಯು   ಡೆಂಗ್ಯು ವಾಹಕ / ಡೆಂಗ್ಯು ಹೆಮರೇಜಿಕ್‌ ಜ್ವರ
  • ಇದು ಚಿಕ್ಕ ಕರಿ ಸೊಳ್ಳೆ, ಮೇಲೆ ಬಿಳಿ ಪಟ್ಟಿಗಳಿವೆ. ಸುಮಾರು 5 ಮಿ.ಮಿ ಗಾತ್ರವಿರುವುದು.
  • ಅದರ ದೇಹದಲ್ಲಿ ವೈರಸ್ ಅಭವೃದ್ಧಿ ಹೊಂದಿ ರೋಗ ಹರಡಲು 7 ರಿಂದ  8 ದಿನಗಳು ಬೇಕಾಗುವುದು

ಆಹಾರಾಭ್ಯಾಸ

  • ಹಗಲಲ್ಲಿ  ಕಚ್ಚುವುದು
  • ಆಹಾರಕ್ಕಾಗಿ ಮಾನವರನ್ನೆ ಅವಲಂಬಿಸಿದೆ. ಮನೆ ಮತ್ತು ಅದರ ಸುತ್ತಮುತ್ತ ವಾಸಿಸುವುದು.
  • ಪದೇ ಪದೇ ಕಚ್ಚುವುದು.

ವಿಶ್ರಾಂತಿಯ ಅಭ್ಯಾಸ

  • ಮನೆಯಲ್ಲಿ  ಮತ್ತು ಸುತ್ತಮುತ್ತ ವಿಶ್ರಾಂತಿಪಡೆಯುವುದು.

ಮನೆಯ ಕತ್ತಲಿನ ಮೂಲೆಯಲ್ಲಿ, ಜೋತು ಬಿದ್ದಿರುವ ಬಟ್ಟೆ, ಕೊಡೆಗಳ ಮೇಲೆ ಮತ್ತು ಪೀಠೋಪಕರಣಗಳ ಕೆಳಗೆ ಇರುವುದು.

ಸಂತಾನೋತ್ಪತ್ತಿ ಅಭ್ಯಾಸ

  • ಏಯಿಡೆಸ ಎಯೆಜಿಪ್ಟಿಯು  ಸೊಳ್ಳೆಯು ಯಾವುದೆ ಮಾನವ ನಿರ್ಮಿತ  ಪಾತ್ರೆಗಳಲ್ಲಿ ತುಸುವೆ ನೀರಿದ್ದರೂ ಸಾಕು ಅಲ್ಲಿಯೇ ಮರಿ ಮಾಡುತ್ತದೆ
  • ಏಯಿಡೆಸ ಎಯೆಜಿಪ್ಟಿಯು ಮೊಟ್ಟೆಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ನೀರಿಲ್ಲದೆ ಬದುಕಬಲ್ಲವು
  • ಸಂತಾನೋತ್ಪತ್ತಿಯ ಸ್ಥಳಗಳು ಕೂಲರುಗಳ, ಡ್ರಮ್ಮುಗಳು,   ಭರಣಿಗಳು, ಪಾಟುಗಳು, ಬಕೆಟುಗಳು, ಹುದಾನಿಗಳು, ಸಸಿತಟ್ಟೆಗಳು, ತೊಟ್ಟಿಗಳು, ಬಾಟಲಿಗಳು, ಟಿನ್‌ಗಳು, ಟೈಯರುಗಳು, ಚರಂಡಿಗಳು, ರೆಫ್ರಿರೇಟರ್ ತೊಟ್ಟಿಕ್ಕುವ ತಟ್ಟೆಗಳು, ಸಿಮೆಂಟು ಬ್ಲಾಕುಗಳು, ತೆಂಗಿನಚಿಪ್ಪು, ಬೊಂಬಿನ ಸೀಳುಗಳು ಮರದ ಪೊಟರೆಗಳು ಹೀಗೆ ಇನ್ನೂ ಎಷ್ಟೋ ಮಳೆನೀರು ನಿಲ್ಲುವ ಜಾಗಗಳಲ್ಲಿ ಅವು ಮೊಟ್ಟೆ ಇಡುತ್ತವೆ.

ಡೆಂಗ್ಯು/ ಹೆಮರೇಜ್‌ ಜ್ವರದ ನಿಯಂತ್ರಣ

  • ರೋಗವನ್ನು ಬರದಂತೆ ತಡೆಗಟ್ಟುವುದು ರೋಗ ನಿದಾನಕ್ಕಿಂತ ಉತ್ತಮ
  • ಡೆಂಗ್ಯುಚಿಕಿತ್ಸೆಗೆ ಯಾವುದೆ ಔಷಧಿ ಅಥವ ವ್ಯಾಕ್ಸಿನ್ ಇಲ್ಲ.
  • ಏಯಿಡೆಸ ಎಯೆಜಿಪ್ಟಿಯು  ಸೊಳ್ಳೆಯ ನಿಯಂತ್ರಣವೆ ಏಕ ಮಾತ್ರ ವಿಧಾನ .
  • ಬೇಗ ಪತ್ತೆಮಾಡುವುದು ,  ಪ್ರಕರಣದ ಸಕ್ರಮ ನಿರ್ವಹಣೆ ಮತ್ತು ಸೂಕ್ತ ಚಿಕಿತ್ಸೆಯಿಂದ ಮರಣ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಬಹುದು.

ವಾಹಕವನ್ನು ನಿಯಂತ್ರಿಸುವ ಕ್ರಮಗಳು

 

  1. ವೈಯಕ್ತಿಕ ಪ್ರೊ ಫಾಲಾಟಿಕ್ ಕ್ರಮಗಳು
    • ಸೊಳ್ಳೆನಿವಾರಕ ಕ್ರೀಮುಗಳು, ದ್ರವಗಳು , ಕಾಯಿಲ್ಗಳು, ಮ್ಯಾಟುಗಳನ್ನು ಉಪಯೋಗಿಸಬೇಕು
    • ಪೂರ್ತಿತೋಳಿನ ಅಂಗಿ , ಪ್ಯಾಂಟು ಮತ್ತು ಕಾಲುಚೀಲ ಧರಿಸಿ.
    • ಹಗಲಿನಲ್ಲೂ ಶಿಶುಗಳು ಮತ್ತು ಚಿಕ್ಕಮಕ್ಕಳು ಮಲಗಿದಾಗ ಸೊಳ್ಳೆ ಕಾಟ ತಪ್ಪಿಸಲು ಪರದೆ ಬಳಸಿ .
  2. ಜೈವಿಕ ನಿಯಂತ್ರಣ/
    • ಅಲಂಕಾರಿಕ  ತೊಟ್ಟಿಯಲ್ಲಿ, ಚಿಲುಮೆ ಇತ್ಯಾದಿಗಳಲ್ಲಿ ಲಾರ್ವಿವೊರಸ್ ಮೀನುಗಳನ್ನು ಇಡಿ.
    • ಬಯೋಸೈಡಗಳನ್ನು ಬಳಸಿ
  3. ರಸಾಯನಿಕ ನಿಯಂತ್ರಣ/
    • ಲಾರ್ವಿಸೈಡ್ಸನಂಥಹ ರಸಾಯನಿಕಗಳನ್ನು  ದೊಡ್ಡ ಬ್ರೀಡಿಂಗ  ಪಾತ್ರೆಗಳಲ್ಲಿ ಉಪಯೋಗಿಸಿ
    • ಎರೋಸೊಲ ಸ್ಪ್ರೇ ಹಗಲು ಹೊತ್ತಲ್ಲಿ ಬಳಸಿ
  4. ಪರಿಸರ ನಿರ್ವಹಣೆ ಮತ್ತು ಮೂಲದಲ್ಲೆ ಕಡಿಮೆ ಮಾಡುವ ಕ್ರಮಗಳು.
    • ಸೊಳ್ಳೆ ಬೆಳೆಯುವ ಜಾಗಗಳ  ಪತ್ತೆ  ಅವುಗಳ ನಿವಾರಣೆ
    • ಮಾಳಿಗೆ, ಪೊರ್ಟಿಕೊ ಮತ್ತು ಸನ್ ಷೇಡುಗಳ ನಿರ್ವಹಣೆ.
    • ನೀರಿನ ಸಂಗ್ರಹದ ಮೇಲೆ ಸರಿಯಾಗಿ ಮುಚ್ಚುವುದು
    • ನಂಬಲರ್ಹವಾದ ನೀರು ಪೂರೈಕೆ.
    • ವಾರದಲ್ಲೊಮ್ಮೆ ಒಣ ದಿನದ ಆಚರಣೆ
  5. ಆರೋಗ್ಯ ಶಿಕ್ಷಣ
    • ಸಾಮಾನ್ಯ ಜನರಿಗೆ  ರೋಗ ಮತ್ತು ಅವುಗಳ ವಾಹಕಗಳ ಬಗ್ಗೆ ವಿವಿಧ ಮಾಧ್ಯಮ ಮೂಲಗಳಾದ ಟಿ.ವಿ, ರೆಡಿಯೋ ಸಿನೆಮಾ ಮತ್ತು ಸ್ಲೈಡುಗಳ ಮೂಲಕ ತಿಳುವಳಿಕೆ ನೀಡಿ   .
  6. ಸಮುದಾಯದ ಸಹಭಾಗಿತ್ವ
  • ಸೋಳ್ಳೆಗಳು ಬೆಳೆಯುವ ಸ್ಥಳಗಳನ್ನು ಕುರಿತು ಸಮುದಾಯವನ್ನು ಸಂವೇದನಾಶಿಲರನ್ನಾಗಿಸಿ ಅವುಗಳ ನಿರ್ಮೂಲನ ಕೆಲಸದಲ್ಲಿ ಅವರನ್ನೂ ತೊಡಗಿಸಿ.

ಡೆಂಗ್ಯು ಪ್ರಕರಣದ ನಿರ್ವಹಣೆ

  • ಶಂಕಿತ ಡೆಂಗ್ಯೂ ಜ್ವರವನ್ನು ಬೇಗನೆ ವರದಿ ಮಾಡಿ.
  • ಡೆಂಗ್ಯೂ ಜ್ವರವನ್ನು ಸಕ್ರಮವಾಗಿ ಮತ್ತು ಬೆಂಬಲ ನೀಡಿ ನಿರ್ವಹಣೆ ಮಾಡಿ.

ಡೆಂಗ್ಯೂ  ಆಘಾತ ಸಿಂಡ್ರೊಮ್ ನಲ್ಲಿ ಕೆಳಗೆ ಹೇಳಿದ ಚಿಕಿತ್ಸೆ ಮಾಡಬೇಕು,

  • ಪ್ಲಾಸ್ಮ ನಷ್ಟದ ಮರುಪೂರಣ .
  • ಎಲೆಕ್ಟ್ರೊಲೈಟ  ಮತ್ತು ಮೆಟಬಾಲಿಕ್ ತೊಂದರೆ ಸರಿಪಡಿಸುವುದು.
  • .ರಕ್ತದ ಮರುಪೂರಣ .

ಮಾಡ ಬೇಕಾದದ್ದು ಮತ್ತು ಮಾಡ ಬಾರದ್ದು

  • ಕೂಲರುಗಳು ಮತ್ತು ಇತರ ಚಿಕ್ಕ ಪಾತ್ರೆಗಳಲ್ಲಿ ನೀರನ್ನು ಕನಿಷ್ಟ ವಾರಕ್ಕೆ ಒಮ್ಮೆಯಾದರೂ ಬದಲಾಯಿಸಿ.
  • ಹಗಲು ಹೊತ್ತಿನಲ್ಲಿ ಸೊಳ್ಳೆ ಕಡಿತ ತಪ್ಪಿಸಲು ಎರೋಸೊಲ ಬಳಸಿ
  • ಕೈ ಕಾಲುಗಳನ್ನು ತೋರುವ ಉಡುಪು ಧರಿಸಬೇಡಿ.
  • ಮಕ್ಕಳನ್ನು ಅರ್ಧತೋಳಿನ ಅಂಗಿ ಮತ್ತು ನಿಕ್ಕರಿನಲ್ಲಿ  ಆಡಲು ಬಿಡಬೇಡಿ
  • ಹಗಲಲ್ಲಿ ಮಲಗುವಾಗಲೂ ಸೊಳ್ಳೆಪರದೆ , ಸೊಳ್ಳೆ ನಿರೋಧಕ ಬಳಸಿ.

ಪ್ರಾಯೋಗಿಕ ಪತ್ತೆ

  • ಕ್ಲಿನಿಷಿಯನ್ ಉಷ್ಣತೆಯನ್ನು ದಾಖಲೆ ಮಾಡಬೇಕು ಮತ್ತು ಟುನಿಕ್ಯು ಪರೀಕ್ಷೆ ಮಾಡಬೇಕು  ಮತ್ತು ಇದೆಯಾ ನೋಡಬೇಕು
  • ಎಲ್ಲ ಶಂಕಿತ ರಕ್ತಸ್ರಾವದ ಜತೆಗಿನ ಜ್ವರದ ಪ್ರಕರಣಗಳನ್ನು ಪ್ಲಟಿಲೆಟ್ ಕೌಂಟ್ ತನಿಖೆಗಾಗಿ  ಕಳುಹಿಸಿ
  • ಷಾಕ್ ಆಗಿದ್ದರೆ  ಜಠರದಲ್ಲಿ ಮತ್ತು ಎದೆಯಲ್ಲಿ  ಇರುವ ಜೀವದ್ರವಗಗಳನ್ನು ತಿಳಿಯಲು ಪರೀಕ್ಷೆ ಮಾಡಿಸಿ.

ಚಿಕನ್‌ಗುನ್ಯ

ಚಿಕನ್‌ಗುನ್ಯಾ ಎಂದರೇನು?

ಚಿಕನ್‌ಗುನ್ಯಾ (ಚಿಕನ್‌ಗುನ್ಯಾ ವೈರಸ್ ಅಥವ ಚಿಕನ್‌ಗುನ್ಯಾ ಜ್ವರ ಎಂದೂ ಕರೆಯುವುರು) ಇದು ನಿತ್ರಾಣ ಮಾಡುವುದು, ಆದರೆ ಮಾರಣಾಂತಿಕವಲ್ಲ. ವೈರಲ್ ರೋಗ. ಅನಾರೋಗ್ಯ ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುವುದು. ಇದು ಡೆಂಗ್ಯೂ ಜ್ವರವನ್ನು ಹೋಲುವುದು

ಭಾರತದಲ್ಲಿ ಪ್ರಮುಖವಾಗಿ ಚಿಕನ್‌ಗುನ್ಯಾ ಸಂಕ್ರಾಮಿಕ ರೋಗವು ವರದಿಯಾದದ್ದು ಕಳೆದ ಸಹಸ್ರಮಾನದಲ್ಲಿ. 1963ನಲ್ಲಿ (ಕಲ್ಕತ್ತಾ), 1965ರಲ್ಲಿ ( ತಮಿಳುನಾಡಿನ ಪಾಂಡಿಚೆರಿ ಮತ್ತು ಚೆನ್ನೈ; ಆಂಧ್ರಪ್ರದೇಶದ, ರಾಜಮಂಡ್ರಿ , ವಿಶಾಖ ಪಟ್ಟಣ ಮತ್ತು ಕಾಕಿನಾಡ ; ಮಧ್ಯ ಪ್ರದೇಶದ ಸಾಗರ; ಮತ್ತು ಮಹರಾಷ್ಟ್ರದ ನಾಗಪುರ) ಮತ್ತು 1973 ರಲ್ಲಿ , ( ಮಹರಾಷ್ಟ್ರದ ಬಾರ್ಸಿ ). ಅಲ್ಲಿಂದ ಆಗಾಗ ಪ್ರಕರಣಗಳು ವರದಿಯಾಗುತ್ತಲಿವೆ. ಅದರಲ್ಲೂ ವೀಶೇಷವಾಗಿ ಮಹರಾಷ್ಟ್ರ ರಾಜ್ಯದಲ್ಲಿ 1983 ಮತ್ತು 2000 ರಲ್ಲಿಯೂ ವರದಿಯಾಗುತ್ತಲೇ ಇದ್ದವು.

ಚಿಕನ್‌ಗುನ್ಯಾ ಹರಡುವ ವಾಹಕ ಯಾವುದು?

ಚಿಕನ್‌ಗುನ್ಯಾ ವೈರಸ್ ನಿಂದ ಚಿಕನ್‌ಗುನ್ಯಾ ರೋಗವು ಬರುವುದು. ಅದನ್ನು ಟೊಗವೈರಿಡಿಯ ಕುಟುಂಬದ ಜಿನಸ್ ಆಲ್ಫವೈರಸ್ ಎಂದು ವರ್ಗೀಕರಿಸಲಾಗಿದೆ.

ಚಿಕನ್‌ಗುನ್ಯಾ ಹರಡುವ ಬಗೆ ಹೇಗೆ

ಚಿಕನ್‌ಗುನ್ಯಾವು ಆಯಿಡೆಸ್ ಸೊಳ್ಳೆಯ ಕಡಿತದಿಂದ ಹರಡುವುದು. ಪ್ರಾಥಮಿಕವಾಗಿ ಅಯಡೆಸ್‌ ಅಜೆಪ್ಟಿ. ಮಾನವರೆ ಸೊಳ್ಳೆಗಳಿಗೆ ಚಿಕನ್‌ಗುನ್ಯಾದ ಮೂಲ ಅಥವಾ ಸಂಗ್ರಾಹಕ ಎನ್ನಲಾಗಿದೆ. ಆದುದರಿಂದ ಸಾಮಾನ್ಯವಾಗಿ ಸೊಳ್ಳೆಯು ಸೋಂಕಿತ ಮನುಷ್ಯನನ್ನು ಕಚ್ಚಿ ಅವನಿಂದ ರೋಗವನ್ನು ಹರಡುತ್ತದೆ. ಸೋಂಕಿತ ಮನುಷ್ಯನು ನೇರವಾಗಿ ರೋಗವನ್ನು ಇನ್ನೊಬ್ಬರಿಗೆ ಹರಡಲಾರ (ಅಂದರೆ ಅದು ಸಂಕ್ರಾಮಿಕ ರೋಗವಲ್ಲ). ’ಅಯಡೆಸ್‌ಅಜೆಪ್ಟಿ’. ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುತ್ತದೆ.

ಆನೆ ಕಾಲು ರೋಗ

ಲಿಂಫಟಿಕ್ ಫೈಲಾರಿಸಿಸ , ಸಾಮಾನ್ಯವಾಗಿ ಎಲಿಫೆಂಟಾಸಿಸ ಎಂದು ಹೆಸರಾಗಿದೆ. ಇದು ಸಾಧಾರಣವಾಗಿ ಬಾಲ್ಯದದಲ್ಲೆ ಬರುವುದು. ವಯಸ್ಕ ಕ್ರಿಮಿಗಳು ಸೂಕ್ಷ್ಮವಾದ ಮಿಲಿಯನ್ ಗಟ್ಟಲೆ ಮೈಕ್ರೊಫೈಲೇರಿಯಾ ಎಂಬ ಅಪಕ್ವ ಲಾರ್ವಗಳನ್ನು ಉತ್ಪಾದಿಸುವುದು. ಅವು ಅಂಚಿನಲ್ಲಿನ ರಕ್ತದಲ್ಲಿ ಚಲಿಸುತ್ತಲೇ ಇರುವವು. ಅವು ರಾತ್ರಿಯಲ್ಲಿ ನಿರ್ಧಿಷ್ಟ ಸಮಯದಲ್ಲಿ ಚುರುಕಾಗುವವು. ಕ್ರಿಮಿಯು ಸಾಮನ್ಯವಾಗಿ 4 ರಿಂದ 6 ವರ್ಷ ಮೈಕ್ರೊಫೈಲೇರಿಯಾಗಳನ್ನು ಉತ್ಪಾದಿಸುವುದು. ‘ಫಟಿಕ್ ಫೈಲಾರಿಸಿಸ್’ ಸೊಳ್ಳೆಗಳ ಕಡಿತದ ಮೂಲಕ ಹರಡುವುದು. ಮೈಕ್ರೊಫೈಲೇರಿಯಾವು ಸೊಳ್ಳೆಯ ದೇಹವನ್ನು ಅದು ರಕ್ತದಲ್ಲಿ ಮೈಕ್ರೊಫೈಲೇರಿಯಾ ಇರುವ ಮನುಷ್ಯನನ್ನು ಕಚ್ಚಿ ಅವನ ರಕ್ತ ಕುಡಿದಾಗ ಪ್ರವೇಶಿಸುವುದು. ಅದು ಸೊಳ್ಳೆಯ ದೇಹದಲ್ಲಿ ಪೂರ್ಣ ಬೆಳೆಯಲು 7-21 ದಿನ ತೆಗೆದು ಕೊಳ್ಳುವುದು.

ಸೋಂಕಿನಿಂದ ಉಂಟಾಗುವ ಗಂಡಾಂತರವೇನು?

ಲಿಂಫಾಟಿಕ್ ಫೈಲೇರಿಯಾಸಿಸ್‌ ಬರಲು ತಿಂಗಳುಗಳಿಂದ ವರ್ಷಗಳವರೆಗೆ ಸೊಳ್ಳೆಗಳು ಕಚ್ಚುತ್ತಲೇ ಇರಬೇಕು. ಫೈ ಲೇರಿಯಾವು ಅತಿ ಹೆಚ್ಚಿರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚು.. ಸೋಂಕನ್ನು ರಾತ್ರಿ ರಕ್ತ ಸಮೀಕ್ಷೆ ಮಾಡುವುದರಿಂದ ಪತ್ತೆ ಹಚ್ಚಬಹುದು.

ಆನೆಕಾಲು ರೋಗದ ಲಕ್ಷಣಗಳೇನು?

ಮೊದಲಲ್ಲಿ ಬಹಳ ಜನ ವಯಸ್ಕರು ಕ್ರಿಮಿ ಸಾಯುವ ತನಕ ಯಾವುದೆ ಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ರೋಗವು ಪ್ರಾಣಾಪಾಯಕಾರಿಯಲ್ಲ. ಆದರೆ ಇದು ಲಿಂಫ್ ವ್ಯವಸ್ಥೆಯನ್ನು, ಮೂತ್ರಪಿಂಡಗಳನ್ನು ಶಾಶ್ವತವಾಗಿ ಹಾನಿಮಾಡಬಹುದು. ಲಿಂಫ್ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಫ್ಲೂಯಿಡ್ ಗಳು ಸಂಗ್ರಹ ವಾಗುತ್ತವೆ ಕೈ, ಎದೆ, ಮತ್ತು ಕಾಲುಗಳು ದಪ್ಪವಾಗುತ್ತವೆ. ಈ ಊತವನ್ನೆ ಲಿಂಫೋಡೆಮಾ ಎನ್ನುವರು. ಪುರುಷರಲ್ಲಿ ಜನನಾಂಗದ ಪ್ರದೇಶದಲ್ಲಿ ಸಹಾ ಬಾವು ಬರುವದು. ಇದನ್ನು ಹೈಡ್ರೊಸಿಲ್ ಎನ್ನುವರು. ಈ ಊತದಿಂದ ಮತ್ತು ಲಿಂಫ್ ವ್ಯವಸ್ಥೆಯ ಕುಂದಿದ ಕಾರ್ಯ ಕ್ಷಮತೆಯಿಂದಾಗಿ ದೇಹಕ್ಕೆ ಕ್ರಿಮಿಗಳನ್ನು ಮತ್ತು ಸೋಂಕನ್ನು ಎದುರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಈ ಜನರಿಗೆ ಚರ್ಮ ಮತ್ತು ಲಿಂಫ್ ಸಿಸ್ಟಮನಲ್ಲಿ ಹೆಚ್ಚಿನ ಬ್ಯಾಕ್ಟೀರಿಯಲ್ ಸೋಂಕು ತಗುಲುವುದು ಮತ್ತು ಇದರಿಂದ ಚರ್ಮವು ದಪ್ಪವಾಗುವುದು ಮತ್ತು ಗಟ್ಟಿಯಾಗುವುದು. ಅದನ್ನೆ ಎಲಿಫೆಂಟಾಸಿಸ ಎನ್ನುವರು

ಸೋಂಕನ್ನು ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಎಂದರೆ ಸಮುದಾಯದ ಎಲ್ಲರಿಗೂ ಈ ಮೈಕ್ರೊಸ್ಕೋಪಿಕ್ ಸೂಕ್ಷ್ಮಾಣುವನ್ನು  ಕೊಲ್ಲುವ  ಔಷಧಿ  ಕೊಡುವುದು ಮತ್ತು  ಸೊಳ್ಳೆಗಳನ್ನು ನಿಯಂತ್ರಿಸುವುದು. ಫೈಲೇರಿಯ ಸೂಕ್ಷ್ಮಾಣುಗಳನ್ನು ಹರಡುವ ಸೊಳ್ಳೆಗಳು ಕಚ್ಚುವುದು ಸಂಜೆಯಿಂದ ಮುಂಜಾವಿನವರೆಗೆ. ನೀವು – ರೋಗವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಕೆಳಗಿನ ಮುನ್ನೆಚ್ಚರಿಕೆಯನ್ನು ತೆಗೆದು ಕೊಳ್ಳಬೇಕು.;

  • ಮಲಗುವಾಗ ಸೊಳ್ಳೆ ಪರದೆ ಬಳಸಿ /ಅದು ಕ್ರಿಮಿ ನಾಶಕದಿಂದ ಕೂಡಿದ್ದಾಗಿರಲಿ

ಹೊರಗೆ ತೋರುವ ಚರ್ಮಕ್ಕೆ ಸೊಳ್ಳೆ ನಿವಾರಕಗಳನ್ನು ಸಂಜೆಯಿಂದ ಮುಂಜಾವಿನವರೆಗೆ ಲೇಪಿಸಿರಿ

ಆನೆಕಾಲು ರೋಗಕ್ಕೆ ಚಿಕಿತ್ಸೆ ಏನು?

ವಯಸ್ಕ ಕ್ರಿಮಿಗಳ ಸೋಂಕು ತಗುಲಿದವರು ಪ್ರತಿ ವರ್ಷ (DEC) ಔಷಧಿ ತೆಗೆದುಕೊಳ್ಳಬೇಕು. ರಕ್ತದಲ್ಲಿನ ಮೈಕ್ರೊಫೈಲೇರಿಯಾವು  ಹರಡುವುದು ಕಡಿಮೆಯಾಗುವುದು. ಔಷಧಿಯು ವಯಸ್ಕ ಕ್ರಿಮಿಯನ್ನು ನಾಶ  ಮಾಡದಿದ್ದರೂ  ಸೋಂಕು ತಗುಲಿದ ಜನರು ರೋಗವನ್ನು ಇನ್ನೊಬ್ಬರಿಗೆ ಹರಡುವುದನ್ನು ತಡೆಯುವುದು. ವಯಸ್ಕ ಕ್ರಿಮಿಯು ಸತ್ತ ನಂತರವೂ ಲಿಂಫೊಡೆಮಾ ಬೆಳೆಯವುದು ಸಾಧ್ಯ.  ಲಿಂಫೊಡೆಮಾ ಹದಗೆಡದಂತೆ ಮಾಡಲು ಕೇಳಗಿನ ಕೆಲವು ಮೂಲ ತತ್ವಗಳನ್ನು ಅನುಸರಿಸಿ:.

  • ಊದಿಕೊಂಡಿರುವ ಭಾಗವನ್ನು ಸೋಪು ಮತ್ತು ನೀರಿನಿಂದ ಪ್ರತಿದಿನ ತೊಳೆಯಿರಿ.
  • ಗಾಯದ ಮೇಲೆ ಆಂಟಿ ಬ್ಯಾಕ್ಟೀರಿಯಲ್ ಕ್ರೀಮು ಉಪಯೋಗಿಸಿ. ಅದು ಸೋಂಕನ್ನು ತಡೆಯುವುದು .
  • ಊದಿಕೊಂಡ ಕೈ ಅಥವಾ ಕಾಲನ್ನು ಮೇಲೆ ಇತ್ತಿ ವ್ಯಾಯಾಮ ಮಾಡಿ. ಫ್ಲೂಯಿಡ್ ಚಲಿಸಿ ಲಿಂಫ್ ಸುಧಾರಿಸಲಿ.

ಜಪಾನಿಸ್‌ ಎನ್‌ಸೆಫಾಲಿಟಿಸ್‌

Q.ಜಪಾನಿಸ್‌ ಎನ್‌ಸೆಫಾಲಿಟಿಸ್‌ ಹರಡುವುದು ಹೇಗೆ

ಈ ಸೊಳ್ಳೆಗಳು ಭತ್ತದ ಗದ್ದೆಯಲ್ಲಿ ಹುಟ್ಟಿ ಬೆಳೆಯುತ್ತವೆ (ಮುಖ್ಯವಾಗಿ ಕ್ಯುಲೆಕ್ಸ ಟ್ರೈಟೇನಿಯೋ ರಿಂಚಸ್ ಗುಂಪು. ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ನಿಂದ ಸೊಂಕಿತವಾಗುವುದು (ಇದು ಫ್ಲವಿವಯರಸ್ ಆಂಟಿಜೆನಿಕಲಿ ಸೆಂಟ್. ಲೂಯಿಸ್ ಎನ್‌ಸೆಫಾಲಿಟಿಸ್‌ ವೈರಸ್ ಗೆ ಸಂಬಂಧಿಸಿದ್ದು

ಜಪಾನಿಸ್‌ ಎನ್‌ಸೆಫಾಲಿಟಿಸ್‌ ಜನರಿಗೆ ಹೇಗೆ ಬರುತ್ತದೆ?

ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ಸೊಂಕಿತ ಸೊಳ್ಳೆ ಕಚ್ಚುವುದರಿಂದ ಬರುವುದು

ರೋಗ ಮೂಲಭೂತವಾಗಿ ಹರಡುವ ಚಕ್ರ ಯಾವುದು?

ಸೊಳ್ಳೆಯು ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ಸೋಂಕಿತ ಸಾಕಿದ ಹಂದಿ ಅಥವಾ ಕಾಡು ಹಕ್ಕಿಯನ್ನು ಕಚ್ಚಿದಾಗ ಅವುಗಳು ಸೋಂಕಿತವಾಗುವವು. ಸೊಂಕಿತ ಸೊಳ್ಳೆಗಳು ಮನಷ್ಯರಿಗೆ, ಪ್ರಾಣಿಗಳಿಗೆ ಕಚ್ಚಿ ರಕ್ತ ಹೀರುವಾಗ ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ಅನ್ನು ಹರಡುತ್ತವೆ. ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ಸಾಕಿದ ಹಂದಿಗಳು, ಕಾಡು ಹಕ್ಕಿಗಳ ರಕ್ತದಲ್ಲಿ ಹೆಚ್ಚುತ್ತ ಹೋಗುವವು.

ಬೇರೆ ವ್ಯಕ್ತಿಯಿಂದ ನಿಮಗೆ ಜಪಾನಿಸ್‌ ಎನ್‌ಸೆಫಾಲಿಟಿಸ್‌ ಬರುವ ಸಾಧ್ಯತೆಯಿದೆಯೇ?

ಇಲ್ಲ, ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಉದಾ: ರೋಗವಿರುವ ವ್ಯಕ್ತಿಯನ್ನು ಮುಟ್ಟುವುದರಿಂದ, ಮುದ್ದಿಸುವುದರಿಂದ, ಅಥವಾ ರೋಗಿಗೆ ಚಿಕಿತ್ಸೆಮಾಡುವ ಆರೋಗ್ಯ ಕಾರ್ಯಕ ರ್ತರಿಂದ ಇನ್ನೊಬ್ಬರಿಗೆ ರೋಗ ಹರಡುವುದಿಲ್ಲ

ಸಾಕು ಪ್ರಾಣಿಗಳಾದ ಹಂದಿ,ಹಕ್ಕಿಗಳು ಅಥವಾ ಸೊಳ್ಳೆಗಳಲ್ಲದೇ ಇತರೆ ಪ್ರಾಣಿಗಳಿಂದ ಜಪಾನಿಸ್‌ ಎನ್‌ಸೆಫಾಲಿಟಿಸ್‌ ಬರುವುದೇ?

ಇಲ್ಲ. ಸಾಕಿದ ಹಂದಿಗಳು ಮತ್ತು ಕಾಡು ಪಕ್ಷಿಗಳು ಮಾತ್ರ ಜಪಾನಿಸ್‌ ಎನ್‌ಸೆಫಾಲಿಟಿಸ್‌ ವೈರಸ್ ವಾಹಕವಾಗಿವೆ .

ಜಪಾನಿಸ್‌ ಎನ್‌ಸೆಫಾಲಿಟಿಸ್‌ ಲಕ್ಷಣಗಳೇನು?

ತುಸುವೆ ಸೋಂಕು ಆದಾಗ ಜ್ವರ ಮತ್ತು ತಲೆ ನೋವು ಬಿಟ್ಟರೆ ಬೇರೆ ಯಾವುದೆ ಚಿಹ್ನೆಯು ಹೊರಗೆ ಕಾಣುವುದಿಲ್ಲ. ಹೆಚ್ಚು ತೀವ್ರವಾದ ಸೋಂಕು ಆದರೆ ಕಾಣುವ ಲಕ್ಷಣವೆಂದರೆ ಹಠತ್ತನೆ ತೀವ್ರ ಜ್ವರ, ತಲೆ ನೋವು, ಬಿಗಿದ ಕತ್ತು, ಗೊಂದಲ, ಕೋಮಾ, ಆಗೀಗ ಸೆಳೆತ(ವಿಶೆಷವಾಗಿ ಮಕ್ಕಳಲ್ಲಿ),ಸ್ಪಾಸ್ಟಿಕ್ ಪೆರಾಲಿಸಿಸ್

ಕಾಲಾ ಅಝಾರ್‌

ಕಾಲಾ ಅಝಾರ್‌ ಎಂದರೇನು?

  • ಕಲಾ ಆಝಾರ ಸಾವಕಾಶವಾಗಿ ಬೆಳೆಯುವ ಸ್ಥಳೀಯ ರೋಗ. ಲೆಷ್ಮಾನಿಯಾ ಜೀನಸ್ಗೆ ಸೇರಿದ ಪರೋಪಜೀವಿ ಪ್ರೊಟೊಝೊವಾ ಈ ರೊಗವನ್ನು  ತರುವುದು.
  • ಭಾರತದಲ್ಲಿ ಲೆಷ್ಮಾನಿಯಾ, ಲೆಷ್ಮಾನಿಯಾಡೊನೊವನಿ ಪರೊಪಜಿವಿಯು ಮಾತ್ರ ರೋಗ ತರುವುದು. ಪರೊಪಜಿವಿಯು ಮುಖ್ಯವಾಗಿ ರೆಟಿಕ್ಯುಲೊಎಂಡೋ ಥೆಲಿಯಲ್ ವ್ಯೂಹಕ್ಕೆ ಸೋಂಕು ತಗುಲಿಸುವುದು.   ಮೂಳೆ ಮಜ್ಜ, ಗುಲ್ಮ ಮತ್ತು ಲೀವರನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು.ಪೊಸ್ಟ ಕಾಲಾ ಅಜರ್ಡರ್ಮಲ್  ಲೆಷ್ಮಾನಿಯಾಸಿಸ್  ಸ್ಥಿತಿಯಲ್ಲಿ ಲೆಷ್ಮಾನಿಯಾ ಡೊನೊವನಿಯು ಚರ್ಮದ ಜೀವಕೋಶದ ಮೇಲೆ ದಾಳಿ ಮಾಡಿ,  ಅಲ್ಲಿಯೆ ನೆಲಸಿ ಮತ್ತು ಅಭಿವೃದ್ಧಿಯಾಗಿ ಮತ್ತು ಚರ್ಮದ ಮೇಲೆ ಗಾಯಮಾಡುತ್ತದೆ.  ಕೆಲವು ಕಾಲಾ ಅಜರ್ ಪ್ರಕರಣಗಳು ಆಗಿ ಹೊರಹೊಮ್ಮುತ್ತವೆ.  ಕೆಲವು ವರ್ಷದ ಚಿಕಿತ್ಸೆಯ ನಂತರವೂ ವಸಿರೆಲ್ ಹಂತದ ಮೂಲಕ ಹಾದು ಹೋಗದೆ ಬರಬಹುದು ಎಂದು ಇತ್ತೀಚೆಗೆ ನಂಬಲಾಗಿದೆ. ಆದರೂ,   ಹೇಗೆ ವ್ಯಕ್ತವಾಗುವುದು ಎನ್ನಲು ಸಾಕಷ್ಟು ದತ್ತಾಂಶವನ್ನು ಇನ್ನೂ ಪಡೆಯಬೇಕಾಗಿದೆ.
  • ಕಾಲಾ ಅಝಾರ್‌ನ ಗುಣಲಕ್ಷಣಗಳೇನು?

    • ಪದೆ ಪದೇ ಬಿಟ್ಟು ಬಿಟ್ಟು ಜ್ವರಬರುವುದು.  ಕೆಲವು ಸಲ ದುಪ್ಪಟ್ಟು ಆಗಬಹುದು.
    • ಹಸಿವೆ ಯಾಗದಿರುವುದು ಮತ್ತು ಬಿಳಚಿಕೊಳ್ಳುವರು, ತೂಕ ನಷ್ಟವಾಗುವುದು   – ಗುಲ್ಮವು ತ್ವರಿತವಾಗಿ  ದೊಡ್ಡದಾಗುವುದು.  ಮೃದುವಾಗಿ, ನೋವಿಲ್ಲದೆ ಇರುವುದು
    • ಲೀವರ್ – ದೊಡ್ಡದಾಗುವುದು. ಆದರೆ ಗುಲ್ಮದಷ್ಟು ಅಲ್ಲ.  ಮೃದುವಾದ , ನುಣುಪಾದ ಮೇಲ್ ಮೈ, ಚುಪಾದ ಅಂಚು ಹೊಂದುವುದು.
    • ಲಿಂಫಡೆನೊಪತಿ – ಭಾರತದಲ್ಲಿ ವಿರಳ
    • ಚರ್ಮ – ಒಣಗುವುದು, ತೆಳುವಾಗುವುದು ಮತ್ತು ಚರ್ಮ ಸುಲಿಯುವುದು ಮತ್ತು ಕೂದಲು ಉದುರಬಹುದು.ತಿಳಿಬಣ್ಣದವರ ಕೈ ಮೈನ ಚರ್ಮವು ಬಣ್ಣಗೆಡುವುದು ಅದರಿಂದ ಇದಕ್ಕೆ ಭಾರತದಲ್ಲಿ   “ಕಪ್ಪು ಜ್ವರ”  ಎನ್ನುವರು
    • ರಕ್ತಹೀನತೆ  –  ತೀವ್ರವಾಗುವುದು
    • ನಿರ್ಬಲತೆ

    ಅನಿಮಿಯಾದಿಂದ ಬಿಳಿಚಿಕೊಂಡಿರುವರು ಮತ್ತು ರೋಗಿಗಳು ವಿಶಿಷ್ಟವಾಗಿ ಕಾಣುವರು

    ಕಾಲಾ ಅಝಾರ್‌ನ ನಂತರದ ಡರ್ಮಲ್ ಲೆಷ್ಮಾನಿಯಾಸಿಸ್ ( ಪಿಕೆಡಿಎಲ್‌) ಎಂದರೇನು?

    ಕಾಲಾ ಅಜರ್ ನಂತರದ ಡರ್ಮಲ್ ಲೇಷ್ಮನಾಯಸಿಸ ಸ್ಥಿತಿಯಲ್ಲಿ ಲೇಷ್ಮನಿಯಾ ವರ್ಣ ಪರೋಪಜೀವಿಗಳು ಚರ್ಮದಲ್ಲಿ ಇರುವವು. ಕೆಲವು ಭಾರತೀಯ ಕಾಲಾ ಅಜರ್ ರೋಗಿಗಳಲ್ಲಿ 1 ರಿಂದ -2 ವರ್ಷಗಳಲ್ಲಿ ಬೆಳೆಯ ತೊಡಗುತ್ತವೆ. ಅಥವ ಕಾಲಅಜರ್ ಗುಣವಾದ ಮೇಲೆಯೂ ಬರಬಹದು

    ಪಿಕೆಡಿಎಲ್‌ ಗುಣಲಕ್ಷಣಗಳೇನು?

    ಗಾಯಗಳ ಆಕಾರದ ವಿಧಗಳು:

    • ಮೊದಲಲ್ಲಿ  ತಿಳಿಬಣ್ಣದ , ತೊನ್ನಿನಂತಿರುವ  ಸಾಮಾನ್ಯವಾಗಿ 1ಸೆ,ಮೀ. ಕಡಿಮೆ ಗಾತ್ರದ. ಮಚ್ಚೆಗಳು,  ಸಾಧಾರಣವಾಗಿ ಮುಖದ ಮೇಲೆ ಬರುವವು. ಆದರೆ ಅವು  ದೇಹದ ಯಾವದೆ ಭಾಗದಲ್ಲೂ ಬರಬಹುದು.
    • ತರುವಾಯ ( ತಿಂಗಳುಗಳ ಅಥವ ವರ್ಷಗಳ ನಂತರ, ಅವಧಿ ವ್ಯತ್ಯಾಸವಾಗಬಹುದು)  ಮಚ್ಚೆಗಳ ಮೇಲೆ ಗಂಟು ಗಂಟಾದ ಗಾಯಗಳು ಹರಡುವವು.
    • ಸೂರ್ಯನ ಬಿಸಿಲಿಗೆ ಒಡ್ಡಿದಾಗ ಹೆಚ್ಚಾಗುವ  ಮೊದಲ ಚಿಹ್ನೆಗಳು
    • ಗಂಟುಗಳು ಮತ್ತು ಮಚ್ಚೆಗಳು  ಮುಖದ ಮೇಲೆ , ವಿಶೇಷವಾಗಿ ಗಲ್ಲದ ಮೇಲೆ ಬರುವವು.
    • ಗಾಯಗಳು ಅನೇಕ ವರ್ಷಗಳವರೆಗೆ ಬೆಳೆಯುತ್ತಲೇ ಇರುತ್ತವೆ. ಅವು ತಮ್ಮಿಂದ ತಾವೆ ಗುಣವಾಗುವುದಿಲ್ಲ

    ಪಿಕೆಡಿಎಲ್‌ ವಿರಳವಾಗಿ ಒಳಗೊಂಡಿರುವವು:

    • ಅನೇಕ ಗಾಯಗಳು ಸೇರಿ ದೊಡ್ಡ ಫಲಕದಂತಹ  ಗಾಯ
    • ವೆರ್ರುಕಸ್  ಗಾಯಗಳು ( ಕೈ,ಕಾಲುಗಳ ಮೇಲೆ)
    • ಪ್ಯಪಿಲ್ಲೊಮಟಸ್ ಗಾಯಗಳು (ಮುಖದ ತುದಿಯ , ಗದ್ದ ಮೂಗು ಮತ್ತು ತುಟಿಯಮೇಲೆ)
    • ಹೈಪರಟ್ರೊಫಿಕ್ ಗಾಯಗಳು  ( ಕಣ್ಣು ರೆಪ್ಪೆ,,ಮೂಗುಮತ್ತು ತುಟಿಯಮೇಲೆ)
    • ಕ್ಸಂಮಾಟಸ್ ರಾಷಸ್( ಚಿಕ್ಕ ಗುಳ್ಳೆಗಳು)  , ಒಳತೊಡೆ, ಕಣ್ಣುಗಳ, ಬಾಯಿಯಹೊರ ಬಾಗಗಳಲ್ಲಿ ಕಂಡು ಬರುತ್ತವೆ.
    • ಪಿತ್ರಿಸಿಸ ರೋಸಿಯಾ ತರಹದ ಗಾಯಗಳು

    ಎಚ್ ಐ ವಿ ಮತ್ತು ಕಾಲಾ ಅಜರ್ ಸಹ ಸೋಂಕು

    • HIV ಮತ್ತು ರೋಗ ನಿರೋಧತೆ ಕುಂದಿದವರಲ್ಲಿ ಅವಕಾಶವಾದಿ ಸೋಂಕು ಆಗಿ ವಿಸೆರೆಲ್ಲೇಹ್ಮಾನೆಸಿಸ   (VL) ಹೊರಹೊಮ್ಮಿದೆ.   1000 ಕ್ಕೂ ಹೆಚ್ಚು HIV ಮತ್ತು VL  ಪ್ರಕರಣಗಳು   25  ದೇಶಗಳಿಂದ ವರದಿ ಯಾಗಿವೆ. ಹಾಗಿದ್ದಾಗ್ಯೂ  ಇದು ಭಾರತದಲ್ಲಿ ಇನ್ನೂ ಗಂಭೀರ ಸಮಸ್ಯೆಯಾಗಿಲ್ಲ
    • VL ಮೊದಲ ಅವಕಾಶವಾದಿ ಸೋಂಕು ಆಗಿ,  ಲಕ್ಷಣಗಳಿಲ್ಲದ HIV-I ಸೋಂಕಿನಿಂದ ಜನರರಲ್ಲಿ ಹೊರಹೊಮ್ಮಿದೆ.
    • ಮುಂದುವರೆದ ಹಂತದ AIDSನಲ್ಲಿ ಇರುವುದು
    • ಎಲ್ಲ ಸಹ ಸೋಂಕಿತ ರೋಗಿಗಳು ಚಿಹ್ನೆ ತೋರುವುದಿಲ್ಲ
    • ಲಕ್ಷಣಗಳು ಕಡಿಮೆ ಅವಧಿಯಲ್ಲಿರುವುದರಿಂದ  ರೋಗ ಪತ್ತೆಯು ಬದಲಾಗಬಹುದು. ಜ್ವರ ಮತ್ತು ಗುಲ್ಮಗಳು ಗುರುತಾಗದಿರಬಹುದು; ಆಂಟಿಬಾಡಿಗಳನ್ನು ಪತ್ತೆಹಚ್ಚದಿರಬಹುದು.
    • ಆದರೂ ಬಫಿಕೋಟ್ ನ ಮೇಲ್ಮೈ ರಕ್ತದ ಮಾದರಿ ಮತ್ತು ಬ್ಲಡ್ ಕಲ್ಚರ್ ಉತ್ತಮ  ಫಲಿತಾಂಶ ನೀಡಬಹುದು.
    • ಚಿಕೆತ್ಸೆಗೆ ಪ್ರತಿಕ್ರಿಯೆಯು ತುಂಬ ನಿರಾಶಾದಾಯಕ ;  ಔಷಧದ ಅಡ್ಡಪರಿಣಾಮಗಳು ಹೆಚ್ಚು ಮತ್ತು ರೋಗ ತಿರುಗಿ ಬರುವುದು ಸಾಮಾನ್ಯ.

    ಕಾಲಾ ಅಜರ್ ಹರಡುವುದು ಹೇಗೆ?

    • ಕಾಲಾ ಅಜರ್ ವಾಹಕದಿಂದ ಬರುವ ರೋಗ
    • ಜೀನಸ್ ಸ್ಯಾಂಡ ಫ್ಲೈ, ಫ್ಲೆಬೊಟಮಸ್‌ ಅರ್ಜೆಂಟಿಪ್ಸ್‌ಗಳು ಭಾರತಲ್ಲಿರುವ ಕಾಲಾಅಜರ್ ರೋಗ ವಾಹಕಗಳು.
    • ಭಾರತದ ಕಾಲಾ ಅಜರ್ ಅನನ್ಯ ಸಾಂಕ್ರಾಮಿಕ ಗುಣವಿರುವ ರೋಗ.  ಮಾನವನೆ ಅದರ ಸೊಂಕಿನ ಸಂಗ್ರಾಹಕ.
    • ಹೆಣ್ಣು ಸ್ಯಾಂಡಫ್ಲೈ (ಮರಳನೊಣಗಳು) ಪರೊಪಜೀವಿಯನ್ನು ಸೋಂಕಿತ ಆಶ್ರಯದಾತ ಮಾನವನನ್ನು ಕಚ್ಚಿದಾಗ ಪಡೆಯುತ್ತವೆ.
    • ಪರೋಪಜೀವಿಯು ಆಕಾರದ ಬದಲಾವಣೆ ಹೊಂದಿ ಫ್ಲಜಿಲೇಟ    ಆಗುವುದು.  ‌ಸ್ಯಾಂಡ ಫ್ಲೈನ ಕರುಳಿನಲ್ಲಿ ಬೆಳೆದು ಹೆಚ್ಚಾಗಿ ಬಾಯಿಯ ಭಾಗಕ್ಕೆ ಬರುವುದು. ಆರೋಗ್ಯವಂತ ಮಾನವ ಆಶ್ರಯದಾತನು ವಾಹಕ ಸೋಂಕಿತ ಸ್ಯಾಂಡ ಫ್ಲೈಗಳು ಕಚ್ಚಿದಾಗ  ಸೋಂಕನ್ನು ಪಡೆಯುವನು.

    ಭಾರತದಲ್ಲಿ ಕಾಲಾ ಅಜರ್ ವಾಹಕ

    • ಭಾರತದಲ್ಲಿ ಸ್ಯಾಂಡ ಫ್ಲೈ  ವಾಹಕವಾದಕಾಲಾ ಅಜರ್ ಮಾತ್ರ ಇದೆ
    • ಸ್ಯಾಂಡ ಫ್ಲೈ ಗಳು ಚಿಕ್ಕ ಕೀಟಗಳು. ಸೊಳ್ಳೆಯ ನಾಲಕ್ಕನೆ ಒಂದಂಶ ಇರುತ್ತವೆ. ಅದರ ಉದ್ದ 1.5ರಿಂದ  3.5 ಮಿಮಿ.
    • ವಯಸ್ಕ ಫ್ಲೈ ಚಿಕ್ಕದಾಗಿ ನಾಜೂಕಾಗಿ ಪ್ರಮಾಣಬದ್ದವಾಗಿರುವುದು ಕಾಲುಗಳು ನೇರವಾಗಿರುವವು. ರಕ್ಕೆಯೂ ಸೇರಿದಂತೆ ಪೂರ್ತಿದೇಹವು ರೋಮ ಮಯವಾಗಿರುವುದು.
    • ಜೀವನ ಚಕ್ರವು ಮೊಟ್ಟೆ, ನಾಲ್ಕು ಹಂತದ ಲಾರ್ವಾ ಪ್ಯೂಪ ಮತ್ತು ಪ್ರೌಢತೆ ಹೊಂದಿರುವುದು. ಪೂರ್ತಿ ಚಕ್ರವು  ಮುಗಿಯಲು ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದು ಕೊಳ್ಳುವುದು. ಆದರೂ ಅದರ ಅವಧಿಯು ಉಷ್ಣತೆ ಮತ್ತು ವಾತಾವರಣದ ಸ್ಥಿತಿಯನ್ನು ಅವಲಂಬಿಸಿರುವುದು.
    • ಅವು ಹೆಚ್ಚಿನ ಹ್ಯುಮಿಡಿಟಿ, ಬೆಚ್ಚನೆ ಉಷ್ಣತೆ, ಹೆಚ್ಚು ನೀರಿನಡಿಯ ಭಾಗವನ್ನು ಹೆಚ್ಚು ಬಯಸುವುದು.
    • ಸ್ಯಾಂಡ ಫ್ಲೈಗಳು ಸೂಕ್ಷ್ಮ ವಾತವರಣ ಸ್ಥಿತಿಯಲ್ಲಿನ  ಸ್ಥಳಗಳಲ್ಲಿ ಬೆಳೆಯುವುದು.  ಹೆಚ್ಚು  ಸಾವಯವ ವಸ್ತುಗಳು ಇರುವಲ್ಲಿ ಇರುವುದು.  ಅದು ಲಾರ್ವದ ಆಹಾರವಾಗಿ ಬಳಕೆಯಾಗುವುದು. ಇವು ವಾತಾವರಣ ಸಂವೇದಿಗಳು ಕೀಟಗಳು, ನಾಜೂಕು ಮತ್ತು ನಿರ್ಜಲೀಕರಣವನ್ನು ಸಹಿಸಲಾರವು.

    ಕಾಲಾ ಅಜರ್ ಅನ್ನು ಪತ್ತೆಮಾಡುವುದು ಹೇಗೆ?

    ವೈದ್ಯಕೀಯ :ಎರಡು ವಾರಕ್ಕಿಂತ  ಹೆಚ್ಚಾದ ಅವಧಿಯ ಆಂಟಿ ಮಲೇರಿಯಲ್ ಮತ್ತು ಆಂಟಿ ಬಯೋಟಿಕ್  ಔಷಧಿಗಳಿಗೆ ಸ್ಪಂದಿಸದ ಜ್ವರವಿದ್ದರೆ, ವೈದ್ಯಕೀಯ ಪ್ರಯೋಗಶಾಲೆಯ ವರದಿಗಳು  ಅನಿಮಿಯಾ, ಪ್ರಗತಿಯಲ್ಲಿರುವ ಲ್ಯುಕೊಪೆನಿಯಾ ,ತ್ರೊಂಬೊಸೈಟೊಪೆನಿಯ ಮತ್ತು  ಹೈಪರ್ಗಮ್ಮ ಗ್ಲೊಬುಲಿನೆಮಿಯಾ ಪರೀಕ್ಷೆಗಳನ್ನು ಒಳಗೊಂಡಿರಬೇಕು.ಪ್ರಾಯೋಗಿಕ :ಸಿರಾಲಜಿ ಪರೀಕ್ಷೆ : ಕಾಲಾ ಅಜರ್ ಪತ್ತೆಗೆ  ಅನೇಕ ವಿಧದ ಪರೀಕ್ಷೆಗಳು ಲಭ್ಯವಿವೆ. ಸಾಮಾನ್ಯವಾಗಿ ಬಳಸುವ ಪರೀಕ್ಷೆಯು ರಿಲೇಟಿವ್ ಸಂವೇದನೆ.ನಿರ್ಧಿಷ್ಟತೆ, ಮತ್ತು ಕಾರ್ಯ ಸಾಧ್ಯತೆಯ ಜತೆ ಡೈರೆಕ್ಟ್‌ ಅಗ್ಲುಟಿನೇಷನ್‌ ಟೆಸ್ಟ್‌  (DAT), ಎಲಿಸಾ . ಆದರೆ  IgG  ಆಂಟಿ ಬಾಡಿಗಳು ದೇಹದಲ್ಲಿ ತುಂಬ ದಿನಗಳವರೆಗೆ ಇರುತ್ತವೆ. ಆಲ್ಡಿಹೈಡ್‌ ಪರೀಕ್ಷೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ.  ಆದರೆ ಅದು ನಿರ್ಧಿಷ್ಟವಾದುದಲ್ಲ. IgM  ಗುರುತಿಸುವ ಪರಿಕ್ಷೆಗಳು ಅಭಿವೃದ್ಧಿಯಾಗುತ್ತಿವೆ. ಇನ್ನೂ ಬಳಕೆಗೆ ಲಭ್ಯವಿಲ್ಲ. ಪ್ಯಾರಾಸೈಟ್ ಪ್ರಾತ್ಯಕ್ಷಿಕೆ ಮೂಳೆ ಮಜ್ಜುವಿನಲ್ಲಿ / ಗುಲ್ಮ/ ಲಿಂಫೋಡ ಒಳಗೆಳದುಕೊಳ್ಳುವುದು(ಆಸ್ಪಿರೆಷನ್) ಅಥವ  ಕಲ್ಚರ್ ಮಾಧ್ಯಮದಲ್ಲಿ ಇದೆಯಾ ಎಂದು ಖಚಿತ ಪಡಿಸುವ ಪರೀಕ್ಷೆ .  ಆದರೂ ಸಂವೇದನೆಯು ಅಸ್ಪಿರಾಷನ್ ಗೆ ಆಯ್ದ ಅಂಗವನ್ನು ಅವಲಂಬಿಸಿ ಬದಲಾಗುವುದು. ಗುಲ್ಮದ ಆಸ್ಪಿರಾಷನ್ ಅತ್ಯಂತ ಹೆಚ್ಚು ಸಂವೇದನೆ ಮತ್ತು ನಿರ್ಧಿಷ್ಟತೆಯನ್ನು (ಸುವರ್ಣಮಾಪನ ಎಂದು ಪರಿಗಣಿಸಲಾಗಿದೆ) ಹೊಂದಿದ್ದರೂ ಕುಶಲ ವೃತ್ತಿ ಪರಿಣಿತನು ಸಾಕಷ್ಟು ಮುನ್ನೆಚ್ಚರಿಕೆ ಯಿಂದ ಉತ್ತಮ ಆ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ಮಾತ್ರ ಮಾಡಬಹುದು.ಡಿಫರೆನ್ಷಿಯಲ್ ಪತ್ತೆ

    • ಟೈಫಾಯಿಡ್
    • ಮಿಲಯೆರಿ ಕ್ಷಯ
    • ಮಲೆರಿಯಾ
    • ಬ್ರುಸೆಲೊಸಿಸ
    • ಅಮಿಬಿಯಿಕ್ ಲಿವರ್‌ಅಬಸಕೆಸ್
    • ಇನ್‌ಫೆಕ ಷಿಯಸ್ ಮೊನ ನ್ಯುಕ್ಲಿಯಯೊಸಿಸ್
    • ಲಿಂಫೊಮ, ಲ್ಯುಕೆಮಿಯಾ
    • ಉಷ್ಣವಲಯದ ಸ್ಪ್ಲೆನೊಮೆಗಲಿ.
    • ಪೊರ್ಟಲ್ ಹೈಪರ್  ಟೆನಷನ್ .

    ಕಾಲಾ ಅಜರ್ ಗೆ ಚಿಕಿತ್ಸೆ ಏನು?

    • ಕಾಲಾ ಅಜರ್ ಗೆ ಔಷಧವು ಭಾರತದಲ್ಲಿ ಲಭ್ಯವಿದೆ
    • ಸೋಡಿಯಂ ಸ್ಟಿಬೊಗ್ಲುಕೊನೇಟ್ (ಸ್ಥಳಿಯ ಉತ್ಪಾದನೆ, ಬಳಕೆಗೆ  ಮತ್ತು ಮಾರಾಟಕ್ಕೆ ನೊಂದಾಯಿತ) ಪೆಂಟಾ ಮೈಡೈನ  ಎಸಿಥಿಯೊನೇಟ್: ( ಆಮದು ಮಾಡಿದ್ದು, ಬಳಕೆಗೆ ನೊಂದಾಯಿತ)
    • ಆಂಫೊಟೆರಿಸಿನ B : (ಸ್ಥಳಿಯ ಉತ್ಪಾದನೆ, ಬಳಕೆಗೆ  ಮತ್ತು ಮಾರಾಟಕ್ಕೆ ನೊಂದಾಯಿತ)
    • ಲಿಪೊಸೊಮಲ್ ಆಂಫೊಟೆರಿಸಿನ B: (ಸ್ಥಳಿಯ ಉತ್ಪಾದನೆ ಮತ್ತು ಆಮದು, ಬಳಕೆಗೆ  ಮತ್ತು ಮಾರಾಟಕ್ಕೆ ನೊಂದಾಯಿತ )
    • ಮಿಲ್ಟೆಫೊಸಿನ್  ( ಆಮದು / ಬಳಕೆಗೆ &ಮಾರಾಟಕ್ಕೆ ನೊಂದಾಯಿತ)

    ಮೊದಲ ಹಂತದ ಔಷಧಿಗಳು A.ಕಡಿಮೆ ಅವಧಿ

    • SSG ಸಂವೇದನೆಇರುವ ಪ್ರದೇಶಗಳು

    SSG IM/IV 20mg/kg/ ದಿನ X 30 ದಿನಗಳು

    • SSG ಸಂವೇದನೆಇರುವ ಪ್ರದೇಶಗಳು

    ಆಂಫೊಟೆರಿಸಿನ B  1mg/kg b.w. IV.  ದಿನವೂ ದೇಹದಲ್ಲಿ ಏರಿಸಬೇಕು ಅಥವ ದಿನ ಬಿಟ್ಟು ದಿನ 15-20 ಏರಿಕೆಗಳು .  ರೋಗಿಯು ಪ್ರತಿಕ್ರಿಯೆಯು ತೃಪ್ತಿಕರವಾಗಿರದಿದ್ದರೆ  ಕೊಡುವ ಪ್ರಮಾಣವನ್ನು  30 ಕ್ಕೆ ಹೆಚ್ಚಿಸಬೇಕು.B. ದೀರ್ಘಾವಧಿ

    • SSG ನಿರೋಧತೆ ಹೆಚ್ಚಿನ ಮಟ್ಟದಲ್ಲಿರುವ ಪ್ರದೇಶಗಳು

    -  ಮಿಲ್ಟೆಫೊಸಿನ್ 100 mg  ಪ್ರತಿ ದಿನ x 4 ವಾರ ( III ನೇ ಹಂತದ ನಂತರ ಸುರಕ್ಷಿತ ಮತ್ತು ಸಾಧ್ಯ ಎಂದು ಅಧ್ಯಯನಗಳು ತಿಳಿಸಿವೆ)

    • SSG ಸಂವೇದನೆಇರುವ ಪ್ರದೇಶಗಳು

    -   SSG IM/IV 20mg/kg/day X 30 days -  ಮಿಲ್ಟೆಫೊಸಿನ್ 100 mg ದಿನವೂ x 4 ವಾರ( III ನೇ ಹಂತದ ನಂತರ ಸುರಕ್ಷಿತ ಮತ್ತು ಸಾಧ್ಯ ಎಂದು ಅಧ್ಯಯನಗಳು ತಿಳಿಸಿವೆ.

    • ಎರಡನೆ ಹಂತದ ಔಷದಿಗಳು

    A.ಎಸ್ ಎಸ್ ಜಿ ವಿಫಲತೆಗಳು ಆಂಫೊಟೆರಿಸಿನ B   1mg/kg b.w. IV  ದಿನವೂ ದೇಹದಲ್ಲಿ ಏರಿಸಬೇಕು ಅಥವ ದಿನ ಬಿಟ್ಟು ದಿನ 15-20 ಏರಿಕೆಗಳು s.  ರೋಗಿಯು ಪ್ರತಿಕ್ರಿಯೆಯು ತೃಪ್ತಿಕರವಾಗಿರದಿದ್ದರೆ  ಕೊಡುವ ಪ್ರಮಾಣವನ್ನು  30 ಕ್ಕೆ ಹೆಚ್ಚಿಸಬೇಕು.ಅಂತಿಮ ಫಲಿತಾಂಶವು ಸುರಕ್ಷಿತ ಮತ್ತು ಸಾಧ್ಯ ಎಂದು ಬಂದ ನಂತರ)

     

    • SSG ಯ ಸಾಮಾನ್ಯ ಡೋಸು KA ಗೆ  120 ದಿನಗಳ ವರೆಗೆ ಕೊಡಲುಸಾಧ್ಯ
    • SSGಚಿಕಿತ್ಸೆ ಯನ್ನು Amphotericin Bಯ 3-4  ಕೋಸುಗಳನ್ನು ಪದೇಪದೇ ನೀಡಿದರೂರೋಗ ಗುಣವಾಗದಿದ್ದರೆ ಕೊಡಬೇಕು

    ಭಾರತದಲ್ಲಿ ಕಾಲಾ ಅಜರ್ ಸಮಸ್ಯೆಯ ವ್ಯಾಪ್ತಿ ಏನು?

    • ಭಾರತದ  ಪೂರ್ವ ರಾಜ್ಯಗಗಳಾದ ಬಿಹಾರ, ಉತ್ತರಪ್ರದೇಶ, ಮತ್ತು ಪಶ್ಚಿಮ ಬಂಗಾಲಗಳಲ್ಲಿ ಈ ರೋಗಗಳು ಕಂಡು ಬರುತ್ತವೆ.
    • 48 ಜಿಲ್ಲೆಗಳು endemic; sporadic ಪ್ರಕರಣಗಳನ್ನು ಇತರ ಕೆಲವು ಜಿಲ್ಲೆಗಳು ವರದಿ ಮಾಡಿವೆ
    • ನಾಲಕ್ಕು ರಾಜ್ಯಗಳಲ್ಲಿ  ಅಂದಾಜು  165.4 ಮಿಲಿಯನ್ ಜನರು risk in 4 states
    • ಗ್ರಾಮಾಂತರ ಪ್ರದೇಶದಲ್ಲಿ ನೆಲಸಿದ ಬಡ ಜನರು ತೊಂದರೆಗೆ ಒಳಗಾಗುವರು

    ಕಾಲಾ ಅಜರ್ ನಿಯಂತ್ರಣಕ್ಕೆ ಭಾರತದಲ್ಲಿನ ಪ್ರಯತ್ನ

    • ಕೇಂದ್ರ ಸರ್ಕಾರ ಪ್ರಾಯೋಜಿತ ನಿಯಂತ್ರಣ ಕಾರ್ಯಕ್ರಮವು 1990-91ರಲ್ಲಿ ಏಕ ರೀತಿಯಾಗಿ ಕಂಡುಬರುವ ಪ್ರದೇಶಗಳಲ್ಲಿ ಶುರುವಾಯಿತು
    • ಭಾರತ ಸರ್ಕಾರವು ಕಾಲಾಅಜರ್ ಔಷಧಿಗಳನ್ನು,  ಕೀಟನಾಶಕಗಳನ್ನು ಒದಗಿಸುವುದು ಮತ್ತು ರಾಜ್ಯಸರ್ಕಾರವು ಕಾರ್ಯಕ್ರಮವನ್ನು  ಪ್ರಾಥಮಿಕ ಆರೋಗ್ಯ ಆರೈಕೆ ವ್ಯವಸ್ಥೆಯ ಮತ್ತು ಜಿಲ್ಲೆ/ಝೋನ್ ಮತ್ತು ರಾಜ್ಯ ಮಲೇರಿಯಾ ನಿಯಂತ್ರಣ ಮಂಡಳಿಗಳ ಮೂಲಕ ಅನುಷ್ಠಾನ ಗೊಳಿಸುವುದು ಮತ್ತು ತಂತ್ರದ ಅನುಷ್ಠಾನದಲ್ಲಿನ ಇತರೆ ಖರ್ಚುಗಳನ್ನು ಕೊಡುವುದು.

    ಕಾರ್ಯಕ್ರಮದ ತಂತ್ರ ಗಳು ಇವನ್ನು ಒಳಗೊಂಡಿರುವವು : ಐಆರ್‌ಎಸ ಜತೆ ಡಿಡಿಟಿ ಯು ವಾಹಕಗಳನ್ನು  6 ಅಡಿ ತ್ತರದವರೆಗೆ ನೆಲಮಟ್ಟದಿಂದ ವರ್ಷಕ್ಕೆ ಎರಡುಸಲ ಸ್ಪ್ರೇ ಮಾಡಿ ನಿಯಂತ್ರಿಸಬಹುದು. ಮುಂಚಿತವಾಗಿ ಪತ್ತೆ ಮತ್ತು ಪೂರ್ಣ ಚಿಕಿತ್ಸೆ ಮಾಹಿತಿ ಶಿಕ್ಷಣ ಸಂವಹನ.

    ಜಪಾನಿಸ್‌ ಎನ್‌ಸೆಫಾಲಿಟಿಸ್‌ ಇನ್‌ಕ್ಯುಬೇಷನ್‌ ಅವಧಿಯೇನು?

    ಸಾಧಾರಣ ವಾಗಿ 5 ರಿಂದ 15 ದಿನಗಳು.

    ಜಪಾನಿಸ್‌ ಎನ್‌ಸೆಫಾಲಿಟಿಸ್‌ನಿಂದ ಉಂಟಾಗುವ ಮರಣ ಪ್ರಮಾಣವೇನು?

    ಮರಣ ಪ್ರಮಾಣವು 0.3% ರಿಂದ 60% ರವರೆಗೆ ಇರುವುದು.

    ಜಪಾನಿಸ್‌ ಎನ್‌ಸೆಫಾಲಿಟಿಸ್‌ಗೆ ಭಾರತದಲ್ಲಿ ರೋಗ ನಿರೋಧಕ ಲಸಿಕೆ ಲಭ್ಯವಿದೆಯೇ?

    ಇದೆ.ನಿಷ್ಕ್ರಿಯ ಇಲಿಯ ಮೆದುಳಿನಿಂದ ಪಡೆದ ಜೆ.ಇ ವ್ಯಾಕ್ಸಿನು ಭಾರತದಲ್ಲಿಯೂ ಈಗ ಸಿಗುತ್ತದೆ. ವ್ಯಾಕ್ಸೀನ್ ಅನ್ನು ಸೆಂಟ್ರಲ್ ರೀಸರ್ಚ ಇನಸ್ಟಿಟ್ಯೂಟ, ಕಸೌಲಿ, ಹಿಮಾಚಲ ಪ್ರದೇಶದಲ್ಲಿ ಉತ್ಪಾದಿಸುವರು.

    ಮೂಲ: ಪೋರ್ಟಲ್ ತಂಡ

    ಕೊನೆಯ ಮಾರ್ಪಾಟು : 2/15/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate