অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಸ್ತಮಾ

ಅಸ್ತಮಾ ಎಂದರೇನು?

ಅಸ್ತಮಾ ಬೇರೂರಿರುವ  ಧೀರ್ಘಕಾಲೀನ ರೋಗ. ಅದು ಶ್ವಾಶನಾಳದ ಮೇಲೆ ಪರಿಣಾಮ ಬೀರುವುದು. ಶ್ವಾಸನಾಳಗಳು ಗಾಳಿಯನ್ನು ಶ್ವಾಸಕೋಶದ ಒಳಗೆ ಮತ್ತು ಹೊರಗೆ ಸಾಗಿಸುವವು.  ಅಸ್ತಮಾ ಆದರೆ ಗಾಳಿಯ ಮಾರ್ಗದ ಒಳಗೋಡೆಗಳೂ ಊದಿಕೊಳ್ಳುವವು. ಈ ಬಾವು ಉಸಿರಾಟದ ನಾಳಗಳನ್ನು ತುಂಬ ಸಂವೇದಿಗಳನ್ನಾಗಿಸುತ್ತವೆ ಮತ್ತು ಅವು ತಮಗೆ ಅಲರ್ಜಿಕ್ ಆದ ವಸ್ತುಗಳಿಗೆ ಬಲವಾಗಿ ಪ್ರತಿಕ್ರಯಿಸುವವು. ಅವು ಪ್ರತಿಕ್ರಯಿಸಿದಾಗ ಗಾಳಿಯ ಮಾರ್ಗವು ಕಿರಿದಾಗುವುದು. ಶ್ವಾಸಕೋಶದ ಅಂಗಾಂಶಗಳಿಗೆ ಕಡಿಮೆ ಗಾಳಿ ಹೋಗುವುದು. ಇದರಿಂದ ಉಸಿರಾಟ ಸಶಬ್ದವಾಗುವುದು. (ಉಸಿರಾಡುವಾಗ ಸಿಳ್ಳೆ ಹಾಕಿದ ಶಬ್ದ), ಕೆಮ್ಮು, ಎದೆಬಿಗಿತ, ಉಸಿರಾಟದಲ್ಲಿ ತೊಂದರೆ ವಿಶೇಷವಾಗಿ ರಾತ್ರಿ ಮತ್ತು ಬೆಳಗು ಮುಂಜಾವಿನಲ್ಲಿ ಆಗುವುದು.ಅಸ್ತಮಾ ಸಂಪೂರ್ಣವಾಗಿ ವಾಸಿಯಾಗುವುದಿಲ್ಲ. ಆದರೆ ಅಸ್ತಮಾ ಇರುವವರು ಅದನ್ನು ನಿಯಂತ್ರಿಸಬಹುದು. ಅದರ  ಲಕ್ಷಣಗಳು ಕಣ್ಣಿಗೆ ಕಾಣುವುದಿಲ್ಲ. ಅವರು ಚಟುವಟಿಕೆಯ ಜೀವನ ನಡೆಸುವರು.

ಅಸ್ತಮಾ ಬರುವ ವಿಧಾನವು ಒಂದೆ ರೀತಿಯಲ್ಲಿರುವುದಿಲ್ಲ. ಕೆಲವು ತೀವ್ರವಾಗಿರಬಹುದು. ಇನ್ನು ಹಲವು ಇರಲಿಕ್ಕಿಲ್ಲ. ತೀವ್ರ ಅಸ್ತಮಾವು ಬಂದಾಗ ಗಾಳಿಯ ಮಾರ್ಗವು ಮುಚ್ಚಿಹೋಗಿ ಪ್ರಮುಖ ಅಂಗಗಳಿಗೆ ಆಮ್ಲಜನಕದ ಸರಬರಾಜು ನಿಲ್ಲಬಹುದು.ಇದು ವೈದ್ಯಕೀಯ ತುತರ್ತು ಪರಿಸ್ಥಿತಿ. ಜನರು ತೀವ್ರವಾದ ಅಸ್ತಮಾದಿಂದ  ಸಾಯಲೂಬಹುದು. ಅಸ್ತಮಾ ಇದ್ದವರು ನಿಯಮಿತವಾಗಿ ವೈದ್ಯರನ್ನು ಕಾಣಲೇ ಬೇಕು. ಯಾವ ವಸ್ತುಗಳು ಅಸ್ತಮಾಕ್ಕೆ ಕಾರಣವಾಗುತ್ತವೆ  ಎಂಬದನ್ನು ತೀಳಿದು ಅವುಗಳನ್ನು ದೂರವಿಡಬೇಕು. ವೈದ್ಯರು ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಔಷಧಿ ಬರೆದು ಕೊಡುವರು.

ಕಾರಣಗಳು

ವಾತಾವರಣದಲ್ಲಿನ ಕೆಲವು ವಸ್ತುಗಳು ಅಸ್ತಮಾದ ಲಕ್ಷಣಗಳನ್ನು ಹೊರ ಹಾಕಬಹುದು ಮತ್ತು ಅದರಿಂದ ಅಸ್ತಮಾ ಬರಬಹುದು. ಬಹು ಸಾಮಾನ್ಯವಾದವು, ವ್ಯಾಯಾಮ, ಅಲೆರ್ಜಿನ್ಗಳು ಮತ್ತು ವೈರಲ್ ಸೋಂಕು. ಕೆಲವು ಜನರಿಗೆ ವ್ಯಾಯಾಮ ಮಾಡಿದಾಗ ಮತ್ತು ವೈರಲ್ ಜ್ವರಬಂದಾಗ ಮಾತ್ರ ಅಸ್ತಮಾ ಬರುವುದು.

  • ಪ್ರಾಣಿಗಳ ( ಚರ್ಮ, ಕೂದಲು, ಅಥವ  ಹಕ್ಕಿಗಳಗರಿ)
  • ಧೂಳಿನ ಕಣಗಳು  (ಮನೆಯಲ್ಲಿನ ಧೂಳು)
  • ಜೊಂಡಿಗಮರಗಳ ಮತ್ತು ಹುಲ್ಲಿನ ಪರಾಗ ಬೂಷ್ಟು  (ಒಳಾಂಗಣ ಮತ್ತು  ಹೊರಾಂಗಣ)
  • ಸಿಗರೇಟಿನ ಹೊಗೆ
  • ವಾಯು ಮಾಲಿನ್ಯ
  • ಚಳಿಗಾಳಿ ಅಥವ ಹವಾಗುಣದ ಬದಲಾವಣೆ.
  • ಬಣ್ಣದ ಅಥವ ಅಡುಗೆಯ ಘಾಟುವಾಸನೆ
  • ಸುವಾಸಿತ ವಸ್ತುಗಳು
  • ಬಲವಾದ ಭಾವನೆಗಳ ಅಭಿವ್ಯಕ್ತಿ  ( ಜೊರಾಗಿ ರೋಧಿಸುವುದು ಅಥವ ನಗುವುದು)  ಮತ್ತು ಒತ್ತಡ
  • ಆಸ್ಪರಿನ್ ಮತ್ತು  ಬೀಟ ಬ್ಲಾಕರ್  ತರಹದ ಔಷಧಿಗಳು
  • ಆಹಾರದಲ್ಲಿನ ಸಲ್ಫೈಟುಗಳು ( ಒಣ ಹಣ್ಣುಗಗಳು)  ಅಥವ ಪಾನಿಯಗಳು (ವೈನು)
  • ಗ್ಯಾಸ್ಟ್ರೊಇಸೊಫ್‌ಒಜಿಲ್  ಎಂಬ ಸ್ಥಿತಿಯು   ಎದೆಯುರಿತಕ್ಕೆ ಕಾರಣವಾಗುವುದು. ಅದು ಅಸ್ತಮಾ ಲಕ್ಷಣಗಳನ್ನು ವಿಶೇಷವಾಗಿ ರಾತ್ರಿಯಲ್ಲಿ   ಹೆಚ್ಚಿಸುವುದು
  • ಕಿರಿಕಿರಿಯ ಅಥವ ಕೆಲಸದ ಜಾಗದಲ್ಲಿನ ಅಲರ್ಜೆನ್ಸ ರಸಾಯಿನಿಕಗಳು ಮತ್ತು  ಧೂಳು
  • ಸೋಂಕು
  • ಕುಟುಂಬದ ಇತಿಹಾಸ
  • ತಂಬಾಕಿನ ಹೊಗೆಗೆ ಒಡ್ಡಲಾದ ಶಿಶುಗಳು ಅಸ್ತಮಾಕ್ಕೆ ಗುರಿಯಾಗುವ ಸಂಭವ ಹೆಚ್ಚು.ಮಹಿಳೆಯು ಗರ್ಭಿಣಿಯಾಗಿದ್ದಾಗ ತಂಬಾಕಿನ ಹೊಗೆಯಲ್ಲಿದ್ದರೆ  ಅವಳ ಮಗುವಿಗೆ ಅಸ್ತಮಾ ಬರಬಹುದು. .
  • ದಪ್ಪಗಿರುವದು ಹಾಗು ಇತರ ಆರೋಗ್ಯಸಮಸ್ಯಗಳು ಸಹಾ ಅಸ್ತಮಾ ತರಬಹುದು

ಚಿಹ್ನೆಗಳು ಮತ್ತು ಲಕ್ಷಣಗಳು

  • ಗೂರಲು
  • ಹಠಾತ್ತನೆ ಶುರುವಾಗುವುದು
  • ಸರಣಿಯಲ್ಲಿ ಬರುವುದು.
  • ರಾತ್ರಿಯಲ್ಲಿ  ಅಥವ ಬೆಳಗು ಮುಂಜಾನೆ ಅತಿ ಹೆಚ್ಚು
  • ತಂಪಾದ ಸ್ಥಳ, ವ್ಯಾಯಾಮ ಮಾಡುವುದರಿಂದ, ಎದೆಯುರಿತದಿಂದ ಹೆಚ್ಚಾಗುವುದು
  • ತನ್ನಷ್ಟಕ್ಕೆ ತಾನೆ ಹೋಗಬಹುದು.
  • ಬ್ರಾಂಕೊ ಡಯಲೇಟರುಗಳಿಂದ ಸಮಾಧಾನ ಸಿಗುವುದು.(  ಔಷಧಿಗಳು ಗಾಳಿಯ ಮಾರ್ಗವನ್ನು ತೆರೆಯುವವು)
  • ಕಫದ ಸಮೇತ ಅಥವ ಇಲ್ಲದೆ ಕೆಮ್ಮು ಬರುವುದು
  • ಏದುಸಿರು, ಅದು ವ್ಯಾಯಾಮದಿಂದ  ಚಟುವಟಿಕೆ ಯಿಂದ ತೀವ್ರವಾಗುವುದು..
  • ಇಂಟರ್ ಕೋಸ್ಟಲ್  ರಿಟ್ರ್ಯಾಕಷನ್ (ಉಸಿರಾಡುವಾಗ ಎದೆ ಮೂಳೆಯ ನಡುವಿನ ಚರ್ಮವು ಎಳೆದಂತಾಗುವುದು)
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate