অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನ್ಯುಮೋನಿಯಾ

ನ್ಯುಮೋನಿಯಾವು ಸೋಂಕಿನಿಂದ ಬರುವ ಅತಿ ಸಾಮಾನ್ಯವಾದ ರೋಗ . ಇದು ಶ್ವಾಸಕೋಶದ ಸೋಂಕಿನಿಂದ ಬರುವುದು. ಅದರಲ್ಲಿನ ಅಲ್ವಿಯೊಲುಗಳು (ಉಸಿರಾಟದ ಮರದ ಕೊನೆಯ ಶಾಖೆಗಳು ಮತ್ತು ಶ್ವಾಸಕೋಶದಲ್ಲಿ ಅನಿಲ ವಿನಮಯದ ಪ್ರಾಥಮಿಕ ಘಟಕವಾಗಿ ಕೆಲಸಮಾಡುವವು) ಒಂದು ಇಲ್ಲವೆ ಹೆಚ್ಚು ಭಾಗಗಳಲ್ಲಿ ಸೋಂಕಿತವಾದರೆ  ಶ್ವಾಶಕೋಶದಲ್ಲಿ ಜೀವ ದ್ರವ  ಸಂಗ್ರಹವಾಗುವುದು. ಇದನ್ನೆ ಕಂಜೆಷನ್ ಎನ್ನವರು. ಅದೆ ನ್ಯುಮೋನಿಯಾದ ಪ್ರಮುಖ ಲಕ್ಷಣ. ಸಂಗ್ರಹವಾದ ದ್ರವವು ಶ್ವಾಸಕೋಶದ ಕಾರ್ಯವನ್ನು ಕಡಿಮೆ ಕುಂಠಿತಗೊಳಿಸುವುದು. ನ್ಯುಮೋನಿಯಾ ಸೋಂಕು ಒಂದು ಇಲ್ಲವೆ ಎರಡೂ ಶ್ವಾಸಕೋಶಗಳಿಗೆ ಆಗಬಹುದು. ಇದು ಬ್ಯಾಕ್ಟೀರಿಯಾ, ವೈರಾಣು ಅಥವ ಫಂಗೈನಿಂದ ಆಗಬಹುದು. ಆಂಟಿಬಯೋಟಿಕ್ಸ ಸಂಶೋಧನೆಗೆ ಮೊದಲು ನ್ಯುಮೋನಿಯಾ ಬಂದವರಲ್ಲಿ  ಮೂರನೆ ಒಂದು ಭಾಗದ ಜನರು  ಸೋಂಕಿನಿಂದ ಸಾಯುತ್ತಿದ್ದರು.ಈಗಲೂ   ಪ್ರಪಂಚದಲ್ಲಿ   ಪ್ರತಿ ವರ್ಷಶೆಕಡಾ೨೦ ಮಕ್ಕಳು ಐದು ವರ್ಷಕ್ಕೂ ಮೊದಲೆ  ಬೇರ ಬೇರೆ ಕಾರಣಗಳಿಂದ ಬರುವ  ನ್ಯುಮೋನಿಯಾಕ್ಕೆ ಬಲಿಯಾಗುವರು.. ಭಾರತದಲ್ಲಿ ಸುಮಾರು ನಾಲಕ್ಕು ಲಕ್ಷ ಮಕ್ಕಳು ಐದು ವರ್ಷವಾಗುವ ಮೊದಲೆ ಮರಣ ಹೊಂದುವರು. ಇವರಲ್ಲಿ ಎರಡು ಲಕ್ಷ ಮಕ್ಕಳು ನ್ಯೂಮೊಕೊಕಲ್ (ಬ್ಯಾಕ್ಟೀರಿಯಾ) ರೋಗದಿಂದ ಸಾಯುವರು. ನ್ಯೂಮೋನಿಯಾವು ಮಕ್ಕಳ ಮರೆತ ಕೊಲೆಗಾರ. ಅದು ಮಲೇರಿಯಾ, ಮೀಸಲ್ಸ, ಅಥವ ಏಡ್ಸ ಗಿಂತ  ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದು. ಇತ್ತೀಚಿನ ವರ್ಷಗಳಲ್ಲಿ ಔಷಧ ನಿರೋಧಕ ನ್ಯುಮೋನಿಯಾವು ಹೆಚತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕೆಲವು ನ್ಯುಮೋನೊಯಾ ಪ್ರಕರಣಗಳು ಉಸಿರಾಡುವಾಗ ಗಾಳಿಯಲ್ಲಿರುವ ನೀರ ಚಿಕ್ಕ ಹನಿಗಳಲ್ಲಿನ ಆರ್ಗ್ಯಾನಿಸಂ ನಿಂದ ನ್ಯುಮೋನಿಯಾ  ಸೋಂಕು ಬರುವುದು. ಈ ಅಣುಗಳೂ ತುಂತರು ಹನಿಗಳು ಗಾಳಿಯಲ್ಲಿ ಸೇರಿ ಉಸಿರಾಡುವಾಗ ರೋಗಾಣುಗಳು ಶ್ವಾಸಕೋಶದಲ್ಲಿ ಸೇರಿಕೊಳ್ಳುತ್ತವೆ. (ರೋಗಾಣುಗಳು ಬ್ಯಾಕ್ಟೀರಿಯಾ, ವೈರಸ್ ಅಥವ ಫಂಗೈ  ಅಥವ ರಸಯನಿಕ ಅಥವ  ಇತರ ಕಿರಿಕಿರಿ ಮಾಡುವ ವಸ್ತು ಆಗಿರಬಹುದು.) ಅಲ್ವಯೊಲಿಯಲ್ಲಿ ಹೋಗುತ್ತವೆ. (ಉಸಿರಾಡುವಾಗ ಮರದ ಕೊನೆಯ ಶಾಖೆ . ಅದರಲ್ಲಿ ಅನಿಲಗಳ ವಿನಿಮಯ ನೆಡೆಯುವುದು)ಅರೋಗ್ಯವಂತ ಶ್ವಾಸಕೋಶದಲ್ಲಿ  ಪ್ರಾಥಮಿಕ ನ್ಯುಮೋನಿಯಾವು.. ಉಸಿರು ಒಳಗೆ ಎಳೆದು ಕೊಂಡಾಗ ವಾತಾವರಣದಲ್ಲಿನ  ಆರಗ್ಯಾನಿಸಂ ಶ್ವಾಸಕೋಶವನ್ನು ಸೇರುತ್ತದೆ ಅಥವ ಸೋಂಕಿತ ವ್ಯಕ್ತಿಯು ಕೆಮ್ಮಿನಲ್ಲಿರುವ ಸೋಂಕನ್ನು  ಪಡೆಯುವ ಸಾಧ್ಯತೆ ಇಧೆ. ಇದು ಸಮುದಾಯದಿಂದ ಬರುವ ರೋಗ. ಆದ್ದರಿಂದ ಜನಸಂದಣಿ ಮತ್ತು  ಚಳಿಗಾಲ ಈ ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುವುದು.  ಅನ್ಯ ವಸ್ತುವು ಇರುವುದರಿಂದ ನೈಸರ್ಗಿಕ ನಿರೋಧತೆಯನ್ನು ಅಲ್ವಿಯೋಗಳಲ್ಲಿ ಉಂಟು ಮಾಡುತ್ತದೆ. ಅದರ ಪರಿಣಾಮವಾಗಿ ಶ್ವಾಸಕೋಶಗಳಲ್ಲಿ ಬ್ಯಾಕ್ಟಿರಿಯಾ ಮತ್ತು ಬಿಳಿ ರಕ್ತಕಣದಿಂದ ಕೂಡಿದ ದ್ರವವು ಸಂಗ್ರಹವಾಗುವುದು. ಇದರಿಂದ ಶ್ವಾಸಕೋಶದ ಕಂಜಷನ್ ಮತ್ತು  ಉರಿಉಯೂತವಾಗುವುದು. ಇದನ್ನೆ ನ್ಯುಮೋನಿಯಾ ಎನ್ನುವರು. ಕಡಿಮೆ ನಿರೋಧತೆ ಇರುವ  ಮತ್ತು ದೋಷಪೂರಿತ ರಕ್ಷಣಾ ವ್ಯವಸ್ಥೆಯಿರುವ  ವ್ಯಕ್ತಿಗಳಿಗೆ ಮೇಲಿನ ಉಸಿರಾಟದ ನಾಳದ ಸೋಂಕು ಇಲ್ಲವೆ  ಅಂಗವ್ಯೂಹ (ದೇಹವನ್ನು ಸಾಮಾನ್ಯವಾಗಿ) ರೋಗ. ಬಾಯಿನಲ್ಲಿನ, ಗಂಟಲಿನಲ್ಲಿನ ಅಥವ ಮೂಗಿನಲ್ಲಿನ ಬ್ಯಾಕ್ಟೀರಿಯಾ ಅಥವ ವೈರಸ್ ಶ್ವಾಸ ಕೋಶವನ್ನು ಅಕಸ್ಮತ್ತಾಗಿ ಸೇರಿದಾಗ ನ್ಯುಮೋನಿಯಾ ಬರುವುದು.

ನಿದ್ದೆಯಲ್ಲಿ ಜನರು  ಬಾಯಿಯಿಂದ, ಗಂಟಲಿನಿಂದ ಮತ್ತು ಮೂಗಿನಿಂದ ಸ್ರವಿಸುವುದು ಸಾಮಾನ್ಯ. ಸಾಧಾರಣವಾಗಿ ದೇಹದ  ಅಪ್ರೋಚಿದಿತ ಪ್ರತಿಕ್ರಿಯೆ ಮತ್ತು ನಿರೋಧತಾ ವ್ಯವಸ್ಥೆಯು ಹೊರ ಸೂಸಿದ ಶರೀರ ದ್ರವಗಳಿಂದ ನ್ಯುಮೋನಿಯಾ ಬರುವುದಿಲ್ಲ. ಆದರೂ ಇತರ ರೋಗಗಳಿಂದ ದುರ್ಬಲರಾದವರು  ಇತ್ತೀಚೆಗೆ ವೈರಸ್ ನ  ಸೋಂಕು, ಹೃದಯ ಬೇನೆ, ಗಂಟಲಿನ ಸಮಸ್ಯೆ, ಮಾದಕ ವಸ್ತು ಸೇವಿಸುವವರು, ಲಕ್ವ ಹೊಡೆದವರು ಇತರರಿಗಿಂತ ಬೇಗ ನ್ಯುಮೋನಿಯಾಕ್ಕೆ ಗುರಿಯಾಗುವರು.

ಒಂದು ಸಲ ಜೀವಿಗಳು ಶ್ವಾಸಕೋಶವನ್ನು ಪ್ರವೇಶಿಸಿದ ಮೇಲೆ, ಅವು ಸಾಧಾರಣವಾಗಿ ಗಾಳಿಯ ಚೀಲಗಳಲ್ಲಿ ನೆಲಸಿ ತ್ವರಿತವಾಗಿ ಬೆಳೆಯುತ್ತವೆ. ಶ್ವಾಸಕೋಶದ ಈಭಾಗವು ಜೀವ ಜೀವ ದ್ರವ ಮತ್ತು ಕೀವು ಗಳಿಂದ ತುಂಬಿಕೊಳ್ಳುವುದುದೇಹವು ಸೋಂಕನ್ನು ಎದರಿದಲು ಹೋರಾಡುವುದು..

ನ್ಯುಮೋನಿಯಾದಲ್ಲಿ ಶ್ವಾಸಕೋಶದ ಆರೋಗ್ಯ ಪರಿಸ್ಥಿತಿ ಯನ್ನು ಅವಲಂಬಿಸಿ ಎರಡು ವಿಧಗಳಾಗಿ ವಿಂಗಡಿಸಬಹುದು

  • ಈಗಾಗಲೆ ಹಾನಿಯಾಗಿರುದ ಶ್ವಾಸಕೋಶದಲ್ಲಿ ಬರುವುದು ಅನುಷಂಗಿಕ  ನ್ಯುಮೋನಿಯಾ. ಇದು ಈ ಮೊದಲೆ ರೋಗಗ್ರಸ್ಥವಾಗಿರುವ ಹಳೆಯ ಸೋಂಕಿನಿಂದ ಹಾನಿಗೀಡಾಗಿರುವ ಶ್ವಾಶಕೋಶಗಳಿಗೆ ಬರುವುದು.  .
  • ಆಸ್ಪಿರೇಷನ್ ನ್ಯುಮೋನಿಯಾ:  ಸ್ನಾಯುಗಳು ಮತ್ತು ಸ್ಫಿಂಕ್ಟರ್ಗಳು ಬಾಯಿಯಿಂದ  ಶ್ವಾಸಕೋಶಕ್ಕೆ ವಸ್ತುವು ಹೋಗದಂತೆ ತಡೆಯುವವು.ಅವುಗಳು ದುರ್ಬಲವಾದಾಗ ಮತ್ತು ವಿಶ್ರಾಂತವಾದಾಗ ಶ್ವಾಸಕೋಶದಲ್ಲಿ ಆಸ್ಪಿರೇಷನ್ ಆಗುವುದು.ಇದನ್ನೆ ಆಸ್ಪಿರೇಷನ್ ನ್ಯುಮೋನಿಯಾ ಎನ್ನುವರು.ಜಠರದ ವಸ್ತುಗಳು ಶ್ವಾಸಕೋಶದಲ್ಲಿ ಬರುವುದು ಇದಕ್ಕೆ ಒಂದು ಉದಾಹರಣೆ

ಇದು ಯಾರಿಗೆ ಬರುತ್ತದೆ ?

ಎರಡು ವರ್ಷದ ಕೆಳಗಿನ ಮಕ್ಕಳಿಗೆ ಇದು ಜೀವನದ ಎರಡು ತುಟ್ಟ ತುದಿಯಲ್ಲಿರುವವರಿಗೆ  ಬರುವುದು ಸಾಮಾನ್ಯ. ಅಂದರೆ ಚಿಕ್ಕಮಕ್ಕಳಿಗೆ ಮತ್ತು ವೃದ್ಧರಿಗೆ. ಎರಡು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಲ್ಲಿ ವಿಶೇಷವಾಗಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ತುಂಬ ಅಪಾಯಕಾರಿ. ನ್ಯುಮೋನಿಯಾವು ಗರ್ಭಿಣಿಯರಲ್ಲಿ ಮತ್ತು ಮದ್ಯಪಾನಿಗಳಲ್ಲಿಯೂ ಹೆಚ್ಚು

  • ಈ ಕೆಳಗಿನ ಸ್ಥಿತಿಯಲ್ಲಿನ ಮಕ್ಕಳು ನ್ಯುಮೋನಿಯಾಕ್ಕೆ ತುತ್ತಾಗುವರು.:
  • ಎಣ್ಣೆಯನ್ನು ಮೂಗಿಗೆ ಹಾಕುವುದು (ಅಜ್ಙಾನ ಮತ್ತು ಅನಕ್ಷರತೆ ಯಿಂದ)  ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ
  • ದೋಷ ಪೂರಿತವಾಗಿ ಆಹಾರ ನೀಡುವ ತಂತ್ರ
  • ಆಕಸ್ಮಿಕವಾಗಿ ಸೀಮೆ ಎಣ್ಣೆ  ಸೇವನೆ ( ವಿಷ ಕಾರಿ)

ಕೆಳಗಿನ ಸ್ಥಿತಿಗಳಿಗೆ ಒಡ್ಡಿಕೊಂಡವರು ನ್ಯುಮೋನಿಯಾಕ್ಕೆ ತುತ್ತಾಗುವರು:

  • ಇಮ್ಯುನಿಟಿಯ ದರ  ಕಡಿಮೆ
  • ದೀರ್ಘ ಸಮಯದ ಕಾಹಿಲೆಗಳು(ಡಯಾಬಟಿಸ್, ಸ್ನಾಯು ದುರ್ಬಲತೆ, ಪಾರ್ಕಿನ್ ಸನ್ ಕಾಯಿಲೆ)

AIDSನ ಪರಿಣಾಮವಾಗಿ ನಿರೋಧತೆಯ ಕೊರತೆ ಇರುವ ರೋಗಿಗಳು ಅಥವ ಇತರ ರೋಗಗಳು,  ನ್ಯುಮೋನಿಯ ಕ್ಕೆ ಕಾರಣವಾಗಬಹುದು..  AIDS  ರೋಗಿಗಳಲ್ಲಿ ಸಾಧಾರಣವಾಗಿ ಬೇರೆ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ಸೋಂಕು ಉಂಟು ಮಾಡದವುಗಳೂ ಸಹ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆ.

ಚಿಹ್ನೆಗಳು ಮತ್ತು ಲಕ್ಷಣಗಳು

ತೀವ್ರತೆ, ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆ ಮತ್ತು ಆಶ್ರಯದಾತನ ವಯಸ್ಸನ್ನು ಅವಲಂಬಿಸಿದ ಕೆಲವು ಸಾಮಾನ್ಯ  ಲಕ್ಷಣಗಳು ಹೀಗಿವೆ.

  • ಮಕ್ಕಳಲ್ಲಿ:ಶಿಶುಗಳು  ನ್ಯುಮೋನಿಯಾ ಬಂದಾಗ ಎದೆಯ ಸೋಂಕಿನ ನಿರ್ಧಿಷ್ಟ ಲ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಜ್ವರ ಬರುವುದು., ಬಹಳಸಲ ಅನಾರೋಗ್ಯವಾಗುವುದು ಮತ್ತು ತುಂಬ ಜಡವಾಗುವರು. ಮಕ್ಕಳಲ್ಲಿ ಎದೆಯು ಒಳಗೆ ಹೋದಂತೆ ಕಾಣುವುದು, ತೀವ್ರ ಉಸಿರಾಟ, ನೀಲಿಯಾದ ಚರ್ಮ, ನೆಗಡಿಯ ಲಕ್ಷಣಗಳು ಜತೆಗೆ ತೀವ್ರವಾದ ಜ್ವರ (ಕೆಲಸಲ 104 ಡಿಗ್ರಿ F) ಜತೆಗೆ ಕಫವೂ ಇರುವುದು. ಕಫಕ್ಕೆ ಸಾಧಾರಣವಾಗಿ ಬಣ್ಣವಿರುವುದಿಲ್ಲ ಮತ್ತು ಕೆಲವು ಬಾರಿ ಕೆಂಪಾಗಿರಬಹುದು.

ವಯಸ್ಕರಲ್ಲಿ ಬಹುತೇಕ ಜನರು ನ್ಯುಮೋನಿಯಾದಿಂದ ಬಳಲುವವರಿಗೆ ಮೊದಲಲ್ಲಿ ಇರುವ ಲಕ್ಷಣ

  • ಶೀತದ ಲಕ್ಷಣ ನಂತರ ತೀವ್ರ ಜ್ವರ   (ಕೆಲವು ಸಲ  104 ಡಿಗ್ರಿ   F.)
  • ನಡುಗಿಸುವ ಚಳಿ,
  • ಕಫದೊಂದಿಗಿನ ಕೆಮ್ಮು.  ಕಫವು ಸಾಧಾರಣವಾಗಿ ವರ್ಣರಹಿತ, ಕೆಲವುಸಲ ಕೆಂಪಾಗಿರಬಹುದು.
  • ಏದುಸಿರು

ಶ್ವಾಸಕೋಶದ ಮೇಲಿನ  ಪ್ಲಯುರಲ್ ಭಾಗವು ಇದರಲ್ಲಿ ಇದ್ರೆ  ಎದೆ ನೋವು  ಬರಬಹುದು. ನೋವು ಬಹಳ ತೀವ್ರವಾಗಿರುವುದು. ದೀರ್ಘವಾಗಿ ಉಸಿರು ಎಳೆದುಕೊಂಡರೆ ಇನ್ನೂ ಹೆಚ್ಚಾಗುವುದು. ಇದನ್ನು ಪ್ಲಯುರಿಟಕ್ ನೋವು ಎನ್ನುವರು.  ಬೇರೆ ವಿಧದ  ನ್ಯುಮೋನಿಯಾಗಳ ಎಲ್ಲ  ಲಕ್ಷಣಗಳು ನಿಧಾನವಾಗಿ ಕಾಣುವವು.  ಹೆಚ್ಚಾದ ಕೆಮ್ಮು, ತಲೆ ನೋವು, ಸ್ನಾಯು ನೋವುಗಳು ಮಾತ್ರ ಚಿಹ್ನೆಗಳಾಗಿರುವವು.

  • ಕೆಲವು ಜನರಲ್ಲಿ ನ್ಯುಮೊನಿಯಾವು ಬಂದರೂ ಕೆಮ್ಮು ಹೆಚ್ಚು ತೀವ್ರವಾಗಿರುವುದಿಲ್ಲ.  ಏಕೆಂದರೆ ಸೋಂಕು ಶ್ವಾಸ ಕೋಶಗಳಿಂದ ಮುಖ್ಯಗಾಳಿಯ ಮಾರ್ಗದಿಂದ ದೂರದಲ್ಲಿರುವುದು.
  • ಹಲವು ಬಾರಿ ವ್ಯಕ್ತಿಯ ಚರ್ಮದ  ಬಣ್ಣ ಬದಲಾಗಬಹುದು. ಮತ್ತು ಮಾಸಿದಬಣ್ಣ ಅಥವ ನೀಲಿಮಿಶ್ರಿತ ಕೆಂಪು ಆಗಬಹುದು. (ಸಿನೋಸಿಸ್ ಸ್ಥಿತಿ ಎನ್ನುವರು).  ಇದಕ್ಕೆ ಕಾರಣ ರಕ್ತಕ್ಕೆ ಕಡಿಮೆ ಪ್ರಮಾಣದ ಆಮ್ಮಜನಕದ ಪೂರೈಕೆ.

ತೆಗೆದುಕೊಳ್ಳ ಬೇಕಾದ ಮುನ್ನೆಚ್ಚರಿಕೆ

ನ್ಯುಮೊನಿಯಾ ಬಂದರೆ ಕೆಳಗಿನ ಮುನ್ನೆಚ್ಚರಿಕೆ ತೆಗೆದು ಕೊಳ್ಳಬೇಕು. ಮೊದಲಲ್ಲಿ ವೈಯುಕ್ತಿಕ ಸ್ವಚ್ಛತೆ  ಪಾಲಿಸಬೇಕು. ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಅದರಿಂದ ಸುತ್ತಲಿರುವ ಇತರರಿಗೆ ಸೋಂಕು ಹರಡುವುದಿಲ್ಲ. ಸಾಕಷ್ಟು ಪೌಷ್ಟಿಕ ಆಹಾರ  ಮತ್ತು ಗಾಳಿ ಬೆಳಕು ಇರಬೇಕು.  ರೋಗಿಯು ಮಗುವಾಗಿದ್ದರೆ ಕೆಳಗಿನ ವಿಷಯ ನೆನಪಿಡಬೇಕು, ನ್ಯುಮೋನಿಯಾದ ಚಹ್ನೆ ಯಿರುವ ಮಗುವನ್ನು ನಿರ್ಲಕ್ಷಿಸಬಾರದು. ಅವರ ಸ್ಥಿತಿಯು ತೀವ್ರವಾಗಿ ಆರೋಗ್ಯ ಕೆಡುವುದು.ಬಹುಬೇಗ . ಮೇಲೆ ಕಾಣಿಸಿದ ಅಂಶಗಳನ್ನು ಪಾಲಿಸಬೇಕು.

ತಡೆ

  • ಸೋಂಕಿಗೆ ಒಡ್ಡುವುದನ್ನು ತಪ್ಪಿಸಬೇಕು
  • ತಾಯಿಯರಿಗೆ ಹಾಲೂಡಿಸುವ ಅಭ್ಯಾಸದ ಬಗ್ಗೆ ಸೂಕ್ತ   ಶಿಕ್ಷಣ ನೀಡಬೇಕು..
  • ಇಮ್ಯುನೈಜೇಷನ್ (ಪಾಲಿ ವೆಲೆಂಟನ್ಯುಮೊ ಕೊಕಲ್ ವ್ಯಾಕ್ಸಿನ್ ನಿಂದ)  ಕಡಿಮೆ ಇಮ್ಯುನಿಟಿ ಇರುವ ಅಥವ ಬದಲಾದ ನಿರೋಧತೆ ಇರುವವರಿಗೆ

ಮೂಲ : ಮೆಡಿಸಿನ್ ನೆಟ್

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate