অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೋಗ ಲಕ್ಷಣಗಳು

ಮಿಲಿಯನ್ ಗಟ್ಟಲೆ ಜನರಿಗೆ ಪ್ರತಿವರ್ಷವೂ ಶ್ವಾಸಕೋಶದ ರೋಗವಿದೆ ಎಂದು ಗುರ್ತಿಸಲಾಗುವುದು. ಇನ್ನು ಕೆಲವರಿಗೆ ಅದು ಗೊತ್ತೇ ಆಗದಿರಬಹುದು. ಶ್ವಾಸಕೋಶದ ರೋಗಕ್ಕೆ ನಿರ್ಧಿಷ್ಟವಾದ ಲಕ್ಷಣ ಮತ್ತು ಚಿಹ್ನೆಗಳಿವೆ. ಕೆಳಗೆ ಶ್ವಾಸಕೋಶದ ರೋಗಗಳ ಪಟ್ಟಿಯನ್ನು, ಅದರ ಲಕ್ಷಣ ಮತ್ತು ವಿವರವನ್ನು ಕೊಡಲಾಗಿದೆ :

ಶ್ವಾಸಕೋಶದ ರೋಗಲಕ್ಷಣಗಳು ?

ಕೆಮ್ಮು

ಕೆಮ್ಮು ಒಂದು ರಕ್ಷಣಾ ತಂತ್ರ. ಉಸಿರಾಟದ ಸಮಯದಲ್ಲಿ ಒಳತೆಗೆದುಕೊಂಡ ವಿಷವಸ್ತುಗಳನ್ನು ಮತ್ತು ಅನ್ಯವಸ್ತುಗಳನ್ನು ದೇಹದಿಂದ ಹೊರ ಹಾಕುವ ರಕ್ಷಣಾ ತಂತ್ರ ಇದು. ಕೆಮ್ಮು ಹೇಗಿದೆ ಎಂಬದರ ಮೇಲೆ, ಅದು ಉತ್ಪಾದಕ ಅಥವಾ ಅನುತ್ಪಾದಕವೇ ಎಂಬುದನ್ನು ನಿರ್ಧರಿಸಬಹುದು. ಉತ್ಪಾದಕ ಕೆಮ್ಮು ಗಾಳಿಯ ಮಾರ್ಗವನ್ನು ಲೋಳೆ ಅಥವ ಇತರ ಸ್ರಾವಗಳಿಂದ ಸುಗಮ ಗೊಳಿಸಬೇಕು. ಸತತವಾದ ಕೆಮ್ಮು ಜತೆಯಲ್ಲಿ ಏರಿದ ಜ್ವರ ಅಥವ ರಕ್ತ, ಹೆಚ್ಚಿನ ಕಫ ಅದ್ದರೆ ವೈದ್ಯಕೀಯ ಸೇವೆ ಅಗತ್ಯ. ಕೆಮ್ಮು ಶ್ವಾಸಕೋಶದ ರೋಗದ ಚಿಹ್ನೆಯಾಗಿದೆ.

ಏದುಸಿರು

ಏದುಸಿರು ಅನೇಕ ಬಾರಿ ಶ್ವಾಸಾಂಗ ವ್ಯೂಹದ , ಹೃದಯ ಬೇನೆಯ,ಆತಂಕದ,ಅಥವ ಇನ್ನಿತರ ಸಮಸ್ಯೆಯ ಪರಿಣಾಮ.ಹಠಾತ್ತಾದ ಏದುಸಿರು, ನಿರಂತರವಾಗಿದ್ದರೆ ಅಥವ ಇತರ ಲಕ್ಷಣಗಳನ್ನು ತೋರಿದರೆ ಅದು ರೋಗದ ಲಕ್ಷಣ. ತಕ್ಷಣ ವೈದ್ಯರಿದ ಪರೀಕ್ಷೆ ಮಾಡಿಸಬೇಕು.

ಗೂರಲು

ಗೂರಲು ಉಛ್ವಾಸ ನಿಶ್ವಾಸ ಮಾಡುವಾಗ ರಡುವ ತೀವ್ರವಾದ ಧ್ವನಿ. ಇದು ಗಾಳಿಯ ದಾರಿಗಳು ಅಸಹಜ ಅಂಗಾಂಶಗಳಿಂದ, ಉರಿಯೂತದಿಂದ ಲೋಳೆಯು ಹೆಚ್ಚಾಗಿ ಸ್ರವಿಸಿದಾಗ ಕಿರಿದಾದಾಗ ಅಥವ ಅನ್ಯ ವಸ್ತುಗಳು ಒಳ ಸೇರಿ ಅವುಗಳಿಗೆ ತಡೆಯಾದಾಗ ಉಂಟಾಗುವುದು. ಗೂರಲು ಶ್ವಾಸಕೋಶದದ ಸ್ಥಿತಿಯು ಚೆನ್ನಾಗಿಲ್ಲ ಎಂಬುದರ ಸಂಕೇತ.

ಎದೆನೋವು

ಎದೆ ನೋವು ಸಾಧಾರಣವಾಗಿ ಶ್ವಾಸಕೋಶದ, ಪ್ಲ್ಯುರಾ, ಸ್ನಾಯುಗಳ ಅಥವ ಎದೆಗೋಡೆಯ ಮೂಳೆಗಳ, ಸಮಸ್ಯೆಯನ್ನು ಸೂಚಿಸುತ್ತದೆ. ಸಮಸ್ಯೆಯು ಚಿಕ್ಕದೋ, ದೊಡ್ಡದೋ ಇಲ್ಲವೆ ಪ್ರಾಣಾಪಯಕಾರಿಯೂ ಅಗಿರಬಹುದು. ನಿರಂತರವಾಗಿ ಇಲ್ಲವೆ ಉಸಿರು ಒಳಗೆ ಎಳೆದುಕೋಂಡಾಗ ಮಾತ್ರ ಬರಬಹುದು. ಎದೆಯನೋವು ಜತೆಗೆ ಕೆಮ್ಮು ಅಥವ ಜ್ವರವಿದ್ದರೆ ಅದು ಸೋಂಕಿದೆ ಅನ್ನುವುದರ ಚಿಹ್ನೆ. ಎದೆನೊವು ಬಂದಾಗ ತಕ್ಷಣ ವೈದ್ಯರಲ್ಲಿಗೆ ಹೋಗಬೇಕು.

ರಕ್ತ ವಾಂತಿ

ರಕ್ತ ವಾಂತಿಯು ಗುಲಾಬಿ ಬಣ್ಣದ ನೊರೆ, ಲೋಳೆ, ರಕ್ತದ ಎಳೆ, ಕರಣಿ ಅಥವ ರಕ್ತದಿಂದ ಕೂಡಿರಬಹುದು. ಇದು ಸತತ ಕೆಮ್ಮಿನ ಪರಿಣಾಮವಾಗಿರಬಹುದು, ಇಲ್ಲವೆ ಶ್ವಾಸಕೋಶದ ರೋಗದ ಲಕ್ಷಣವಾಗಿರಬಹುದು. ರಕ್ತ ವಾಂತಿಯು ಗಂಭೀರ ಶ್ವಾಸಕೋಶದ ರೋಗದ ಲಕ್ಷಣ.

ಊತ

ಕೈ ಕಾಲುಗಳ ಮತ್ತು ಕನಕಾಲುಗಳ ಬಾವು ಶ್ವಾಸಕೋಶದ ರೋಗದ ಲಕ್ಷಣ. ಬಾವು ಜತೆಗೆ ಏದುಸಿರು ಹೃದಯ ಬೇನೆಯ ಟಿಪಿಕಲ್ ಲಕ್ಷಣ. ಅನೇಕ ಸಲ ಹೃದಯ ಮತ್ತು ಶ್ವಾಸಕೋಶದ ಒಂದೆ ತರಹದ ಲಕ್ಷಣಗಳನ್ನು ತೋರುತ್ತವೆ. ಏಕೆಂದರೆ ಅನೇಕ ಪರಿಸ್ಥಿತಿಗಳು ಎರಡರ ಮೇಲೂ ಪರಿಣಾಮ ಬೀರುತ್ತವೆ.

ಉಸಿರಾಟದ ವಿಫಲತೆ

ಉಸಿರಾಟದ ವಿಫಲತೆಯು ಶ್ವಾಸಕೋಶದ ರೋಗಗ ತೀವ್ರತೆಯು, ಉಲ್ಬಣಗೊಳ್ಳುವುದು ಮತ್ತು ಧೀರ್ಘ ಕಾಲೀನತೆಯ ಲಕ್ಷಣ. ಉಲ್ಬಣವಾದ ಉಸಿರಾಟದ ವಿಫಲತೆಯು, ಹೆಚ್ಚಿ ಸೋಂಕು, ಶ್ವಾಸಕೋಶದ ಉರಿಯೂತ, ಎದೆಬಡಿತ ನಿಲ್ಲುವುದು ಅಥವ ತೀವ್ರವಾದ ಶ್ವಾಸಕೋಶದ ರೋಗದ ಲಕ್ಷಣ. ದೀರ್ಘಕಾಲೀನ ಉಸಿರಾಟದ ವಿಫಲತೆಯಾಗುವುದು ಶ್ವಾಸಕೋಶವು ರಕ್ತಕ್ಕೆ ಆಮ್ಲಜನಕ ಪೂರಣ ಮಾಡದಿದ್ದರೆ/ಕಾರ್ಬನ್‌ ಡೈ ಆಕ್ಸೈಡ್ ತೆಗೆಯದಿದ್ರೆ ಉಂಟಾಗುವುದು.

ಶ್ವಾಸಕೋಶದ ರೋಗಗಳಿಗೆ ಕಾರಣಗಳು ಮತ್ತು ಅವುಗಳಿಂದ ಅಪಾಯ

ಶ್ವಾಸಕೋಶದ ರೋಗಗಳು ಹಿರಿಯ ನಾಗರಿಕರನ್ನು ಮಾತ್ರವಲ್ಲ, ಚಿಕ್ಕವರನ್ನು ಬಿಡುವುದಿಲ್ಲ. ಶ್ವಾಸಕೋಶ ರೋಗಗಳು ಶಿಶುಗಳನ್ನು ಸಾಯಿಸುವಲ್ಲಿ ಮೊದಲ ಸ್ಥಾನ ಪಡೆದಿವೆ.

ಧೂಮಪಾನ ಬಿಡಿ

ಧೂಮಪಾನವು ನಮ್ಮ ದೇಹದ ಮೇಲೆ ತುಂಬ ಪರಿಣಾಮ ಬೀರುವುದು. ಅದು ಶ್ವಾಸಕೋಶ ರೋಗಗಳನ್ನು ಮಾತ್ರವಲ್ಲದೆಎಂಫ್ಸಿಮಾ, ಸಿ ಓ ಪಿ ಡಿ  ಮತ್ತು ಶ್ವಾಸಕೋಶದ ಕ್ಯಾನ್ಸರ್ ತರುವುದು, ಆದರೆ ಇದು ದೇಹದ ಅನೇಕ ಬೇರೆ ಭಾಗಗಳ ಮೇಲೆ ಪರಿಣಾಮ ಬೀರುವುದು

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate