অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಂಕ್ರಾಮಿಕ ರೋಗಗಳು

ಸಾಂಕ್ರಾಮಿಕ ರೋಗಗಳು

  • ಆಂತ್ರಾಕ್ಸ
  • ಆಂತ್ರಾಕ್ಸ ಬ್ಯಾಕ್ಟೀರಿಯಾ ಬ್ಯಸಿಲಸ್ ಆಂತ್ರಾಸಿಸ್ ನಿಂದ ಉಂಟಾಗುವುದು.

  • ಕುಷ್ಟ ರೋಗ
  • ಕುಷ್ಟ ರೋಗವು ಕ್ರಿಮಿಯಿಂದ ಬರುವುದು. ಇದು ಕ್ಷಯ, ಪೊಲಿಯೋ , ಡಿಫ್ತೀರಿಯಾ ಗಳಂತೆ ಸಾಂಕ್ರಾಮಿಕ ರೋಗ . ಆದರೆ ಕಡಿಮೆ ತೀವ್ರತೆ ಹೊಂದಿದೆ. ಬಹುಕಾಲದ ವರೆಗಿನ ಚಿಕಿತ್ಸೆ ಪಡೆಯದ ರೋಗಿಯ ಸಂಪರ್ಕದಿಂದ ಮಾತ್ರ ಸೊಂಕು ತಗುಲಬಹುದು.

  • ಕ್ಷಯ
  • ಕ್ಷಯರೋಗವು (TB) ಸೋಂಕಿ ನಿಂದ ಬರುವ ರೋಗ. ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೊಸಿಸ ನಿಂದ ಬರುವುದು. ಹರಡುವುದು ಕ್ಷಯರೋಗವನ್ನು ರೋಗಿಯು ಗಾಳಿಯ ಮೂಲಕ ಹರಡಬಹುದು. ಒಬ್ಬನು ಒಂದು ವರ್ಷದಲ್ಲಿ 10 ಜನಕ್ಕೆ ಸೋಂಕು ತಗಲಿಸಬಹುದು.

  • ಚಿಕನ್‌ಪಾಕ್ಸ್‌
  • ವೆರಿಸೆಲ್ಲಾ ಝೋಸ್ಟರ್‌ ವೈರಾಣು (ವೈರಸ್‌) ವಿನಿಂದ ಈ ಸೋಂಕು ರೋಗ ಹರಡುತ್ತದೆ. ಇದು ಸೋಂಕು ತೀವ್ರವಾಗಿ ಹರಡುವ ರೋಗ ಸೋಂಕಿತ ಹನಿಗಳನ್ನು ಉಸಿರಾಡುವುದರಿಂದಲೂ ಈ ರೋಗ ಬರುತ್ತದೆ.

  • ಟೈಫಾಯಿಡ್ (ವಿಷಮ ಶೀತ ಜ್ವರ)
  • ಟೈಫಾಯಿಡ್ ಪ್ರಾಣಾಪಾಯ ಮಾಡುವ ರೋಗ. ಬ್ಯಾಕ್ಟೀರಿಯಮ್ ಸಲ್ಮೊನೆಲ್ಲಾ ಟೈಫಿ ಇದಕ್ಕೆ ಕಾರಣ ಟೈಫಾಯಿಡ್ ಜ್ವರವನ್ನು ತಡೆಯಬಹುದು ಮತ್ತು ಆಂಟಿಬಯೋಟಿಕ್ ನೀಡಿ ಚಿಕಿತ್ಸೆ ಮಾಡಬಹುದು.

  • ಡಯೇರಿಯಾ (ಅತಿಸಾರ)
  • ಅತಿಸಾರ ಎಂದರೆ ಹೆಚ್ಚುಬಾರಿ ಮಲವಿಸರ್ಜನೆಗೆ ಹೋಗುವುದು, ನೀರಿನಿಂದ ಕೂಡಿದ ಮಲವಿಸರ್ಜನೆ ಇಲ್ಲವೇ ಎರಡೂ ಇರುವುದು.

  • ಡಿಫ್ತೀರಿಯಾ
  • ಶ್ವಾಸನಾಳ, ಗಂಟಲು, ಬಾಯಿ ಅಥವಾ ಚರ್ಮದ ಗಾಯಗಳ ಮೇಲೆ ಟಿಫ್ತೀರಿಯಾ ಸೋಂಕು ದಾಳಿ ಮಾಡಬಹುದು.

  • ದಡಾರ (ಮೀಸಲ್ಸ)
  • ಮೀಸಲ್ಸ ತೀವ್ರವಾದ ಶ್ವಾಸಕೋಶದ ಸೋಂಕು

  • ಧನುರ್ವಾಯು (ಟೆಟನಸ್)
  • ಧನುರ್ವಾಯು (ಟೆಟನಸ್) ಸೋಂಕಿನ ರೋಗ. ಅದು ಮಣ್ಣಿನಲ್ಲಿನ ಬ್ಯಾಕ್ಟೀರಿಯಾ, ಮಲಿನವಾದ ಗಾಯಕ್ಕೆ ಸೋಂಕು ತಗುಲಿಸುವುದು.

  • ನಾಯಿಕೆಮ್ಮು
  • ಇದು ಒಂದು ಬ್ಯಾಕ್ಟೀರಿಯಲ್ ಸೋಂಕು. ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಧಾರಣವಾಗಿ 2 ವರ್ಷದೊಳಗಿನ ಮಕ್ಕಳ ಶ್ವಾಸ ನಾಳದ ಮೇಲೆ ಪರಿಣಾಮ ಬೀರುವುದು. ಈ ರೋಗ ಬಂದಾಗ ಉಸಿರು ಎಳೆದೊಕೊಳ್ಳುವಾಗ ಬರುವ ಶಬ್ದದಿಂದ ಈ ಹೆಸರು ಬಂದಿದೆ.

  • ಪೋಲಿಯೋಮೆಲೈಟಿಸ್
  • ಪೋಲಿಯೋ ಸೋಂಕು ಪೂರ್ತಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ನರಗಳನ್ನು ಮತ್ತು ಸ್ನಾಯುಗಳ ಮೇಲೆ ಯಾವಾಗಲೂ ಪರಿಣಾಮ ಬೀರುವುದು.

  • ಮಂಗನ ಬಾವು
  • ಮಂಗನ ಬಾವು (ಪರೊಟಿಟಿಸ್ ಎಂದೂ ಹೆಸರಾಗಿದೆ) ಗಂಭೀರವಾದ ವೈರಾಣು ಕಾಯಿಲೆ. ಇದರಿಂದ ಪರೊಟಿಡ್ ಗ್ರಂಥಿಗಳು ದೊಡ್ಡದಾಗಿ ನೋವು ಉಂಟಾಗುವುದು. ಈ ಗ್ರಂಥಿಗಳು ಕಿವಿಯ ಕೆಳಗೆ ಮತ್ತು ಮುಂಭಾಗದಲ್ಲಿ ಇರುತ್ತವೆ ಮತ್ತು ಜೊಲ್ಲುರಸ ಅಥವ ಉಗುಳನ್ನು ಉತ್ಪಾದಿಸುವುದು

  • ಮೆನಂಜೈಟಿಸ್
  • ಮೆನಂಜೈಟಿಸ್ ಬೆನ್ನು ಹುರಿ ಮತ್ತು ಮೆದುಳನ್ನು ಸುತ್ತುವರಿದ ಜೀವ ದ್ರವದ ಸೊಂಕಿನಿಂದ ಬರುವುದು. ಇದನ್ನು ಜನರು ಬೆನ್ನುಹುರಿ ಮೆನಂಜೈಟಿಸ್ ಎನ್ನುವರು

  • ವಾಂತಿ ಭೇದಿ (ಕಾಲರ)
  • ಕಾಲರವು ತೀವ್ರವಾದ ಭೇದಿಯಿಂದ ಕೂಡಿದ ಖಾಯಿಲೆ. ಅದು ಕರುಳಿನ ಬ್ಯಾಕ್ಟೀರಿಯಾ ಸೋಂಕಿನಿಂದ ಬರುವುದು.

  • ಹಂದಿ ಜ್ವರ
  • ಹಂದಿ ಜ್ವರವು ಹಂದಿಗಳಿಗೆ ಬರುವ ಶ್ವಾಸಕೋಶದ ಖಾಯಿಲೆ. ಇದು ಒಂದು ರೀತಿಯ ಇನ್ ಫ್ಲೂಯಂಜಾದ ವೈರಸ್ ನಿಂದ ಅವುಗಳಿಗೆ ಆಗಾಗ ಬರುವುದು, ಮಾನವರಿಗೆ ಸಾಮಾನ್ಯವಾಗಿ ಹಂದಿ ಜ್ವರ ಬರುವುದಿಲ್ಲ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate