অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಂತ್ರಾಕ್ಸ

ಆಂತ್ರಾಕ್ಸ ಬ್ಯಾಕ್ಟೀರಿಯಾ ಬ್ಯಸಿಲಸ್ ಆಂತ್ರಾಸಿಸ್ ನಿಂದ ಉಂಟಾಗುವುದು.

ಪರಿಣಾಮವಾಗುವ ಭಾಗಗಳು

ಬಹುಸಾಮಾನ್ಯ - ಚರ್ಮ

ವಿರಳವಾಗಿ – ಶ್ವಾಸನಾಳ, ಜಠರ ನಾಳ

ಹರಡುವುದು

  • ಚರ್ಮ: ಸ್ಪೋರುಗಳೊಡನೆ ನೇರ ಸಂಪರ್ಕ, ನಿಸರ್ಗದಲ್ಲಿನ ಸೋಂಕಿತ ಪ್ರಾಣಿಗಳೊಡನೆ ಅಥವ ಪ್ರಾಣಿ ಜನ್ಯ ಉತ್ಪನ್ನಗಳಾದ ಮಾಂಸ ಮತ್ತು ಚರ್ಮ.
  • ಶ್ವಾಸನಾಳವು ಗಾಳಿಯಲ್ಲಿನ ಸ್ಪೋರುಗಳನ್ನು ಉಸಿರಿನಲ್ಲಿ ತೆದುಕೊಳ್ಳುವುದು
  • ಜಠರ ನಾಳ : ಅರೆಬೆಂದ ಅಥವ ಹಸಿ ಮಾಂಸ , ಅಥವ ಸೋಂಕಿತ ಪ್ರಾಣಿಗಳ ಹೈನು ಪದಾರ್ಥ ಸೇವನೆ
  • ವ್ಯಕ್ತಿ ಯಿಂದ ವ್ಯಕ್ತಿಗೆ ಉಸಿರಾಟದ ಮೂಲಕ ಅಥವ GI ಆಂತ್ರಾಕ್ಸ ಬರುವುದಿಲ್ಲ

ಲಕ್ಷಣಗಳು

ಚರ್ಮ : ಸ್ಥಳಿಯವಾದ ತುರಿಕೆ, ಕಪ್ಪಾದ ಗುಳ್ಳೆಯು 7–10 ದಿನ ಗಳ ನಂತರ ಮೃತ ಕೋಶಗಳಾಗುತ್ತವೆ.

ಶ್ವಾಸನಾಳ : ನಿರ್ದಿಷ್ಟವಾದ ಲಕ್ಷಣಗಳಾದ ಲಘು ಜ್ವರ, ಆಯಾಸ, ಹೆಚ್ಚು ಬೆವರು, ಎದೆಭಾರ (ಶ್ವಾಸನಾಳದ ಮೇಲಿನ ಭಾಗದ ಲಕ್ಷಣ ಕಾಣುವುದಿಲ್ಲ)

ಜೀರ್ಣ ನಾಳ: ವಾಂತಿ, ಅನೊಕ್ಸರಿಯಾ,ವಾಕರಿಕೆ, ಮತ್ತು ಜ್ವರ ಮುಂದುವರಿದು ತೀವ್ರ ಹೊಟ್ಟೆ ನೋವು, ಹೆಮಿಟೆಮೆಸಿಸ ಮತ್ತು ರಕ್ತದಿಂದ ಕೂಡಿದ ಅತಿಸಾರ.

ಚರ್ಮದ ಮೇಲಿನ ಲಕ್ಷಣಗಳು

ದಿನ 2 ದಿನ 4 ದಿನ 6 ದಿನ 10

ರೋಗ ನಿರ್ವಹಣೆ

  • ಲಕ್ಷಣಗಳು ಕಂಡೊಡನೆ ವೈದ್ಯರನ್ನು ಸಂಪರ್ಕಿಸಿ
  • ಬೇಯಿಸದ ಮಾಂಸ ಮತ್ತು ಪ್ರಾಣಿಗಳ ಉತ್ಪನ್ನ ತಿನ್ನ ಬೇಡಿ
  • ದನಗಳು ಅಥವ ಅವುಗಳ ಉತ್ಪನ್ನ ಗಳೊಡನೆ ಸ್ವಯಂ ರಕ್ಷಣೆಮಾಡಿಕೊಳ್ಳಬೇಕು.
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate