অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕುಷ್ಟ ರೋಗ

ಕುಷ್ಟ ರೋಗವು ಕ್ರಿಮಿಯಿಂದ ಬರುವುದು. ಇದು ಕ್ಷಯ, ಪೊಲಿಯೋ , ಡಿಫ್ತೀರಿಯಾ ಗಳಂತೆ ಸಾಂಕ್ರಾಮಿಕ ರೋಗ . ಆದರೆ ಕಡಿಮೆ ತೀವ್ರತೆ ಹೊಂದಿದೆ. ಬಹುಕಾಲದ ವರೆಗಿನ ಚಿಕಿತ್ಸೆ ಪಡೆಯದ ರೋಗಿಯ ಸಂಪರ್ಕದಿಂದ ಮಾತ್ರ ಸೊಂಕು ತಗುಲಬಹುದು.

ಲಕ್ಷಣಗಳು

  • ಚರ್ಮದ ಮೇಲೆ ಬಣ್ಣವಿಲ್ಲದ ಕಲೆ. ಲಘುವಾಗಿ ಮುಟ್ಟಿದಾಗ ತುಸು ಸ್ಪರ್ಶ ಜ್ಞಾನ ಅಥವ ಪೂರ್ಣ ಇಲ್ಲದೆ ಇರಬಹುದು. .
  • ಕೈ ಮತ್ತು ಕಾಲುಗಳ ಜೋಮು
  • ಬಹುವಾಗಿ, ಮುಖ, ಪೃಷ್ಟ ಮೇಲೆ , ಇತರ ಭಾಗಗಳ ಹಿಂಭಾಗದ ಮೇಲೆ ನಯವಾದ ಹೆಸರಿಸಲಾಗದ ಕೆಂಪು ಕಲೆಗಳು. ಸ್ಪರ್ಶಜ್ಞಾನ ಸಹಿತ ಅಥವ ರಹಿತ ಕಲೆಗಳು.

ಚಿಕಿತ್ಸೆ

ಕುಷ್ಟ ರೋಗವು ಪೂರ್ಣವಾಗಿ ಗುಣವಾಗುವುದು. ರೋಗವು ಖಚಿತವಾದರೆ,ಕೆಳಗಿನ ಕ್ರಮ ತೆಗೆದು ಕೊಳ್ಳಬೇಕು 
• ರೋಗ ಗುಣವಾಗುವ ಬಗ್ಗೆ ಅಥವ ಇತರ ಸೋಂಕಿನ ಬಗ್ಗೆ ಗಾಬರಿಯಾಗಬೇಡಿ.

ಬಹು ಔಷಧಿ ಚಿಕಿತ್ಸೆ (ಬ.ಔ.ಚಿ)

  • ಕುಷ್ಟ ರೋಗವು ಯಾವುದೆ ಹಂತದಲ್ಲಿದ್ದರೂ ಬಹು ಔಷಧಿ ಚಿಕಿತ್ಸೆ ಯಿಂದ ಗುಣಪಡಿಸಬಹುದುದು. ಆದರೆ ಅದನ್ನು ಕ್ರಮವಾಗಿ ತೆಗೆದು ಕೊಳ್ಳ ಬಹುದು. ಬ.ಔ.ಚಿ ( MDT) ಕ್ಯಾಪಸೂಲು ಮತ್ತು ಗುಳಿಗೆಗಳ ಸಂಯೋಜಿತ ಔಷಧಿಯನ್ನು ತೆಗೆದು ಕೊಳ್ಳ ಬೇಕಾಗುವುದು. .
  • ಬ.ಔ.ಚಿ ಯು ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಕುಷ್ಟರೋಗ ಘಟಕದಲ್ಲಿ ಉಚಿತವಾಗಿ ದೊರೆಯುವುದು. ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಸಾರ್ವಜಿನಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಿಕ್ಕುವುದು
  • ಬ.ಔ.ಚಿ (ಚಿಕಿತ್ಸೆಯನ್ನು ವೈದ್ಯರು ಹೇಳಿದ ಅವಧಿಗೆ ತೆಗೆದುಕೊಳ್ಳಲೇ ಬೇಕು.
  • ರೋಗಿಗಳು ಬ.ಔ.ಚಿ ಯನ್ನು ನಿಗದಿತ ಸಮಯದಲ್ಲೆ ತೆಗೆದು ಕೊಳ್ಳ ಬೇಕು. ಊಟವಾದ ಮೇಲೆ ತೆಗೆದು ಕೊಂಡರೆ ಮರೆಯುವುದಿಲ್ಲ

ಕುಷ್ಟ ರೋಗದ ಬಗೆಗಿನ ತಪ್ಪು ಮಾಹಿತಿಗಳು

  • ಕೆಲವು ಜನ ಈಗಲೂ ಕುಷ್ಟ ರೋಗ ವಂಶಾನುಗತವಾಗಿ ಬರುವುದು, ಅನೈತಿಕತೆಯ ಫಲ, ಅಶುದ್ಧ ರಕ್ತದಿಂದ, ತಪ್ಪಾದ ಆಹಾರ ಅಭ್ಯಾಸ, ಒಣ ಮೀನು ತಿನ್ನುವುದರಿಂದ ಮತ್ತು ಪೂರ್ವಜನ್ಮದ ಪಾಪಗಳಿಂದ ಎಂದು ನಂಬುತ್ತಾರೆ
  • ಕುಷ್ಟ ರೋಗವು ಕೆಲವೆ ಕುಟುಂಬಗಳಲ್ಲಿ ಹರಡುವುದು. ಮುಟ್ಟುವುದ ರಿಂದಲೇ ಬರುವುದು.
  • ಕುಷ್ಟ ರೋಗ ಅನೇಕ ಸಲ ವಿಕೃತಿಯ ಜತೆ ಜೋಡಿಸಲಾಗಿದೆ. ಕುಷ್ಟ ರೋಗವನ್ನು ದೇಹ ವಿಕಾರವಾದಾಗ ಮಾತ್ರ ಗುರುತಿಸಬಹುದು
  • ಕುಷ್ಟ ರೋಗದ ಸೋಂಕು ಬಹಳ ಬೇಗ ಹರಡುತ್ತದೆ. ನಿಷ್ಕ್ರಿಯೆಯನ್ನು ವಿಕೃತಿಯಂತೆ ಪರಿಗಣಿಸುವರು. ಕುಷ್ಟ ರೋಗ ಗುಣ ವಾಗುವುದಿಲ್ಲ.
  • ಕುಷ್ಟ ರೋಗವಿರುವ ಕುಟುಂಬದ ಮಕ್ಕಳೂ ಸಹಾ ಕುಷ್ಟ ರೋಗಕ್ಕೆ ತುತ್ತಾಗುವರು
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 12/8/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate